ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯುವನು ಅಂತ ದೊಡ್ಡವರು ಹೇಳಿದ್ದಾರೆ. ನಾನು ಉಪ್ಪಿ 2 ಚಿತ್ರ ನೋಡೋದು ಒಂದು ದಿನ ತಡ ಆಯ್ತು ಅಷ್ಟೇ. ಅಷ್ಟರಲ್ಲಿ ಬೇಡದೇ ಇದ್ರೂ ಕಣ್ಣಿಗೆ ಬಿದ್ದ ಫ್ರೆಂಡ್ಸ್ ಅಭಿಪ್ರಾಯಗಳು, Fb ಪುಟಗಳ ರಿವ್ಯೂಗಳನ್ನು ನೋಡಿ, ಉಪ್ಪಿ ಸಿನಿಮಾಗೆ ಮುಂಚೆನೇ ಟೈಟಲ್ ಕಾರ್ಡ್ ತೋರಿಸೋದಾದರೆ ಉಪ್ಪಿ ಅಭಿಮಾನಿಯಾದ ನಾನು ಫಿಲಂ ನೋಡೋಕೆ ಮುಂಚೆನೇ ರಿವ್ಯೂ ಯಾಕ್ ಹಾಕಬಾರದು ಅಂತ ಖಾಲಿ ನೋಟ್ ನ ಚಿತ್ರ ತೆಗೆದು ನಮ್ ರಕ್ಷಿತ್ ಪ್ರೊಫೈಲ್ ನಲ್ಲಿ ಹಾಕಿದ್ದೆ. ಆದರೆ ಅದೇ ಸತ್ಯ ಆಗೋಯ್ತು. ಫಿಲಂ ಮುಗಿಸಿಕೊಂಡು ಬಂದ ಮೇಲೆ ಮಾತೇ ಬರ್ತಾ ಇಲ್ಲ. ಫಿಲಂ ಅಲ್ಲಿ ಏನೇನೋ ಇದೆ, ಆದರೆ ನಮ್ಮ ಬೌದ್ಧಿಕ ಯೋಚನಾ ವ್ಯಾಪ್ತಿಗೆ ನಿಲುಕಿದ್ದು ಸ್ವಲ್ಪ ಮಾತ್ರ. ಬಕಾಸುರನ ಹೊಟ್ಟೆಗೆ ಕೋಸಂಬರಿ ಎಲ್ಲಿಗಾಗುತ್ತೆ ಅಂತ ಒಂದು ಮಾತಿದೆ. ಅದರ ಉಲ್ಟಾ ಪರಿಸ್ಥಿತಿ ಈಗ ನಮ್ಮದು. ದೇವರು ಊಟ ಕೊಟ್ಟ, ಆದರೆ ಜೊತೆಗೆ ರೋಗನೂ ಕೊಟ್ಟ ಅಂತ ಸನ್ಯಾಸಿಯಾದ 'ನಾನು' ಫಿಲಂ ಅಲ್ಲಿ ಹೇಳುವ ಹಲವು ತತ್ವಗಳು ಅದ್ಭುತ ಹಾಗೂ, ಅದನ್ನು ತೋರಿಸಿರುವ ರೀತಿ ಅಪೂರ್ವ. ಇನ್ನೂ ಹೆಚ್ಚು ಬರೀಬೇಕು / ಮಾತನಾಡಬೇಕು. ಆದರೆ ಯಾವಾಗ ಹೇಗೆ ಅನ್ನೋ ಯೋಚನೆ ಬರ್ತಿದೆ. ಹಾಗಾಗಿ ಸದ್ಯಕ್ಕೆ ಯೋಚನೆ ಮಾಡೋದನ್ನ ನಿಲ್ಲಿಸಿ ಮತ್ತೆ ಹಾಜರಾಗುವೆ. ಅಲ್ಲಿವರೆಗೂ ಇಷ್ಟನ್ನೂ ಓದಿ ಸಹಿಸಿಕೊಂಡವರಿಗೆ ಒಂದು ಮಾತು:
Where there is
a will, there's a way.
P.s: ಈಗ ಹೇಳಿ ನೀವು ಖುಷಿನಾ?
ನಾನಂತೂ ಖುಷ್ ಆದೆ :p
(ಉಪ್ಪಿ 2 ಥರ ಅಂದ್ಕೊಂಡ್ರೆ ಉಪ್ಪಿ 2 ಥರ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಥರ ಅಂದ್ಕೊಂಡ್ರೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಥರ)