ಹೈ ಸ್ಕೂಲ್ ದಿನಗಳು. ಶಂಕರ್ ನಿರ್ದೇಶನದಲ್ಲಿ ಬಾಯ್ಸ್ ಚಿತ್ರ ಬಂದಿತ್ತು. ಆಗೆಲ್ಲಾ ನಮಗೆ ಥಿಯೇಟರ್ ಗೆ ಹೋಗಿ ಸಿನಿಮಾ ನೋಡೋ ಅಷ್ಟು ಸ್ವಾತಂತ್ರ್ಯ ಇರಲಿಲ್ಲ, ಪಾಕೆಟ್ ಇತ್ತು, ಮನಿ ಇರಲಿಲ್ಲ, so ಪಾಕೆಟ್ ಮನಿ ಇನ್ನೂ ದೂರದ ಮಾತು. ಇಂತಿಪ್ಪ ಸಂದರ್ಭದಲ್ಲಿ ಅಲ್ಲಿ ಇಲ್ಲಿ ಇದ್ದ ₹5, ₹10 ಜೋಡಿಸಿ ಪೈರಸಿ ಡಿವಿಡಿ ತಂದು ಸಿನಿಮಾ ನೋಡಿ ಸಖತ್ ಎಂಜಾಯ್ ಮಾಡಿದ್ದೆವು. ಮಧ್ಯಾಹ್ನ ಊಟದ ಟೈಮಲ್ಲಿ ಅದೇ ಮಾತು. ಬೆಳಿಗ್ಗೆ ಪ್ರಾರ್ಥನೆಯ ಸಮಯದಲ್ಲಿ ನಮ್ ಸ್ಕೂಲಲ್ಲಿ ಯಾಕೆ ಜೆನಿಲಿಯಾ ರೇಂಜ್ ಹುಡುಗಿ ಯಾಕಿಲ್ಲ ಅಂತ ಬೇಜಾರು, ಸಂಜೆ ಮನೆಗೆ ಹೋಗುವಾಗ Naakokka
Girlfriend Kavali Raa ಅಂತ ಹಾಡು ಗುನುಗುತ್ತಾ ಹೋಗೋದು ಇದೇ ದಿನಚರಿಯಾಗಿತ್ತು. Early days of puberty, ಮೀಸೆ ಬಂದ ಹುಡುಗನಿಗೆ ದೇಶ ಕಾಣಲ್ಲ ಅಂತಾರೆ, ಆದರೆ ನಮಗೆ ಕಾಣುತ್ತಾ ಇದ್ದಿದ್ದು ಬರೀ ಹುಡುಗೀರೇ!! ಅಂಥ ಟೈಮಲ್ಲಿ ನಮ್ ಹುಡುಗ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ಪ್ರಪೋಸ್ ಮಾಡಿಕೊಂಡು ಅವನ ಸ್ಟೋರಿ one way ಇಂದ two way ಆಯ್ತು. ನಮ್ ಸ್ಕೂಲ್ಲಲ್ಲಿ ಆಗ ಇದ್ದ ಹೆಚ್ಚು ಕಮ್ಮಿ 40 ಜನ ಹುಡುಗರೂ ಕೂಡ ಮಗಾ ಪಾರ್ಟಿ ಅಂತ ಖುಷಿಯಲ್ಲಿ ತೇಲುತ್ತಿದ್ದೆವು. ಯಾಕೆ? ಗೊತ್ತಿಲ್ಲ.
Two Months Ago, ನಮ್ ಹುಡುಗನ ಮದುವೆಗೆ ಮೊನ್ನೆ ನಾನು ನಮ್ ಹುಡುಗರೆಲ್ಲಾ ಹೋಗಿದ್ವಿ. Almost 17 years later, ನಾವು ಅಂದು ಹೊರಟಿದ್ದ ದಾರಿಯೇ ಬೇರೆ, ಇಂದು ತಲುಪಿರುವ ನಿಲ್ದಾಣವೇ ಬೇರೆ ಅಂತ ಬೇಗನೇ ಗೊತ್ತಾಯಿತು. ಮದುವೆಗೆ ಹೋಗಿ ಗಂಡು ಹೆಣ್ಣಿಗೆ wish ಮಾಡಿ, ಫೋಟೋ ತೆಗೆಸಿಕೊಂಡು, ಅಲ್ಲಿ ಕೈಗೆ ಕೊಡೋಕೆ ಗಿಫ್ಟ್ ಎಲ್ಲಾ ಏನಿಲ್ಲ, ಫೋನಲ್ಲಿ ಗಿಫ್ಟ್ ಕಾರ್ಡ್ ಕಳುಹಿಸುತ್ತೇವೆ ಅಂತ ಜಾರಿಕೊಂಡು ಊಟ ಮಾಡಿ ಕಾರ್ ತಗೊಂಡು LP ಡಾಬಾ ಹೋಗಿ ಸಿಟ್ಟಿಂಗ್ ಹಾಕಿದ್ವಿ. Sitting ಅಂದ್ರೆ Blue Label ಅಲ್ಲ, ಟೀ ಸಿಟ್ಟಿಂಗ್, Red Lebal ಕಡೆಯಿಂದ. ಎಲ್ಲರೂ ಅವರವರವ ಕಷ್ಟ ನಷ್ಟಗಳನ್ನು ಹೇಳಿಕೊಂಡು, ಒಬ್ಬರಿಗೊಬ್ಬರು ತಮಾಷೆ ಮಾಡಿ, ಮದುವೆ ಫೋಟೋ ಶೇರ್ ಮಾಡಿದೆವು. In the meantime, ನಾನು ಕೆಲವು ವಿಷಯಗಳನ್ನು observe ಮಾಡಿದೆ: ಒಬ್ಬನಿಗೆ ಮನೆಗೆ ಬರೋದು ಲೇಟಾಗುತ್ತಾ ಅಂತ ಹೆಂಡತಿಯಿಂದ WhatsApp ಅಲ್ಲಿ ಮೆಸೇಜ್ ಬಂತು, ಇನ್ನೊಬ್ಬ LinkedIn ನಲ್ಲಿ ಹೊಸ ಕೆಲಸವನ್ನು ಹುಡುಕುತ್ತಿದ್ದ, ಮತ್ತೊಬ್ಬ Axis
