ಒಂದು ದಿನ ನಾನು ಆಫೀಸ್ ಕೆಲಸ ಮುಗಿಸಿಕೊಂಡು ಮನೆಗೆ ಆಟೋದಲ್ಲಿ ಹೋಗುತ್ತಿದ್ದೆ. ಬನಶಂಕರಿ ಇಂದ ಮುಂದೆ ಎಲ್ಲೋ ಆಟೋ ಸಾಗುತ್ತಿತ್ತು. ನನ್ನ ಪಾಡಿಗೆ ನಾನು ಕಿವಿಗೆ earphones ಏರಿಸಿಕೊಂಡು ಕರಾಬು ಬಾಸು ಕರಾಬು ಅಂತ ಹಾಡು ಕೇಳ್ಕೋಂಡು ಫುಲ್ ಗಮ್ಮತ್ತಿನ ಮೂಡಲ್ಲಿ ಇದ್ದೆ. ದಯಾನಂದ್ ಸಾಗರ್ ಕಾಲೇಜ್ ಸಮೀಪ ಬರುತ್ತಿದ್ದ ಹಾಗೆ ಆಟೋದಲ್ಲಿ ಪೆಟ್ರೋಲ್ ಖಾಲಿಯಾಗಿ ಗಾಡಿ ಧಡಕ್ಕನೆ ನಿಂತಿತು. ಆಗ ಆಟೋ ಡ್ರೈವರ್, “ಗ್ಯಾಸ್ ಮೋಡ್ ಗೆ ಸ್ವಿಚ್ ಮಾಡಿಕೊಳ್ತೀನಿ. ಎರಡೇ ನಿಮಿಷ ಸಾರ್, ಹೊರಟು ಬಿಡೋಣ” ಅಂದರು. “ಇರಲಿ ಬ್ರದರ್ ಇಲ್ಲೇ ಪಕ್ಕ ಬಿಡಿ, ನೆಡೆದುಕೊಂಡೇ ಹೋಗ್ತೀನಿ” ಅಂತ ಬಿಲ್ ಕೊಟ್ಟು ಹಾಗೇ ಹಾಡು ಕೇಳಿಕೊಂಡು ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದೆ. ನೋಡಿದರೆ ದಾರಿಯಲ್ಲಿ ಸುಮಾರು 8-10 ಬೀದಿ ನಾಯಿಗಳ ಗ್ಯಾಂಗ್ ವಾರ್ ನೆಡೆಯುತ್ತಿತ್ತು. ಅರೇ ಇಸ್ಕಿ ಎಲ್ಲಿಗ್ ಬಂದು ತಗಲಾಕ್ಕಂಡೆ ಶಿವಾ ಅಂತ ಹಂಗೇ ಧೈರ್ಯ ಮಾಡಿ ಸೈಡಲ್ಲೇ ನೆಡೆದುಕೊಂಡು ಹೋಗೋಣ ಅಂತ ಮೆಲ್ಲಗೆ ಕಳ್ಳಬೆಕ್ಕಿನ ಥರ ಸೈಡಲ್ಲೇ ಹೋಗುತ್ತಿದ್ದೆ. ಅದರಲ್ಲಿ ಒಂದು ನಾಯಿ ಬೊಗಳುತ್ತಾ ಜ಼ುಗ್ ಅಂತ ನನ್ನ ಕಡೆ ಬಂದು ಬಿಡ್ತು. ಎಸ್ಕೇಪ್ ಮಾಮು ಅಂತ ನಾನು ಅಲ್ಲೇ ಪಕ್ಕ ರೈಟ್ ಕ್ರಾಸಲ್ಲಿ ಕಟ್ ಆಗಿ, ಹೋದರೆ ಹೋಗಲಿ ಬಿಡು, ಇವತ್ತು ಬೇರೆ ದಾರಿಯಲ್ಲಿ ಮನೆ ಹೋಗೋಣ ಅಂತ ಈ ಕಡೆ ಬಂದೆ. ವಿನಾಯಕ ಡ್ರೈವಿಂಗ್ ಸ್ಕೂಲ್ ದಾಟಿ, ಆಹಾರ್ ವಿಲ್ಲಾ ಇಂದ ಮುಂದೆ ಬಂದು ಕಲ್ಲೇಶ್ವರ ಜ಼ೆರಾಕ್ಸ್ ಅಂಗಡಿಯ ಹತ್ತಿರ ನಿಧಾನವಾಗಿ ಬರುತ್ತಿದ್ದೆ. ಅಲ್ಲಿ ಒಬ್ಬ ವ್ಯಕ್ತಿ ಬುಕ್ ಬೈಂಡಿಂಗ್ ಮಾಡಿಸಿದ ಪುಸ್ತಕ ತಗೊಂಡು ಹೊರಡುತ್ತಿದ್ದಾಗ ಪರ್ಸ್ ಗೆ ದುಡ್ಡು ತುಂಬಿಸಿಕೊಂಡು ಹೋಗುವ ಆತುರದಲ್ಲಿ ₹500 ಕೆಳಗೆ ಬಿದ್ದಿತು. ಅಚಾನಕ್ ಆಗಿ ನಾನೂ ಏನು ಯೋಚನೆ ಮಾಡುತ್ತಿದ್ನೋ ಗೊತ್ತಿಲ್ಲ, ಥಟ್ ಅಂದ ಬಂದು ಆ ₹500 ನೋಟ್ ಮೇಲೆ ನಿಂತುಕೊಂಡೆ. ಅಂಗಡಿಯವನು, “ಹೇಳಿ ಸಾರ್” ಅಂದರು. ಅರೆರೆರೇ, ಯಾಕೆ ಬಂದೆ ಅಂದರೆ ಏನ್ ಹೇಳೋದು ಮೈಂಡ್ ಓಡ್ತಾನೇ ಇಲ್ವಲ್ಲಾ ಅಂತ ತಲೆ ಬಿಸಿ ಮಾಡಿಕೊಂಡಿರುವಾಗ ಶರ್ಟ್ ಮುಂದೆ ನೇತಾಡುತ್ತಿದ್ದ ಐಡಿ ಕಾರ್ಡ್ ಕಾಣಿಸಿತು. “ಐಡಿ ಕಾರ್ಡ್ 5 ಕಾಪಿ, ಡ್ರೈವಿಂಗ್ ಲೈಸನ್ಸ್ 5 ಕಾಪಿ” ಅಂತ ಹೇಳಿ ನಿಂತುಕೊಂಡೆ. ಅವರು ಅಂಗಡಿ ಹಿಂಭಾಗದ ಮೆಷಿನ್ ಹತ್ತಿರ ಬ್ಯುಸಿಯಾದರು. ಸುತ್ತಾ ಮುತ್ತಾ ಯಾರೂ ಇಲ್ಲ, ನಾನೂ ನೀನು ಇಲ್ಲಿ ಎಲ್ಲಾ, ಬಾರೇ ಸನಿಹಕೆ ಅಂತ ಯಾರಿಗೂ ಕಾಣದ ಹಾಗೆ ಸುಯ್ ಟಪಕ್ ಅಂತ ₹500 ನೋಟ್ ಪ್ಯಾಂಟ್ ಗ್ ಒರೆಸಿಕೊಂಡು ಪರ್ಸ್ ಗೆ ಹಾಕಿಕೊಂಡೆ. ಅಂಗಡಿಯವರು ಜ಼ೆರಾಕ್ಸ್ ಮುಗಿಸಿಕೊಂಡು ಬಂದರು. ಒರಿಜಿನಲ್ ಮತ್ತು ಜ಼ೆರಾಕ್ಸ್ ಡಾಕ್ಯುಮೆಂಟ್ ತಗೊಂಡು ಬಿಲ್ ಕೊಟ್ಟು ಮನೆಗೆ ಬಂದೆ. ಅದಾದ ಮೇಲೆ ಆ ₹500 ಇಂದ ನಾನೇನು ಪಾರ್ಟಿ ಮಾಡಿಲ್ಲ. ಕರೆಂಟ್ ಬಿಲ್ಲು, ಆಟೋ, ಬೈಕ್ ರಿಪೇರಿ ಅದು ಇದು ಅಂತ ಎಲ್ಲಿ ಖರ್ಚು ಆಯ್ತೋ ನಾನೂ ಗಮನ ಹರಿಸಲಿಲ್ಲ.
