ಸೆಪ್ಟೆಂಬರ್ 29, 2022

Genie and Three Wishes

The other day I was having coffee at workplace and the aroma instantly reminded me of the time I attended CSR activity at my old branch's nearby government school. Manager gave everyone school stationeries and since it was Saturday, which is half day to them, school was almost over and they were waiting for their Saturday Brunch. It's usually Mid Day Meals or Lunch on weekdays but It's served at around 11:30 on Saturday, so brunch it is. After all the presentation of stationeries, photos etc, we were leaving and the Teachers asked us to stay for lunch to have with kids since the kids were all happy with the bank's gesture of CSR activity which involved their school. We sat along with school kids and had our lunch. After it was over, Head Madam asked Manager Sir to talk few motivational words about studies since Baroda Foundation Day was around their school tests. Manager Sir talked for few minutes and importance of planning, dedication and involvement in any plan or exam to succeed. After that, Sir asked me to talk something about their school tests etc. I became nervous and didn't had any experience of public speaking, so I was shocked for a while. But then I thought, since the audience are kids, I almost have nothing to worry about. So I started with simple questions.


First of all, I asked name, class, and their favorite hobby to random students. Everyone was in happy happy mood and everyone gave answers with great energy. I asked few general knowledge questions, some riddles etc and some kids answered the question, and for unknown questions they were very eager to know the answer. Later at that stage, I asked them Does in Everyone believe in God? As a random government school mixture of students, everyone said Yes, but their answer Varied from Vishnu to Jesus to Allah to Buddha etc. So, I went further and asked if they are aware of the Genie and everyone said yes they were all curious to say their answers on what would they ask if a genie appeared and was able to grant three wishes. Since all of them were below 12 years, everyone asked for better marks, good jobs in future, their desire to be cricketer, actor etc. So, as per my opinion, I gave an outline on what should be one's wish list if any genie appeared out of nowhere and they should be prepared for it.


1: Past Mistakes: Everyone makes mistakes, while some can be corrected and some couldn't. Since human evolution, humans have made tons of errors, looting other countries, declaring war, colonisation and so on. We may think we can always invent a time machine to go back and correct the mistakes of the past. But theoretically, that's not how time travel works and it shouldn't be one's motive in life. Making mistakes is okay, but owning them and accepting the mistake is how we grow and evolve. There was a time when women weren't allowed to vote. Decades later, we realised it was wrong and now women are almost everywhere in every working industry and working side by men and in some areas they're far better than men. So, I informed the kids, even though making mistakes is wrong, somewhere we have to think and proceed on how to correct past mistakes. 


2. Present Scenario: We may like Gulab Jamun today, but if we eat Gulab Jamun everyday for the rest of the year, we may not like it so much. Similar incidents happen throughout life because Uncertainty is the only certain thing to happen in life. So, when we are making a decision, especially big decisions like moving to new city, marriage, career change, not only we have to consider the positive outcome of today, but also the impact of it on our future selves. 


3. Future Adventure: When I was young, I wanted to be a sportsperson like Narain Karthikeyan, popular F1 Race Driver. For longest period of time my dream goal was changing from Astronaut to Actor to Teacher to Prime Minister etc. 20 years later, today I work at a Bank. If I knew this 20 years ago, I wouldn't have believed myself. Also, I unknown infinite number of possibilities had me try at least towards one or two dream jobs I had. As someone said, birth is a gift and death is a surprise gift. One may not agree and consider death as a gift, but it sure is a surprising event. We can never ever be prepared for it. We know when and where did we born, but we never know the end of our story. Think about it, we don't know what happens tomorrow also, obviously we may have a vague idea that we'll go to work or trip to Goa and so, but plans can happen and gets cancelled anytime. To conclude, future is a surprise question, part of it's answer is revealed to us everyday. 


And thus, I asked the students to form their three wishes with Genie to involve something from their past, present and future. They all felt confused and Manager sir said its time to go. At that moment I realized I was daydreaming about public speaking to kids and snapped back to reality. And I thought, anyway, it was nice to go on a imaginary trip associated with real event that stayed in my memory over a cup of coffee. The story of me talking to kids might be fictional but philosophy of Genie and Three wishes made me write this. Although I don't believe in Genie and all, I better keep my three wishes ready, you know, just in case. Moving On.



ಸೆಪ್ಟೆಂಬರ್ 19, 2022

The Economics of (ತಿಥಿ) Thithi

ಹೈ ಸ್ಕೂಲ್ ದಿನಗಳು. ಶಂಕರ್ ನಿರ್ದೇಶನದಲ್ಲಿ ಬಾಯ್ಸ್ ಚಿತ್ರ ಬಂದಿತ್ತು. ಆಗೆಲ್ಲಾ ನಮಗೆ ಥಿಯೇಟರ್ ಗೆ ಹೋಗಿಸಿನಿಮಾ ನೋಡೋ ಅಷ್ಟು ಸ್ವಾತಂತ್ರ್ಯ ಇರಲಿಲ್ಲ, ಪಾಕೆಟ್ ಇತ್ತು, ಮನಿ ಇರಲಿಲ್ಲ, so ಪಾಕೆಟ್ಮನಿ ಇನ್ನೂ ದೂರದ ಮಾತು‌. ಇಂತಿಪ್ಪ ಸಂದರ್ಭದಲ್ಲಿ ಅಲ್ಲಿ ಇಲ್ಲಿ ಇದ್ದ ₹5, ₹10 ಜೋಡಿಸಿ ಪೈರಸಿ ಡಿವಿಡಿ ತಂದು ಸಿನಿಮಾ ನೋಡಿ ಸಖತ್ ಎಂಜಾಯ್ ಮಾಡಿದ್ದೆವು. ಮಧ್ಯಾಹ್ನ ಊಟದ ಟೈಮಲ್ಲಿ ಅದೇ ಮಾತು. ಬೆಳಿಗ್ಗೆ ಪ್ರಾರ್ಥನೆಯ ಸಮಯದಲ್ಲಿ ನಮ್ ಸ್ಕೂಲಲ್ಲಿ ಯಾಕೆ ಜೆನಿಲಿಯಾ ರೇಂಜ್ ಹುಡುಗಿ ಯಾಕಿಲ್ಲ ಅಂತ ಬೇಜಾರು, ಸಂಜೆ ಮನೆಗೆ ಹೋಗುವಾಗ Naakokka Girlfriend Kavali Raa ಅಂತ ಹಾಡು ಗುನುಗುತ್ತಾ ಹೋಗೋದು ಇದೇ ದಿನಚರಿಯಾಗಿತ್ತು. Early days of puberty, ಮೀಸೆ ಬಂದ ಹುಡುಗನಿಗೆ ದೇಶಕಾಣಲ್ಲ ಅಂತಾರೆ, ಆದರೆ ನಮಗೆ ಕಾಣುತ್ತಾ ಇದ್ದಿದ್ದು ಬರೀ ಹುಡುಗೀರೇ!! ಅಂಥ ಟೈಮಲ್ಲಿ ನಮ್ ಹುಡುಗ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ಪ್ರಪೋಸ್ ಮಾಡಿಕೊಂಡು ಅವನಸ್ಟೋರಿ one way ಇಂದ two way ಆಯ್ತು. ನಮ್ಸ್ಕೂಲ್ಲಲ್ಲಿ ಆಗ ಇದ್ದ ಹೆಚ್ಚು ಕಮ್ಮಿ 40 ಜನ ಹುಡುಗರೂ ಕೂಡ ಮಗಾ ಪಾರ್ಟಿ ಅಂತ ಖುಷಿಯಲ್ಲಿ ತೇಲುತ್ತಿದ್ದೆವು. ಯಾಕೆ? ಗೊತ್ತಿಲ್ಲ