Bank App ನಲ್ಲಿ Credit Card Due ಎಷ್ಟು ಇದೆ, ಯಾವತ್ತು ಅಂತ details ನೋಡಿ ಮನದಲ್ಲೇ ಲೆಕ್ಕ ಹಾಕುತ್ತಿದ್ದ, ಇನ್ನೊಬ್ಬ wish you were here ಅಂತ Tea ಮತ್ತು ನಮ್ಮ group photo ಅನ್ನು ತನ್ನ
girlfriend ಗೆ ಕಳುಹಿಸಿದ, ಮತ್ತೊಬ್ಬ Baby
Care Tips ಅಂತ ವಿಡಿಯೋ YouTube ನಲ್ಲಿ search ಮಾಡಿ, Add to watch later ಪಟ್ಟಿಗೆ ಸೇರಿಸಿದ, ಮತ್ತೊಬ್ಬ ಮುಂದಿನ ತಿಂಗಳು ಮನೆ ಗೃಹ ಪ್ರವೇಶ ಇದೆ ಬರಬೇಕೆಂದು ಅಲ್ಲೇ ಆಹ್ವಾನ ನೀಡಿದನು, ಇತ್ಯಾದಿ. ಆಮೇಲೆ ಬಿಲ್ ಕೊಟ್ಟು, ಎಲ್ಲರೂ ಅವನಿಗೆ ಅವರವರ ಮೊಬೈಲ್ ನಲ್ಲಿ ಇದ್ದ ಫೋಟೋ ಕಳುಹಿಸಿ ಮನೆಗೆ ಹೋದೆವು.
Present Day, ಬೆಳಿಗ್ಗೆ ಬಸ್ ಅಲ್ಲಿ ಎಲ್ಲೂ ಜಾಗ ಇಲ್ಲದ ಕಾರಣ ಮೂರು ಸೀಟು ಇರೋ ಸೀಟಲ್ಲಿ ಕಿಟಕಿ ಪಕ್ಕ ಕುಳಿತಿದ್ದೆ, Rasputin ಅಂತ ಹಳೇ ಇಂಗ್ಲೀಷ್ ಸಾಂಗ್ ಕೇಳುವಾಗ, ಒಬ್ಬ ಕಾಲೇಜು ಹುಡುಗ ಮತ್ತು ಹುಡುಗಿ ಅಂಕಲ್ ಕಿಟಕಿ ಸೀಟು ಬಿಟ್ಟು ಕೊಡ್ತೀರಾ ಅಂತ ಕೇಳಿದರು, ಸರಿ ಅಂತ ಎದ್ದು ಈ ಕಡೆ ಬಂದೆ. ಆ ಹುಡುಗಿ ಕಿಟಕಿಯ ಬದಿಯಲ್ಲಿ ಕೂತಳು, ಅವಳ ಪಕ್ಕ ಅವನು, ಬೇರೆ ಎಲ್ಲೂ ಜಾಗ ಇಲ್ಲದೇ ಇರೋದ್ರಿಂದ ಅವನ ಪಕ್ಕದಲ್ಲಿ ನಾನು, ಅದೇ Rasputin
ಹಾಡನ್ನು ಕೇಳುತ್ತಾ ಕುಳಿತಿದ್ದೆ. ಅದು ಮುಗಿಯುತ್ತಿದ್ದ ಹಾಗೇ ಸಂದರ್ಭಕ್ಕೆ ತಕ್ಕಂತೆ ಅನ್ನುವ ಹಾಗೆ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಅಂತ ಹಾಡು ಬಂದಿತು. ನಾವು ಗೊತ್ತಲ್ಲಾ, ಸೂರಿ ಫಿಲಂ ಡೈಲಾಗ್ ನಂತೆ ಅವಳು ನೋಡಿರಲ್ಲ, ಇವನು ಗೊತ್ತಿರಲ್ಲ, ಹಂಗೇ ಸಾಂಗ್ ಹೋಗಿ ಬಿಡ್ತಾರೆ ಅಂತ, ಅದೇ ಜೋಷಲ್ಲಿ, ನಾನು ಸೋನು ನಿಗಮ್ ಗಾಯನದ backdrop ಅಲ್ಲಿ ಹಂಗೇ ಹಗಲುಗನಸಲ್ಲಿ ಒಂದು ಹಾಡು ಮುಗಿಸಿಕೊಂಡು ಬಂದೆ. Coming back to Reality, ನನ್ನ ಪಕ್ಕ ಇದ್ದ ಹುಡುಗ ಹುಡುಗಿ ಇಬ್ಬರೂ ನನ್ನ ಪ್ರೀತಿಯ ಹುಡುಗಿ ಚಿತ್ರದ ಯುವ ಜೋಡಿಯ ಹಾಗೆ ನಿನ್ನ ಇಷ್ಟದ ತಿಂಡಿ ಏನು, ಊಟ ಏನು ಇತ್ಯಾದಿ ಕೇಳುತ್ತಾ, ಉತ್ತರಿಸುತ್ತಾ ಇದ್ದರು. ಇನ್ನೊಬ್ಬರ ಲವ್ ಸ್ಟೋರಿಗೆ ನಾವು ಯಾಕೆ ಕೇಳುಗರಾಗೋಣ, ನಮ್ ಪಾಡಿಗೆ ನಾವು ಹಾಡು ಕೇಳೋಣ ಅಂತ ಹಾಡು ಕೇಳುತ್ತಾ ಕುಳಿತಿದ್ದಾಗ, Credit
