ಸ್ಟೇಜ್ ಹತ್ತಿ, ಮೈಕ್ ಕೈಯಲ್ಲಿ ಹಿಡಿದು, ಮಾತು ಶುರು ಮಾಡುವ ಎರಡು ಸೆಕೆಂಡುಗಳ ಗ್ಯಾಪಲ್ಲಿ ಹೃದಯ ಢವ ಢವ ಎಂದು ಹೊಡೆದುಕೊಳ್ಳಲು ಶುರುವಾಗಿ ಮಾತು ತೋಚದಂತಾಗುತ್ತದೆ. ಇದನ್ನೇ stage fear ಎನ್ನುತ್ತಾರೆ. ಆಗಿದ್ದು ಆಗಲಿ, ಆಮೇಲಿಂದ್ ಆಮೇಲೆ ಅಂತ ಚಿಕ್ಕದಾಗಿ ಧೈರ್ಯ ಮಾಡಿದರೆ ಮುಂದಿನದ್ದೆಲ್ಲಾ ಸರಾಗ. ಎಗ್ಸಾಮ್ ಸೀಸನ್ ನಲ್ಲೂ ಅಷ್ಟೇ; ಇತಿಹಾಸದ ವಿಷಯದಲ್ಲಿ ಇಸವಿಗಳು ನೆನಪಿರಲ್ಲ, ಗಣಿತದಲ್ಲಿ ತಪ್ಪು ಉತ್ತರ ನನ್ನನ್ನೇ ಹುಡುಕಿಕೊಂಡು ಬರುತ್ತೆ, ವಿಜ್ಞಾನಂ ತಳ ಬುಡ ತಿಳಿಯದಂ, ಇಂತಿಪ್ಪ ನಮಗೆ ಎಗ್ಸಾಮ್ ಬೇಕಾ ಅಂತ ಎಗ್ಸಾಮ್ ಸೀಸನ್ ನಲ್ಲಿ ಅನಿಸೋದು ಸಾಮಾನ್ಯ. ಇದನ್ನೇ exam fear ಎನ್ನುತ್ತಾರೆ. ಎಷ್ಟೇ ಓದಿದ್ದರೂ, ಎಲ್ಲಾ ಗೊತ್ತಿದ್ದರೂ, ಮತ್ತೆ ಮತ್ತೆ ಮರೆತು ಹೋಯ್ತು ಎಂಬ ಭಯ ಕಾಡುತ್ತೆ, ಅದು ಕೂಡ ಸಾಮಾನ್ಯ.
I fear not the man who practised 10,000 kicks once, but I fear the man who has practiced one kick 10,000 times ಎಂದು ಬ್ರೂಸ್ ಲೀ ಹೇಳಿದ್ದಾರೆ.
ಸಿಲಬಸ್ ಅಂದ ಮೇಲೆ ಅರ್ಥವಾಗಿದ್ದು, ಅರ್ಥವಾಗದ್ದು, ಎಲ್ಲಾ ಇದ್ದೇ ಇರುತ್ತೆ. ಯಾವುದು ಮುಖ್ಯ ಎಂದು ಗುರುತು ಮಾಡಿಕೊಂಡು ಅದನ್ನೇ ಚೆನ್ನಾಗಿ ಅಭ್ಯಾಸ ಮಾಡಿ. ಎಲ್ಲಾ ಪಾಠ ಚೂರು ಚೂರು ಓದಿಕೊಂಡು ಹೋಗಿ ಕೊನೆಗೆ ಏನೂ ಬರದ ಹಾಗೆ ಆಗೋದಕ್ಕಿಂತ, plan, practice and perform ಎಂಬ ಮೂರು ವಿಷಯಗಳ ಕಡೆ ಕೇಂದ್ರೀಕರಿಸಿಕೊಂಡು ಎಗ್ಸಾಮ್ ಗೆ ತಯಾರಿ ನೆಡೆಸಿ. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಮೇಲೆ ನಿಮಗೆ ನಂಬಿಕೆಯಿರಲಿ, ಆಮೇಲಿಂದ್ ಆಮೇಲೆ!
All the best!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