ಮುಂಗಾರು ಮಳೆ,
Baahubali, Rockstar ಇತ್ಯಾದಿ ಚಿತ್ರಗಳ Making ವೀಡಿಯೋಗಳನ್ನು ನಾವೆಲ್ಲರೂ ನೋಡೇ ಇರುತ್ತೇವೆ. ಆ ಚಿತ್ರಗಳು ಅಷ್ಟು ದೊಡ್ಡ ಮಟ್ಟದ ಹಿಟ್ ಆದ
ನಂತರವೇ ಆ ವೀಡಿಯೋಗಳನ್ನು ಬಿಡುಗಡೆ ಮಾಡುತ್ತಾರೆ. ಒಂದು ವೇಳೆ ಥಿಯೇಟರ್ ಗೆ ಬಂದು ಯಾರೂ
ನೋಡದಿದ್ದರೆ,
ಈ ಮೇಕಿಂಗ್ ವೀಡಿಯೋಗಳನ್ನು ಇನ್ನು ಯಾರು ತಾನೆ ನೋಡಿಯಾರು? ಅಲ್ಲಿಗೆ
ಒಂದು ವಿಷಯ ಸ್ಪಷ್ಟ: ಇದೆಲ್ಲಾ ಹೇಗೆ ಶುರುವಾಯಿತು? What made
you to start Microsoft? How I Met Your Mother ಎಂಬ
ಕಥೆಗಳು ಯಶಸ್ಸಿನ ನಂತರ ಮಾತ್ರ ಮಾನ್ಯತೆ ಪಡೆದುಕೊಳ್ಳುತ್ತವೆ. ಅದೇ ಗುಂಗಿನಲ್ಲಿ, ಈ
ಬ್ಲಾಗ್ ಹೇಗೆ ಶುರುವಾಯಿತು ಅಂತ ಹೇಳೋದಾದರೆ...,
ಗುಂಡ: ಹೇಯ್, ನಿಲ್ಸು, ನಿಲ್ಸು, ಒಂದು
ನಿಮಿಷ.
ಇರೋದೇ ಮೂರು ಮತ್ತೊಬ್ಬ ಓದುಗರು.
ಅದರಲ್ಲೂ ನೀನು ತಲೆ ತಿಂತೀಯಾ ಅಂತ ತಲೆ ಉಳಿಸಿಕೊಳ್ಳಲು ತಲೆ ಇಲ್ಲದ
ನಿನ್ನಂಥವನ ಅಂಕಣಗಳನ್ನು ಓದೋದು ಯಾರಿಗಾದ್ರೂ ಗೊತ್ತಾದ್ರೆ, ತಲೆ
ಎತ್ಕೊಂಡು ಓಡಾಡೋಕಾಗಲ್ಲ ಅಂತ ಎಲ್ಲರೂ ತಲೆ ಮರೆಸಿಕೊಂಡು ಓದುತ್ತಿದ್ದಾರೆ, .
ಇಂಥ ಟೈಮಲ್ಲಿ, ಈ
ಬ್ಲಾಗ್ ಹಿಟ್ ಆಗಿದೆ ಅನ್ನೋ ಐಡಿಯಾ ಯಾವ್ ತರ್ಲೆ ನನ್ಮಗ ತಮಿಗೆ ಕೊಟ್ಟ ಅಂತ ಸ್ವಲ್ಪ ಹೇಳ್ತೀರಾ?
ನಾನು: ಥೋ ಇರಪ್ಪ ಮೂಕ ಪ್ರೇಕ್ಷಕ, ಸಾರಿ
ಮೂಕ ಓದುಗ. ಕೇಳೋರು ಯಾರೂ ಇಲ್ಲ ಅಂತ ಹೇಳದೇ ಇರೋ ಜಾಯಮಾನ ನಮ್ಮದಲ್ಲ. ಹಂಗಿದ್ದಿದ್ರೆ 'ಅಪೂರ್ಣ
ಕನಸು'
ಎಂಬ ಪ್ರೇಕ್ಷಕರಿಲ್ಲದ ಈ ಚಿತ್ರವನ್ನು ಇಷ್ಟು ದಿನ ಓಡಿಸೋಕೆ ಆಗ್ತಾ
ಇರಲಿಲ್ಲ. ಜಾಸ್ತಿ disturb ಮಾಡಬೇಡ, ಬೇಗ
ಹೋಗು ಇಲ್ಲಿಂದ.
