ಫೆಬ್ರವರಿ 22, 2023
ಹೊಸ ತಂಗಾಳಿ ಹೇಳಿದೆ ಮೆಲುವಾಗಿ.. ಈ ಬಾಳುಂಟು ಬಾಳುವ ಸಲುವಾಗಿ..
ಒಂದು ಸಲ ನಾನು ಚಿಕ್ಕವನಿದ್ದಾಗ ನಾನೇ ಬೇರೆ ನನ್ನ ಸ್ಟೈಲೇ ಬೇರೆ etc ಅಂತ ಹಾಡು ಹೇಳಿಕೊಂಡು ಸೈಕಲ್ ತುಳಿದುಕೊಂಡು ಹೋಗುತ್ತಿದ್ದೆ. ಒಬ್ಬ ನನಗಿಂತ ಚಿಕ್ಕ ಹುಡುಗಾ, "ಅಣ್ಣಾ ಹಾವು ಹಾವು" ಅಂತ ಗಾಬರಿಯಲ್ಲಿ ಹೇಳೋ ಸ್ಟೈಲಲ್ಲಿ, "ಅಣ್ಣಾ, ಸೈಕಲ್..ಸೈಕಲ್ ಚಕ್ರ ತಿರುಗ್ತಾ ಐತೆ" ಅಂತ ಗಾಬರಿಯಲ್ಲಿ ಹೇಳಿದ. ಅರೇ ಇಸ್ಕಿ, ಹೌದಾ ಅಂತ ನಾನು ಅರ್ಜೆಂಟಾಗಿ ಬ್ರೇಕ್ ಹಾಕಿ ನಿಲ್ಲಿಸಿದೆ. ಹ್ಹ ಹ್ಹ ಹ್ಹ ಅಂತ ನಗುತ್ತಾ ನಾನೇ ಬೇರೆ, ನನ್ನ ರೇಂಜೇ ಬೇರೆ ಅಂತ ಯಾವುದೋ ಜೋಶಲ್ಲಿ ನಡೆದುಕೊಂಡು ಹೋದ. ಹೋಗ್ ಅತ್ಲಾಗೆ ಸುಮ್ನೆ ಹೋಗ್ತಿದ್ದವನಿಗೆ ಚಮಕ್ ಕೊಟ್ನಲ್ಲಾ ಅಂತ ಅದೇ ಜೋಕ್ ನಾನು ಬಹಳ ಜನರ ಮೇಲೆ ಪ್ರಯೋಗ ಮಾಡಿದೆ. Hit and Miss ಎನ್ನುವಂತೆ ಕೆಲವು ಸಲ ಹಿಟ್ ಆಯಿತು, ಕೆಲವು ಸಲ ಮಿಸ್ ಆಯಿತು. ಅದಾಗಿ ಬಹಳ ವರ್ಷಗಳ ನಂತರ Bengaluru Days. ಫ್ರೆಂಡ್ಸ್ ರೆಸ್ಯೂಮೆ ತಗೊಳ್ಳೋದು, according to nativity ಬದಲಾಯಿಸಿಕೊಂಡು ಪ್ರಿಂಟ್ ತೆಗೆದುಕೊಂಡು LinkedIn, naukri etc ಕಡೆ upload ಮಾಡೋದು, ಕಾಲ್ ಬಂದರೆ ಪ್ರಿಂಟ್ ತಗೊಂಡು, ಇನ್ ಶರ್ಟ್ ಶೂಸ್ ಧರಿಸಿ ಕಡ್ಡಿಪುಡಿ (Glamour Bike Nickname) ಬೈಕಲ್ಲಿ ರೈಯ್ಯಾ. ಈ ನಡುವೆ ಒಂದು ದಿನ ಒಬ್ಬ ಹುಡುಗ ಸೇಮ್ ಅಂಕಲ್, ಬೈಕ್ ಚಕ್ರ ತಿರುಗ್ತಾ ಐತೆ ಅಂತ ಗಾಬರಿಯಲ್ಲಿ ಹೇಳಿದ. ಅರೇ ಇಸ್ಕಿ ಏನಪ್ಪಾ ಇದು ಅಂತ ನೋಡೋಣ ಅಂತ ಸ್ಲೋ ಮಾಡಿದೆ, ಗಾಡಿ ನಿಂತೇ ಹೋಯ್ತು, ಅವನು ಫುಲ್ ನಗುತ್ತಾ ಕುಣ್ಕೊಂಡ್ ಓಡಿದ. ಅರೇ ಇವನಾ, ಮತ್ತೆ ಚಮಕ್, ಅದು ಹಲವಾರು ವರ್ಷಗಳ ನಂತರ, ಬ್ಯಾವರ್ಸಿ ನಾಯಿ ಅಂತ ಬೈಯ್ಯೋದು ಕೂಡ ತಪ್ಪಾಗುತ್ತೆ, ಚಿಕ್ಕ ಹುಡುಗ ಬೇರೆ. ಹೋಗಲಿ ಬಿಡು ಅಂತ ವಿಷಯ ಬಿಟ್ಟಾಕಿದರೂ ಬಹಳ ದಿನಗಳವರೆಗೂ ಆ ಪಂಚ್ ಸ್ವಲ್ಪ ಉರಿ ಹಾಕಿದ್ದು ಸುಳ್ಳಲ್ಲ.