ಎಷ್ಟೋ ಸಲ ಆಟೋದಲ್ಲಿ ಜನ ಮೊಬೈಲ್, ಪರ್ಸ್, ಲ್ಯಾಪ್ಟಾಪ್ ಇತ್ಯಾದಿ ವಸ್ತುಗಳನ್ನು ಮರೆತು ಬಿಟ್ಟು ಹೋಗಿರುತ್ತಾರೆ. ಅದನ್ನು ಆಟೋ ಡ್ರೈವರ್ ತಂದು ಅವರ ಮನೆಗೆ ಹಿಂದಿರುಗಿಸಿದ ಶ್ಲಾಘನೀಯ ಘಟನೆಗಳು ಆಗೊಮ್ಮೆ ಈಗೊಮ್ಮೆ Instagram, facebook ನಲ್ಲಿ ನೋಡಿರುತ್ತೇವೆ ಬಿಡಿ. ಅದೇ context ನಲ್ಲಿ ಕೆಲವರು ಆಟೋ ಡ್ರೈವರ್, ಕೂಲಿ, ಬಸ್ ಕಂಡಕ್ಟರ್ ಇತ್ಯಾದಿ ವೇಷದಲ್ಲಿ ಜನನಿಬಿಡ ಪ್ರದೇಶದಲ್ಲಿ ಯಾಮಾರಿಸಿ ನಮ್ಮ ಅಮೂಲ್ಯ ವಸ್ತುಗಳನ್ನು ಕದಿಯುವ ಸುದ್ದಿಯೂ ಗೊತ್ತಿದೆ. ದುರಾದೃಷ್ಟವಶಾತ್ ಒಮ್ಮೊಮ್ಮೆ ಆ ಅಹಿತಕರ ಘಟನೆಗಳು ನಮಗೇ ಆಗಿರುತ್ತವೆ. ಆಗ ಎಷ್ಟೋ ದಿನ ಊಟ, ನಿದ್ರೆ ಬೇಡವೆನಿಸಿ ಚಿಂತೆಯಲ್ಲೇ ಗೊತ್ತಿಲ್ಲದೆ ನಿದ್ದೆಗೆ ಜಾರಿರುತ್ತೇವೆ. ಉಪೇಂದ್ರ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಕನ್ನಡಿ ಮುಂದೆ ನೆಡೆಯುವ ಉಪ್ಪಿ monologue ನೆನಪಾಗುತ್ತಿದೆ. “ಪಕ್ಕದ ಮನೇಲಿ ಕಳ್ಳತನ ಆಗಲಿ, ನಿನಿಗೇನೂ ಆಗಲ್ಲ. ಅದೇ ನಿನ್ನ ದುಡ್ಡು, ₹50, after all ₹50 ಕಳೆದುಕೊಂಡರೆ, ಅಯ್ಯೋ ದುಡ್ಡು, ಅಯ್ಯೋ ನನ್ನ ದುಡ್ಡು ಅಂತ ಅಳ್ತೀಯಾ” ಎಂಬ
philosophical ಸಂಭಾಷಣೆ ಇದೆ. In a way, ಭಗವದ್ಗೀತೆಯಲ್ಲಿ ಹೇಳಿದ ಕಳೆದುಕೊಳ್ಳಲು ನಿನ್ನದೆಂಬುದೂ ಏನೂ ಇಲ್ಲ. ನಿನ್ನ ಬಳಿಯಲ್ಲಿ ಇರುವುದೆಲ್ಲಾ ನೀನು ಇಲ್ಲಿಂದಲೇ ಪಡೆದಿರುವೆ ಮತ್ತು ಅದನ್ನು ಇಲ್ಲಿಯೇ ಕಳೆದುಕೊಳ್ಳುವೆ ಎಂದು ಹೇಳಲಾಗಿದೆ. Let's not dive that deep into philosophical ocean, we are just 30 yet.