ಚಿತ್ರ ಕೃಪೆ: www.pauloarruda.com
ಆ, ಎಲ್ಲಿದ್ದೆ? ಹಾ! ಈ
ಅಪೂರ್ಣ ಕನಸು ಬ್ಲಾಗ್ ಶುರುವಾಗಿದ್ದು ಒಂದು ಖಾಸಗಿ ಡೈರಿಯ ಹಾಗೆ. ಮನಸ್ಸಿಗೆ ಅನಿಸಿದ
ಎಲ್ಲವನ್ನು ಒಂದು ಕಡೆ ದಾಖಲಿಸಿ, ಚೆಂದ
ಮಾಡಿ ಬರೆಯೋಣ ಅನ್ನೋಕೆ, ನಮ್ ಬುಡ್ಡನ ಹಾಗೆ ಹೂ
ಜೋಡಿಸಿದಷ್ಟು ಚೆನ್ನಾಗಿ ನನ್ನ ಕೈಬರಹವಿಲ್ಲ. ಏನಾದ್ರೂ ಮಾಡಬೇಕಲ್ಲಾ ಅಂತ ಯೋಚಿಸುವಾಗ 'ನುಡಿ' ತಂತ್ರಾಂಶ
ನೆನಪಿಗೆ ಬಂತು. ಹಾಗೆ ಶುರುವಾದ ಖಾಸಗಿ ಡೈರಿಯ ಪಯಣ ಕಾಲಕ್ರಮೇಣ public blog ಆಗಿದೆ.
ಈ ಬ್ಲಾಗ್ ನಲ್ಲಿ ಬರೆದಿರುವ ಎಲ್ಲಾ ಅಂಕಣಗಳನ್ನು ನನ್ನ ವೈಯಕ್ತಿಕ ಖುಷಿಗಾಗಿಯೇ ಬರೆದಿದ್ದರೂ
ನಮ್ ಹುಡುಗರು ಯಾವಾಗಲಾದರೂ ಓದಿ 'ಚೆನ್ನಾಗಿದೆ
ಮಗಾ'
ಅಂತ ಮೆಸೇಜ್ ಮಾಡಿದರೆ ಖುಷಿಗೆ ಒಂದು ಗಂಟೆ ಹೆಚ್ಚು ನಿದ್ದೆ ಬಂದರೂ
ಬರಬಹುದು. (ಎಲ್ಲಿ ಯೋಚನೆಗಳು ಇರುವುದಿಲ್ಲವೋ ಅಲ್ಲಿ ಖುಷಿ ಇರುತ್ತಾಳೆ. 'ಯೋಚನೆ ಮಾಡಿ ಖುಷಿ ಕಳೆದುಕೊಳ್ಳಬೇಡಿ' ಅಂತ will ನಲ್ಲಿ ಬರೆದಿರೋದು ನೆನಪಿದ್ರೆ ಸರಿ, ಇಲ್ಲಾಂದ್ರೆ irrelevant, ಬಿಟ್ಟಾಕಿ.
Coming to topic, ದೇವರು
ನಮ್ಮ ನಡುವೆ ಅನ್ನ, ಉದ್ಯೋಗ
ಮತ್ತು ಸಂಗೀತದ ರೂಪದಲ್ಲಿ ನೆಲೆಸಿದ್ದಾರೆ ಎಂಬುದು ನನ್ನ ನಂಬಿಕೆ.
ಅನ್ನ ಈ ದಿನದ ಹೊಟ್ಟೆ ತುಂಬಿಸುತ್ತದೆ.
ಉದ್ಯೋಗ ಜೀವಮಾನ ಮುಗಿಯುವ ತನಕ ಅನ್ನಕ್ಕೆ ಒಂದು ದಾರಿ ಮಾಡಿಕೊಡುತ್ತದೆ.
ಮತ್ತು ಸಂಗೀತ ಈ black and white ಬದುಕಿಗೆ
ಒಂದೆರಡು ಬಣ್ಣಗಳನ್ನು ಸಿಂಪಡಿಸುತ್ತದೆ.
ಖುಷಿಯಾಯ್ತಾ? ಡಂಕಣಕ
ಅಂತ ಉಗ್ರಂ ಹಾಡಿಗೆ ಕುಣಿಯಬಹುದು.
ಬೇಜಾರಾಯ್ತಾ? ಎಲ್ಲಿಗೆ ಪಯಣ? ಯಾವುದೋ ದಾರಿ ಎಂದು ಅಣ್ಣಾವ್ರ ಥರ ಮರುಗಬಹುದು.
