The Humma Song, Tu Cheez Badi Hai Mast Latest Version, ಈ ರೀತಿಯ ರೀಮಿಕ್ಸ್ ಅಥವಾ ಮ್ಯಾಷಪ್ ಅಥವಾ ವರ್ಷನ್ 2.0 ಎಂದು ಹೇಳಲಾಗುವ ಹಳೇ ಹೊಸ ಹಾಡುಗಳ ಹೊಸ ಆವೃತ್ತಿಯ ಹಾಡುಗಳು ಹೊಸತನದೊಂದಿಗೆ ಆ ಹಾಡನ್ನು ಪ್ರಸ್ತುತ ಪಡಿಸಿದ್ದಕ್ಕಿಂತ ಢಣ್ ಢಣ್ ಬೀಟ್ಸ್‌ನೊಂದಿಗೆ ಗೊಬ್ಬೆಬ್ಬಿಸಿ ಹಳೇ ಹಾಡುಗಳನ್ನೇ ಮತ್ತೆ ಕೇಳುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. ಇಂತಿಪ್ಪ ಸಂದರ್ಭದಲ್ಲಿ ಮೊನ್ನೆ ಹೀಗೆ ಪ್ರೈವೇಟ್ ಬಸ್ಸಿನಲ್ಲಿ ಹೋಗುವಾಗ ಕಸ್ತೂರಿ ನಿವಾಸ ಚಿತ್ರದ ಆಡಿಸಿದಾತ ಬೇಸರ ಮೂಡಿ ಮತ್ತು ಆಡಿಸಿ ನೋಡು ಬೀಳಿಸಿ ನೋಡು ಹಾಡುಗಳು ಬ್ಯಾಕ್ ಟು ಬ್ಯಾಕ್ ಪ್ಲೇ ಆದವು. ನಮ್ ಸಾಗರದ ಕಡೆ FM ಇಲ್ಲ ಎಂಬ ಕೊರಗೇ ಇಲ್ಲ, ಆ ನೋವನ್ನು ಪ್ರೈವೇಟ್ ಬಸ್ ನ ಜೋರು ದನಿಯ ಹಾಡುಗಳು ತುಂಬುವುದು ವಿಶೇಷ. ಕತ್ತಲು ಕವಿಯುತ್ತಿದ್ದ ಆ ಮುಸ್ಸಂಜೆ ಪಯಣಕ್ಕೂ, ಆ ಹಾಡಿಗೂ ಸರಿ ಹೋಯ್ತು ಬಿಡಪ್ಪಾ ಎಂದು ಕೇಳುತ್ತಾ ಕುಳಿತೆ. In fact, ಆ ಎರಡು ಹಾಡುಗಳು ನನ್ನ ಮೊಬೈಲ್ ನಲ್ಲಿ ಕೂಡ ಇವೆ. ಆದರೆ random playlist ಮಾಡಿ ಹಾಡುಗಳನ್ನು ಕೇಳುವಾಗ ಈ ರೀತಿಯ ಹಳೇ ಹಾಡುಗಳು ಬಂದರೆ Now is not the right time Raja ಎಂದು ಮುಂದಿನ ಹಾಡಿಗೆ ಹೋಗುತ್ತಿದ್ದೆ. ಇತ್ತೀಚಿಗೆ, ನಾದಮಯ ಈ ಲೋಕವೆಲ್ಲಾ ಹಾಡನ್ನು ಒಂದ್ ಐದು ಸಲ ಕೇಳಿದ್ದು ಬಿಟ್ಟರೆ ಮತ್ತೆ ಯಾವ ಹಳೇ ಹಾಡುಗಳು ಅಷ್ಟಾಗಿ ಆವರಿಸಿರಲಿಲ್ಲ, until ಈ ಕಸ್ತೂರಿ ನಿವಾಸ. ಆಗ ಬಸ್ಸಲ್ಲಿ ಕೇಳುತ್ತಿದ್ದ ಕಸ್ತೂರಿ ನಿವಾಸ ಹಾಡು ಮತ್ತೆ ಎರಡನೇ ಕ್ಲಾಸ್ ಮೂರನೇ ಕ್ಲಾಸ್ ಇದ್ದಾಗ ಹೊಟ್ಟೆ ನೋವು, ಗಾಯ ಆಗಿದೆ ಅಂತ ಹೇಳಿ ಇಸ್ಕೂಲಿಗೆ ಚಕ್ಕರ್ ಹಾಕಿ ಉದಯ ಟಿವಿಯಲ್ಲಿ ಪಿಚ್ಚರ್ ನೋಡುತ್ತಿದ್ದ ಕಾಲದ ನೆನಪಾಯಿತು. ಆಗೆಲ್ಲಾ ಟಿವಿ ಗೆ ರಿಮೋಟ್ ಇರಲಿಲ್ಲ, ಪ್ರೋಗ್ರಾಮ್ ಲಿಸ್ಟ್ ಇರಲಿಲ್ಲ, ಯಾವ ಫಿಲಂ ಬರುತ್ತೆ ನೋಡೋಣ ಎನ್ನುವ ಕಾರಣಕ್ಕೆ ಪ್ರಜಾವಾಣಿ ನೋಡುತ್ತಿದ್ದೆನಾದರೂ ಆ ಮಾಹಿತಿ ಅಷ್ಟು ಪಕ್ಕಾ ಇರುತ್ತಿರಲಿಲ್ಲ. So, ಮೊದಲು ನೀರಿಗೆ ಜಿಗಿ, ಆಮೇಲೆ ಆಳದ ಚಿಂತೆ ನೋಡೋಣ ಎನ್ನುವಂತೆ ಮೊದಲು ಚಕ್ಕರ್ ಹಾಕೋಣ, ಆಮೇಲೆ ಯಾವ ಪಿಚ್ಚರ್ ಬರುತ್ತೆ ನೋಡ್ಕೊಳ್ಳೋಣ ಎಂಬ ಈಗಿನ ಭಂಡ ಧೈರ್ಯ ಆಗಲೂ ಇದ್ದದ್ದು ಆಶ್ಚರ್ಯವೇ. Coming to topic, ಅಪ್ಪು ಅಭಿನಯದ ರಾಜಕುಮಾರ ಟ್ರೈಲರ್ ಮೊನ್ನೆ ನೋಡಿದೆ. ಚಿತ್ರ ಒಂದು ನಾರ್ಮಲ್ ಫ್ಯಾಮಿಲಿ ಎಂಟರ್ಟೈನರ್ ಅನಿಸಿತು, ಅಂಥ ವಿಶೇಷವೇನಿಲ್ಲ ಎಂದುಕೊಳ್ಳುವ ಹೊತ್ತಿಗೆ, ಕೊನೆಯಲ್ಲಿ ಮೇಲಿನ ಚಿತ್ರ ಬರುತ್ತೆ. ರಾಯರ ಫೋಟೋಗೆ ಕೈ ಮುಗಿದು ಆಚೆ ಹೊರಡುವ ಹೊತ್ತಿಗೆ ಅಪ್ಪು ಬೊಂಬೆಯ ಕಡೆ ನಿರ್ಲಿಪ್ತನಾಗಿ ನೋಡುವ ಆ ದೃಶ್ಯ ಹಂಗೆ ಮನಸ್ಸಿನಲ್ಲಿ ಜಾಗ ಮಾಡಿ ಕುಳಿತುಕೊಂಡು ಬಿಡ್ತು. ರಾಜಕುಮಾರ ಚಿತ್ರ announce ಆದಾಗಿಂದ ಅಪ್ಪು, ಸಂತೋಷ್ ಆನಂದರಾಮ್ ನಿರ್ದೇಶನ, ಪ್ರಿಯಾ ಆನಂದ್ ಹಾಗೂ ಇನ್ನೂ ಹಲವಾರು ಕಾರಣಗಳಿಂದ ಕುತೂಹಲ ಮೂಡಿಸಿತ್ತು. ನಿನ್ನೆ ನಮ್ ಅಣ್ಣಾಬಾಂಡ್ ಜೊತೆ ಹೀಗೆ ಚಾಟ್-ಕತೆಯಲ್ಲಿ ನಿರತನಾಗಿದ್ದಾಗ ಅರೇ ಹೌದಲ್ಲಾ, ರಾಜಕುಮಾರ ಚಿತ್ರದ ಹಾಡುಗಳು ಕೇಳೇ ಇಲ್ಲವಲ್ಲಾ ಎಂದು ಅರಿವಾಯಿತು. ಅದಕ್ಕೆ ಇವತ್ತು ಬೆಳಿಗ್ಗೆ ಎದ್ದ ತಕ್ಷಣ ರಾಜಕುಮಾರ ಹಾಡುಗಳನ್ನು ಇಳಿಸಿ ಕೇಳುವ ಅರ್ಜೆಂಟಲ್ಲಿ ಇದ್ದ ನನಗೆ YouTube ನಲ್ಲಿ ರಾಜಕುಮಾರ ಚಿತ್ರದ ಮೇಕಿಂಗ್ ವೀಡಿಯೋ ಕಾಣಿಸಿತು. ಹರಿಕೃಷ್ಣ ಸಂಯೋಜನೆಯ ವಿಜಯ್ ಪ್ರಕಾಶ್ ಗಾಯನದಲ್ಲಿ 'ಬೊಂಬೆ ಹೇಳುತೈತೆ' ಹಾಡು ಇನ್ನಷ್ಟು ಹಿಡಿಸಿ 'ಆಡಿಸಿ ನೋಡು ಬೀಳಿಸಿ ನೋಡು' ಹಾಡಿನ ಭಾವವನ್ನು ಎಲ್ಲಿಯೂ ಮಿಸುಕಿಸದೆ ಎಷ್ಟೊಂದು ತಂಪಾದ ಹಿತ ನೀಡುವಂತೆ ಹಾಡಿದ್ದಾರಲ್ಲಾ ಎಂದು ಖುಷಿಯಾಯಿತು. ಕೆಲವು ಹಾಡುಗಳು ಕಣ್ಣಿಗೆ ಚೆಂದ, ಮತ್ತು ಕೆಲವು ಮನಸ್ಸಿಗೆ ಆನಂದ. Happiness is a pop song; Sadness is a poem ಎಂಬುವ Sherlock ಧಾರಾವಾಹಿಯ ಸಾಲಿನಂತೆ ಖುಷಿಯಾಗಿದ್ದಾಗ ಎಷ್ಟೇ Tiger Dance, Thithi Steps, Ugramm Beats ಎಂದು ಅಬ್ಬರಿಸಿದರೂ ಸುಸ್ತಾಗಿ ಕುಳಿತಾಗ ಮುಕುಂದ ಮುರಾರಿ, ಬೊಂಬೆ ಹೇಳುತೈತೆ, ಇಳಿಜಾರು ಹಾದಿ ಇದು ಹಾಡುಗಳೇ ಜೊತೆಯಾಗುವುದು. ಬದುಕಿನ ಬಣ್ಣಗಳು ಹಲವು, ಮನಸ್ಸಿನ ಭಾವಗಳು ಅನೇಕ, ಇಂಥ ಎಲ್ಲಾ ಸನ್ನಿವೇಶ, ಭಾವ ಸಂದರ್ಭಗಳಿಗೆ ತಕ್ಕಂತೆ ಹಾಡುಗಳು ಇರುವುದು ಯೋಗವೇ ಸರಿ.
ರಾಜಕುಮಾರ ಮೇಕಿಂಗ್ ವೀಡಿಯೋ ಇಲ್ಲಿ ನೋಡಿ: https://youtu.be/gy5_T2ACerk