As they say, 30 is the new 20! No, they won't? OK ಬೇಡ ಬಿಡಿ. Coming back to topic, ಕಳ್ಳತನ ಮಾಡೋದು ತಪ್ಪು, ಅದನ್ನು ಮಾಡ್ಕೊಂಡು ಹೋದರೆ ಒಂದು ಎರಡು ಮೂರು ನಾಲ್ಕು ಆಮೇಲ್ ಇನ್ನೇನು ಅಂತ ಕಂಬಿ ಎಣಿಸುತ್ತಾ ಇರಬೇಕಾಗುತ್ತೆ. ಆದರೆ ಏನ್ ಮಗಾ ಬಾಯಲ್ಲಿ ಲಡ್ಡು ಬಿತ್ತಾ ಎಂಬಂತೆ ಸಿಕ್ಕಿರೋ ಸೋಂಪಾ ಪುಡಿನಾ ಯಾರ್ ತಾನೆ ನನಗೆ ಬೇಡ ಅಂತ ಇನ್ನೊಬ್ಬರಿಗೆ ಕೊಡುತ್ತಾರೆ? Mostly ಇಬ್ಬರು ಕೊಡಬಹುದು, ಒಂದು Jeff Bezos ಯಾಕಂದ್ರೆ ಅವರಿಗೆ ಸೋಂಪಾ ಪುಡಿ ಎಲ್ಲಾ ತಿಂದು ಅಭ್ಯಾಸ ಇಲ್ಲ, ಇನ್ನೊಂದು ನಮ್ ಶಿವ ಎಮ್ ರೆಡ್ಡಿ, ಅವನಿಗೆ ಸ್ವೀಟ್ ಎಲ್ಲಾ ಆಗಿ ಬರಲ್ಲ. Jokes aside, you got the point right? Only two
people can reject wealth, one who has plenty of it, and one who don't want any
of it. ನಾವು ಒಳ್ಳೆಯವರಾಗಿರಬಹುದು. ಆದರೆ ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತೆ ಎಂಬ ಆದರ್ಶಯುತವಾದ ಸಮಾಜದಲ್ಲಿ ನಾವು ಬದುಕಿಲ್ಲ. ಎಷ್ಟೋ ಕೋಟಿ ಕೋಟಿ ಲೂಟಿ ಮಾಡಿರೋರು ಆರಾಮಾಗಿ ಫಾರಿನ್ನಲ್ಲಿ ಮನೆ ಸಾರಿ ಅರಮನೆ ಮಾಡ್ಕೊಂಡು ಆರಾಮಾಗಿದ್ದಾರೆ. ಇನ್ನೊಂದು ಕಡೆ ಸಣ್ಣ ಪುಟ್ಟ ಸೀರೆ ಅಂಗಡಿ ಮೊಬೈಲ್ ಅಂಗಡಿ ಕಳುವಲ್ಲಿ ಸಿಕ್ಕಿ ಹಾಕ್ಕೊಂಡ್ ಅಂದರ್ ಆಗಿರೋರು ಇದ್ದಾರೆ. ಅದಕ್ಕೆ ಏನೋ mostly ಮಠ ಚಿತ್ರದಲ್ಲಿ ಕಳ್ರನ್ನೆಲ್ಲಾ ಜೈಲಿಗೆ ಹಾಕೋದಾದ್ರೆ ಭೂಮಿಗೆ ಬೇಲಿ ಹಾಕಬೇಕಲ್ವಾ? ಎಂಬ ಹಾಡನ್ನು ಕಂಪೋಸ್ ಮಾಡಿದ್ದಾರೆ. On a related note, ಕದ್ದೋನು ಕಳ್ಳ ಅಲ್ಲ, ಸಿಕ್ಕಿ ಹಾಕ್ಕೊಂಡೋನು ಕಳ್ಳ ಎಂಬ ಮಾತಿದೆ. ಹಾಗಂತ ನಾನು ಕಳ್ಳತನ ಸರಿ, ಸಿಕ್ಕಿ ಹಾಕಿಕೊಳ್ಳೋದು ತಪ್ಪು ಎಂದಿಲ್ಲ. ಆಮೇಲೆ ನೀವು ಏನೋ ಮಾಡೋಕ್ ಹೋಗಿ ಸಿಕ್ಕಿ ಹಾಕ್ಕೊಂಡು don't blame me OK? ನಾವೊಂಥರ ಪಾಪದ ಕುರಿ ನಿಕ್ಕಿ ಇದ್ದಂಗೆ. ಆ?? ಇಕ್ಕಿ ಅಲ್ಲ, ನಿಕ್ಕಿ!
