ಮಾರ್ಚ್ 2, 2018

Past is ...

20 ವರ್ಷದ ಹಿಂದೆ ನಾನು, 20 ವರ್ಷಗಳ ನಂತರ ಏನಾಗಬೇಕು, ಹೇಗಿರಬೇಕು ಅಂತ ಅಂದುಕೊಂಡಿದ್ದೆನೋ, ಈಗ ಏನು ಆಗಿದ್ದೀನೋ, ಎರಡರಲ್ಲಿ 1% ಕೂಡ ಸಾಮ್ಯತೆ ಇಲ್ಲ.

ಇನ್ನೂ 30 ವರ್ಷಗಳ ನಂತರ ಹಿಂಗಿಂಗೆ ಇರಬೇಕು, ಹಿಂಗಾಗಬೇಕು ಎಂಬ ಪರಿಕಲ್ಪನೆ ಇದೆ.

ಏನಾಗುತ್ತೋ, ನೋಡೋಣ. Wait, ಏನಾಗುತ್ತೋ ಅಂತ ನೋಡಲಿಕ್ಕೆ ನಾವು ಇರ್ತೀವೋ ಇಲ್ಲವೋ, ಅದೂ ಗೊತ್ತಿಲ್ಲ!

Past is permanent, future is uncertain, ಹೊಡಿ ಒಂಭತ್ತ್! 🥃🥃🥃

ಫೆಬ್ರವರಿ 21, 2018

ಮನಸ್ಸಿದ್ದರೆ ಮಾರ್ಗ ಅನ್ನೋ #ಹುಡುಗರು


ಹೀಗೇ ಬಸ್ ಅಲ್ಲಿ ಬರುವಾಗ, ಮೊಬೈಲ್ ನಲ್ಲಿ Subway Surfers ಆಡುತ್ತಿದ್ದೆ. Subway Surfers ಆ? ಹೆಸರು ಎಲ್ಲೋ ಹಳೇ ಹುಡುಗಿಯರ ಹಳೇ ನೆನಪಿನ ನಡುವಲ್ಲೆಲ್ಲೋ ಕೇಳಿದ ಹಾಗೆ ಇದೆಯಲ್ಲಾ ಅಂತ ಅಂದ್ಕೊಂಡ್ರಾ?!?  ಸುಮಾರು ನಾಲ್ಕು - ಐದು ವರ್ಷಗಳ ಹಿಂದೆ ನಾನು, ನಮ್ ಹುಡುಗರು ಈ ಗೇಮ್ ಅನ್ನು ಸಖತ್ತಾಗಿ ರುಬ್ಬಿ‌ ಬಿಸಾಕಿದ್ವಿ!!! ನಮ್ ಹುಡುಗರಿಗೆ ಅವರ ಹಳೇ ಹುಡುಗಿಯರು ನೆನಪಾಗಿ ನಮಗೆ ಫೋನ್ ಮಾಡಿ ತಲೆ ತಿನ್ನುತ್ತಾರಲ್ಲಾ, ಹಾಗೇ ಯಾವುದೋ ಹಳೆ ವಿಷಯದ ಕುರಿತು ಯೋಚಿಸುತ್ತಿದ್ದಾಗ ಮತ್ತೆ Subway Surfers ನೆನಪಾಯ್ತು. ಅರೇ ಇಸ್ಕಿ, ಧಾರವಾಹಿ, ಫಿಲಂಗಳ ನಡುವೆ ಮರೆತೇ ಹೋಗಿತ್ತಲ್ಲಾ ಅಂತ after a long time, ಇವತ್ತು ಮತ್ತೆ install ಮಾಡಿ ಆಡಲು ಶುರು ಮಾಡಿದೆ. ಈ ಆಟ ಒಂಥರಾ ಚಿಪ್ಸ್ ಪ್ಯಾಕೆಟ್ ಇದ್ದಂತೆ, ಶುರು ಮಾಡಿದರೆ, ಅಷ್ಟು ಬೇಗ ಮುಗಿಸದೇ ಕೆಳಗಿಡಲು ಮನಸ್ಸಾಗಲ್ಲ.

