ನಾನಿರುವ
ಸಾಗರದಿಂದ ನಾನು ಕೆಲಸ ಮಾಡುವ ಬ್ಯಾಂಕಿನ ದೂರ ಸುಮಾರು 20 ಕಿಮೀ. ಅರ್ಧ
ಗಂಟೆಗೊಂದು ಬಸ್ ಇದೆಯಾದರೂ ಅದ್ಯಾಕೋ ನಮ್ ಕಡ್ಡಿಪುಡಿ (Hero Honda Glamour) ಜೊತೆ
ಹೋದ್ರೇನೇ ಒಂಥರಾ ಸಮಾಧಾನ. ಹೆಚ್ಚು ಕಮ್ಮಿ ಬ್ಲಾಗ್ ಗೆ ಏನು ಬರೀಬೇಕು, ಏನು
ಬರೀಬಾರ್ದು ಅನ್ನೋ 'ಐಡೀರಿಯಾ'ಗಳು
ಮೂಡೋದು ಈ ಪ್ರಯಾಣದಲ್ಲೇ. ನಮಗೂ ಅದೇ ಬೇಕಿತ್ತಲ್ವಾ, ಆದ್ದರಿಂದ ಹೆಂಗೋ "ಬಿಸಿಲಾದರೇನೂ, ಮಳೆಯಾದರೇನೂ, ಜೊತೆಯಾಗಿ
ಎಂದು ನಾನಿಲ್ಲವೇನು" ಎಂದು ಹಾಡುತ್ತಾ ಕಡ್ಡಿಪುಡಿ ಜೊತೆ ಹೋಗೋದು ಈಗ ದೈನಂದಿನ ರೂಢಿ.
ಇಷ್ಟು
ದಿನ ಎಲ್ಲಾ ಚೆನ್ನಾಗಿತ್ತು; ಈಗ ಮಳೆಗಾಲ ಶುರುವಾಗಿದೆ. ನಮ್ಮೂರಲ್ಲೆಲ್ಲಾ ಒಂದೋ ಮಳೆ ಬರುತ್ತೆ, ಇಲ್ಲಾಂದ್ರೆ
ಬರಲ್ಲ. ಆದರೆ ಸಾಗರದಲ್ಲಿ ಮಳೆ ಬರೋದು, ಒಂಥರಾ
ಉದಯ ಟಿವಿಯಲ್ಲಿ ಬರೋ ಜಾಹೀರಾತಿನ ಹಾಗೆ. ಯಾವಾಗ ಬರುತ್ತೋ, ಯಾವಾಗ
ನಿಲ್ಲುತ್ತೋ ಗೊತ್ತೇ ಆಗಲ್ಲ. ಮಳೆಯಿಂದಲೇ ಅನ್ನ, ಅನ್ನದಿಂದಲೇ
ನಾವು;
ಆದ್ದರಿಂದ ಬರೋ ಮಳೆಗೆ ಬೇಡ ಅನ್ನೋಕಾಗುತ್ತಾ? ನಮ್
ಪಾಡಿಗೆ ನಾವು rain
jacket ಹಾಕಿಕೊಂಡು ಕಣ್ಣು ಮುಚ್ಕೊಂಡು ಮುಂದೆ ಹೋಗ್ತಾ ಇರಬೇಕಷ್ಟೇ. ಕಣ್ಣು
ಮುಚ್ಕೊಂಡು ಗಾಡಿ ಓಡಿಸಿದರೆ, ಮುಂದೆ
ಹೋಗಲ್ಲ,
ಸೀದಾ ಮೇಲಕ್ಕೆ ಹೋಗ್ತೀವಿ ಅನ್ನೋ ವಿಷಯ ನನಗೂ ಗೊತ್ತು,
as usual, figuratively ಹೇಳಿದ್ದು.
ಮೊದಲೇ
ನಾವು ಹೋಗೋದು ಸಾಧಾರಣ ಸ್ಪೀಡು. ಆದ್ದರಿಂದ ಮೇಲಿನ ಜೇಬಲ್ಲಿ ಮೊಬೈಲ್ ಇರಿಸಿಕೊಂಡು full volume ಅಲ್ಲಿ ಹಾಡು ಕೇಳುತ್ತಾ, ಜೊತೆಯಲ್ಲಿ ವಸಿ ನಾನೂ
ಹಾಡುತ್ತಾ ಹೋಗೋದು ರೂಢಿ. ಸಾಮಾನ್ಯವಾಗಿ ಯಾವಾಗಲೂ shuffle option ಇರುವುದರಿಂದ ಯಾವ ಹಾಡು ಯಾವಾಗ ಬರುತ್ತೋ
ಹೇಳೋಕಾಗಲ್ಲ. ಮೊನ್ನೆ ಹೀಗೆ ಹಾಡು ಕೇಳಿಕೊಂಡು ಹೋಗುವಾಗ Jannat ಚಿತ್ರದ Jannat
Jahaan ಹಾಡು ಶುರುವಾಯಿತು. ಹಾಡಿನ ಬೆನ್ನಲ್ಲೇ ಫ್ಲ್ಯಾಶ್ ಬ್ಯಾಕ್ ನಲ್ಲಿ
ಕಥೆಯೊಂದು ಶುರುವಾಗಿತ್ತು.