ಬೇಜಾರಾಯ್ತಾ? ಎಲ್ಲಿಗೆ ಪಯಣ? ಯಾವುದೋ ದಾರಿ ಎಂದು ಅಣ್ಣಾವ್ರ ಥರ ಮರುಗಬಹುದು.
ಬರೀ ನೋವು, ನಲಿವು
ಅಷ್ಟೇ ಅಲ್ಲ,
ಉತ್ಸಾಹ, ಹಬ್ಬ, ಬಿಡುಗಡೆ, ಶೃಂಗಾರ, ಸಡಗರ, ಭಕ್ತಿ, ಪ್ರಣಯ, ಧನ್ಯತಾ
ಭಾವ,
ಪ್ರೀತಿ, ನಿರ್ಲಿಪ್ತತೆ, ನಶೆ, ಕನವರಿಕೆ, ಹೀಗೆ
ಸಂಗೀತದಲ್ಲಿ ವ್ಯಕ್ತವಾಗದ ಭಾವವೇ ಇಲ್ಲ ಎನ್ನಬಹುದು. ಬರೀ ಸಿನಿಮಾ ಹಾಡು ಕೇಳಿರುವ ನನಗೆ
ಶಾಸ್ತ್ರೀಯ ಸಂಗೀತ / ಕರ್ನಾಟಕ ಸಂಗೀತ ಗಾಯಕರು ಯಾಕೆ ಹಾಡುವಾಗ ಕಣ್ಣು ಮುಚ್ಚಿಕೊಳ್ಳುತ್ತಾರೆ
ಎಂಬುದರ ಬಗ್ಗೆ ಈಗೀಗ ಸ್ವಲ್ಪ ಮಟ್ಟಿನ ಅಂದಾಜಾಗುತ್ತಿದೆ. ಹಾಡುವಾಗ, ಸಂಗಾತಿಯನ್ನು
ಮುತ್ತಿಡುವಾಗ,
ಗೆಳೆಯರನ್ನು ತಬ್ಬಿಕೊಂಡಾಗ ಉಂಟಾಗುವ ಭಾವನೆಗಳು ಕಾಣದ ಒಂದು
ಜಗತ್ತಿಗೆ ಕೊಂಡೊಯ್ಯುತ್ತವೆ ಎಂದು ಎಲ್ಲೋ ಒಮ್ಮೆ ಓದಿದ್ದೆ. ಆದ್ದರಿಂದಲೇ ಇಂಥ ಸಂದರ್ಭಗಳಲ್ಲಿ, ಭಾವುಕವಾಗಿ
ಕಣ್ಣುಗಳು ತಾನಾಗಿಯೇ ಮುಚ್ಚಿಕೊಳ್ಳುತ್ತವೆ ಎಂಬುದು ಸತ್ಯವೇ ಇರಬೇಕು.
ಸಾಂದರ್ಭಿಕ ಚಿತ್ರ: Rockstar
Now, really coming to topic, ಮುಂಗಾರು
ಮಳೆ 2
ಚಿತ್ರದ ಬಗ್ಗೆ ನಮ್ ಸಿನಿಮಾಸಕ್ತ ಹುಡುಗರು ತುಂಬಾ ಉತ್ಸುಕರಾಗಿದ್ದಾರೆ. ಈಗಾಗಲೇ ಯಾಕೋ ಲವ್
ಸ್ಟೋರಿಗಳು ಮೊದಲಿನಷ್ಟು ರುಚಿಸುತ್ತಿಲ್ಲ. ಹಾಗಾಗಿ, ಬಂದಾಗ
ಬರಲಿ,
ನಿಧಾನವಾಗಿ ನೋಡಿದರಾಯಿತು ಅಂತ ನಾನೂ ಸುಮ್ಮನಾಗಿದ್ದೆ. ಆದರೂ
ಮುಂಗಾರು ಮಳೆ 2