 

Two Months Ago, ನಮ್ ಹುಡುಗನ ಮದುವೆಗೆ ಮೊನ್ನೆ ನಾನು ನಮ್ ಹುಡುಗರೆಲ್ಲಾ ಹೋಗಿದ್ವಿ. Almost 17 years later, ನಾವುಅಂದು ಹೊರಟಿದ್ದ ದಾರಿಯೇ ಬೇರೆ, ಇಂದು ತಲುಪಿರುವ ನಿಲ್ದಾಣವೇ ಬೇರೆ ಅಂತ ಬೇಗನೇ ಗೊತ್ತಾಯಿತು. ಮದುವೆಗೆ ಹೋಗಿ ಗಂಡು ಹೆಣ್ಣಿಗೆ wish ಮಾಡಿ, ಫೋಟೋ ತೆಗೆಸಿಕೊಂಡು, ಅಲ್ಲಿ ಕೈಗೆ ಕೊಡೋಕೆ ಗಿಫ್ಟ್ ಎಲ್ಲಾ ಏನಿಲ್ಲ, ಫೋನಲ್ಲಿ ಗಿಫ್ಟ್ ಕಾರ್ಡ್ ಕಳುಹಿಸುತ್ತೇವೆ ಅಂತ ಜಾರಿಕೊಂಡು ಊಟ ಮಾಡಿ ಕಾರ್ ತಗೊಂಡು LP ಡಾಬಾ ಹೋಗಿ ಸಿಟ್ಟಿಂಗ್ ಹಾಕಿದ್ವಿ. Sitting ಅಂದ್ರೆ Blue Label ಅಲ್ಲ, ಟೀ ಸಿಟ್ಟಿಂಗ್, Red Lebal ಕಡೆಯಿಂದ‌. ಎಲ್ಲರೂ ಅವರವರವ ಕಷ್ಟ ನಷ್ಟಗಳನ್ನು ಹೇಳಿಕೊಂಡು, ಒಬ್ಬರಿಗೊಬ್ಬರು ತಮಾಷೆ ಮಾಡಿ, ಮದುವೆ ಫೋಟೋ ಶೇರ್ ಮಾಡಿದೆವು. In the meantime, ನಾನು ಕೆಲವು ವಿಷಯಗಳನ್ನು observe ಮಾಡಿದೆ: ಒಬ್ಬನಿಗೆ ಮನೆಗೆ ಬರೋದುಲೇಟಾಗುತ್ತಾ ಅಂತಹೆಂಡತಿಯಿಂದ WhatsApp ಅಲ್ಲಿ ಮೆಸೇಜ್ ಬಂತು, ಇನ್ನೊಬ್ಬ LinkedIn ನಲ್ಲಿ ಹೊಸ ಕೆಲಸವನ್ನು ಹುಡುಕುತ್ತಿದ್ದ, ಮತ್ತೊಬ್ಬ Axis Bank App ನಲ್ಲಿ Credit Card Due ಎಷ್ಟು ಇದೆ, ಯಾವತ್ತು ಅಂತ details ನೋಡಿ ಮನದಲ್ಲೇ ಲೆಕ್ಕ ಹಾಕುತ್ತಿದ್ದ, ಇನ್ನೊಬ್ಬ wish you were here ಅಂತ Tea ಮತ್ತು ನಮ್ಮ group photo ಅನ್ನು ತನ್ನ girlfriend ಗೆಕಳುಹಿಸಿದ, ಮತ್ತೊಬ್ಬ‌ Baby Care Tips ಅಂತ ವಿಡಿಯೋ YouTube ನಲ್ಲಿ‌ search ಮಾಡಿ, Add to watch later ಪಟ್ಟಿಗೆ ಸೇರಿಸಿದ, ಮತ್ತೊಬ್ಬ ಮುಂದಿನ ತಿಂಗಳು ಮನೆ ಗೃಹ ಪ್ರವೇಶ ಇದೆ ಬರಬೇಕೆಂದು ಅಲ್ಲೇ ಆಹ್ವಾನ ನೀಡಿದನು, ಇತ್ಯಾದಿ. ಆಮೇಲೆ ಬಿಲ್ ಕೊಟ್ಟು, ಎಲ್ಲರೂ ಅವನಿಗೆ ಅವರವರ ಮೊಬೈಲ್ ನಲ್ಲಿ ಇದ್ದ ಫೋಟೋ ಕಳುಹಿಸಿ ಮನೆಗೆ ಹೋದೆವು

 