ಸಾಂದರ್ಭಿಕ ಚಿತ್ರ: ಮಿಡ್ವಿನ್ ಆಂಟೋನಿ
ಮೊನ್ನೆ
ಕೆಲಸದ ನಿಮಿತ್ತ ಕ್ಯಾಮೆರಾ ಪೆಟ್ಟಿಗೆ ಹಿಡ್ಕೊಂಡು ಹೀಗೇ ಬೆಂಗಳೂರಿಗೆ ಹೋಗಿದ್ದೆ. ನಮ್ಮ
ಹುಡುಗರು ಖಾಸಗಿ ಬ್ಯಾಂಕ್ ಒಂದರಲ್ಲಿ ಉಳಿತಾಯ ಖಾತೆಯನ್ನು ಮೊಬೈಲ್ ಆಪ್ ಮೂಲಕ
ತೆರೆಯುತ್ತಿದ್ದರು. ಆ ಪ್ರಕ್ರಿಯೆ ಪೂರ್ಣಗೊಳ್ಳಲು ಜಯನಗರದ Cafe Coffee Day - CCD ಗೆ ಹೋಗಿ finger scan ನೀಡುವುದು
ಅನಿವಾರ್ಯವಾಗಿತ್ತು. ಇದಕ್ಕೆ ಜೊತೆಯಲ್ಲಿ ಉಚಿತ ಕಾಫಿ ಬೇರೆ ಇತ್ತು. ತಗಳಪ್ಪ, ಏನ್ ಮಾಡ್ತೀರಾ?! ಉದ್ಯೋಗಿ ಕೇಳಿದ್ದು CL ನ, ಬಾಸ್ ಕೊಟ್ಟಿದ್ದು CL ನ ಎನ್ನುವ ಹಾಗಾಗಿತ್ತು ನಮ್ಮ ಹುಡುಗರಿಗೆ.
ಮೊದಲೇ ಜಯನಗರ, ಅದರಲ್ಲೂ CCD; Zoom in, Zoom out ಮಾಡಿಕೊಂಡು
ಒಂದಷ್ಟು ಪೊಟಾ ತೆಗೆಸಿಕೊಳ್ಳಬಹುದು ಅಂತ ಎಲ್ಲರೂ ಜ಼ೂಮ್ ಅಂತ ಹೊಂಟ್ವಿ.
ಒಂದೋ-ಎರಡೋ ಕಾಫಿ ಕುಡಿದು, ಸಮೋಸ
ತಿಂದು, 100-120 ಪೋಟಾ ಕ್ಲಿಕ್ಕಿಸಿ
ವಾಪಾಸಾದೆವು. ಆದರೆ ಈಗ ನಾನು ಹೇಳ ಹೊರಟಿರುವ Jannat
Jahaan ಕಥೆ ನೆಡೆದಿದ್ದು CCD ಅಲ್ಲಿ
ಅಲ್ಲ, ಅಲ್ಲಿಗೆ ಹೋಗುವ
ದಾರಿಯಲ್ಲಿ.
ಸಾಂದರ್ಭಿಕ ಚಿತ್ರ: ಜೈಭಜರಂಗ ಬಲಿ
ಬೆಂಗಳೂರಲ್ಲಿ
ಈಗ ದ್ವಿಚಕ್ರ ವಾಹನದ ಇಬ್ಬರೂ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದ್ದಾರೆ. ನಮ್ ಹುಡುಗರು
ಯಾರಿಗೂ ಸದ್ಯಕ್ಕೆ girlfriend ಇಲ್ಲದೇ
ಇರೋದ್ರಿಂದ ಯಾರ ಬಳಿಯೂ 'ಹೆಚ್ಚುವರಿ' ಹೆಲ್ಮೆಟ್ ಇಲ್ಲದೆ ಇರುವ
ವಿಷಯ ನಮ್ಮೆನ್ನೆಲ್ಲಾ 'ವರಿ' ಮಾಡುವಂತೆ ಮಾಡಿತ್ತು.
ಆದ್ದರಿಂದ ಹೆಂಗೋ
ಸಣ್ಣ ಸಣ್ಣ ಬೀದಿಗಳಲ್ಲಿ ಬೇಗ ನುಗ್ಗಿಕೊಂಡು ಹೋಗಿ ದಡ ಸೇರಿಬಿಡುವ ಎಂಬುದೇ ನಮ್ಮ ಪ್ಲಾನ್
ಆಗಿತ್ತು. ನಾನು ನಮ್ Rp ಮಾಮನ
ಗಾಡಿಯಲ್ಲಿ ಹಿಂದೆ ಕುಳಿತಿದ್ದೆ. ನಮ್ Rp ಮಾಮ
ಹುಡುಗಿಯರ ವಿಷಯದಲ್ಲಿ ಭಲೇ ಸ್ಪೀಡು ಅಂತ ಗೊತ್ತಿತ್ತು, ಆದರೆ ಗಾಡಿ ಓಡಿಸೋದರಲ್ಲಿ ಕೂಡ ಭರ್ಜರಿ ಸ್ಪೀಡು ಅಂತ ಅವತ್ತೇ
ಗೊತ್ತಾಗಿದ್ದು. ಕೊರಳಿಗೆ ಇನ್ನೂ ಸಾಲ ತೀರದೇ ಇರೋ ಕ್ಯಾಮೆರಾ ಪೆಟ್ಟಿಗೆ ಬೇರೆ ನೇತು
ಹಾಕಿಕೊಂಡಿದ್ದೆ. ಅವನ ಆ ಸ್ಪೀಡಿಗೆ ನಾನು ಬೀಳದಂತೆ ಗಾಡಿ ಹಿಡಿಕೊಳ್ಳಬೇಕೋ, ಇಲ್ಲಾ ಕೊರಳಿಂದ
ಕ್ಯಾಮೆರಾ ಬೀಳದಂತೆ ನೋಡಿಕೊಳ್ಳಬೇಕೋ ಅನ್ನೋ confusion
ಅಲ್ಲೇ 4-5 ಕಿಮೀ
ಆಯಿತು. ಚಿತ್ರಮಂದಿರದಲ್ಲಿ ಇನ್ನೇನು ಸಿನಿಮಾ ಶುರುವಾಯಿತು ಅನ್ನೋ ಹೊತ್ತಿಗೆ ಕಬಾಬ್ ಮೇ ಹಡ್ಡಿ
ಎಂಬುವ ಹಾಗೆ 'ಧೂಮ್ರಪಾನ ಜಾಹೀರಾತು' ಬರುವಂತೆ ಅವತ್ತು
ಆಕಸ್ಮಿಕವಾಗಿ ಮಳೆ ಬಂದುಬಿಡ್ತು. ಬರುವ ಮಳೆ ಮತ್ತು ಲಕ್ಷ್ಮಿಗೆ ಬೇಡ ಅನ್ನಬಾರದು ಅಲ್ವಾ? ಆದ್ದರಿಂದ ಸರಸರನೆ ಗಾಡಿ
ನಿಲ್ಲಿಸಿ ಒಂದು ಅಂಗಡಿ ಮುಂದೆ ಮರದ ಕೆಳಗೆ ನಿಂತ್ಕೊಂಡ್ವಿ.
