ಕಾಗಿನೆಲೆಯ ಆದಿಕೇಶವನ
ದರುಶನಕೆ ನಿಂತಿರುವ ಸಂತ
ಕನಕದಾಸರ ಕೀರ್ತನೆಗಳ
ಜ್ಞಾನ ಬಂಡಾರ ಅನಂತ
ಕುಸುಮದಲಿ ಗಂಧವ
ಹೀರುವ ಜನರ ನಡುವೆ
ಗಂಧದೊಳ್ ಕುಸುಮ
ಹುಡುಕಿ ಅಲ್ಲಿ ಕೇಶವನ ಕಂಡನು
ಮೇಲು ಕೀಳಿನ ಜಗಳದಿ
ನಿಂತು ದೂರಾಗುವ ಜನರ
ಕುಲದ ನೆಲೆಯ ಪ್ರಶ್ನಿಸಿ
ನಿಂತ ನೆಲವ ಅಲುಗಾಡಿಸಿದಂತೆ
ಕುಲ ಕುಲ ಕುಲವೆಂಬ
ನಂಬಿಕೆ ಅಪನಂಬಿಕೆಯ
ಒಮ್ಮೆಲೇದೂರವಾಗಿಸಿದ
ದಾಸರಯ್ಯ ಅವರು
ಶ್ರೀ ಕನಕದಾಸರು