Card Bill Due Date ಇನ್ನೂ ಕೇವಲ 5 ದಿನಗಳು ಮಾತ್ರ ಅಂತ ಮೆಸೇಜ್ ಬಂತು. ಅರೇ ಇಸ್ಕಿ, Credit Card ಬಿಲ್ ಕಟ್ಟೇ ಇಲ್ವಾ, ಇರಪ್ಪಾ ಅಂತ paytm ಓಪನ್ ಮಾಡೋಕೆ ಹೋದೆ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಅಂತ ದಿಗಂತ್ ಸಿನಿಮಾ ನೆನಪಿಸುವಷ್ಟು ದುಡ್ಡು ಕಮ್ಮಿ ಇದೆ, ಸ್ಯಾಲರಿ ನೋಡಿದರೆ ಇನ್ನೂ ಒಂದು ವಾರ ಲೇಟ್, ಯಾರಿಗ್ ಕೇಳೋಣ ಸಾಲವನ್ನು ಅಂತ ಯೋಚಿಸುವ ಹೊತ್ತಿಗೆ ನಮ್ ಫ್ರೆಂಡು ಕಳೆದ ತಿಂಗಳು ಪಡೆದಿದ್ದ ಹಣ phonepe ನಲ್ಲಿ ಕಳುಹಿಸಿ WhatsApp ನಲ್ಲಿ screenshot ಕಳುಹಿಸಿದ್ದ. ಕಾಲೇಜಲ್ಲಿ
girlfriend ಇಲ್ಲದೇ ಬೇಜಾರಾಗಿದ್ದವನಿಗೆ ಕಮಲಿನಿ ಮುಖರ್ಜಿ ಇಂಗ್ಲೀಷ್ ಟೀಚರ್ ಆಗಿ ಸಿಕ್ಕಂತಾಯಿತು, ಹೊಡಿ ಪಟಾಕಿ ಅಂತ ಖುಷಿಪಡುವಷ್ಟರಲ್ಲಿ ಬಡ್ಡಿ ಮಗಂದು zomato notification, PT, Order
Biryani some for you and lot for her ಅಂತ. ನನ್ನನ್ನೇ ಕಾಲೇಜಲ್ಲಿ ಶೆಕೆ PT ಅಂತಿದ್ರು, ಈ zomato ರವರು ನನಗೇ ಶೆಕೆ ಕೊಡ್ತಾರಲ್ಲಾ ಅಂತ ಯೋಚಿಸುತ್ತಾ ಕೆಲಸಕ್ಕೆ ಹೋದೆ.
ಸಾಯಂಕಾಲ ಮನೆಗೆ ಬರುವಾಗ ಬಿರಿಯಾನಿ ಹೋಟೆಲ್ ಮುಂದೆ ವಾಸನೆ ಘಮ್ ಅಂತ ಸೂಸುತಿತ್ತು. ಅರೇ ಇವತ್ತು ಶನಿವಾರ ಅಂದ್ಕೊಂಡಿದ್ದೆ, ಇನ್ನೂ ಶುಕ್ರವಾರನಾ? Thank God It's Friday (TGIF) ಅಂತ ಮನೆಗೆ ಪಾರ್ಸಲ್ ತಗೊಂಡು ಹೋಗಿ ಊಟ ಮಾಡಿ ಮಲಗಿದೆ. ಸೀದಾ ಎರಡು ಗಂಟೆಗೆ ಎಚ್ಚರ ಆಯ್ತು, ಎಷ್ಟು ಪಲ್ಟಿ ಹೊಡೆದರೂ ನಿದ್ದೆ ಬರುತ್ತಿಲ್ಲ. ನಮ್ ಹುಡುಗರ WhatsApp status ನೋಡುತ್ತಾ ಕುಳಿತೆ, ನಿದ್ದೆ ಬರಲಿಲ್ಲ. The Office ಟಿವಿ ಷೋ ಎರಡು ಎಪಿಸೋಡ್ ಬ್ಯಾಕ್ ಟು ಬ್ಯಾಕ್ ಮುಗಿಸಿದೆ, ಇನ್ನೂ ನಿದ್ದೆ ಬರುತ್ತಿಲ್ಲ. TV ಆನ್ ಮಾಡಿ ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಯಾವುದೋ ಹಳೇ ಮ್ಯಾಚ್ ನೋಡಿ ಮುಗಿಸುವ ಹೊತ್ತಿಗೆ ನಿದ್ದೆ ಆವರಿಸಿದಂತಾಯಿತು. ಮಲಗಿಕೊಂಡೆ. ಬೆಳಿಗ್ಗೆ ಎದ್ದಾಗ ರಾತ್ರಿ ಎಲ್ಲೋ ಕನಸಲ್ಲಿ ಕಾವೇರಿ ಅಂತ ವಿಷಯ ನೆನಪಾಗುತ್ತಿದೆ, ಆದರೆ full
matter ನೆನಪಾಗುತ್ತಿಲ್ಲ, ಏನದು, ಯಾವ ಕಾವೇರಿ, ಯಾರು, ಏನು? ಯಾರಿಗೂ ಕೇಳಕೂ ಬರಲ್ಲ, ಬಿಡೋಕೂ ಬರಲ್ಲ ಅಂತ ಯೋಚಿಸುತ್ತಾ ಕುಳಿತಿದ್ದೆ. ಸಂಜೆ ಹೊತ್ತಿಗೆ ಫ್ಲಾಷ್ ಆಯ್ತು, ತಿಥಿ ಫಿಲಂ ಅಲ್ಲಿ ಮಾಂಸದೂಟ ಅಡುಗೆ ಮಾಡಿರ್ತಾರೆ, ಬಿರಿಯಾನಿ ಬಗ್ಗೆ ಎಲ್ಲಾ ಚೆನ್ನಾಗಿದೆ ಫಿಲಂ ಅಲ್ಲಿ. ಆ ಫಿಲ್ ಅಲ್ಲಿ ಹಿರೋಯಿನ್ ಪಾತ್ರದ ಹೆಸರು: ಕಾವೇರಿ. Mystery Solved, ಅದರ ಕಿಕ್ಕೇ ಬೇರೆ.