ನಮ್ ಉಳಿದ ಹುಡುಗರು ಆಗಲೇ CCD
ತಲುಪಿದ್ದರು, ಆದರೆ ನಾವು ಮಳೆ ಬಂದಿದ್ದರಿಂದ
ಆ ಕಡೆಗೂ ಇಲ್ಲ,
ಈ
ಕಡೆಗೂ ಇಲ್ಲ ಎಂಬಂತೆ ಮಾತಾಡಿಕೊಂಡು ನಿಂತಿದ್ವಿ. ಅಲ್ಲೇ ಪಕ್ಕದಲ್ಲಿ
ಒಂದು-ನಾಲ್ಕು ಕುರ್ಚಿ ಹಾಕಿದ್ದ ಒಂದು ಚಿಕ್ಕ ಚಾಟ್ಸ್ ಅಂಗಡಿ ಇತ್ತು.
ಆ ಅಂಗಡಿಯೊಳಗೆ ಒಂದು ಹುಡುಗ - ಹುಡುಗಿ
ಬಿಟ್ಟು
ಬೇರೆ
ಯಾರೂ ಇರಲಿಲ್ಲ. ಹುಡುಗಿ ಅಂದ ತಕ್ಷಣ, ಆಹಾ,
pt ಈಗ
ವಿಷಯಕ್ಕೆ ಬಂದ ಅಂತ ಖುಷಿಯಾಗಬೇಡಿ, focus guys,
focus. ಆ
ಹುಡುಗಿ ತೀರಾ ಹಾಲಿವುಡ್ ನ Scarlett Johansson ಅಥವಾ ಕನ್ನಡದ ಶಾನ್ವಿ
ಶ್ರೀವಾತ್ಸವ್ ಮಟ್ಟಿಗೆ ಅಲ್ಲದಿದ್ದರೂ ತಕ್ಕಮಟ್ಟಿಗೆ ಇದ್ದಳು. ಹಿಂದಿನ
ಅಂಕಣವೊಂದರಲ್ಲಿ ಹೇಳಿರುವಂತೆ, ಒಂದು ಹುಡುಗಿ ಒಬ್ಬ ಹುಡುಗನ
ಜೊತೆ
ಇದ್ದರೆ
ಮುಗೀತು,
The Bro Code ಅನ್ವಯ, ಅದು ಯಾವ್ Kate
Winslet ಆದರೂ
ನಾವು
ಕಣ್ಣೆತ್ತಿ
ನೋಡೋದಿಲ್ಲ. ಆದ್ದರಿಂದ ನಾನು - ನಮ್ Rp ಮಾಮ ಅದು ಇದು ಮಾತಾಡ್ಕೊಂಡು ಹಾಗೇ ನಿಂತಿದ್ವಿ.
ಈ ನಾಗರೀಕ ಸಮಾಜದಲ್ಲಿ Common
Courtesy ಎಂಬ
ಹೆಸರಲ್ಲಿ ಕೆಲವು
ಅಲಿಖಿತ
ನಿಯಮಗಳನ್ನು ಮಾಡಲಾಗಿದೆ. ಅವುಗಳ ಪ್ರಕಾರವೇ ಮಾಡಬೇಕು ಅಂತ ಏನೂ ಇಲ್ಲ, ಆದರೆ ಆ ರೀತಿ ಮಾಡಿದರೆ ಒಳ್ಳೆಯದು ಎಂಬುದು ಇದರ ಅರ್ಥ. ಹೋಟೆಲ್ ನಲ್ಲಿ ಟಿಪ್ಸ್
ಕೊಡುವುದು,
ಗೊತ್ತಿಲ್ಲದ ಊರಲ್ಲಿ ವಿಳಾಸ ಹೇಳಿದವರಿಗೆ 'thank
you' ಎಂದು
ಹೇಳುವುದು,
facebook ನ
ಪೋಟಾಗಳಿಗೆ
'pic credits' ಬರೆಯುವುದು
ಇತ್ಯಾದಿ. ಅದೇ ರೀತಿಯಲ್ಲಿ ಮಳೆ ಬಂದಾಗ ಯಾವುದಾದರೂ ಅಂಗಡಿ ಮುಂದೆ ನಿಂತರೆ ಆ ಅಂಗಡಿಯಿಂದ
ಸಣ್ಣ ಮೊತ್ತದ ಯಾವುದಾದರೂ ವಸ್ತುವನ್ನು ಕೊಳ್ಳಬೇಕು ಎಂಬುದು ಕೂಡ common
courtesy ಯ
ಅಲಿಖಿತ ನಿಯಮದೊಳಗೆ ಬರುತ್ತವೆ ಎಂದು ಯಾವುದೋ ಪೇಪರಲ್ಲಿ ಒಮ್ಮೆ ಓದಿದ್ದೆ. ಆದರೆ ಮೊದಲ ನೋಟದಲ್ಲೇ ಆ ಅಂಗಡಿಯಲ್ಲಿ
ಯಾಕೋ
ರುಚಿಯಾದದ್ದು
ಸಿಗೋದಿಲ್ಲ ಅಂತ ನಮ್ ಮನದ ಪಕ್ಷಿ ಬೇರೆ ಹೇಳುತ್ತಿತ್ತು. ಅಲ್ಲದೇ ಮುಂದೆ ಬೇರೆ CCD
ಯಲ್ಲಿ ಭಾರಿ ಬಿಲ್ ಕೊಡುವ ಭಯ ಬೇರೆ ಇತ್ತು. Bhaad
mein jaaye common courtesy ಅಂತ ಸುಮ್ಮನಾದೆ.