ಇಂತಿಪ್ಪ ಸಂದರ್ಭದಲ್ಲಿ, coming back to topic, ಇಂದು ಬಸ್ ನಲ್ಲಿ ಬರುತ್ತಾ Subway Surfers ಆಡಲು ಶುರು ಮಾಡಿದೆ. ಅದ್ಯಾಕೋ ಗೇಮ್ ಮ್ಯೂಸಿಕ್ ಸರಿ ಇಲ್ಲ ಅಂತ ಮ್ಯೂಟ್ ಮಾಡಿ, ಹಿನ್ನಲೆಯಲ್ಲಿ ಮ್ಯುಸಿಕ್ ಪ್ಲೇಯರ್ ನಲ್ಲಿ shuffled playlist ರೆಡಿ ಇತ್ತಲ್ಲಾ, ಅಲ್ಲಿ ಪ್ಲೇ ಕ್ಲಿಕ್ಕಿಸಿ, ಮತ್ತೆ ಆಟ ಮುಂದುವರೆಸಿದೆ. ಒಂದು ಎರಡು 'ಬೋರ್ ಹೊಡೆಸುವ ರೊಮ್ಯಾಂಟಿಕ್ ಹಾಡುಗಳ ನಂತರ' (!) ಢಣ್ ಢಣಣ್ ಢಣ್ ಅಂತ ಹುಡುಗರು ಚಿತ್ರದ ಶಂಭೋ ಶಿವ ಶಂಭೋ ಹಾಡು ಶುರುವಾಯಿತು. ಅಷ್ಟು ಹೊತ್ತಿಗಾಗಲೇ ಆಟದಲ್ಲಿ ಸ್ವಲ್ಪ ಮುಂದೆ ಹೋಗಿದ್ದರಿಂದ ನಮ್ಮ 'ಹುಡುಗ' ಇನ್ನೂ ಸ್ಪೀಡಾಗಿ ಮುಂದೆ ಓಡುತ್ತಿದ್ದ. ಹಾಡಿನಲ್ಲಿ ಬೀಟ್ಸ್, ಎಮೋಷನ್, ಢಣಣ್ ಅಂತ ಹಾಡಿನ ಓಘದೊಂದಿಗೆ ಏರುತ್ತಿದ್ದಂಗೆ ಸ್ನೇಹ, ತ್ಯಾಗ, ಪ್ರೀತಿಗಾಗಿ‌ ಮಾಡುವ ಹೋರಾಟದ ಎಲ್ಲಾ ಭಾವಗಳು ಮನದ ಹಿನ್ನೆಲೆಯಲ್ಲಿ ಅಪ್ಪು, ಕಿಟ್ಟಿ, ಲೂಸ್ ಮಾದ ರೂಪಕವಾಗಿ ಕಣ್ಣಿನ ಮುಂದೆ ಬಂದಂತಾಗುತ್ತಿತ್ತು.ಫೀಲ್ ಅಲ್ಲಿ ಮಿಸ್ ಆಗಿ ಆಗಿ ಟ್ರೈನ್ ಪಕ್ಕಕ್ಕೆ ಗುದ್ದಿಕೊಂಡೆ. ಹಿಂದೆ ಇದ್ದ ಪೊಲೀಸ್ ಮತ್ತು‌ ನಾಯಿ ಜ಼ುಗ್ ಅಂತ ಮುಂದೆ ಬಂದು ಬಿಟ್ಟರು. ಹುಡುಗರು ಫಿಲಂ ನಲ್ಲಿ ಅಷ್ಟೆಲ್ಲಾ ಕಷ್ಟಗಳ ನಡುವೆ ಒಂದು ಜೋಡಿಯನ್ನು ಒಂದು ಮಾಡಲು 'ಹುಡುಗರು' ಮಾಡುವ ಕಷ್ಟ ನೆನಪಾಗಿ ಸಡನ್ನಾಗಿ ನಾನೂ ಅಂತಹ ಒಂದು hypothetical chasing scene ನಲ್ಲಿ ಇದ್ದೀನಾ ಅನಿಸಿಬಿಡ್ತು!! ಇನ್ನೂ ಜಾಸ್ತಿ ಹೊತ್ತು ಆಡಿದರೆ ಗಂಗಾ ನಾಗವಲ್ಲಿ ಅಂತ ಅಂದು ಕೊಂಡು, ತಾನೂ ನಾಗವಲ್ಲಿ ಆದ ಹಾಗೆ, ನಾವೇನಾದರೂ ಪ್ರಭು (ಹುಡುಗರು ಚಿತ್ರದಲ್ಲಿ ಅಪ್ಪು ಹೆಸರು) ಆದರೆ ಓಕೆ, ಗ್ರಹಾಚಾರ ತಪ್ಪಿ ಲೂಸ್ ಮಾದ ಥರ ಕಿವಿನೋ, ಕಿಟ್ಟಿ ಥರ ಕಾಲು ಹೋಗಿ ಬಿಟ್ಟರೆ ಎಲ್ಲಿ ಸಹವಾಸ ಅಂತ ನಕ್ಕು ಸುಮ್ಮಾನಾದೆ.