Gaddappa, Thammanna and Abhi
ತಿಥಿ ಸಿನಿಮಾ ಬಗ್ಗೆ ಯೋಚನೆ ಮಾಡಿ ಮಲ್ಕೊಂಡೆ ಓಕೆ? But ಯಾಕೆ? ಯಾವತ್ತೋ ನೋಡಿದ ಸಿನಿಮಾ, ಕಮರ್ಷಿಯಲ್ ಕೂಡ ಅಲ್ಲ, ಮತ್ತೆ ಮತ್ತೆ ರಿವಿಷನ್ ಮಾಡೋಕೆ, ಯಾಕೆ ನೆನಪಾಯಿತು ಅಂತ ಯೋಚಿಸುತ್ತಿದ್ದಾಗ ಕೆಲವು ವಿಷಯಗಳು ನನ್ನ analogy ಗೆ ಬಂದಿತು. ತಿಥಿ ಸಿನಿಮಾ ನಾಲ್ಕು ತಲೆಮಾರುಗಳ ಸಿನಿಮಾ: ಸೆಂಚುರಿ ಗೌಡ, ಗಡ್ಡಪ್ಪ, ತಮ್ಮಣ್ಣ ಮತ್ತು ಅಭಿ. ಬಹುಪರಾಕ್ ಸಿನಿಮಾ ನೀವು ನೋಡಿಲ್ಲ ಅಂದರೆ ಒಂದು spoiler
alert. ಬಹುಪರಾಕ್ ಒಂದು ಒಳ್ಳೆಯ ಸ್ಟ್ರಾಂಗ್ ಲೈನ್ ಇರೋ ಪಕ್ಕಾ ಕಮರ್ಷಿಯಲ್ ಸಿನಿಮಾ, ನೋಡಿ ಹೆಚ್ಚು ಕಮ್ಮಿ ಒಂದು ವಾರ ನಾನು high ಆಗಿದ್ದೆ ಆ ಸಿನಿಮಾ ಇಂದ. ಮಣಿ, ಮೌನಿ ಮತ್ತು ಇನ್ನೊಂದು ಹೆಸರು ನನಗೆ ಸರಿಯಾಗಿ ನೆನಪಿಲ್ಲ, ಒಬ್ಬ ಪ್ರೇಮಿ, ಇನ್ನೊಬ್ಬ ಡಾನ್ ಮತ್ತೊಬ್ಬ ಮಹತ್ವಾಕಾಂಕ್ಷಿ ರಾಜಕಾರಣಿ, ಮೂರು ಪಾತ್ರಗಳ ಇಷ್ಟ ಕಷ್ಟಗಳು, ಜೀವನದ ಅಭಿಲಾಷೆಗಳು, ಅವರ ಚಾಲೆಂಜ್ ಗಳು, ಜೀವನದ ಏರು ಇಳಿತಗಳನ್ನು parallel
ಆಗಿ ತೋರಿಸಿಕೊಂಡು ಹೋಗುತ್ತಾರೆ, ಮೂವರಿಗೂ ಯಾವುದೇ ಸಂಬಂಧ ಇಲ್ಲ, ಮೂರೂ ಪಾತ್ರ ಮಾಡಿರೋದು ಶ್ರೀನಗರ ಕಿಟ್ಟಿಯೇ ಆದರೂ ಮೂರೂ ಜನ ಬೇರೇ ಬೇರೆ. ಸರಳವಾಗಿ ಹೇಳುವುದಾದರೆ, ಮೂರು ಟಿವಿ ಚಾನಲ್ ನಲ್ಲಿ ಬೇರೆ ಬೇರೆ ಸಿನಿಮಾ ಒಂದರಲ್ಲಿ ಜಾಹೀರಾತು ಬಂದಾಗ ಇನ್ನೊಂದು ಚಾನಲ್ ಅಲ್ಲಿ ಸ್ವಲ್ಪ ಸಿನಿಮಾ ನೋಡಿದ ಹಾಗೆ, ಒಂದು ಪ್ರೇಮಲೋಕ ಥರ ಲವ್ ಸಿನಿಮಾ, ಇನ್ನೊಂದು ಓಂ ಥರ ರೌಡಿಸಂ ಕಥೆ, ಮತ್ತೊಂದು ಚಕ್ರವ್ಯೂಹ ಥರ ರಾಜಕೀಯ ದ್ರೋಹ ಕಥನಾಕ. ಮೂರೂ ಕಥೆ ಒಂದಕ್ಕಿಂತ ಒಂದು ವೇಗವಾಗಿ ಕ್ಲೈಮ್ಯಾಕ್ ತಲುಪಿದಾಗ ಮೂರು ಜನ ಒಬ್ಬರೇ ಅಂತ reveal ಮಾಡುತ್ತಾರೆ. ಬಹುಪರಾಕ್ ನ brilliance ಬರವಣಿಗೆ ಅಂಥದ್ದು. ಅದರ ಬಗ್ಗೆ ಇಷ್ಟರಲ್ಲೇ ಮುಗಿಸೋಕೆ ಆಗಲ್ಲ, but ತಿಥಿ ಸಿನಿಮಾ ಬಗ್ಗೆ ಮಾತನಾಡಲು ಅಷ್ಟನ್ನು ಹೇಳಬೇಕಿತ್ತು, so ಹೇಳಿದೆ.