ಅಷ್ಟರಲ್ಲಿ
ಆಗಲೇ ಆ ಅಂಗಡಿಯಲ್ಲಿ ಒಂದು ಹುಡುಗ - ಹುಡುಗಿ
ಇದ್ದರು ಅಂತ ಹೇಳಿದ್ನಲ್ಲಾ, ಅವರು ಬಿಲ್ ಕೊಟ್ಟು ಎದ್ದು ಹೋದರು. ನಮ್ ಎದುರಿಗೇ ಒಂದು ಕಾರು
ನಿಂತಿತ್ತು, ಬೇರೆ
ಯೋಚನೆಯಲ್ಲಿ ಅಷ್ಟಾಗಿ ನೋಡೇ ಇರಲಿಲ್ಲ. ಮಳೆ ಬೇರೆ ಬರ್ತಾ ಇತ್ತಲ್ಲಾ, ಇಬ್ಬರೂ
ಧಡಭಡನೇ ಓಡಿ ಬಂದರು, ಅವನು
ಮೊದಲು ಬಂದು ಅವಳಿಗಾಗಿ ಕಾರಿನ ಬಾಗಿಲನ್ನು ತೆರೆದನು. ಅವಳು ಕುಳಿತ ಮೇಲೆ ಅವನೂ ಕಾರ್ ಹತ್ತಿ
ಇಬ್ಬರೂ ನೋಡು ನೋಡುತ್ತಿದ್ದಂತೆಯೇ ಜ಼ುಗ್ ಅಂತ ಮಾಯ ಆಗಿಬಿಟ್ಟರು. ನಾನು ಮಾತ್ರ ಏನಾಯಿತು ಅನ್ನೋ
ಕ್ಲಾರಿಟಿ ಇಲ್ಲದೇ ಹಾಗೇ ನಿಂತುಬಿಟ್ಟೆ.
ಪ್ರಾಯಶಃ
ಈ WhatsApp ಮೆಸೇಜ್
ಓದಿರ್ತೀರಾ ನೀವು. ಒಬ್ಬ ನೆಡೆದುಕೊಂಡು ಹೋಗುತ್ತಿರುವ 'ಸಂಚಾರಿ'ಗೆ
ಸೈಕಲ್ ಬೇಕೆನಿಸುತ್ತದೆ. ಸೈಕಲ್ ಸವಾರನಿಗೆ ಬೈಕ್ ಇಷ್ಟವಾಗುತ್ತದೆ. ಬೈಕ್ ಇಂದ ಕಾರು, ಕಾರಿಂದ
ಲಿಮೋ, ಲಿಮೋ
ಇಂದ ಹೆಲಿಕಾಪ್ಟರ್ ವರೆಗೂ ಹೋಗಿ, ಹೆಲಿಕಾಪ್ಟರ್ ನಲ್ಲಿ ಹೋಗುತ್ತಿರುವವನ್ನು ಆ ರಸ್ತೆ ಮೇಲೆ earphones ಹಾಕಿಕೊಂಡು
ಆರಾಮಾಗಿ ನೆಡೆಯುತ್ತಿರುವ ಸಂಚಾರಿಯ ಬದುಕೇ ತುಂಬಾ ಆರಾಮದಾಯಕ ಅಂದುಕೊಳ್ಳುತ್ತಾನೆ. We all want what we don't have
ಎಂಬುದಷ್ಟೇ ಇದರ ಸಾರಾಂಶ. ಇದೇ ವಿಷಯವಾಗಿ ಯೋಚಿಸುತ್ತಾ
“ಎಲ್ಲವೂ ಬೇಕೆಂದವನು
ನಾನು,
ಎಲ್ಲವ ಬಿಟ್ಟುನಿಂತವನು
ನೀನು”
ಎಂದು ಉಪ್ಪಿ 2 ಹ್ಯಾಂಗೋವರಿನಲ್ಲಿ
ಬರೆದಿದ್ದೆ. ಈಗ ತಿರುಗಾ ಮೊದಲಿಂದ 'ನಾನು' ಯಾರು? 'ನೀನು' ಯಾರು? ಅಂತ explain ಮಾಡಲು ಸಮಯವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ Game of Thrones ನ Lord Peter Baelish ಹೇಳುವ
ಈ ಸಾಲುಗಳು ಖಂಡಿತಾ ಈ ಸಂದರ್ಭಕ್ಕೆ ಹೊಂದುವಂತಿವೆ.
ಪ್ರಾಯಶಃ ನಮ್ ಜೀವನವೇ ಹಾಗೆ ಅನಿಸುತ್ತೆ. ಎರಡು
ವರ್ಷದ ಹಿಂದೆ ನೆಟ್ಟಗೆ ಒಂದು ಕೆಲಸ ಇರಲಿಲ್ಲ, 'ಕಡ್ಡಿಪುಡಿ'ಗೆ
ಪೆಟ್ರೋಲ್ ಹಾಕಿಸಿಕೊಂಡು, ಸ್ನಾನ
ಮಾಡಿ ಇನ್-ಶರ್ಟ್ ಮಾಡಿಕೊಂದು 8,000 / 10,000 ಅಂತ ಬೇಧ-ಭಾವವಿಲ್ಲದೇ ಎಲ್ಲಾ ಇಂಟರ್ ವ್ಯೂಗಳಿಗೆ ಹೋಗಿ
ಬರುತ್ತಿದ್ದೆ. ಕಟ್ ಮಾಡಿದ್ರೆ 2016, after all ಒಬ್ಬ ಕ್ಲರ್ಕ್ ಸಂಬಳ ಒಬ್ಬನಿಗೇ ಎಲ್ಲಿ
ಸಾಕಾಗುತ್ತೆ ಮಗಾ ಅನ್ನುವಂತಾಗಿದೆ. Coming back to topic, ಈ ವಿಷಯ ಪ್ರೀತಿಯ ಕುರಿತು
ಎಲ್ಲರಿಗೂ ಅನ್ವಯಿಸುತ್ತದೆ.
Girlfriend
/ Boyfriend ಇಲ್ಲದವರು couples ನ ನೋಡಿ “ಅಯ್ಯೋ ನಮಿಗಾದ್ರೂ ಇಂಥ ಸದಾವಕಾಶ ಇಲ್ಲವೇ?!” ಅಂತ
ಗೋಳಾಡುತ್ತಾರೆ. ಈಗಾಗಲೇ relationship ನಲ್ಲಿರುವವರು “ಛೇ, ಒಬ್ಬನೇ
ಇದ್ದಾಗ ಲೈಫು ಎಷ್ಟು ಆರಾಮಾಗಿತ್ತಲ್ಲ” ಎಂದು ಕನವರಿಸುತ್ತಾರೆ. ಇದರ ಕುರಿತು cinema saying ಗೊತ್ತೇ
ಇದೆ: “ಪ್ರೀತಿ
ಮಾಡೋದಲ್ಲ, ಆಗೋದು” ಅಂತ.
“ಲೈಫು
ಅಂದ ಮೇಲೆ ಎಲ್ಲರೂ ಒಂದು ಸಲ ಲವ್ ಮಾಡಲೇಬೇಕು, success ಅಥವಾ failure ಎಂಬುದು
ಆಮೇಲೆ, ಎರಡರ ಅಂತ್ಯದಲ್ಲಿ
ಲೈಫಿನ ಮೇಲೆ ಅದ್ಭುತ ಕ್ಲಾರಿಟಿ
ಸಿಗುತ್ತೆ” ಅಂತ
ನಮ್ ರಾಮಣ್ಣ ಒಮ್ಮೆ ಹೇಳಿದ್ದ.
ಅದೇ ವಿಷಯವಾಗಿ ನಮ್ದೆಲ್ಲಿಡಲಿ ಅಂತ ತೂರಿಸೋದಾದರೆ
“World is a beautiful place, you only need the
right spectacles to see it”
ಅಂತ ಒಮ್ಮೆ ನಾನು WhatsApp ಸ್ಟೇಟಸ್ ಹಾಕಿದ್ದೆ. Of course, ಅದರ
ಮೂಲ ರೂಪ
World is a beautiful place, you only need the right
person beside you to see it
ಎಂಬುದಾಗಿತ್ತು. ಈ ಪ್ರೀತಿ ಅನ್ನೋದು ಯಾವಾಗ,
ಎಲ್ಲಿ, ಹೇಗೆ,
ಯಾರೊಂದಿಗೆ ಉಂಟಾಗುತ್ತದೆ ಅನ್ನೋದೇ ದೊಡ್ಡ suspense. ಹಿನ್ನಲೆಯಲ್ಲಿ “ಹುಟ್ಟು, ಬದುಕು, ಸಾವು ಎಲ್ಲಾ ಒಂದು ಆಕ್ಸಿಡೆಂಟೇ ಗಣೇಶ್, ಅದರಲ್ಲೂ ಹುಡುಗಿ ಸಿಗೋದು ಇದೆಯಲ್ಲಾ, ದೊಡ್ಡ ಆಕ್ಸಿಡೆಂಟ್!” ಎಂಬ ಗಾಳಿಪಟ ಚಿತ್ರದ ಅನಂತಣ್ಣನ ಪ್ರೀತಿಯ ಬಗೆಗಿನ ಪ್ರೀತಿಪೂರ್ವಕ
ಡೈಲಾಗ್ ನೆನಪಾಗುತ್ತಿದೆ.
ಸಾಂದರ್ಭಿಕ ಚಿತ್ರ: ಗಾಳಿಪಟ
ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ್ ಬದನೆಕಾಯಿ ಅಂತ
A ಪಿಚ್ಚರಲ್ಲಿ
ಕೇಳಿರೋದು ಬಿಟ್ಟರೆ ನನಗೆ ಈ ಫೀಲ್ಡಲ್ಲಿ ವೈಯಕ್ತಿಕವಾಗಿ ಯಾವುದೇ ಅನುಭವ ಇಲ್ಲ. ಪ್ರೀತಿ ಪ್ರೇಮ
ಒಳಗೊಂಡಂತೆ ಜೀವನದ ಬಗ್ಗೆ ಬೋಧನೆ ಮಾಡುವ ಯೋಗ್ಯತೆ ಕೂಡ ನನಗಿಲ್ಲ. ಆದರೂ ನಾನು ನೋಡಿ ಕೇಳಿರುವ
ಕಥೆಗಳನ್ನಿಟ್ಟುಕೊಂಡು ಕೆಲವು ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಪ್ರತಿಯೊಬ್ಬರಿಗೂ
ತಾನು ಪ್ರೀತಿಸುವ ಹುಡುಗ / ಹುಡುಗಿ ಹೀಗಿರಬೇಕು ಎಂಬ ಸಣ್ಣ ಕನಸು / ಕಲ್ಪನೆ ಇದ್ದೇ ಇರುತ್ತದೆ.