ಈಗ ನಮ್ಮಲ್ಲಿ ಕಟ್ಟ ಕಡೆಯದಾಗಿ‌ ಉಳಿಯುವ ಪ್ರಶ್ನೆ, "ಹಳೇ ಹುಡುಗಿ ಅಚಾನಕ್ ಆಗಿ ನೆನಪಾದರೆ, ನೀವು ಫೋನ್ ಮಾಡಿ ಗೋಳು ಹೊಯ್ದುಕೊಳ್ಳುವ ನಿಮ್ಮ #ಹುಡುಗರು ಯಾರು??" 

ಫೆಬ್ರವರಿ 16, 2018

ನಾನೇನಾದರೂ CM / PM ಆದರೆ...

ಚಿಕ್ಕವನಿದ್ದಾಗ ಎರಡು ಪ್ರಶ್ನೆಗಳಿಗೆ ಎಲ್ಲರ ಉತ್ತರ ಸಂಗ್ರಹಿಸೋದೇ ನನಗೆ ಒಂದು ಕೆಲಸ ಆಗಿತ್ತು.

ಪ್ರಶ್ನೆ ಒಂದು: ದೊಡ್ಡವನಾದ ಮೇಲೆ ಏನಾಗ್ತೀಯಾ? 

ಪ್ರಶ್ನೆ ಎರಡು: ನೀನೇನಾದರೂ CM / PM ಆದರೆ ಮೊದಲು ಮಾಡುವ ಕೆಲಸ ಯಾವುದು?


Technically, ಈ ಎರಡೂ ಪ್ರಶ್ನೆಗಳು‌ contradictory. ದೊಡ್ಡವನಾದ ಮೇಲೆ ಏನಾಗ್ತೀಯಾ ಅನ್ನೋ ಪ್ರಶ್ನೆಗೆ ಗಗನಯಾತ್ರಿ, ಶಿಕ್ಷಕ, ಇಂಜಿನಿಯರ್, ಡಾಕ್ಟ್ರು ಇತ್ಯಾದಿ ಉತ್ತರಗಳು ರೆಡಿ ಇರುತ್ತಿದ್ದವು. ಆದರೆ CM / PM ಆದ ತಕ್ಷಣ ಏನು‌ ಮಾಡುತ್ತೀರಾ ಎಂಬ ಪ್ರಶ್ನೆಗೆ "ಶಾಲೆ ಮಕ್ಕಳಿಗೆ ಭಾನುವಾರ ಸ್ಪೆಷಲ್ ಕ್ಲಾಸ್ / ಟ್ಯೂಷನ್ ಹೆಸರಲ್ಲಿ ರೋಧನೆ‌ ಕೊಡಬಾರದು, ಆಟದ ಸಮಯದಲ್ಲಿ ಬೇರೆ ಕ್ಲಾಸ್ ಮಾಡಬಾರದು" ಇತ್ಯಾದಿಯಾಗಿ ನಮ್ಮದೇ ತರಲೆ ವ್ಯಾಪಾರದ ಐಡಿಯಾಗಳು‌ ನಮ್ಮಲ್ಲಿದ್ದವು. "ದೊಡ್ಡವನಾದ ಮೇಲೆ ಏನಾಗ್ತೀಯಾ" ಅನ್ನೋ ಪ್ರಶ್ನೆಗೆ ಸಾವು ಬಂದಾಯ್ತು. ಈಗಾಗಲೇ ಎರಡು ಕತ್ತೆ ವಯಸ್ಸಾಗಿದೆ. So, ಇಂದಿಗೂ, ಇವತ್ತಿಂದ ಇನ್ನೂ ಇಪ್ಪತ್ತು ವರ್ಷಗಳ ನಂತರವೂ ಕೇಳಬಹುದಾದ ಪ್ರಶ್ನೆ: "ನೀನು CM /  PM ಆದರೆ ಏನು ಮಾಡುತ್ತೀಯಾ?" 


ಸೋಜಿಗ ಏನಪ್ಪಾ ಅಂದರೆ, ‌ಈ ಪ್ರಶ್ನೆಗೆ ಹದಿನೈದು ವರ್ಷಗಳ ಹಿಂದೆ ಉತ್ತರ ಬೇರೆ ಆಗಿತ್ತು, ಈಗ ಬೇರೆ ಆಗಿದೆ, ಮುಂದೆ ಇನ್ನೂ ಬೇರೆ ಏನೋ ಆಗುವುದರಲ್ಲಿ ಸಂಶಯ ಬೇಡ. It's like defining happiness. Then, Happiness was having ice candy at nagesh parlor. It's different now and will change in future. ಈ ಎಲ್ಲಾ ಆಲೋಚನೆ ಶುರುವಾಗಿದ್ದು ಎರಡು ಕಾರಣಗಳಿಂದ.


ಒಂದು: ನಾನು House of Cards ಧಾರವಾಹಿ ನೋಡಲು ಶುರು ಮಾಡಿರೋದರಿಂದ. Political Drama ನಮಗೆ, ಅಲ್ಲಲ್ಲ ನನಗೆ ವೈಯಕ್ತಿಕವಾಗಿ ತುಂಬಾ ಹೊಸ genre. ಈ ನಿಟ್ಟಿನಲ್ಲಿ ಹೀಗೂ ಕಥೆ ನಿರೂಪಣೆ ಮಾಡಬಹುದಾ ಎಂದು ಅಚ್ಚರಿಯಾಗಿದೆ. Kevin Spacey, Robin Wright, Kate Mara ಮತ್ತು ಇನ್ನಿತರರನ್ನು ಒಳಗೊಂಡ  ಧಾರವಾಹಿ ಹಲವಾರು ಕಾರಣಗಳಿಂದ ವಿಶಿಷ್ಟ. ಅದರ ಬಗ್ಗೆ ಇನ್ನೊಮ್ಮೆ ಮಾತಾಡೋಣ.


ಎರಡು: ನಾಲ್ಕು ವರ್ಷದ ರಾಜ್ಯ ಆಡಳಿತವನ್ನು ಮುಗಿಸಿದ ಸಿಎಂ ಸಿದ್ಧರಾಮಯ್ಯ ಮತ್ತು ಮೂರು ವರ್ಷ ಕೇಂದ್ರ ಆಡಳಿತ ಮುಗಿಸಿದ ಪಿಎಂ ನರೇಂದ್ರ ಮೋದಿ. ನಮ್ಮ ದೇಶದಲ್ಲಿ ಸಾರ್ವಜನಿಕರ ಗಮನ ಸೆಳೆಯುವ ಮೂರು ಕ್ಷೇತ್ರಗಳೆಂದರೆ: ಸಿನಿಮಾ, ರಾಜಕೀಯ ಮತ್ತು ಕ್ರಿಕೆಟ್. ಈ ಮೂರರಲ್ಲಿ ಆಸಕ್ತಿ ಇರುವವರಿಗೆ ಬೇರೆ ಮನೋರಂಜನೆ ಅಗತ್ಯ ಇಲ್ಲ ಎಂಬುದು ಕೂಡ ಸತ್ಯ.


ಮೊದಲು ಒಂಥರಾ ಚೆನ್ನಾಗಿತ್ತು, ರಾಜಕೀಯ ನಾಯಕರೆಲ್ಲಾ ಎಲೆಕ್ಷನ್ ಸಂದರ್ಭದಲ್ಲಿ ಮತ ಯಾಚಿಸಲು ಮನೆಗೆ ಬಂದಾಗ, ಜನರು ನಮ್ಮ ವೋಟ್ ನಿಮಗೆ ಎಂದು ಭರವಸೆ ನೀಡಿ ಕಳುಹಿಸುತ್ತಿದ್ದರು. ಆಮೇಲೆ ತಮಗೆ ಯಾರು ಬೇಕೋ ಅವರಿಗೆ ಮತ ಹಾಕುತ್ತಿದ್ದರು. ಯಾರು ಯಾರಿಗೆ ವೋಟ್ ಮಾಡಿದರು ಎಂದು ಅವರೊಬ್ಬರನ್ನು ಬಿಟ್ಟು ಬೇರೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಕಟ್ ಮಾಡಿದ್ರೆ 201೮.  ಸಾಮಾಜಿಕ ಜಾಲತಾಣಗಳಲ್ಲಿ ನಮಗೇ ಗೊತ್ತಿಲ್ಲದೇ ನಾವು ನಿರಂತರ ರಾಜಕೀಯ ಸ್ಕೀಮುಗಳನ್ನು ಪರಾಮರ್ಶಿಸುತ್ತೇವೆ. ಅನ್ನ ಭಾಗ್ಯ ಯೋಜನೆಯ 'ಮಿಸ್ಟೀಕ್' ಏನು, ಡಿಜಿಟಲ್ ಇಂಡಿಯಾ' ಮುಂದಿರುವ ಸವಾಲುಗಳೇನು? ಎಲ್ಲದರಲ್ಲೂ ನಮ್ಮ ಅಭಿಪ್ರಾಯ ಇದ್ದೇ ಇರುತ್ತದೆ. ಮತ್ತೆ ನಾವು ಪಬ್ಲಿಕ್ ಆಗಿ ನಮ್ಮ ಮೆಚ್ಚಿನ ರಾಜಕೀಯ ನಾಯಕರ, ಪಕ್ಷಗಳ ಸಾಧನೆಗಳನ್ನು, ಇತರರ ತಪ್ಪುಗಳನ್ನು ಓಪನ್, ಓಪನ್ ಆಗಿ ಟೀಕೆ ಮಾಡಲು ಶುರು ಮಾಡಿದ್ದೇವೆ. ಗೋ ಹತ್ಯೆ ನಿಷೇಧದ ಪರಿಣಾಮಗಳೇನು, ರಾಜ್ಯದ ಕಾವೇರಿ ಸಮಸ್ಯೆಗೆ ಪರಿಹಾರ ಹೇಗೆ ಎಂಬ ಇತ್ಯಾದಿ ವಿಷಯಗಳ ಬಗ್ಗೆ ಒಂದು ಆರೋಗ್ಯಕರ ಚರ್ಚೆ ಆಗಲಿ, ಒಳ್ಳೆಯದು. ಆದರೆ ನಾನು ಕಂಡಂತೆ ಇತರ ರಾಜಕೀಯ ಪಕ್ಷ ಬೆಂಬಲಿಸುವವರನ್ನು ಬೈಯ್ಯುವ, ಸ್ನೇಹದ ಮಧ್ಯ ರಾಜಕೀಯದ ಗೋಡೆ ಕಟ್ಟುವ ಕೆಲಸ ಆಗಬಾರದು. ಯಾರು ಯಾರನ್ನಾದರೂ ಬೆಂಬಲಿಸಲಿ, ಆದರೆ ಇನ್ನೊಬ್ಬರ ಅಭಿಪ್ರಾಯವನ್ನು ಗೌರವಿಸದೇ ಏಕಮುಖ ವಾದಗಳಿಂದ ಯಾರಿಗೂ ಲಾಭವಿಲ್ಲ. ಅದನ್ನು ಅರಿತು ಮುಂದೆ ಸಾಗೋಣ.