Present Day, ಬೆಳಿಗ್ಗೆ ಬಸ್ಅಲ್ಲಿ ಎಲ್ಲೂ ಜಾಗ ಇಲ್ಲದ ಕಾರಣ ಮೂರು ಸೀಟು ಇರೋ ಸೀಟಲ್ಲಿ ಕಿಟಕಿ ಪಕ್ಕ ಕುಳಿತಿದ್ದೆ, Rasputin ಅಂತ ಹಳೇ ಇಂಗ್ಲೀಷ್ ಸಾಂಗ್ ಕೇಳುವಾಗ, ಒಬ್ಬ ಕಾಲೇಜು ಹುಡುಗ ಮತ್ತು ಹುಡುಗಿ ಅಂಕಲ್ ಕಿಟಕಿ ಸೀಟು ಬಿಟ್ಟು ಕೊಡ್ತೀರಾ ಅಂತ ಕೇಳಿದರು, ಸರಿ ಅಂತ ಎದ್ದು ಕಡೆ ಬಂದೆ. ಹುಡುಗಿ ಕಿಟಕಿಯ ಬದಿಯಲ್ಲಿ ಕೂತಳು, ಅವಳ ಪಕ್ಕ ಅವನು, ಬೇರೆ ಎಲ್ಲೂ ಜಾಗ ಇಲ್ಲದೇ ಇರೋದ್ರಿಂದ ಅವನ ಪಕ್ಕದಲ್ಲಿ ನಾನು, ಅದೇ Rasputin ಹಾಡನ್ನು ಕೇಳುತ್ತಾ ಕುಳಿತಿದ್ದೆ. ಅದು ಮುಗಿಯುತ್ತಿದ್ದ ಹಾಗೇ ಸಂದರ್ಭಕ್ಕೆ ತಕ್ಕಂತೆ ಅನ್ನುವ ಹಾಗೆ ಮುಂಗಾರುಮಳೆಯೇ ಏನು ನಿನ್ನ ಹನಿಗಳ ಲೀಲೆ ಅಂತ ಹಾಡು ಬಂದಿತು‌. ನಾವು ಗೊತ್ತಲ್ಲಾ, ಸೂರಿ ಫಿಲಂ ಡೈಲಾಗ್ ನಂತೆ ಅವಳು ನೋಡಿರಲ್ಲ, ಇವನು ಗೊತ್ತಿರಲ್ಲ, ಹಂಗೇ ಸಾಂಗ್ ಹೋಗಿ ಬಿಡ್ತಾರೆ ಅಂತ, ಅದೇ ಜೋಷಲ್ಲಿ, ನಾನು ಸೋನು ನಿಗಮ್ ಗಾಯನದ backdrop ಅಲ್ಲಿ ಹಂಗೇ ಹಗಲುಗನಸಲ್ಲಿಒಂದು ಹಾಡು ಮುಗಿಸಿಕೊಂಡು ಬಂದೆ. Coming back to Reality, ನನ್ನ ಪಕ್ಕ ಇದ್ದ ಹುಡುಗ ಹುಡುಗಿ ಇಬ್ಬರೂ ನನ್ನ ಪ್ರೀತಿಯ ಹುಡುಗಿ ಚಿತ್ರದ ಯುವ ಜೋಡಿಯ ಹಾಗೆ ನಿನ್ನ ಇಷ್ಟದ ತಿಂಡಿ ಏನು, ಊಟ ಏನು ಇತ್ಯಾದಿ ಕೇಳುತ್ತಾ, ಉತ್ತರಿಸುತ್ತಾ ಇದ್ದರು. ಇನ್ನೊಬ್ಬರಲವ್ ಸ್ಟೋರಿಗೆ ನಾವು ಯಾಕೆ ಕೇಳುಗರಾಗೋಣ, ನಮ್ಪಾಡಿಗೆನಾವು ಹಾಡು ಕೇಳೋಣ ಅಂತ ಹಾಡು ಕೇಳುತ್ತಾ ಕುಳಿತಿದ್ದಾಗ, Credit Card Bill Due Date ಇನ್ನೂ ಕೇವಲ 5 ದಿನಗಳು ಮಾತ್ರ ಅಂತ ಮೆಸೇಜ್ ಬಂತು. ಅರೇ ಇಸ್ಕಿ, Credit Card ಬಿಲ್ಕಟ್ಟೇ ಇಲ್ವಾ, ಇರಪ್ಪಾ ಅಂತ paytm ಓಪನ್ಮಾಡೋಕೆ ಹೋದೆ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಅಂತ ದಿಗಂತ್ಸಿನಿಮಾ ನೆನಪಿಸುವಷ್ಟು ದುಡ್ಡು ಕಮ್ಮಿ ಇದೆ, ಸ್ಯಾಲರಿ ನೋಡಿದರೆಇನ್ನೂ ಒಂದು ವಾರ ಲೇಟ್, ಯಾರಿಗ್ ಕೇಳೋಣ ಸಾಲವನ್ನು ಅಂತ ಯೋಚಿಸುವ ಹೊತ್ತಿಗೆ ನಮ್ ಫ್ರೆಂಡು ಕಳೆದ ತಿಂಗಳು ಪಡೆದಿದ್ದಹಣ phonepe ನಲ್ಲಿ ಕಳುಹಿಸಿ WhatsApp ನಲ್ಲಿ screenshot ಕಳುಹಿಸಿದ್ದ. ‌ಕಾಲೇಜಲ್ಲಿ‌ girlfriend ಇಲ್ಲದೇ ಬೇಜಾರಾಗಿದ್ದವನಿಗೆ ಕಮಲಿನಿ ಮುಖರ್ಜಿ ಇಂಗ್ಲೀಷ್ ಟೀಚರ್ ಆಗಿ ಸಿಕ್ಕಂತಾಯಿತು, ಹೊಡಿ ಪಟಾಕಿ ಅಂತ ಖುಷಿಪಡುವಷ್ಟರಲ್ಲಿ ಬಡ್ಡಿ ಮಗಂದು zomato notification, PT, Order Biryani some for you and lot for her ಅಂತ.‌ ನನ್ನನ್ನೇಕಾಲೇಜಲ್ಲಿ ಶೆಕೆ PT ಅಂತಿದ್ರು, ‌ zomato ರವರು ನನಗೇ ಶೆಕೆ ಕೊಡ್ತಾರಲ್ಲಾ ಅಂತ ಯೋಚಿಸುತ್ತಾ ಕೆಲಸಕ್ಕೆ ಹೋದೆ