ಹಾಡುಗಳು ಹೇಗಿರಬಹುದು ಎಂಬ ಸಣ್ಣ ಕುತೂಹಲ ಬೇರೆ ಇತ್ತು. ಯಾವುದಕ್ಕೂ ಇರಲಿ ಅಂತ download
ಮಾಡಿ ಇಟ್ಟಿದ್ದೆ, ಕೇಳಲು
ಸಮಯ ಸಿಕ್ಕಿರಲಿಲ್ಲ. ಕೇಳೋಣ ಎಂದು ಕಡತ ತೆರೆದೆ. ಅದ್ಯಾಕೋ
ಗೊತ್ತಿಲ್ಲ,
ಅಷ್ಟು ಹಾಡುಗಳಲ್ಲಿ ಮೊದಲು ಶ್ರೇಯಾ ಘೋಶಾಲ್ ಗಾಯನದ 'ಕನಸಲೂ
ನೂರು ಬಾರಿ'
ಹಾಡನ್ನೇ ಆಯ್ದುಕೊಂಡೆ. ಮೊದಲೇ ನನಗೆ ಕನಸುಗಳ ಬಗ್ಗೆ obsession
ಜಾಸ್ತಿ. ಕನಸುಗಾರ ರವಿಚಂದ್ರನ್, ಕನಸಿನೊಳಗೆ
ಕನಸು ಕಾಣಬಹುದು ಎಂದು ತೋರಿಸಿ ಕೊಟ್ಟ Christopher Nolan, ಕನಸು
ಯಾವುದು,
ವಾಸ್ತವ ಯಾವುದು ಅಂತ confuse ಮಾಡಿದ
ಉಪ್ಪಿ ಚಿತ್ರಗಳು ನನಗೆ ಯಾಕೆ ವಿಪರೀತ ಇಷ್ಟವಾಗುತ್ತವೆ ಅನ್ನೊದಕ್ಕೆ ಕಾರಣಗಳನ್ನು
ಹುಡುಕುವುದನ್ನು ಎಂದೋ ಬಿಟ್ಟಾಯಿತು. ಇಂತಿಪ್ಪ ಸಂದರ್ಭದಲ್ಲಿ, ಕಾರಣ
ಗೊತ್ತಿಲ್ಲ,
ಕನಸಲಿ ನೂರು ಬಾರಿ ಹಾಡು ತುಂಬಾನೇ ಇಷ್ಟವಾಗಿದೆ.
ಈ ಹಾಡು ಎಷ್ಟು ಇಷ್ಟ ಆಗಿದೆ ಅಂದರೆ, ಇದೇ
ಹಾಡನ್ನು ರಿಪೀಟ್ ರಿಪೀಟ್ ಮೋಡಲ್ಲಿ ಕೇಳಲು ಶುರುವಾಗಿ ಇಂದು ಮೂರನೇ ದಿನ.
ಈ ಹಾಡು ಎಷ್ಟು ಇಷ್ಟ ಆಗಿದೆ ಅಂದರೆ, ಮುಂಗಾರು
ಮಳೆ 2
ಚಿತ್ರದ ಬೇರೆ ಹಾಡುಗಳನ್ನು ಕ್ಲಿಕ್ಕಿಸಲೂ ಕೂಡ ಮನಸ್ಸಾಗುತ್ತಿಲ್ಲ.
ಈ ಹಾಡು ಎಷ್ಟು ಇಷ್ಟ ಆಗಿದೆ ಅಂದರೆ, ಈ
ಹಾಡಿನ ಸಾಹಿತ್ಯವನ್ನು ಬರೆದುಕೊಂಡು, ಗೋಡೆಯ
ಮೇಲೆ ಅಂಟಿಸಿ ಹಾಗೇ ನೋಡುತ್ತಾ ಕುಳಿತು ಬಿಡೋಣ ಎನಿಸುವಷ್ಟು.
ಇಷ್ಟು ಯೋಚನೆ ಮಾಡಿದ ತಕ್ಷಣ, ನಾನು
ವೋಡಾಫೋನ್ ಗ್ರಾಹಕನಾಗಿದ್ದರೂ ಥಟ್ ಅಂತ ಒಂದು ಐಡಿಯಾ ಬಂದು ಬಿಟ್ಟಿತು; ಈ
ಹಾಡನ್ನು ಯಾಕೆ 'ನನ್ನ
ಮನದ ಗೋಡೆಯ ಅನಾವರಣ' ಎಂದು ಅಡಿಬರಹ
ಹಾಕಿಕೊಂಡಿರುವ ಬ್ಲಾಗ್ ಗೆ ಯಾಕೆ ಸೇರಿಸಬಾರದು ಅಂತ?! ಅದರ
ಫಲಿತಾಂಶವೇ ಈ ಅಂಕಣ. ಎಷ್ಟೋ ಹಾಡುಗಳು ಇಂದು ಇಷ್ಟವಾಗುತ್ತವೆ, ನಾಳೆ
ಬೋರಾಗುತ್ತವೆ. ಆದರೆ ಸ್ವಲ್ಪ ದಿನ ಬಿಟ್ಟು ಕೇಳಿದಾಗ ಕೆಲವೇ ಹಾಡುಗಳು ಮಾತ್ರ ಮತ್ತೆ
ಇಷ್ಟವಾಗುತ್ತವೆ. ಈ ಹಾಡು ಕೂಡ ಆ ಪಟ್ಟಿಗೆ ಸೇರಲಿ ಎಂದು ಆಶಿಸುತ್ತಾ, ಆ
ಹಾಡಿನ ಸಾಹಿತ್ಯವನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. ಕೆಳಗಿನ YouTube
ಕೊಂಡಿಯನ್ನು ಕ್ಲಿಕ್ಕಿಸಿ, ಈ
ಹಾಡನ್ನು ಕೇಳಿ. ಇಷ್ಟವಾದರೆ, ಅರ್ಜುನ್
ಜನ್ಯ,
ಶ್ರೇಯಾ, ಶಶಾಂಕ್
ಖುಷ್;
ಏನೂ ಇಲ್ಲದ ಈ ಅಂಕಣ ಇಷ್ಟವಾದರೆ ಮೆಸೇಜ್ ಮಾಡಿ, ಆಗ
ನಾನು ಖುಷ್.
ಚಿತ್ರ: ಮುಂಗಾರು ಮಳೆ 2
ಹಾಡು: ಕನಸಲೂ ನೂರು ಬಾರಿ
ಸಂಗೀತ: ಅರ್ಜುನ್ ಜನ್ಯ
ಗಾಯನ: ಶ್ರೇಯಾ ಘೋಶಾಲ್
ರಚನೆ: ಶಶಾಂಕ್
ಕನಸಲೂ ನೂರು ಬಾರಿ,
ಕರೆಯುವೆ ನಿನ್ನೇ ನಾನು,
ಅಭ್ಯಾಸವಾಗಿ ಹೋದೆ ನೀ, ಜೀವಕೆ
sssss
ಒಬ್ಬಳೇ ಕೂರಳಾದೆ,
ಯಾರನೂ ಸೇರಳಾದೆ,
ನೀ ಬೇಕು ಎಲ್ಲ ಘಳಿಗೆಯೂ,
ಸಿಗಬೇಕು ಪೂರ್ತಿ ಸಲಿಗೆಯು,
ಆಸೆಬುರುಕಿ... ತುಂಬಾ ನಾನು... ಸಹಿಸು ನೀನು...
ಕನಸಲೂ ನೂರು ಬಾರಿ,
ಕರೆಯುವೆ ನಿನ್ನೇ ನಾನು,
ಅಭ್ಯಾಸವಾಗಿ ಹೋದೆ ನೀ, ಜೀವಕೆ
sssss
||
ಈ ಕೊರಳಿಗೆ ನಿನ್ನ,
ಉಸಿರಿನ ಬಯಕೆಯು;
ಮಂಗುರುಳಿಗೆ ನಿನ್ನ,
ಬೆರಳಿನ ಹುಡುಕಾಟವು;
ನೆಡೆವೆನು ಹಿಂಬಾಲಿಸಿ,
ನೆರಳನು ನಾ ಸೋಲಿಸಿ,
ಅತಿಯಾದ ಪ್ರೀತಿ ಬೇಡುವೆ ssss
ಬೆಂಬಿಡದೆ ನಿನ್ನ ಕಾಡುವೆ ssss
ಹುಚ್ಚು ಹುಡುಗಿ... ತುಂಬಾ ನಾನು... ಸಹಿಸು ನೀನು ssss
||
ನೀ ಪೀಡಿಸು ನನ್ನ,
ಪ್ರೀತಿಸೋ ವಿಷಯದಿ;
ಆಲಂಗಿಸು ಬಿಡದೆ,
ವಿಷಮದ ಪ್ರತಿ ನಿಮಿಷದಿ;
ಉಳಿದರೂ ನಿನ್ನೊಂದಿಗೆ,
ಅಳಿದರೂ ನಿನ್ನ್ sss ಒಂದಿಗೆ,
ಇರಬೇಕು ನಾನು ಮಾತ್ರವೇ,
ನಿನ್ನಲಿ ಎಲ್ಲ ಕ್ಷಣದಲೂ,
ಹೊಟ್ಟೆ ಕಿಚ್ಚು... ತುಂಬಾ ನನಗೆ... ಸಹಿಸು ನೀನು... ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