ಇಷ್ಟು ಆದ ಮೇಲೆ ಬೇತಾಳನ ರೀತಿ ನನ್ನದೊಂದು ಚಿಕ್ಕ ಪ್ರಶ್ನೆ: ನೀವು CM / PM ಆದರೆ ಮೊದಲು ಮಾಡುವ ಕೆಲಸ ಏನು?

La La LandLuckily, no one asked me what my valentine's day plan was!! Thank God, otherwise, it would be awkward to answer, I'm waiting from a week to watch La La Land!! 浪浪 La La Land is a musical story of a struggling pianist and a struggling actress who eventually fall in love. ❤❤ 

So far, so good!! But it's not everything.
La La Land beautifully portrays the struggles happen behind the screen, the lovely feeling of falling in love, the price of keeping it alive, following your dreams or being part of someone else's dream etc. La La Land is also magnificent because of constant switching on / off of spotlight which gives the theatre skit feeling  Memorable music and BGM, rocking dialogues and double twists and the end.. I will always love you, La La Land 


#lalaland #cityofstarsareyoushiningjustforme #iwillalwaysloveyou #herestotheheartsthatbreak  #herestothemesswemake

ಫೆಬ್ರವರಿ 14, 2018

ಕಡಲ ಮೌನ

ಕಡಲ ಮೌನದ ಹಾಗೆ
ಮನವು ಸುಮ್ಮನೆ ಕುಳಿತಿತ್ತು
ನಾಳೆಯ ಚಿಂತೆಯು ಆವರಿಸಿ
ಇಂದು ಮಂಕು ಕವಿದಿತ್ತು

ಒಮ್ಮೆಲೇ ಗಾಳಿ ಬೀಸಿ
ಗಾಳಿಪಟ ಹಾರಿ ಬಂದಿತ್ತು,
ಅದರ ಮೇಲಣ ಯಾವುದೋ
ಕವಿತೆ ಬರೆದಂತೆ ಅನಿಸಿತ್ತು

ಕರದಲ್ಲಿ ಹಿಡಿದು ನೋಡಿದೆ
ಪ್ರೇಮ ಪತ್ರವೊಂದು ಅಲ್ಲಿತ್ತು,
ನಾಲ್ಕು ಸಾಲಿನ ಹಾಡಿನಲ್ಲಿ
ಆಶಾ ಭಾವವೇ ಹರಿದಿತ್ತು

ಸುಂದರ ನಿನ್ನೆಯ ನೆನೆದು
ಇಂದೇಕೆ ಅಳುವೆ ಮೇಘವೇ,
ಹೊಸ ಪಯಣವ ಶುರು ಮಾಡಿ
ನಾಳೆಯು ನಮ್ಮದೇ ಎನ್ನೋಣವೇ
- ಅರುಣ್ ಕುಮಾರ್ ಪಿ ಟಿ

ಮಾರ್ಚ್ 14, 2017

ಬೊಂಬೆ ಹೇಳುತೈತೆ...
The Humma Song, Tu Cheez Badi Hai Mast Latest Version, ಈ ರೀತಿಯ ರೀಮಿಕ್ಸ್ ಅಥವಾ ಮ್ಯಾಷಪ್ ಅಥವಾ ವರ್ಷನ್ 2.0 ಎಂದು ಹೇಳಲಾಗುವ ಹಳೇ ಹೊಸ ಹಾಡುಗಳ ಹೊಸ ಆವೃತ್ತಿಯ ಹಾಡುಗಳು ಹೊಸತನದೊಂದಿಗೆ ಆ ಹಾಡನ್ನು ಪ್ರಸ್ತುತ ಪಡಿಸಿದ್ದಕ್ಕಿಂತ ಢಣ್ ಢಣ್ ಬೀಟ್ಸ್‌ನೊಂದಿಗೆ ಗೊಬ್ಬೆಬ್ಬಿಸಿ ಹಳೇ ಹಾಡುಗಳನ್ನೇ ಮತ್ತೆ ಕೇಳುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. ಇಂತಿಪ್ಪ ಸಂದರ್ಭದಲ್ಲಿ ಮೊನ್ನೆ ಹೀಗೆ ಪ್ರೈವೇಟ್ ಬಸ್ಸಿನಲ್ಲಿ ಹೋಗುವಾಗ ಕಸ್ತೂರಿ ನಿವಾಸ ಚಿತ್ರದ ಆಡಿಸಿದಾತ ಬೇಸರ ಮೂಡಿ ಮತ್ತು ಆಡಿಸಿ ನೋಡು ಬೀಳಿಸಿ ನೋಡು ಹಾಡುಗಳು ಬ್ಯಾಕ್ ಟು ಬ್ಯಾಕ್ ಪ್ಲೇ ಆದವು. ನಮ್ ಸಾಗರದ ಕಡೆ FM ಇಲ್ಲ ಎಂಬ ಕೊರಗೇ ಇಲ್ಲ, ಆ ನೋವನ್ನು ಪ್ರೈವೇಟ್ ಬಸ್ ನ ಜೋರು ದನಿಯ ಹಾಡುಗಳು ತುಂಬುವುದು ವಿಶೇಷ. ಕತ್ತಲು ಕವಿಯುತ್ತಿದ್ದ ಆ ಮುಸ್ಸಂಜೆ ಪಯಣಕ್ಕೂ, ಆ ಹಾಡಿಗೂ ಸರಿ ಹೋಯ್ತು ಬಿಡಪ್ಪಾ ಎಂದು ಕೇಳುತ್ತಾ ಕುಳಿತೆ. In fact, ಆ ಎರಡು ಹಾಡುಗಳು ನನ್ನ ಮೊಬೈಲ್ ನಲ್ಲಿ ಕೂಡ ಇವೆ. ಆದರೆ random playlist ಮಾಡಿ ಹಾಡುಗಳನ್ನು ಕೇಳುವಾಗ ಈ ರೀತಿಯ ಹಳೇ ಹಾಡುಗಳು ಬಂದರೆ Now is not the right time Raja ಎಂದು ಮುಂದಿನ ಹಾಡಿಗೆ ಹೋಗುತ್ತಿದ್ದೆ. ಇತ್ತೀಚಿಗೆ, ನಾದಮಯ ಈ ಲೋಕವೆಲ್ಲಾ ಹಾಡನ್ನು ಒಂದ್ ಐದು ಸಲ ಕೇಳಿದ್ದು ಬಿಟ್ಟರೆ ಮತ್ತೆ ಯಾವ ಹಳೇ ಹಾಡುಗಳು ಅಷ್ಟಾಗಿ ಆವರಿಸಿರಲಿಲ್ಲ, until ಈ ಕಸ್ತೂರಿ ನಿವಾಸ. ಆಗ ಬಸ್ಸಲ್ಲಿ‌ ಕೇಳುತ್ತಿದ್ದ ಕಸ್ತೂರಿ ನಿವಾಸ ಹಾಡು ಮತ್ತೆ ಎರಡನೇ ಕ್ಲಾಸ್ ಮೂರನೇ ಕ್ಲಾಸ್ ಇದ್ದಾಗ ಹೊಟ್ಟೆ ನೋವು, ಗಾಯ ಆಗಿದೆ ಅಂತ ಹೇಳಿ ಇಸ್ಕೂಲಿಗೆ ಚಕ್ಕರ್ ಹಾಕಿ ಉದಯ ಟಿವಿಯಲ್ಲಿ ಪಿಚ್ಚರ್ ನೋಡುತ್ತಿದ್ದ ಕಾಲದ ನೆನಪಾಯಿತು. ಆಗೆಲ್ಲಾ ಟಿವಿ ಗೆ ರಿಮೋಟ್ ಇರಲಿಲ್ಲ, ಪ್ರೋಗ್ರಾಮ್ ಲಿಸ್ಟ್ ಇರಲಿಲ್ಲ, ಯಾವ ಫಿಲಂ ಬರುತ್ತೆ ನೋಡೋಣ ಎನ್ನುವ ಕಾರಣಕ್ಕೆ ಪ್ರಜಾವಾಣಿ ನೋಡುತ್ತಿದ್ದೆನಾದರೂ ಆ ಮಾಹಿತಿ ಅಷ್ಟು ಪಕ್ಕಾ ಇರುತ್ತಿರಲಿಲ್ಲ. So, ಮೊದಲು ನೀರಿಗೆ ಜಿಗಿ, ಆಮೇಲೆ ಆಳದ ಚಿಂತೆ ನೋಡೋಣ ಎನ್ನುವಂತೆ ಮೊದಲು ಚಕ್ಕರ್ ಹಾಕೋಣ, ಆಮೇಲೆ ಯಾವ ಪಿಚ್ಚರ್ ಬರುತ್ತೆ ನೋಡ್ಕೊಳ್ಳೋಣ ಎಂಬ ಈಗಿನ ಭಂಡ ಧೈರ್ಯ ಆಗಲೂ ಇದ್ದದ್ದು ಆಶ್ಚರ್ಯವೇ. Coming to topic, ಅಪ್ಪು‌ ಅಭಿನಯದ ರಾಜಕುಮಾರ ಟ್ರೈಲರ್ ಮೊನ್ನೆ ನೋಡಿದೆ. ಚಿತ್ರ ಒಂದು ನಾರ್ಮಲ್ ಫ್ಯಾಮಿಲಿ ಎಂಟರ್ಟೈನರ್ ಅನಿಸಿತು, ಅಂಥ ವಿಶೇಷವೇನಿಲ್ಲ ಎಂದುಕೊಳ್ಳುವ ಹೊತ್ತಿಗೆ, ಕೊನೆಯಲ್ಲಿ ಮೇಲಿನ ಚಿತ್ರ ಬರುತ್ತೆ. ರಾಯರ ಫೋಟೋಗೆ ಕೈ ಮುಗಿದು ಆಚೆ ಹೊರಡುವ ಹೊತ್ತಿಗೆ ಅಪ್ಪು ಬೊಂಬೆಯ ಕಡೆ ನಿರ್ಲಿಪ್ತನಾಗಿ ನೋಡುವ ಆ ದೃಶ್ಯ ಹಂಗೆ ಮನಸ್ಸಿನಲ್ಲಿ ಜಾಗ ಮಾಡಿ‌ ಕುಳಿತುಕೊಂಡು ಬಿಡ್ತು. ರಾಜಕುಮಾರ ಚಿತ್ರ announce ಆದಾಗಿಂದ ಅಪ್ಪು, ಸಂತೋಷ್ ಆನಂದರಾಮ್ ನಿರ್ದೇಶನ, ಪ್ರಿಯಾ ಆನಂದ್ ಹಾಗೂ ಇನ್ನೂ ಹಲವಾರು ಕಾರಣಗಳಿಂದ ಕುತೂಹಲ ಮೂಡಿಸಿತ್ತು. ನಿನ್ನೆ ನಮ್ ಅಣ್ಣಾಬಾಂಡ್ ಜೊತೆ ಹೀಗೆ ಚಾಟ್-ಕತೆಯಲ್ಲಿ ನಿರತನಾಗಿದ್ದಾಗ ಅರೇ ಹೌದಲ್ಲಾ, ರಾಜಕುಮಾರ ಚಿತ್ರದ ಹಾಡುಗಳು ಕೇಳೇ ಇಲ್ಲವಲ್ಲಾ ಎಂದು ಅರಿವಾಯಿತು. ಅದಕ್ಕೆ ಇವತ್ತು ಬೆಳಿಗ್ಗೆ ಎದ್ದ ತಕ್ಷಣ ರಾಜಕುಮಾರ ಹಾಡುಗಳನ್ನು ಇಳಿಸಿ‌ ಕೇಳುವ ಅರ್ಜೆಂಟಲ್ಲಿ ಇದ್ದ ನನಗೆ YouTube ನಲ್ಲಿ‌ ರಾಜಕುಮಾರ ಚಿತ್ರದ ಮೇಕಿಂಗ್ ವೀಡಿಯೋ ಕಾಣಿಸಿತು. ಹರಿಕೃಷ್ಣ ಸಂಯೋಜನೆಯ ವಿಜಯ್ ಪ್ರಕಾಶ್ ಗಾಯನದಲ್ಲಿ 'ಬೊಂಬೆ ಹೇಳುತೈತೆ' ಹಾಡು ಇನ್ನಷ್ಟು ಹಿಡಿಸಿ 'ಆಡಿಸಿ‌ ನೋಡು ಬೀಳಿಸಿ ನೋಡು' ಹಾಡಿನ ಭಾವವನ್ನು ಎಲ್ಲಿಯೂ ಮಿಸುಕಿಸದೆ ಎಷ್ಟೊಂದು ತಂಪಾದ ಹಿತ ನೀಡುವಂತೆ ಹಾಡಿದ್ದಾರಲ್ಲಾ ಎಂದು ಖುಷಿಯಾಯಿತು. ಕೆಲವು ಹಾಡುಗಳು ಕಣ್ಣಿಗೆ ಚೆಂದ,‌ ಮತ್ತು ಕೆಲವು ಮನಸ್ಸಿಗೆ ಆನಂದ. Happiness is a pop song; Sadness is a poem ಎಂಬುವ Sherlock ಧಾರಾವಾಹಿಯ ಸಾಲಿನಂತೆ ಖುಷಿಯಾಗಿದ್ದಾಗ ಎಷ್ಟೇ Tiger Dance, Thithi Steps, Ugramm Beats ಎಂದು ಅಬ್ಬರಿಸಿದರೂ ಸುಸ್ತಾಗಿ ಕುಳಿತಾಗ ಮುಕುಂದ ಮುರಾರಿ, ಬೊಂಬೆ ಹೇಳುತೈತೆ, ಇಳಿಜಾರು ಹಾದಿ ಇದು ಹಾಡುಗಳೇ ಜೊತೆಯಾಗುವುದು. ಬದುಕಿನ ಬಣ್ಣಗಳು ಹಲವು, ಮನಸ್ಸಿನ ಭಾವಗಳು‌ ಅನೇಕ, ಇಂಥ ಎಲ್ಲಾ ಸನ್ನಿವೇಶ, ಭಾವ ಸಂದರ್ಭಗಳಿಗೆ ತಕ್ಕಂತೆ ಹಾಡುಗಳು ಇರುವುದು ಯೋಗವೇ ಸರಿ. 