 

ಸಾಯಂಕಾಲ ಮನೆಗೆ ಬರುವಾಗ ಬಿರಿಯಾನಿ ಹೋಟೆಲ್ ಮುಂದೆ ವಾಸನೆ ಘಮ್ ಅಂತ ಸೂಸುತಿತ್ತು.‌ ಅರೇ ಇವತ್ತು ಶನಿವಾರ ಅಂದ್ಕೊಂಡಿದ್ದೆ, ಇನ್ನೂ ಶುಕ್ರವಾರನಾ? Thank God It's Friday (TGIF) ಅಂತ ಮನೆಗೆ ಪಾರ್ಸಲ್ ತಗೊಂಡು ಹೋಗಿ ಊಟ ಮಾಡಿ ಮಲಗಿದೆ. ಸೀದಾಎರಡು ಗಂಟೆಗೆ ಎಚ್ಚರ ಆಯ್ತು, ಎಷ್ಟು ಪಲ್ಟಿ ಹೊಡೆದರೂ ನಿದ್ದೆ ಬರುತ್ತಿಲ್ಲ. ನಮ್ಹುಡುಗರ WhatsApp status ನೋಡುತ್ತಾ ಕುಳಿತೆ, ನಿದ್ದೆ ಬರಲಿಲ್ಲ. The Office ಟಿವಿ ಷೋ ಎರಡು ಎಪಿಸೋಡ್ ಬ್ಯಾಕ್ ಟು ಬ್ಯಾಕ್ ಮುಗಿಸಿದೆ, ಇನ್ನೂ ನಿದ್ದೆ ಬರುತ್ತಿಲ್ಲ. TV ಆನ್ ಮಾಡಿ ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಯಾವುದೋ ಹಳೇ ಮ್ಯಾಚ್ ನೋಡಿ ಮುಗಿಸುವ ಹೊತ್ತಿಗೆ ನಿದ್ದೆ ಆವರಿಸಿದಂತಾಯಿತು. ಮಲಗಿಕೊಂಡೆ. ಬೆಳಿಗ್ಗೆ ಎದ್ದಾಗ ರಾತ್ರಿಎಲ್ಲೋ ಕನಸಲ್ಲಿ ಕಾವೇರಿ ಅಂತ ವಿಷಯ ನೆನಪಾಗುತ್ತಿದೆ, ಆದರೆ full matter ನೆನಪಾಗುತ್ತಿಲ್ಲ, ಏನದು, ಯಾವ ಕಾವೇರಿ, ಯಾರು, ಏನು? ಯಾರಿಗೂ ಕೇಳಕೂ ಬರಲ್ಲ, ಬಿಡೋಕೂ ಬರಲ್ಲ ಅಂತ ಯೋಚಿಸುತ್ತಾ ಕುಳಿತಿದ್ದೆ. ಸಂಜೆ ಹೊತ್ತಿಗೆ ಫ್ಲಾಷ್ ಆಯ್ತು, ತಿಥಿ ಫಿಲಂ ಅಲ್ಲಿ ಮಾಂಸದೂಟ ಅಡುಗೆ ಮಾಡಿರ್ತಾರೆ, ಬಿರಿಯಾನಿ ಬಗ್ಗೆಎಲ್ಲಾ ಚೆನ್ನಾಗಿದೆ ಫಿಲಂ ಅಲ್ಲಿ. ಫಿಲ್ಅಲ್ಲಿ ಹಿರೋಯಿನ್ ಪಾತ್ರದ ಹೆಸರು: ಕಾವೇರಿ. Mystery Solved, ಅದರ ಕಿಕ್ಕೇ ಬೇರೆ.

 

Gaddappa, Thammanna and Abhi

ತಿಥಿ ಸಿನಿಮಾ ಬಗ್ಗೆ ಯೋಚನೆ ಮಾಡಿ ಮಲ್ಕೊಂಡೆ ಓಕೆ? But ಯಾಕೆ? ಯಾವತ್ತೋ ನೋಡಿದ ಸಿನಿಮಾ, ಕಮರ್ಷಿಯಲ್ ಕೂಡ ಅಲ್ಲ, ಮತ್ತೆ ಮತ್ತೆ ರಿವಿಷನ್ ಮಾಡೋಕೆ, ಯಾಕೆ ನೆನಪಾಯಿತು ಅಂತ ಯೋಚಿಸುತ್ತಿದ್ದಾಗ ಕೆಲವು ವಿಷಯಗಳು ನನ್ನ analogy ಗೆ ಬಂದಿತು. ತಿಥಿ ಸಿನಿಮಾ ನಾಲ್ಕು ತಲೆಮಾರುಗಳ ಸಿನಿಮಾ: ಸೆಂಚುರಿ ಗೌಡ, ಗಡ್ಡಪ್ಪ, ತಮ್ಮಣ್ಣ ಮತ್ತು ಅಭಿ. ಬಹುಪರಾಕ್ ಸಿನಿಮಾ ನೀವು ನೋಡಿಲ್ಲ ಅಂದರೆಒಂದು spoiler alert. ಬಹುಪರಾಕ್ ಒಂದು ಒಳ್ಳೆಯ ಸ್ಟ್ರಾಂಗ್ ಲೈನ್‌‌ ಇರೋ ಪಕ್ಕಾ ಕಮರ್ಷಿಯಲ್ ಸಿನಿಮಾ, ನೋಡಿ ಹೆಚ್ಚು ಕಮ್ಮಿ ಒಂದು ವಾರ ನಾನು high ಆಗಿದ್ದೆ ಸಿನಿಮಾ ಇಂದ.‌ ಮಣಿ, ಮೌನಿ ಮತ್ತು ಇನ್ನೊಂದು ಹೆಸರು ನನಗೆ ಸರಿಯಾಗಿ ನೆನಪಿಲ್ಲ, ಒಬ್ಬ ಪ್ರೇಮಿ, ಇನ್ನೊಬ್ಬ ಡಾನ್ ಮತ್ತೊಬ್ಬಮಹತ್ವಾಕಾಂಕ್ಷಿ ರಾಜಕಾರಣಿ, ಮೂರು ಪಾತ್ರಗಳ ಇಷ್ಟ ಕಷ್ಟಗಳು, ಜೀವನದ ಅಭಿಲಾಷೆಗಳು, ಅವರ ಚಾಲೆಂಜ್ ಗಳು, ಜೀವನದ ಏರು ಇಳಿತಗಳನ್ನು parallel ಆಗಿ ತೋರಿಸಿಕೊಂಡು ಹೋಗುತ್ತಾರೆ, ಮೂವರಿಗೂ ಯಾವುದೇಸಂಬಂಧ ಇಲ್ಲ, ಮೂರೂಪಾತ್ರ ಮಾಡಿರೋದು ಶ್ರೀನಗರ ಕಿಟ್ಟಿಯೇ ಆದರೂ ಮೂರೂ ಜನ ಬೇರೇಬೇರೆ. ಸರಳವಾಗಿ ಹೇಳುವುದಾದರೆ, ಮೂರು ಟಿವಿ ಚಾನಲ್ ನಲ್ಲಿ ಬೇರೆ ಬೇರೆ ಸಿನಿಮಾ ಒಂದರಲ್ಲಿ ಜಾಹೀರಾತು ಬಂದಾಗ ಇನ್ನೊಂದು ಚಾನಲ್ ಅಲ್ಲಿ ಸ್ವಲ್ಪ ಸಿನಿಮಾ ನೋಡಿದಹಾಗೆ, ಒಂದು ಪ್ರೇಮಲೋಕ ಥರ ಲವ್ ಸಿನಿಮಾ, ಇನ್ನೊಂದು ಓಂ ಥರ ರೌಡಿಸಂ ಕಥೆ, ಮತ್ತೊಂದು ಚಕ್ರವ್ಯೂಹ ಥರ ರಾಜಕೀಯ ದ್ರೋಹ ಕಥನಾಕ.‌ ಮೂರೂ ಕಥೆ ಒಂದಕ್ಕಿಂತ ಒಂದು ವೇಗವಾಗಿ ಕ್ಲೈಮ್ಯಾಕ್ ತಲುಪಿದಾಗ ಮೂರು ಜನ ಒಬ್ಬರೇ ಅಂತ reveal ಮಾಡುತ್ತಾರೆ. ಬಹುಪರಾಕ್ brilliance ಬರವಣಿಗೆ ಅಂಥದ್ದು. ಅದರ ಬಗ್ಗೆಇಷ್ಟರಲ್ಲೇ ಮುಗಿಸೋಕೆ ಆಗಲ್ಲ, but ತಿಥಿಸಿನಿಮಾ ಬಗ್ಗೆ ಮಾತನಾಡಲು ಅಷ್ಟನ್ನು ಹೇಳಬೇಕಿತ್ತು, so ಹೇಳಿದೆ

 

Coming back to ತಿಥಿ, ನಾಲ್ಕು ತಲೆಮಾರು ಜನ ಅಂದ್ರೆ ಅವರು ಹುಟ್ಟಿರೋ ಕಾಲಮಾನ ಬೇರೆ, ಅವರ ಆಲೋಚನೆ ಬೇರೆ, ಜೀವನ ನೋಡುವ ದೃಷ್ಟಿಕೋನ ಬೇರೆ, ಥರ. ಸೆಂಚುರಿ ಗೌಡರಿಗೆ ನೂರು ವರ್ಷ, ಸ್ವಾತಂತ್ರ್ಯ ಹೋರಾಟ ಇಂದ ಹಿಡಿದು ತೀರಾ ಇತ್ತೀಚಿನ #MeToo ವರೆಗೂ ಎಲ್ಲವನ್ನೂ ನೋಡಿ ಆಗಿದೆ. I have officially seen everything ಅಂತ ಒಂದು philosophical high ಅಲ್ಲಿ‌‌ ಇರುವ ಪಾತ್ರ. ಅವರ ಹತ್ತಿರಜ್ಞಾನ ತುಂಬಾ‌‌ ಇದೆಯಾದರೂ ಕೇಳಿಸಿಕೊಳ್ಳೋಕೆ ಜನರ ಬಳಿ ಟೈಮ್ ಇಲ್ಲ. Some of you might still remember, Century Gowda's infamous dialogue, "ಹೋಗು ಹೋಗು ಊರ್ ಬಿಟ್ಟು ಹೋಗು". ಅವರು ಏನೋಹೇಳ್ತಾರೆ, moving on ಅಂತಜನ ಅವರ ಪಾಡಿಗೆ ಅವರು ಅವರವರ ಕೆಲಸ ಮಾಡಿಕೊಂಡು ಹೋಗುತ್ತಿರುತ್ತಾರೆ. In other words, Century Gowda is kind of like a God, he lives among us. Some of us have seen him, but don't think he is God, so we just ignore him and pray him somewhere else. ದೇವನಿರುವನು, ನಮ್ಮೊಳಗೆಇರುವನು ಅಂತ ಸುನಿ ಬರೆಯುತ್ತಾರೆ. ರೀತಿಯಾಗಿ ದೇವರು ಉಳಿದ ಪಾತ್ರಗಳು, ಅಂದರೆ ನಾವು as in ಜನರನ್ನು ಸೃಷ್ಟಿ ಮಾಡಿದ ಅನ್ನೋದು ಬಿಟ್ಟರೆ, ದೇವರು ನಮ್ಮ ನಡುವೆಯೇ ಓಡಾಡುತ್ತಿದ್ದರೂ ನಾವುಗಮನಿಸೋದುಇಲ್ಲ. Next ಗಡ್ಡಪ್ಪ, ಸೀನಿಯರ್ ಸಿಟಿಜನ್. ಅವರು ವಯಸ್ಸಲ್ಲಿಇದ್ದಾಗ ದುಡಿಮೆ ಮಾಡಿದರು, ಮದುವೆ, ಮಕ್ಕಳು ಇತ್ಯಾದಿ ಎಲ್ಲಾ ಆಗಿದೆ. ಈಗ ತನ್ನ ಮಕ್ಕಳು ಅದೇ ಮನೆಯಲ್ಲಿದ್ದರೂ ಅವರದ್ದೇ ಬೇರೆ ಲೋಕ. So, Gaddappa started searching for meaning of life. And he found his answers in Tiger. ಟೈಗರ್ ಲೋಕಲ್ ಸಾರಾಯಿಹೆಸರು. ತನಗೆ ಬೇಕಿರೋದು, ಬೇಡದ್ದು ಎಲ್ಲಾ ದೂರವಾಗಿ ಒಂದು ಅಜ್ಞಾತ ಲೋಕಕ್ಕೆ ಹೋಗುವ high feeling ಗಡ್ಡಪ್ಪನಿಗೆ ಬೇಕು. ಹಾಗಂತಒಂದೇಕಡೆಕುಳಿತುಸಿಟ್ಟಿಂಗ್ ಹಾಕಿ,‌ ಜೂಜು, ಡ್ರಗ್ಸ್ ಇತ್ಯಾದಿಗಳಲ್ಲಿ ಹಣ, ಆಸ್ತಿ ಕಳೆಯೋ‌‌‌ ಪಾರ್ಟಿ ಅಲ್ಲ. ಇಂದು ಏನು ಬೇಕು, ಅದರ ಚಿಂತೆ ಸಾಕು ಎಂಬ‌ simple philosophy ಗಡ್ಡಪ್ಪನದ್ದು‌. ಟೈಗರ್ ಏರಿಸೋದು ಗೊತ್ತು, ಅದರ ಮತ್ತು ಖಾಲಿಯಾಗುವ ತನಕ ಊರನ್ನು ಗರಗರ ತಿರುಗೋದು ಗೊತ್ತು. #Wanderlust ಅಂತ ಹೇಳಬಹುದು. Nobody bothers Buddha, Buddha bothers Nobody ಎಂಬಂತೆ, ನಾನಯ್ತು ನಮ್ ಟೈಗರ್ ಆಯ್ತು ಅಂತ ತನ್ನದೇಲೋಕದಲ್ಲಿ ಇರುತ್ತಾನೆ ಗಡ್ಡಪ್ಪ.

 

ತಮ್ಮಣ್ಣ, ಮೇಲಿನ ಮಾತಿನಂತೆ ಪಕ್ಕಾ ಸಂಸಾರಸ್ಥ.‌ ನಾನು, ನನ್ನ ಹೆಂಡತಿ, ಮಕ್ಕಳು ಜೀವನದಲ್ಲಿ ಚೆನ್ನಾಗಿ ಇರಬೇಕು. ಬಡತನದಲ್ಲಿ ಹುಟ್ಟೋದು ತಪ್ಪಲ್ಲ, ಬಡತನದಲ್ಲಿ ಸಾಯೋದು ತಪ್ಪು ಅಂತಾರೆ. ಹಾಗೆ, ನಮ್ಮ ನಿನ್ನೆಗಿಂತ ನಾಳೆ ಚೆನ್ನಾಗಿರಬೇಕು, ಆಸ್ತಿ ಮಾಡಬೇಕು, ಸಂತೋಷವಾಗಿರಬೇಕು ಇತ್ಯಾದಿ ಇತ್ಯಾದಿ. ಅವರಪ್ಪನ ಆಸ್ತಿ ಅವರು ಹೋದಮೇಲೆ ತಮ್ಮಣ್ಣನಿಗೆ ಬರೋದುನಿಜ. As far as I remember, ತಮ್ಮಣ್ಣನಿಗೆ ಅಣ್ಣ ತಮ್ಮ ಯಾರೂ ಇಲ್ಲ, ಆದ್ದರಿಂದ ಆಸ್ತಿ ಭಾಗ ಆಗುತ್ತೆ, ಇನ್ನೊಬ್ಬರಪಾಲಾಗುತ್ತೆ, ಇತ್ಯಾದಿ ಚಿಂತಗಳಿಲ್ಲ. ಅವನ ತಂದೆ ಅಥವಾ ತಾತನ ಹೆಸರಲ್ಲಿ ಇರೋ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡು ಇನ್ನೊಬ್ಬರಿಗೆ ಮಾರಿ, ಅದರಿಂದ ಹಣ ಪಡೆದು ಬೇರೆ ಆಸ್ತಿ ಮಾಡಿ ನಾಳೆ ನೆಮ್ಮದಿಯಿಂದ ಇರೋಣ ಎಂಬ ಉದ್ದೇಶಒಳ್ಳೆಯದೇ ಆದರೂ, ಬದುಕಿದ್ದವರ death certificate ಮಾಡಿ ಆತುರ ಪಡೋದೆಲ್ಲಾ ಸ್ವಲ್ಪ extreme ಮತ್ತು ethically wrong ಅನಿಸಿತಾದರೂ, ಅವನ ಆಸೆ, ಧೇಯ ಈಡಿರಲು ಎಷ್ಟು commit ಆಗಿದ್ದಾನೆ ಎಂಬುದು ತೋರಿಸುತ್ತೆ ಹೊರತು, ತಮ್ಮಣ್ಣ ಕೆಟ್ಟ ವ್ಯಕ್ತಿ ಖಂಡಿತಾಅಲ್ಲಅಭಿತುಂಬಾ ಸರಳಜೀವಿ. ಅವನ ಕೆಲಸಗೆಳೆಯರೊಂದಿಗೆ ಅಡ್ಡಾಡೋದು, ಆದಷ್ಟು ಬೇಗ ಪ್ರೀತಿ ಗೀತಿ ಇತ್ಯಾದಿಯ ಸಾಗರದಲ್ಲಿ ಇಳಿಯಬೇಕು ಅಂತ. ಅವರಪ್ಪ ಅಲ್ಲಿಗೆ ಹೋಗು, ಇಲ್ಲಿಗೆ ಹೋಗಿ ಕೆಲಸ ಮಾಡು ಅದು ಇದು ಅಂತಹೇಳಿದಾಗ ಏನ್ಈವಯ್ಯ ಆರಾಮಾಗಿಇರೋಕೆ ಬಿಡೋದೇಅಂತ ತಲೆ ಚಚ್ಚಿಕೊಂಡು ಮನಸಿಲ್ಲದ ಮನಸ್ಸಿಂದ ಮಾಡುತ್ತಾನೆ. ಕೊನೆಗೆ ಕಾವೇರಿ ಸಿಗುತ್ತಾಳೆ, ಆಮೇಲೆ ಏನಾಗುತ್ತೆ ಅನ್ನೋದೆಲ್ಲಾ ಈಗ ಬ್ಯಾಡ, ಸೆನ್ಸಾರ್ ಸಮಸ್ಯೆ ಆಗೋದ್ ಬ್ಯಾಡ ನಮ್ ಬ್ಲಾಗಿಗೆ, ಹ್ಹ ಹ್ಹ.‌

