ಆಗಸ್ಟ್ 2, 2015

ಗೆಳೆಯರೆ.., ನನ್ನ ಗೆಳತಿಯರೇ...

 
ಮನುಷ್ಯ ಸಂಘಜೀವಿ, ಒಬ್ಬನೇ ಎಂದಿಗೂ ಇರೋದಿಲ್ಲ, ಒಬ್ಬನೇ ಏನೂ ಮಾಡೋದಿಲ್ಲ (ಕೆಲವನ್ನು ಬಿಟ್ಟು 😊). ಇಂಥ ಮಾನವ ಜೀವನದಲ್ಲಿ ಗೆಳಯರಿಲ್ಲದೇ ಇರೋರು ಪ್ರಾಯಶಃ ಯಾರೂ ಇಲ್ಲ. ನಿಂಗೋಸ್ಕರ ಏನ್ ಬೇಕಾದ್ರೂ ಮಾಡ್ತೀನಿ ಮಗಾ ಅಂತ ಪುಕ್ಕಟೆ ಸ್ಟೇಟಸ್ ಹಾಕಿಕೊಳ್ಳೋರಿಗಿಂತ ಕಷ್ಟದಲ್ಲಿದ್ದಾಗ ಮೊಬೈಲ್ ಗೆ ಕರೆನ್ಸಿ ಹಾಕಿಸೋನೇ ನಿಜವಾದ ಗೆಳೆಯ ಅನ್ನೋದು ಸದ್ಯದ ಟ್ರೆಂಡು. ಗೆಳೆತನದಂಥ ವಿಸ್ಮಯ ಲೋಕವನ್ನು ಮೊಬೈಲ್ ಕರೆನ್ಸಿ ಅಡಿಪಾಯದ ಮೇಲೆ ಅಳೆಯುತ್ತಿದ್ದೇನೆ ಅಂತ ಅಪಾರ್ಥ ಮಾಡ್ಕೊಬೇಡಿ, "ನಾವು ಹೇಳದೇ ಇದ್ರೂ ನಮ್ಮ ಪ್ರಾಬ್ಲಮ್ ಕೇಳೋನೇ ನಮ್ಮವನು" ಅನ್ನೋ ಮಾತನ್ನು ಹೀಗೆ ಹೇಳಿದೆ ಅಷ್ಟೇ.
ಚಿಕ್ಕವನಿದ್ದಾಗ ಚಡ್ಡಿ ಸರಿ ಮಾಡ್ಕೊಂಡು ಗೋಲಿ ಆಡೋ ಕಾಲದಿಂದ ಹಿಡಿದು ಗುಡ್ ಮಾರ್ನಿಂಗ್ ಸರ್ ಎಂಬುವರೆಗಿನ ಉದ್ಯೋಗ ಪರ್ವದವರೆಗೆ ಹಲವು ಜನರನ್ನು ನಾನು ಭೇಟಿ ಮಾಡಿದ್ದೇನೆ. ಕೆಲವು ಕ್ಷಣಿಕ ಮೀಟಿಂಗ್ ಗಳು, ಇನ್ನು ಕೆಲವು ಲಾಂಗ್ ಲೇಟ್ ನೈಟ್ ಔಟಿಂಗ್ ಗಳು. ಯಾಕೋ ಗೊತ್ತಿಲ್ಲ, ನಾನು ಬದುಕಿದ್ದೇ ಹೀಗೆ: ಅಲ್ಲೊಂಚೂರು, ಇಲ್ಲೊಂಚೂರು. ಮೊದಲು ಚರ್ಚ್ ಸ್ಕೂಲು, ಆಮೇಲೆ ಮಾಕಂಸ್, ನಂತರ ಕಡೂರಲ್ಲಿ ಪಿಯುಸಿ, ಸಿಯಿಟಿ ಸಮಯದಲ್ಲಿ ದಾವಣಗೆರೆಯಲ್ಲಿ ಸ್ವಲ್ಪ ಟೈಂಪಾಸ್, ಮತ್ತೆ ಚಳ್ಳಕೆರೆಯಲ್ಲಿ ಇನ್ನೂ ಹೆಚ್ಚಿನ ಪರಿಚಯ, ಇಂಜಿನಿಯರಿಂಗ್ ಅಲ್ಲಿ ನಮ್ scammers ಹಾಗೂ ಜೆ.ಎನ್.ಎನ್. ಹುಡುಗರು, ಆನಂತರ ರಾಜಧಾನಿ ಬದುಕು, ಹೀಗೆ ಎಲ್ಲಾ ಕಡೆ ನಾನು ಶೇಖರಿಸಿದ ನೆನಪುಗಳು ತೂಕದಲ್ಲಿ ನನ್ನನ್ನೂ ಸೈಡ್ ಹೊಡೆಯುವಷ್ಟು ಹೆಚ್ಚಿವೆ. ಎಲ್ಲಾ ಸಂದರ್ಭಗಳಲ್ಲಿ ನಾನು ನಮ್ ಹುಡುಗರ ಜೊತೆ ಮಾಡಿದ ಹಗರಣಗಳು ಕಡಿಮೆ ಏನಲ್ಲ!! ಈಗ ಒಂದೆರಡು ವಾರ ಅಂತರ್ಜಾಲ ಬದುಕಿನಿಂದ ದೂರವಾಗಿ ಇರುವ ಪ್ರಸಂಗ ಬಂದಿತ್ತು. ಆಗ, ಅರೇ ಪಿಟಿ ಯಾಕೋ ಕಾಣ್ತಾ ಇಲ್ಲಾ, ಇಷ್ಟು ಹೊತ್ತಿಗೆ ಬಂದು ಶೆಕೆ ಕೊಡ್ತಿದ್ದ, ಅಂತ ನೆನಪು ಮಾಡ್ಕೊಂಡ್ರಲ್ಲಾ, ಅಷ್ಟು ಸಾಕು ನನಗೆ. ಯಾವತ್ತಾದ್ರೂ ಊರಿಗೆ ಬಂದಾಗ ಬಂದಾಗ ಮೆಸೇಜ್ ಮಾಡುವ / ಇಲ್ಲಾಂದ್ರೆ ಬೆಂಗಳೂರಿಗೆ ಬಾ ಮಗಾ ಮೀಟ್ ಆಗೋಣ ಅಂತ ಮೆಸೇಜ್ ಮಾಡುವ ಎಲ್ಲರಿಗೂ ಹೇಳ್ತಾ ಇದ್ದೀನಿ ಕೇಳ್ರಪ್ಪಾ,  

Miss u all is very little set of words to say what I'm feeling right now.

Happy Friendship Day.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