ಕಟ್ ಮಾಡಿದ್ರೆ ಇವತ್ತು ಯಾಕೋ ಆ ದಿನ ನೆನಪಾಗಿ ನನ್ನ ಮೇಲೆ ನನಗೆ ನಗು ಬಂತು. ಎಂಥಾ ಸಿಲ್ಲಿ ವಿಷಯಕ್ಕೆ ಉರ್ಕೊಂಡಿದ್ದಾ, ಎದೆಯಲ್ಲಿ ಕಲ್ಲು ಇದ್ದೋನಿಗೆ ಇವೆಲ್ಲಾ ಅಂಟೋದೂ ಇಲ್ಲ, ಏ ಚೋಟು ಕುಷ್ಕ ಲಾ ರೇ ಅಂತ move on ಆಗಬೇಕು ಅಂತ ನನಗೆ ನಾನು ಬುದ್ಧಿವಾದ ಹೇಳಿಕೊಳ್ಳುವಾಗ ಅನಿಸಿತು, I was both right and wrong then. I was right because I was minding my own business and wrong because I let others influence my take on my life. ನನ್ನ ಜೀವನ ಹಾಳಾದರೂ, ಉದ್ಧಾರ ಆದರೂ ಅದಕ್ಕೆ ಕಾರಣ ನಾನು ಮಾತ್ರ ಅಂತ high motivation ತಗೊಳ್ಳೋಕೂ ಮುಂಚೆ ನೆನಪಾಗಿದ್ದು: Making a joke doesn't make me a Joker, taking one does ಅಂತ. ಅಣ್ಣಾ ಸೈಕಲ್ ಚಕ್ರ ತಿರುಗ್ತಾ ಇದೆ ಅಂತ ನಾನು ಹತ್ತು ಜನಕ್ಕೆ ಯಾಮಾರಿಸಿ ಖುಷಿ ಪಡೋದಲ್ಲ, ಒಬ್ಬ ನನ್ನನ್ನು ಅಂಕಲ್ ಬೈಕ್ ಚಕ್ರ ತಿರುಗ್ತಾ ಇದೆ ಅಂದಾಗ ಅದನ್ನು sportive ಆಗಿ ತಗೊಳ್ಳೋದು ಮುಖ್ಯ ಅನ್ನೋದು ಸರಿ ಅನಿಸಿತು. ಸದ್ಯಕ್ಕಿಷ್ಟು ಸಾಕು, ಬಹಳ ದಿನಗಳಿಂದ ಯೋಚನೆ ಮಾಡುತ್ತಿದ್ದ The Trolley Problem ಮತ್ತು Daredevil v Punisher ವಿಷಯದ ಬಗ್ಗೆ ಇನ್ನೊಮ್ಮೆ ನೋಡೋಣ, ಸದ್ಯಕ್ಕೆ saying good night to myself. ಕಿವಿ ಮಾತೊಂದು ಹೇಳಲೇ ನಾನಿಂದು, ದಾರಿ ನಿಂತಾಗ ಸಾಗಲೇಬೇಕೆಂದು.mp3 is playing in background.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)