Coming back to ತಿಥಿ, ನಾಲ್ಕು ತಲೆಮಾರು ಜನ ಅಂದ್ರೆ ಅವರು ಹುಟ್ಟಿರೋ ಕಾಲಮಾನ ಬೇರೆ, ಅವರ ಆಲೋಚನೆ ಬೇರೆ, ಜೀವನ ನೋಡುವ ದೃಷ್ಟಿಕೋನ ಬೇರೆ, ಈ ಥರ. ಸೆಂಚುರಿ ಗೌಡರಿಗೆ ನೂರು ವರ್ಷ, ಸ್ವಾತಂತ್ರ್ಯ ಹೋರಾಟ ಇಂದ ಹಿಡಿದು ತೀರಾ ಇತ್ತೀಚಿನ #MeToo ವರೆಗೂ ಎಲ್ಲವನ್ನೂ ನೋಡಿ ಆಗಿದೆ. I have officially seen everything ಅಂತ ಒಂದು
philosophical high ಅಲ್ಲಿ ಇರುವ ಪಾತ್ರ. ಅವರ ಹತ್ತಿರ ಜ್ಞಾನ ತುಂಬಾ ಇದೆಯಾದರೂ ಕೇಳಿಸಿಕೊಳ್ಳೋಕೆ ಜನರ ಬಳಿ ಟೈಮ್ ಇಲ್ಲ. Some of
you might still remember, Century Gowda's infamous dialogue, "ಹೋಗು ಹೋಗು ಊರ್ ಬಿಟ್ಟು ಹೋಗು". ಅವರು ಏನೋ ಹೇಳ್ತಾರೆ, moving on ಅಂತ ಜನ ಅವರ ಪಾಡಿಗೆ ಅವರು ಅವರವರ ಕೆಲಸ ಮಾಡಿಕೊಂಡು ಹೋಗುತ್ತಿರುತ್ತಾರೆ. In other words, Century Gowda is kind of like a
God, he lives among us. Some of us have seen him, but don't think he is God, so
we just ignore him and pray him somewhere else. ದೇವನಿರುವನು, ನಮ್ಮೊಳಗೆ ಇರುವನು ಅಂತ ಸುನಿ ಬರೆಯುತ್ತಾರೆ. ಈ ರೀತಿಯಾಗಿ ದೇವರು ಉಳಿದ ಪಾತ್ರಗಳು, ಅಂದರೆ ನಾವು as in ಜನರನ್ನು ಸೃಷ್ಟಿ ಮಾಡಿದ ಅನ್ನೋದು ಬಿಟ್ಟರೆ, ಆ ದೇವರು ನಮ್ಮ ನಡುವೆಯೇ ಓಡಾಡುತ್ತಿದ್ದರೂ ನಾವು ಗಮನಿಸೋದು ಇಲ್ಲ. Next ಗಡ್ಡಪ್ಪ, ಸೀನಿಯರ್ ಸಿಟಿಜನ್. ಅವರು ವಯಸ್ಸಲ್ಲಿ ಇದ್ದಾಗ ದುಡಿಮೆ ಮಾಡಿದರು, ಮದುವೆ, ಮಕ್ಕಳು ಇತ್ಯಾದಿ ಎಲ್ಲಾ ಆಗಿದೆ. ಈಗ ತನ್ನ ಮಕ್ಕಳು ಅದೇ ಮನೆಯಲ್ಲಿದ್ದರೂ ಅವರದ್ದೇ ಬೇರೆ ಲೋಕ. So, Gaddappa started searching for meaning of
life. And he found his answers in Tiger. ಟೈಗರ್ ಲೋಕಲ್ ಸಾರಾಯಿ ಹೆಸರು. ತನಗೆ ಬೇಕಿರೋದು, ಬೇಡದ್ದು ಎಲ್ಲಾ ದೂರವಾಗಿ ಒಂದು ಅಜ್ಞಾತ ಲೋಕಕ್ಕೆ ಹೋಗುವ high feeling ಗಡ್ಡಪ್ಪನಿಗೆ ಬೇಕು. ಹಾಗಂತ ಒಂದೇ ಕಡೆ ಕುಳಿತು ಸಿಟ್ಟಿಂಗ್ ಹಾಕಿ, ಜೂಜು, ಡ್ರಗ್ಸ್ ಇತ್ಯಾದಿಗಳಲ್ಲಿ ಹಣ, ಆಸ್ತಿ ಕಳೆಯೋ ಪಾರ್ಟಿ ಅಲ್ಲ. ಇಂದು ಏನು ಬೇಕು, ಅದರ ಚಿಂತೆ ಸಾಕು ಎಂಬ simple philosophy ಗಡ್ಡಪ್ಪನದ್ದು. ಟೈಗರ್ ಏರಿಸೋದು ಗೊತ್ತು, ಅದರ ಮತ್ತು ಖಾಲಿಯಾಗುವ ತನಕ ಊರನ್ನು ಗರಗರ ತಿರುಗೋದು ಗೊತ್ತು. #Wanderlust ಅಂತ ಹೇಳಬಹುದು. Nobody
bothers Buddha, Buddha bothers Nobody ಎಂಬಂತೆ, ನಾನಯ್ತು ನಮ್ ಟೈಗರ್ ಆಯ್ತು ಅಂತ ತನ್ನದೇ ಲೋಕದಲ್ಲಿ ಇರುತ್ತಾನೆ ಗಡ್ಡಪ್ಪ.
ತಮ್ಮಣ್ಣ, ಮೇಲಿನ ಮಾತಿನಂತೆ ಪಕ್ಕಾ ಸಂಸಾರಸ್ಥ. ನಾನು, ನನ್ನ ಹೆಂಡತಿ, ಮಕ್ಕಳು ಜೀವನದಲ್ಲಿ ಚೆನ್ನಾಗಿ ಇರಬೇಕು. ಬಡತನದಲ್ಲಿ ಹುಟ್ಟೋದು ತಪ್ಪಲ್ಲ, ಬಡತನದಲ್ಲಿ ಸಾಯೋದು ತಪ್ಪು ಅಂತಾರೆ. ಹಾಗೆ, ನಮ್ಮ ನಿನ್ನೆಗಿಂತ ನಾಳೆ ಚೆನ್ನಾಗಿರಬೇಕು, ಆಸ್ತಿ ಮಾಡಬೇಕು, ಸಂತೋಷವಾಗಿರಬೇಕು ಇತ್ಯಾದಿ ಇತ್ಯಾದಿ. ಅವರಪ್ಪನ ಆಸ್ತಿ ಅವರು ಹೋದಮೇಲೆ ತಮ್ಮಣ್ಣನಿಗೆ ಬರೋದು ನಿಜ. As far as I remember, ತಮ್ಮಣ್ಣನಿಗೆ ಅಣ್ಣ ತಮ್ಮ ಯಾರೂ ಇಲ್ಲ, ಆದ್ದರಿಂದ ಆಸ್ತಿ ಭಾಗ ಆಗುತ್ತೆ, ಇನ್ನೊಬ್ಬರ ಪಾಲಾಗುತ್ತೆ, ಇತ್ಯಾದಿ ಚಿಂತಗಳಿಲ್ಲ. ಅವನ ತಂದೆ ಅಥವಾ ತಾತನ ಹೆಸರಲ್ಲಿ ಇರೋ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡು ಇನ್ನೊಬ್ಬರಿಗೆ ಮಾರಿ, ಅದರಿಂದ ಹಣ ಪಡೆದು ಬೇರೆ ಆಸ್ತಿ ಮಾಡಿ ನಾಳೆ ನೆಮ್ಮದಿಯಿಂದ ಇರೋಣ ಎಂಬ ಉದ್ದೇಶ ಒಳ್ಳೆಯದೇ ಆದರೂ, ಬದುಕಿದ್ದವರ death certificate ಮಾಡಿ ಆತುರ ಪಡೋದೆಲ್ಲಾ ಸ್ವಲ್ಪ extreme ಮತ್ತು ethically wrong ಅನಿಸಿತಾದರೂ, ಅವನ ಆಸೆ, ಧೇಯ ಈಡಿರಲು ಎಷ್ಟು commit ಆಗಿದ್ದಾನೆ ಎಂಬುದು ತೋರಿಸುತ್ತೆ ಹೊರತು, ತಮ್ಮಣ್ಣ ಕೆಟ್ಟ ವ್ಯಕ್ತಿ ಖಂಡಿತಾ ಅಲ್ಲ. ಅಭಿ ತುಂಬಾ ಸರಳಜೀವಿ. ಅವನ ಕೆಲಸ ಗೆಳೆಯರೊಂದಿಗೆ ಅಡ್ಡಾಡೋದು, ಆದಷ್ಟು ಬೇಗ ಪ್ರೀತಿ ಗೀತಿ ಇತ್ಯಾದಿಯ ಸಾಗರದಲ್ಲಿ ಇಳಿಯಬೇಕು ಅಂತ. ಅವರಪ್ಪ ಅಲ್ಲಿಗೆ ಹೋಗು, ಇಲ್ಲಿಗೆ ಹೋಗಿ ಆ ಕೆಲಸ ಮಾಡು ಅದು ಇದು ಅಂತ ಹೇಳಿದಾಗ ಏನ್ ಈವಯ್ಯ ಆರಾಮಾಗಿ ಇರೋಕೆ ಬಿಡೋದೇ ಅಂತ ತಲೆ ಚಚ್ಚಿಕೊಂಡು ಮನಸಿಲ್ಲದ ಮನಸ್ಸಿಂದ ಮಾಡುತ್ತಾನೆ. ಕೊನೆಗೆ ಕಾವೇರಿ ಸಿಗುತ್ತಾಳೆ, ಆಮೇಲೆ ಏನಾಗುತ್ತೆ ಅನ್ನೋದೆಲ್ಲಾ ಈಗ ಬ್ಯಾಡ, ಸೆನ್ಸಾರ್ ಸಮಸ್ಯೆ ಆಗೋದ್ ಬ್ಯಾಡ ನಮ್ ಬ್ಲಾಗಿಗೆ, ಹ್ಹ ಹ್ಹ.