ಮತ್ತು ಅಂಥವರು ಸಿಕ್ಕಾಗ ಈ ಜಗದ ಎಲ್ಲಾ ಖುಷಿ / ಸಂತಸಗಳನ್ನು ತಂದು ಅವರ ಮುಂದೆ ರಾಶಿ
ಹಾಕಿಬಿಡುವ ಎಂಬ ಹೆಬ್ಬಯಕೆ ಮೂಡುವುದು ಸಹಜವೇ. ಭೂಮಿ ನೋಡಿ, ತನ್ನ ಸುತ್ತಲೂ
ಸುತ್ತುತ್ತಾ ಸೂರ್ಯನ ಸುತ್ತಲೂ ಸುತ್ತುತ್ತದೆ. ಹಾಗೇ ನಮ್ ಜೀವನವೂ ಕೂಡ, ಆನಂದದಿಂದ
ಇರೋದಕ್ಕೆ ಪ್ರೀತಿಯೂ ಬೇಕು, ಹಣವೂ ಬೇಕು. ಎರಡರಲ್ಲಿ ಒಂದು ಇಲ್ಲವಾದರೂ ಎಡವಟ್ಟಾಗೋದು ಗ್ಯಾರಂಟಿ.
ಬಹಳಷ್ಟು ಜನ ಹೇಳ್ತಾರೆ, “ಚೆನ್ನಾಗಿ
ದುಡ್ಡು ಮಾಡು, ಆಗ
ಇವಳಲ್ಲ, ಇಂಥ
ನೂರು ಜನ ನಿನ್ನ ಹಿಂದೆ ಬರುತ್ತಾರೆ” ಅಂತ. ಆದರೆ ನೀವೇ ಹೇಳಿ, ದುಡ್ಡಿದ್ದಾಗ ಹಿಂದೆ
ಬರುವ ನೂರು ಜನ ಬೇಕಾ? ದುಡ್ಡೇ
ಇಲ್ಲದಾಗ “ನಿನ್ನ
ನೋಡಬೇಕು ಅನಿಸುತ್ತಿದೆ, ಬೇಗ
ಬಾ” ಎಂದು
ಮುದ್ದಿಸಿ ಕರೆಯುವ ಒಬ್ಬಳು ಸಾಕಾ? ಯಾಕೆ ಇಷ್ಟೆಲ್ಲಾ ದುಡ್ಡು ಮತ್ತು ಪ್ರೀತಿಯನ್ನು ಸಮೀಕರಿಸಿ ಒಂದೇ ಕಡೆ
ಹೇಳಿದೆ ಅನ್ನೋಕೆ ವಾಪಸ್ ಆ CCD ಗೆ ಹೋಗುವ ದಾರಿಯಲ್ಲಿನ ಹುಡುಗ-ಹುಡುಗಿ ಕಥೆಗೆ ಮರಳಿ ಹೋಗಬೇಕು.
ಸುಮ್ಮನೆ ಮಾತಿಗೆ, ಅವತ್ತು ನಮ್ Rp ಮಾಮ
ಜೊತೆ ನನ್ನ ಬದಲು, Rp ಹುಡುಗಿ
ಇದ್ದಳು ಅಂದುಕೊಳ್ಳೋಣ. ವೀಕೆಂಡ್ ಬಂತು ಅಂತ ಆರಾಮಾಗಿ CCD ಗೆ ಹೋಗಿ ಎರಡು ಕಪ್
ಕಾಫಿ ಹೀರಿ ಬರೋಣ ಅಂತ ಹೋಗುವಾಗ ಆಕಸ್ಮಿಕವಾಗಿ ಮಳೆ ಬಂದು ಬಿಡುತ್ತೆ. ವ್ಹಾ, ಎಂಥಾ
ರೋಮ್ಯಾಂಟಿಕ್ ಸನ್ನಿವೇಶ ಅಂದುಕೊಳ್ಳೋ ಹಾಗೇ ಇಲ್ಲ. ಒಂದು ಕಡೆ ಗಾಡಿ ನಿಲ್ಲಿಸಿ ಮಳೆ ನಿಂತ
ಮೇಲೆ ಮುಂದೆ ಹೋಗಬೇಕು ಎಂಬುದಷ್ಟೇ ಕಹಿ ಸತ್ಯ. ಅದೇ ಸಮಯದಲ್ಲಿ ಕಾರಲ್ಲಿ ಆ ಇನ್ನೊಂದು
ಹುಡುಗ-ಹುಡುಗಿ ಹೋದರು ಎಂದಿಟ್ಟುಕೊಳ್ಳಿ. ಯಾರಿಗೇ ಆಗಲಿ, “ಛೆ, ಏನಯ್ಯಾ
ಇದು ಕರ್ಮ, ಇಂಥ
ಟೈಮಲ್ಲಿ ಒಂದು ಕಾರ್ ಇದ್ದಿದ್ರೆ ಎಷ್ಟು ಚೆನ್ನಾಗಿರುತ್ತಿತ್ತು” ಎಂದು ಅನಿಸದೇ ಇರದು.
ಇಂತಿಪ್ಪ ಸಂದರ್ಭದಲ್ಲಿ ಬದುಕಲ್ಲಿ ಆರಾಮಾಗಿರೋಕೆ ಪ್ರೀತಿ ಮುಖ್ಯವಾ? ದುಡ್ಡು ಮುಖ್ಯವಾ? ಎಂಬುದು
critical ಪ್ರಶ್ನೆಯಾಗಿ
ಉಳಿದುಬಿಡುತ್ತದೆ.