 

Century Gowda


Coming back to ಬಹುಪರಾಕ್, ತಿಥಿ ಚಿತ್ರದ ನಾಲ್ಕು ಪಾತ್ರಗಳು ಒಬ್ಬರ ಮಗ ಒಬ್ಬರಾಗಿದ್ದರೂ, ಅಂದರೆ, ಸೆಂಚುರಿಗೌಡನ ಮಗ ಗಡ್ಡಪ್ಪ, ಗಡ್ಡಪ್ಪನ ಮಗ ತಮ್ಮಣ್ಣ, ತಮ್ಮಣ್ಣನ ಮಗ ಅಭಿ ಆಗಿದ್ದರೂ ಬಹುಪರಾಕ್ ಚಿತ್ರದ ಹಾಗೆ ಸೆಂಚುರಿ ಗೌಡ, ಗಡ್ಡಪ್ಪ, ತಮ್ಮಣ್ಣ ಮತ್ತು ಅಭಿ ಒಬ್ಬರಮಕ್ಕಳು ಒಬ್ಬರಲ್ಲ, ಅವರೆಲ್ಲಾ ಒಂದೇ ವ್ಯಕ್ತಿಯ ಬೇರೆ ಬೇರೆ ಹಂತದ ಜೀವನದ ಚಿತ್ರಣ ಅಂತ ನನಗೆ ಅನಿಸುತ್ತೆ. Think about it, ಅಭಿಗೆ ಆದಷ್ಟು ಬೇಗ ಜೊತೆಯಲ್ಲಿ ಮಾತಾಡೋಕೆ girlfriend ಬೇಕು. ಆಮೇಲೆ ತಮ್ಮಣ್ಣ ಸಾದಾ‌‌ ಮನುಷ್ಯ, ಮನೆ, ಮಕ್ಕಳು ಮತ್ತು ಸಾಲದ ಲೋಕದಲ್ಲಿ ಮುಳುಗಿರುವ man of the house, who provides, ಒಂದು ರೀತಿಯಲ್ಲಿ ಯಜಮಾನ ಎನ್ನುವ ಹಾಗೆ. Next, ಗಡ್ಡಪ್ಪ, ಅವನ ಕೆಲವು ಸ್ನೇಹಿತರು ತೀರಿ ಹೋಗಿದ್ದಾರೆ, ಹೆಂಡತಿ ಪ್ರೀತಿ ಅದೆಲ್ಲಾ ಕಾಲ ಅಲ್ಲ, ದುಡಿಮೆ ಮಾಡೋ ವಯಸ್ಸೂ ಅಲ್ಲ, ಆದ್ದರಿಂದ ಊರು ತಿರುಗುತ್ತಾ ಟೈಗರ್ ಮತ್ತಲ್ಲಿ ಓಡಾಡುತ್ತಾ, ಓಲಾಡುತ್ತಾ, ಒಂದು ಕಾಣದ nirvana ಹಂತ ತಲುಪಿದ್ದಾನೆ. ಮತ್ತು ಕೊನೆಯದಾಗಿ ಸೆಂಚುರಿ ಗೌಡ, ಎಲ್ಲವನ್ನೂ ನೋಡಿರುವ ಸೆಂಚುರಿ ಗೌಡನ ಉಪದೇಶದ ಮಾತುಗಳು ಯಾರಿಗೂ ಬೇಡ. In a way, Century Gowda doesn't have any impact on anyone's life. ಆಗಲೇ ಹೇಳಿದಂತೆ ಸೆಂಚುರಿ ಗೌಡ ಒಂದು ರೀತಿಯಲ್ಲಿ ದೇವರ ಹಾಗೆ, ನಮ್ಮ ನಡುವೆಯೇ ಇದ್ದರೂ ನಮಗೆ ಗೊತ್ತೇ ಆಗುವುದಿಲ್ಲ. So, when I look back, ಅಭಿ, ತಮ್ಮಣ್ಣ, ಗಡ್ಡಪ್ಪ ಮತ್ತು ಸೆಂಚುರಿ ಗೌಡ ಬೇರೆ ಬೇರೆ ಅಲ್ಲ, ಒಬ್ಬನೇ ವ್ಯಕ್ತಿ ಅಂತ ಹೇಳಬಹುದು. ಬ್ಲಾಗ್ ಮೊದಲ ಭಾಗದಲ್ಲಿ Boys ಚಿತ್ರದಹಿಂದೆ ಮುಂದೆ ನಮ್ಮ ಶಾಲಾ‌‌ ದಿನಗಳ ಬಗ್ಗೆ ಹೇಳಿದಂತೆ ಅಭಿ ಅಷ್ಟು extreme ಅಲ್ಲದಿದ್ದರೂ ಒಂದು ಮಟ್ಟಿಗೆ young, stupid, rebel ದಿನಗಳು ಆಗಿ ಹೋಗಿವೆ ನಮ್ಮಲೈಫಲ್ಲಿ. ಒಂದು ಕಾಲದಲ್ಲಿ ಹುಡುಗೀರನ್ನು ಬಿಟ್ಟರೆ ಮತ್ಯಾರು ಕಣ್ಣಿಗೆ ಕಾಣಲ್ಲ ಅನ್ನೋ ಮಟ್ಟಿಗೆ ಅಡ್ಡಾಡಿದ್ದು Boys ಸಿನಿಮಾದ ರೀತಿ young and stupid past. ಆನಂತರ ಮೊನ್ನೆ ನಮ್ ಹುಡುಗನ ಮದುವೆಯಲ್ಲಿ ಸಿಕ್ಕ ನನ್ನ ಗೆಳೆಯರೆಲ್ಲರೂ ಸಂಪೂರ್ಣ ಅಲ್ಲದಿದ್ದರೂ ಈಗಾಗಲೇ ಅಲ್ಪಸ್ವಲ್ಪ ಜವಾಬ್ದಾರಿ ಏರಿಸಿಕೊಂಡಿದ್ದಾರೆ, ಮಕ್ಕಳ ಸ್ಕೂಲ್ ಫೀಸ್, ಉತ್ತಮ ಕೆಲಸ, ಫಾರಿನ್ ಕೆಲಸದ ಕನಸು, ಸ್ವಂತ ಮನೆ ಸಾಕಾರವಾಗುವ ಪ್ರಕ್ರಿಯೆ, ಮನೆಯಲ್ಲಿ ಹೆಂಡತಿ ಎಂಬ ನೆಡೆದಾಡುವ ಜವಾಬ್ದಾರಿ, ಅವಳು ಮೆಸೇಜ್ ಮಾಡಿದಾಗ ಕೂಡಲೇ ಅಲ್ಲದಿದ್ದರೂ ಆದಷ್ಟು ಬೇಗ ರಿಪ್ಲೈ ಮಾಡಬೇಕಾದ ಸಂಸಾರದ commitment ಇತ್ಯಾದಿಗಳು ಶುರುವಾಗಿದೆ, ತಮ್ಮಣ್ಣನ ಜೀವನದಂತೆ. ಬಸ್ ಅಲ್ಲಿ ನನ್ನ ಪಕ್ಕ ಕುಳಿತ ಯುವ ಜೋಡಿಯ ಕಥೆ ಸಡನ್ನಾಗಿ ನನ್ನನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಯಿತು. ಅದು ನನ್ನ ಜೀವನ ಅಲ್ಲ, ಬಟ್ ಕಾಲೇಜ್ ದಿನಗಳಲ್ಲಿ ನಾನು ನೋಡಿದ ಜೀವನವನ್ನೇ ನನಗೆ ತೋರಿಸಿತ್ತು. ಒಂಥರಾ Time Travel ಮಾಡಿ, Past Self ಜೊತೆ Present Self ಕುಳಿತ ಹಾಗೆ‌. ಮುಂದೆ as it is ಗಡ್ಡಪ್ಪನ ಹಾಗೆ senior citizen retirement life ಮತ್ತು ಅದರ ನಂತರದ super senior citizen philosophical life ನೋಡುತ್ತೇವೋ ಇಲ್ಲವೋ ಗೊತ್ತಿಲ್ಲ, but ಈಗಾಗಲೇ ಎಲ್ಲರಿಗೂ ಮದುವೆ ಆಗಿರೋದರಿಂದ ಇನ್ನೂ 30 ವರ್ಷಗಳ ನಂತರ ಅವರವರ ಲೈಫ್ ಏನಾಗಿರುತ್ತೆ ಎಂಬ vague idea ಎಲ್ಲರಿಗೂ ಇದೆ. To conclude, Netflix ಸೀರೀಸ್ Dark ಸರಣಿಯಂತೆ ಪ್ರತಿ‌ 33 ವರ್ಷದ ಅತಿ ಮಹತ್ವದ ಬದಲಾವಣೆ ಅಲ್ಲದಿದ್ದರೂ ಪ್ರತಿ 10 ವರ್ಷಗಳಲ್ಲಿ ನಮ್ಮಲ್ಲಿ ಒಬ್ಬ ವ್ಯಕ್ತಿ ಸತ್ತು ಇನ್ನೊಬ್ಬ ಹೊಸ ವ್ಯಕ್ತಿ ಹುಟ್ಟುತ್ತಾನೆ ಎನ್ನಬಹುದು. ಯಾಕೆಂದರೆ ಇಪ್ಪತ್ತು ವರ್ಷದ ಹಿಂದೆ ಸ್ಕೂಲಲ್ಲಿ ನಮ್ಮ ಜೊತೆ ಕ್ರಿಕೆಟ್ ಅಥವಾ ಪುಸ್ತಕದಲ್ಲಿ ರಾಜ ರಾಣಿ ಕಳ್ಳ ಪೊಲೀಸ್ ಆಡಿದ ಗೆಳೆಯ ಬೇರೆ, ಅವನ ಇವತ್ತಿನ ಜೀವನದ ಇಷ್ಟ ಕಷ್ಟ ಆಸೆ ನೋವು ಧೇಯಗಳು ಬೇರೆ. ಹತ್ತು ವರ್ಷದ ಹಿಂದೆ ಕಾಲೇಜ್ ಕಾಂಪೌಂಡ್ ಹಾರಿ ಸಿಗರೇಟ್ ಅಥವಾ ಸಿನಿಮಾ ಅಥವಾಪಡ್ಡುಹೋಳಿಗೆ ಜೊತೆಯಲ್ಲಿ ತಿಂದಗೆಳೆಯ ಬೇರೆ, ಅವನ ಇವತ್ತಿನ ನೋವು, ಕಷ್ಟ, ಸಂತೋಷ, challenge ಗಳು ಬೇರೆ and so on. To conclude, ಬದುಕಿನ ಬಣ್ಣಗಳು ಹಲವು, ಅದನ್ನು ನೋಡುವ ಕಣ್ಣುಗಳು ಬದಲಾದಂತೆ, ಕಣ್ಣುಗಳು ಕಾಲ ಉರುಳಿದಂತೆ, ಬದುಕಿನ ಬಣ್ಣವು ಬದಲಾಗುತ್ತವೆ, ಮಾಸಿ ಹೋಗುತ್ತವೆ, ಹೊಸಬಣ್ಣಗಳು ಗೋಚರವಾಗುತ್ತವೆ ಇತ್ಯಾದಿ.‌

 

Life Goes On and On and On and On

- Oliver Tree