Century Gowda
Coming back to ಬಹುಪರಾಕ್, ತಿಥಿ ಚಿತ್ರದ ಈ ನಾಲ್ಕು ಪಾತ್ರಗಳು ಒಬ್ಬರ ಮಗ ಒಬ್ಬರಾಗಿದ್ದರೂ, ಅಂದರೆ, ಸೆಂಚುರಿ ಗೌಡನ ಮಗ ಗಡ್ಡಪ್ಪ, ಗಡ್ಡಪ್ಪನ ಮಗ ತಮ್ಮಣ್ಣ, ತಮ್ಮಣ್ಣನ ಮಗ ಅಭಿ ಆಗಿದ್ದರೂ ಬಹುಪರಾಕ್ ಚಿತ್ರದ ಹಾಗೆ ಸೆಂಚುರಿ ಗೌಡ, ಗಡ್ಡಪ್ಪ, ತಮ್ಮಣ್ಣ ಮತ್ತು ಅಭಿ ಒಬ್ಬರ ಮಕ್ಕಳು ಒಬ್ಬರಲ್ಲ, ಅವರೆಲ್ಲಾ ಒಂದೇ ವ್ಯಕ್ತಿಯ ಬೇರೆ ಬೇರೆ ಹಂತದ ಜೀವನದ ಚಿತ್ರಣ ಅಂತ ನನಗೆ ಅನಿಸುತ್ತೆ. Think about it, ಅಭಿಗೆ ಆದಷ್ಟು ಬೇಗ ಜೊತೆಯಲ್ಲಿ ಮಾತಾಡೋಕೆ girlfriend ಬೇಕು. ಆಮೇಲೆ ತಮ್ಮಣ್ಣ ಸಾದಾ ಮನುಷ್ಯ, ಮನೆ, ಮಕ್ಕಳು ಮತ್ತು ಸಾಲದ ಲೋಕದಲ್ಲಿ ಮುಳುಗಿರುವ man of the house, who provides, ಒಂದು ರೀತಿಯಲ್ಲಿ ಯಜಮಾನ ಎನ್ನುವ ಹಾಗೆ. Next, ಗಡ್ಡಪ್ಪ, ಅವನ ಕೆಲವು ಸ್ನೇಹಿತರು ತೀರಿ ಹೋಗಿದ್ದಾರೆ, ಹೆಂಡತಿ ಪ್ರೀತಿ ಅದೆಲ್ಲಾ ಕಾಲ ಅಲ್ಲ, ದುಡಿಮೆ ಮಾಡೋ ವಯಸ್ಸೂ ಅಲ್ಲ, ಆದ್ದರಿಂದ ಊರು ತಿರುಗುತ್ತಾ ಟೈಗರ್ ಮತ್ತಲ್ಲಿ ಓಡಾಡುತ್ತಾ, ಓಲಾಡುತ್ತಾ, ಒಂದು ಕಾಣದ nirvana ಹಂತ ತಲುಪಿದ್ದಾನೆ. ಮತ್ತು ಕೊನೆಯದಾಗಿ ಸೆಂಚುರಿ ಗೌಡ, ಎಲ್ಲವನ್ನೂ ನೋಡಿರುವ ಸೆಂಚುರಿ ಗೌಡನ ಉಪದೇಶದ ಮಾತುಗಳು ಯಾರಿಗೂ ಬೇಡ. In a way, Century Gowda doesn't have any impact
on anyone's life. ಆಗಲೇ ಹೇಳಿದಂತೆ ಸೆಂಚುರಿ ಗೌಡ ಒಂದು ರೀತಿಯಲ್ಲಿ ದೇವರ ಹಾಗೆ, ನಮ್ಮ ನಡುವೆಯೇ ಇದ್ದರೂ ನಮಗೆ ಗೊತ್ತೇ ಆಗುವುದಿಲ್ಲ. So,
when I look back, ಅಭಿ, ತಮ್ಮಣ್ಣ, ಗಡ್ಡಪ್ಪ ಮತ್ತು ಸೆಂಚುರಿ ಗೌಡ ಬೇರೆ ಬೇರೆ ಅಲ್ಲ, ಒಬ್ಬನೇ ವ್ಯಕ್ತಿ ಅಂತ ಹೇಳಬಹುದು. ಬ್ಲಾಗ್ ಮೊದಲ ಭಾಗದಲ್ಲಿ Boys ಚಿತ್ರದ ಹಿಂದೆ ಮುಂದೆ ನಮ್ಮ ಶಾಲಾ ದಿನಗಳ ಬಗ್ಗೆ ಹೇಳಿದಂತೆ ಅಭಿ ಅಷ್ಟು extreme ಅಲ್ಲದಿದ್ದರೂ ಒಂದು ಮಟ್ಟಿಗೆ young,
stupid, rebel ದಿನಗಳು ಆಗಿ ಹೋಗಿವೆ ನಮ್ಮ ಲೈಫಲ್ಲಿ. ಒಂದು ಕಾಲದಲ್ಲಿ ಹುಡುಗೀರನ್ನು ಬಿಟ್ಟರೆ ಮತ್ಯಾರು ಕಣ್ಣಿಗೆ ಕಾಣಲ್ಲ ಅನ್ನೋ ಮಟ್ಟಿಗೆ ಅಡ್ಡಾಡಿದ್ದು Boys ಸಿನಿಮಾದ ರೀತಿ young and stupid past. ಆನಂತರ ಮೊನ್ನೆ ನಮ್ ಹುಡುಗನ ಮದುವೆಯಲ್ಲಿ ಸಿಕ್ಕ ನನ್ನ ಗೆಳೆಯರೆಲ್ಲರೂ ಸಂಪೂರ್ಣ ಅಲ್ಲದಿದ್ದರೂ ಈಗಾಗಲೇ ಅಲ್ಪಸ್ವಲ್ಪ ಜವಾಬ್ದಾರಿ ಏರಿಸಿಕೊಂಡಿದ್ದಾರೆ, ಮಕ್ಕಳ ಸ್ಕೂಲ್ ಫೀಸ್, ಉತ್ತಮ ಕೆಲಸ, ಫಾರಿನ್ ಕೆಲಸದ ಕನಸು, ಸ್ವಂತ ಮನೆ ಸಾಕಾರವಾಗುವ ಪ್ರಕ್ರಿಯೆ, ಮನೆಯಲ್ಲಿ ಹೆಂಡತಿ ಎಂಬ ನೆಡೆದಾಡುವ ಜವಾಬ್ದಾರಿ, ಅವಳು ಮೆಸೇಜ್ ಮಾಡಿದಾಗ ಕೂಡಲೇ ಅಲ್ಲದಿದ್ದರೂ ಆದಷ್ಟು ಬೇಗ ರಿಪ್ಲೈ ಮಾಡಬೇಕಾದ ಸಂಸಾರದ
commitment ಇತ್ಯಾದಿಗಳು ಶುರುವಾಗಿದೆ, ತಮ್ಮಣ್ಣನ ಜೀವನದಂತೆ. ಬಸ್ ಅಲ್ಲಿ ನನ್ನ ಪಕ್ಕ ಕುಳಿತ ಯುವ ಜೋಡಿಯ ಕಥೆ ಸಡನ್ನಾಗಿ ನನ್ನನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಯಿತು. ಅದು ನನ್ನ ಜೀವನ ಅಲ್ಲ, ಬಟ್ ಕಾಲೇಜ್ ದಿನಗಳಲ್ಲಿ ನಾನು ನೋಡಿದ ಜೀವನವನ್ನೇ ನನಗೆ ತೋರಿಸಿತ್ತು. ಒಂಥರಾ Time Travel ಮಾಡಿ, Past Self ನ ಜೊತೆ Present Self ಕುಳಿತ ಹಾಗೆ. ಮುಂದೆ as it is
ಗಡ್ಡಪ್ಪನ ಹಾಗೆ senior citizen retirement life ಮತ್ತು ಅದರ ನಂತರದ super senior citizen
philosophical life ನೋಡುತ್ತೇವೋ ಇಲ್ಲವೋ ಗೊತ್ತಿಲ್ಲ, but ಈಗಾಗಲೇ ಎಲ್ಲರಿಗೂ ಮದುವೆ ಆಗಿರೋದರಿಂದ ಇನ್ನೂ 30 ವರ್ಷಗಳ ನಂತರ ಅವರವರ ಲೈಫ್ ಏನಾಗಿರುತ್ತೆ ಎಂಬ vague idea ಎಲ್ಲರಿಗೂ ಇದೆ. To
conclude, Netflix ಸೀರೀಸ್ Dark ಸರಣಿಯಂತೆ ಪ್ರತಿ 33 ವರ್ಷದ ಅತಿ ಮಹತ್ವದ ಬದಲಾವಣೆ ಅಲ್ಲದಿದ್ದರೂ ಪ್ರತಿ 10 ವರ್ಷಗಳಲ್ಲಿ ನಮ್ಮಲ್ಲಿ ಒಬ್ಬ ವ್ಯಕ್ತಿ ಸತ್ತು ಇನ್ನೊಬ್ಬ ಹೊಸ ವ್ಯಕ್ತಿ ಹುಟ್ಟುತ್ತಾನೆ ಎನ್ನಬಹುದು. ಯಾಕೆಂದರೆ ಇಪ್ಪತ್ತು ವರ್ಷದ ಹಿಂದೆ ಸ್ಕೂಲಲ್ಲಿ ನಮ್ಮ ಜೊತೆ ಕ್ರಿಕೆಟ್ ಅಥವಾ ಪುಸ್ತಕದಲ್ಲಿ ರಾಜ ರಾಣಿ ಕಳ್ಳ ಪೊಲೀಸ್ ಆಡಿದ ಗೆಳೆಯ ಬೇರೆ, ಅವನ ಇವತ್ತಿನ ಜೀವನದ ಇಷ್ಟ ಕಷ್ಟ ಆಸೆ ನೋವು ಧೇಯಗಳು ಬೇರೆ. ಹತ್ತು ವರ್ಷದ ಹಿಂದೆ ಕಾಲೇಜ್ ಕಾಂಪೌಂಡ್ ಹಾರಿ ಸಿಗರೇಟ್ ಅಥವಾ ಸಿನಿಮಾ ಅಥವಾ ಪಡ್ಡು ಹೋಳಿಗೆ ಜೊತೆಯಲ್ಲಿ ತಿಂದ ಗೆಳೆಯ ಬೇರೆ, ಅವನ ಇವತ್ತಿನ ನೋವು, ಕಷ್ಟ, ಸಂತೋಷ, challenge ಗಳು ಬೇರೆ and so
on. To conclude, ಬದುಕಿನ ಬಣ್ಣಗಳು ಹಲವು, ಅದನ್ನು ನೋಡುವ ಕಣ್ಣುಗಳು ಬದಲಾದಂತೆ, ಆ ಕಣ್ಣುಗಳು ಕಾಲ ಉರುಳಿದಂತೆ, ಆ ಬದುಕಿನ ಬಣ್ಣವು ಬದಲಾಗುತ್ತವೆ, ಮಾಸಿ ಹೋಗುತ್ತವೆ, ಹೊಸ ಬಣ್ಣಗಳು ಗೋಚರವಾಗುತ್ತವೆ ಇತ್ಯಾದಿ.
Life Goes On and On and On and On
- Oliver Tree