ಯೋಗರಾಜ್ ಭಟ್ ಒಮ್ಮೆ ಒಂದು ಇಂಟರ್ ವ್ಯೂನಲ್ಲಿ
ಹೇಳಿದ್ದರು, “ನಾವೆಲ್ಲಾ
ಎಷ್ಟೋ ಲವ್ ಸ್ಟೋರಿ ನೋಡಿದ್ದೀವಿ, ಕೇಳಿದ್ದೀವಿ, ಆದರೆ ನಿರುದ್ಯೋಗದಲ್ಲಿ ಹುಟ್ಟುವ ಪ್ರೇಮ ಅತ್ಯಂತ ಪವಿತ್ರವಾದದ್ದು” ಅಂತ. ಬಹಳ
ಸಮಯ ಈ ಹೇಳಿಕೆ ಕುರಿತು ಆಲೋಚಿಸಿದಾಗ ಕೆಲವು ವಿಷಯಗಳು ಅರ್ಥವಾದವು. ಏನೂ ಇಲ್ಲದೇ, ಒಬ್ಬ
ಹುಡುಗ / ಹುಡುಗಿಗೆ ಒಂದು ಹುಡುಗಿ / ಹುಡುಗ ಇಷ್ಟವಾಗುತ್ತಾರಲ್ಲಾ, ಅದು ಮಾತಿಗೆ ಸಿಲುಕದ
ಉತ್ತುಂಗ ಅನುಭವ. ಅದು ಅನುಭವಿಸದವರಿಗೇ ಗೊತ್ತು. ಎಲ್ಲಾ ಸರಿ, that still doesn't explain the connection between
this article and the title 'Jannat Jahaan' ಎಂದು
ಕೇಳೋದಾದರೆ, ಅಲ್ಲಿಗೇ
ಬಂದೆ ಇರಿ.
ಸಾಂದರ್ಭಿಕ ಚಿತ್ರ: Jannat
ನೀವು Jannat ಸಿನಿಮಾ ನೋಡಿರಬಹುದು.
ಇಲ್ಲಾ ಅಂದರೂ ಚಲ್ತಾ ಹೈ, ಇಲ್ಲಿ
ಕೇಳಿ.
ಏನೂ ಇಲ್ಲದ ಒಬ್ಬ ಸಾಮಾನ್ಯ ಕನಸುಗಾರ ಒಬ್ಬಳನ್ನು
ಇನ್ನಿಲ್ಲದಂತೆ ಪ್ರೀತಿಸುತ್ತಾನೆ. ಆದರೆ ಅವಳನ್ನು ಒಬ್ಬ ಬಡವನಾಗಿ ಪ್ರೀತಿಸುವ ಬದಲು
ಸ್ವರ್ಗವನ್ನೇ (Jannat) ತಂದು
ಅವಳ ಮುಂದಿಡಬೇಕು ಎಂದು ಯೋಚಿಸುತ್ತಾನೆ. ಮೊದಲಿಂದ ಅವನಿಗೆ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ
ಆಸಕ್ತಿ ಇರುವ ಕಾರಣದಿಂದ ಅದೇ ವೃತ್ತಿಯಲ್ಲಿ ಮುಂದುವರೆದು ಸಿಕ್ಕಾಪಟ್ಟೆ ಹಣ ಸಂಪಾದಿಸುತ್ತಾನೆ. One fine day, ಅವನು “ನನ್ನ
ಬಾಲ್ಯ ಎಲ್ಲಾ ಬರೀ ಅದು ತಗೋಬೇಡ, ಇದು ಕೊಡಿಸೋಕಾಗಲ್ಲ, ತುಂಬಾ ರೇಟ್ ಜಾಸ್ತಿ
ಅವೆಲ್ಲಾ ಅಂತ ಕೇಳುತ್ತಲೇ ಬೆಳೆದೆ. ನಾನು ಪಟ್ಟ ಕಷ್ಟ ನಮ್ಮ ಮಕ್ಕಳು ಯಾವತ್ತೂ ಪಡಬಾರದು. ಅವನು
ಏನು ಬೇಕು ಅನ್ನುತ್ತಾನೋ ಅದು ಅವನಿಗೆ ಸಿಗಬೇಕು” ಎಂಬ ತನ್ನ ಮಹದಾಸೆಯನ್ನು
ಅವಳೊಂದಿಗೆ ಹಂಚಿಕೊಳ್ಳುತ್ತಾನೆ. ಮತ್ತು ಅವನ ಆಸೆಯಂತೆ ಹಣವೇನೋ ಸಂಪಾದಿಸುತ್ತಾನೆ. ವಿಪರ್ಯಾಸ
ಏನೆಂದರೆ ಅಷ್ಟೆಲ್ಲಾ ಹಣ ಸಂಪಾದಿಸಿದ ಅವನು ಕೊನೆಯಲ್ಲಿ ಪೊಲೀಸರ ನಡುವಿನ ಒಂದು ಸಿಲ್ಲಿ
confusion ಇಂದ
ಗುಂಡೇಟಿಗೆ ಬಲಿಯಾಗುತ್ತಾನೆ. ಮತ್ತು, ಅವನ ಮಗನ ಜೀವನ ಹೇಗಾಗಬಾರದು ಅಂದುಕೊಂಡಿದ್ದನೋ, ಕೊನೆಯಲ್ಲಿ
ಅದು ಹಾಗೇ ಆಗುತ್ತದೆ.
