ಅಕ್ಟೋಬರ್ 2, 2013

ಹೇಗೆ ಹೇಳಲಿ?




ಮೊದಲ ಒಲವ ಪತ್ರ
ಬರೆಯೋದು ಹೇಗೋ?
ನನ್ನ ಮನದ ಇಂಗಿತ
ತಿಳಿಸೋದು ಹೇಗೋ?

ಹಾಗೋ ಹೇಗೊ ಬರೆದೆ
ಪ್ರೇಮದಿ ಮೊದಲ ಪದಗಳ
ತಪ್ಪೆಂದೆನಿಸಿ ಅಳಿಸಿ ಹಾಕಿದೆ
ಆ ಎಲ್ಲಾ ಸಾಲುಗಳ

ನಮ್ಮ ಮೊದಲ ಭೇಟಿಯ
ಮೆಲುಕು ಹಾಕಿದೆ ಹಾಗೆ
ಸಂತಸದ ಸಿಹಿ ನೆನಪುಗಳು
ಸುಮ್ಮನೆ ಹರಿದವು ಹೀಗೆ

ಕಾಗದ ನಿನ್ನ ಕೈಗಿತ್ತಾಗ
ಆಗಿತ್ತು ಕಾಣದ ದಿಗಿಲು
ಮುಗುಳ್ನಗೆಯಲ್ಲಿ ನೀ ಒಪ್ಪಿದಾಗ
ಸಡಗರ ಮುಟ್ಟಿತ್ತು ಮುಗಿಲು