Nikon
D3200. ಸುಮಾರು
ಆರು ತಿಂಗಳಾಗಿರಬಹುದು,
ನಾನು
ಈ ಕ್ಯಾಮೆರಾ ಕೊಂಡು. ನನ್ನನ್ನು ನಾನೊಬ್ಬ professional ಅಥವಾ Candid
Photographer ಎಂದು
ಕರೆಸಿಕೊಳ್ಳಲು ಬೇಕಾದ ಯಾವ ಅರ್ಹತೆಯೂ ನನಗಿಲ್ಲ. 'Auto Mode' ಇಟ್ಟು ಬೇಕಾದ ವಸ್ತು / ವಿಷಯ /
ವ್ಯಕ್ತಿಗಳ
ಚಿತ್ರ
ಕ್ಲಿಕ್ಕಿಸೋನು ನಾನು. ಹೆಚ್ಚಿನ ಸಮಯದಲ್ಲಿ ಚಿತ್ರಗಳ ಜೊತೆ ಹೊಂದಿಕೊಂಡಿರುವ ಕಥೆಗಳನ್ನು
ಹಂಚಿಕೊಳ್ಳುವುದರಲ್ಲೇ ನನಗೆ ಆಸಕ್ತಿ ಜಾಸ್ತಿ. ಆದ್ದರಿಂದ Pt Photography ಅಂತ ಫೇಸ್ ಬುಕ್ ಪೇಜ್ ಮಾಡಿ Photography
itself has 'pt' ಅಂತ
ಒಂದು ಅಡಿಬರಹ
ಇಟ್ಟು
'ಹಗರಣ' ಮಾಡುವ ಸಖತ್ ಐಡಿಯಾ ಬಂದಿದ್ದರೂ
ಬೇಡ ಅಂತ ಬಿಟ್ಟಿದ್ದೆ. ಮೇಲೆ ಹೇಳಿದಂತೆ, ನಾನು ತೆಗೆದ ಚಿತ್ರಗಳಿಗೆ ಒಂದು
ಸೂಕ್ತ ಅಡಿಬರಹ ಕೊಟ್ಟು ಹೊಸ ಹೊಸ ಕಥೆಗಳನ್ನು ನಿರೂಪಣೆ ಮಾಡುವ
ಹಳೇ ಖಾಯಿಲೆ ಇನ್ನೂ ಇರುವುದರ ಫಲಿತಾಂಶವೇ Pt Pictories. ಅದರ ಕೊಂಡಿ ಇಲ್ಲಿದೆ.
ರಂಗಯ್ಯನ ಬಾಗಿಲು
ವಿಷಯ ಅದಲ್ಲ, ಹೀಗೇ ಕೆಲವು ತಿಂಗಳುಗಳ ಹಿಂದೆ
ನಮ್ ಹುಡುಗರ ಜೊತೆ ಚಿತ್ರದುರ್ಗದ ಕೋಟೆ ನೋಡೋಕೆ ಹೋಗಿದ್ದೆ. ಹೊಸ
ಕ್ಯಾಮೆರಾ ಬೇರೆ ಇತ್ತು. ಹಸಿದ ಹೆಬ್ಬುಲಿ ಜ಼ುಗ್ ಅಂತ ಜಿಂಕೆ ಮೇಲೆ ನೆಗೆಯುವ ಹಾಗೆ ನಾನಂತೂ
ಫೋಟೋ ತೆಗೆದಿದ್ದೇ ತೆಗೆದಿದ್ದು. ಅಂತ ಸಂದರ್ಭದಲ್ಲಿ ತೆಗೆದ ಒಂದು ಚಿತ್ರ ಇದು. ಈ
ಸ್ಮಾರಕದ ಹೆಸರು 'ರಂಗಯ್ಯನ ಬಾಗಿಲು' ಮತ್ತು ಇದು 'ರಾಜ್ಯ ರಕ್ಷಿತ ಸ್ಮಾರಕಗಳು' ಪಟ್ಟಿಯಲ್ಲಿದೆ ಅಂತ ಮುಂಜಾನೆ
ವಿಕಿಪೀಡಿಯಾ ನೋಡುವಾಗ ತಿಳಿಯಿತು. ವಿಕಿಪೀಡಿಯಾದ ಹೊಸ ಕಾರ್ಯಕ್ರಮ Wiki Loves
Monuments ನಲ್ಲಿ
ನಾನು ತೆಗೆದ ಈ ಚಿತ್ರ ಅಪ್ ಲೋಡ್ ಮಾಡಿರುವೆನು. ಸದ್ಯಕ್ಕೆ ಇದಿನ್ನೂ
ವಿಕಿಪೀಡಿಯಾದ Wiki
Loves Monuments ನಲ್ಲಿ
ಖಾತರಿಯಾದ ಚಿತ್ರವಾಗಿಲ್ಲ. ಮುಂದೊಂದಿನ ಚಿತ್ರದುರ್ಗದ ಬಗ್ಗೆ ಎಲ್ಲಾದರೂ ಹುಡುಕುವಾಗ / ಓದುವಾಗ ಈ ಚಿತ್ರ
ಕಂಡರೆ ಥಟ್ ಅಂತ ಮೆಸೇಜ್ ಮಾಡಿ. ನಮ್ ಜೀವನದಲ್ಲಿ ಎಷ್ಟೊಂದು ಸಹಾಯ ಮಾಡಿದ
ವಿಕಿಪೀಡಿಯಾವನ್ನು ಸಮೃದ್ಧಗೊಳಿಸುವಲ‌್ಲಿ ನಮ್ಮದೂ ಒಂದು ಚಿಕ್ಕ ಅಳಿಲು ಸೇವೆ ಆಯಿತೆಂದು
ಖುಷಿಪಡುವೆ.
After
all, ಖುಷಿಯಾಗಿದ್ರೆ
ಲಕ್ಷ್ಮಿ ಬಂದೇ ಬರ್ತಾಳಲ್ಲವಾ?!