ಮತ್ತು ಈ ರೀತಿಯಾಗಿ ಜನ್ನತ್ ಚಿತ್ರ ಒಬ್ಬ
ಬೆಟ್ಟಿಂಗ್ ಆಯೋಜಕನ ಕಥೆಯನ್ನು ನಿರೂಪಿಸುತ್ತಲೇ ಬದುಕಲ್ಲಿ ಸಂತಸದಿಂದಿರಲು ದುಡ್ಡು ಮತ್ತು
ಪ್ರೀತಿ ಎರಡರಲ್ಲಿ ಒಂದು ಇರದಿದ್ದರೂ ಹೇಗೆ ಸರಿ ಹೋಗುವುದಿಲ್ಲ ಎಂಬುದನ್ನು ಮಾರ್ಮಿಕವಾಗಿ ಹೇಳುತ್ತದೆ.
“Na
car, Na pyaar” ಎಂದು ಕಾರು ಖರೀದಿಸಿ ಅವಳನ್ನು ಅಡ್ಡ ಹಾಕಿ ಪ್ರಪೋಸ್ ಮಾಡುವ ಆ ದೃಶ್ಯ
ಇಂದಿಗೂ ಹಲವರಿಗೆ ಅಚ್ಚುಮೆಚ್ಚು. ಹಾಗೇ ಸುಮ್ಮನೆ ಯೋಚನೆ ಮಾಡಿ, ಈ
ಮೂರು ದೃಶ್ಯಗಳನ್ನು ಪರಿಗಣಿಸಿ ನೋಡಿ.
ಒಬ್ಬ ಬರೀ ಪ್ರೀತಿಯಿಂದ ಮಂಡಿ ಊರಿ ಪ್ರಪೋಸ್ ಮಾಡುವ
ದೃಶ್ಯ.
ಇನ್ನೊಬ್ಬ ಕಾರ್ ಕೊಂಡು, ಸೈಡ್
ಹಾಕಿ ಪ್ರೀತಿಯಿಲ್ಲದೇ ಹಾಗೇ ಪ್ರಪೋಸ್ ಮಾಡುವ ದೃಶ್ಯ
ಹಾಗೂ ಮೇಲಿರುವ ದೃಶ್ಯ.
ಯಾವುದು ಪ್ರಿಯವಾದುದು ನಿಮಗೆ?
ಈ ಮೂರು ದೃಶ್ಯದೊಳಗೆ?
ನನಿಗೇನೋ ಮೂರನೇ ದೃಶ್ಯ ಇಷ್ಟ, ಕಾರಣ
ಇಂತಿದೆ.
ಈ ಪ್ರಪಂಚದಲ್ಲಿ ಒಟ್ಟು ಎರಡು ಥರ ಜನ ಇದ್ದಾರೆ.
ಒಂದನೇ ವರ್ಗ:
ಒಂದೇ ಒಂದು ಆಸೆ ನಂದು, ಸಾವಿರ
ಕೋಟಿ ಬೇಕು.
ಸಣ್ಣದೊಂದು ಮನೆ ಬೇಕು, ಮೈಸೂರು
ಪ್ಯಾಲೇಸ್ ಸಾಕು
ಎರಡನೇ ವರ್ಗ:
ದೇವ್ರೇನ್ರಾ ಕೊಡಲಣ್ಣ, ಕೊಡದಿದ್ರೆ
ಬುಡಲಣ್ಣ, ನಾವೆಲ್ಲಾ ಅವ್ನಿಗೆ ಬಚ್ಚಾ.
ಅವ್ನ್ ಹಾಕಿದ್ದ್
ತಾಳ್ದಂಗೆ, ಕಣ್ಣು ಮುಚ್ಕೊಂಡು ಹೇಳ್ದಂಗೆ, ಕುಣಿಯಾದೇ
ರತ್ನನ್ ಪರ್ಪಂಚ
ಸಿಂಪಲ್ಲಾಗಿ ಹೇಳಬೇಕು ಅಂದರೆ ಒಬ್ಬ ಎಲ್ಲವೂ
ಬೇಕೆನ್ನುವ 'ನಾನು'. ಇನ್ನೊಬ್ಬ
ಎಲ್ಲವನ್ನೂ ಬಿಟ್ಟು ನಿಂತವ 'ನೀನು'. ಆದರೆ ಪಕ್ಕಾ ಪ್ರ್ಯಾಕ್ಟಿಕಲ್ ಆಗಿ ಯೋಚಿಸಿ ಹೇಳೋದಾದರೆ ದುಡ್ಡು
ಮತ್ತು ಪ್ರೀತಿ ಅಥವಾ ಕುಟುಂಬ ಅಥವಾ ಗೆಳೆಯರು ಒಂದು ಬಗೆಯ ಹಲ್ಲು ಹಾಗೂ ಕಡಲೆ ಇದ್ದಂತೆ. ದುಡ್ಡು
ಇದ್ದು ಮನೆಯವರು ಇಲ್ಲದೆ ಬೆಂಜ಼್ ಕಾರಲ್ಲಿ ಅಳೋದಕ್ಕಿಂತ, ಇಲ್ಲವೇ ಮನೆಯವರು, ಗೆಳೆಯರು, ನೆಂಟರು
ಎಲ್ಲಾ ಬಂದಿರುವ ಸಂಭ್ರಮದ ಗಳಿಗೆಯಲ್ಲಿ ಬದನೆಯಕಾಯಿ 3₹ ರೇಟ್
ಜಾಸ್ತಿ ಆಯ್ತಲ್ಲಾ
ಎಂದು ಕಣ್ಣೀರಿಡುವ ಬಡತನಕ್ಕಿಂತ, ದುಡ್ಡು ಮತ್ತು ಪ್ರೀತಿ ಎರಡರ ಹದವಾದ ಸಮಾಗಮ ಲೈಫನ್ನು
ಚೆಂದಗೊಳಿಸುವುದರಲ್ಲಿ ಸಂಶಯವಿಲ್ಲ.
We all have our own priorities,
some choose love and some prioritize money. I just have one question here, why
not both?
ಮತ್ತೆ ಸಿಗೋಣ