ರಾಜಕುಮಾರ ಮೇಕಿಂಗ್ ವೀಡಿಯೋ ಇಲ್ಲಿ ನೋಡಿ: https://youtu.be/gy5_T2ACerk

ಫೆಬ್ರವರಿ 22, 2017

Kannada Gottilla - Time and SpaceHello,


I hope you had fun at work this week. If not, nothing to worry, you will have it now learning these space and time related words in Kannada.


I don't know if you've ever heard this Kannada laali song called as 'Baana Daariyalli Surya Jaari Hoda' from Bhagyavantha (1981). Laali songs are nothing but lullaby. This one song is kinda special and close to every Kannadiga's heart, because in the video version of it, you will see a small kid singing this lullaby to his grandfather. The song is so simple and haunting that it will keep us in loop for hours. An hour listening to it, made me think, it would be good to share time and space terms to non kannadiga friends at Kannada Gottilla.


Without any delay, let's get into topic. Two important words to start with: Light and Dark. Light is called beLaku and dark is called as kattalu. The following two sentences will help you keep these words in mind. Consider yourself at a wedding ceremony and you've celebrated every bit of it with your friends. Now, comes the most important part, presenting the gifts to bride and bridegroom. You may now wish them with 'Nimma Jeevana BeLakaagirali' which loosely translates to let there be light in your life. In the above life, the word light or beLaku is symbol of hope and peace. Ok, now consider yourself at work; you've finished all your work and said bye to your team lead. But your friend from other cabin is in war with his computer as he's unable to find the bug that's faulting his app model. Now you may say, 'kattalu aagutide, hogona' which translates into 'It's getting dark, shall we go?' Now, this is all about two important terms light and dark. The presence and absence of these elements make day and night. Munjaane means morning, Madhyahna means afternoon, Sanje or Mussanje means Evening and Raatri means night. That's all about time and related parameters. Now let's move on to space topic.


 Let's recall the top song again. Baana daariyalli, baana means of sky, where as baaNa means arrow; and daari means way and hence daariyalli refers to in the way of. So, collectively, baana daariyalli refers to in the pathway of sky. Surya jaari hoda, refers to surya i.e, the sun slipped into his home. Chandra mele banda, Chandra i.e, moon came to top. Forget the logic in the song as it is in viewpoint of a school kid, and please note down the translated words below:

Surya – Sun
Chandra – Moon

Graha - Planet;
Grahagalu - Planets

Song link for further information: https://youtu.be/bIHQRf-Qr64That's all about time and space for now, good night folks, or "Baana daariyalli, surya jaari hoda; chandra mele banda".