ಇನ್ನೊಂದಿನ Instagram ನಲ್ಲಿ ಏನೋ ನೋಡ್ಕೊಂಡು ಬ್ಯುಸಿ ಇದ್ದಾಗ (?) Falcon Rising ಎಂಬ ಚಿತ್ರದ ಒಂದು ಕ್ಲಿಪ್ ಪ್ಲೇ ಆಯುತು. ಅದರಲ್ಲಿ ಮೈಕಲ್ ಜೈ ವೈಟ್ ಒಂದು ಸೂಪರ್ ಮಾರ್ಕೆಟ್ ಏನನ್ನೋ ಕೊಳ್ಳಲು ನೋಡ್ತಾ ನಿಂತಿರುತ್ತಾರೆ. ಆ ಸಮಯಕ್ಕೆ ಇಬ್ಬರು ದರೋಡೆಕೋರರು ಗನ್ ಹಿಡಿದುಕೊಂಡು ಆ ಅಂಗಡಿಯನ್ನು ದೋಚಲು ಬರುತ್ತಾರೆ. YouTube ನಲ್ಲಿ Falcon Rising Action Scene ಎಂದು ಸರ್ಚ್ ಮಾಡಿದಾಗ ಈ ವಿಡಿಯೋ ನೋಡಬಹುದು. ವಿಡಿಯೋ ಲಿಂಕ್ ಇಲ್ಲಿದೆ.
As I said, ತುಂಬಾ Intense Tension ಇರುವ ಆ ದೃಶ್ಯದಲ್ಲಿ ಗನ್ ಹಿಡಿದುಕೊಂಡು ಬಂದ ಇಬ್ಬರು ದರೋಡೆಕೋರರು ಅಂಗಡಿ ಕ್ಯಾಶಿಯರ್ ಬಳಿ ಇರುವುದೆಲ್ಲಾ ಎತ್ತಿ ಜೇಬಿಗೆ ಇಳಿಸಿಕೊಳ್ಳುತ್ತಾರೆ. ಇನ್ನೇನು ಹೊರಡುವ ಸಂದರ್ಭದಲ್ಲಿ ನೆಡೆಯುವ ಚಿಕ್ಕ ಫೈಟ್ ನ ಕೊನೆಯಲ್ಲಿ ದರೋಡೆ ಮಾಡಲು ಬಂದ ಇಬ್ಬರು ಒದೆ ತಿಂದು ಕೆಳಗೆ ಬಿದ್ದಿರುತ್ತಾರೆ. ಆ ಸಮಯಕ್ಕೆ ತೆಗೆದುಕೊಂಡು ಒಂದಹ ಬಾಟಲ್ ಗೆ ಹಣ ನೀಡಿ ಹೊರ ಹೋಗಬೇಕೆಂದು ಬಂದಾಗ, ಕೆಳಗೆ ಬಿದ್ದಿದ್ದ ಅವರ ಜೇಬಿಂದ ಕದ್ದ ಹಣ ತೆಗೆದುಕೊಂಡು ಕ್ಯಾಶಿಯರ್ ಗೆ ನೀಡಿ Keep the Change ಎಂದು ಹೇಳಿ technically ಹಣ ನೀಡದೇ ಹೊರ ನೆಡೆಯುತ್ತಾನೆ. ರಾಕ್ಷಸನೂ ನೀನೇನಾ? ರಕ್ಷಕನೂ ನೀನೇನಾ ಎಂಬಂತೆ, ಅವನು ದರೋಡೆ ನಿಲ್ಲಿಸದೇ ಇದ್ದಿದ್ದರೆ ಅಂಗಡಿಯ ಗಲ್ಲಾ ಪೆಟ್ಟಿಗೆಯಲ್ಲಿ ಇದ್ದ ಅಷ್ಟೂ ದುಡ್ಡು ಹೋಗಿರುತ್ತಿತ್ತು. ಅದೃಷ್ಟವಶಾತ್ ದರೋಡೆ ಪ್ಲಾನ್ ನಿಂತಿತು. ಆದರೆ ಒಂದು ಬಾಟಲ್ ಹಣ ಹೋಯಿತು. ಕಳೆದುಕೊಳ್ಳು ಬೇರೇನೂ ಇಲ್ಲ ಇಲ್ಲಿ?! ಇರುವುದನೇ ಪಡೆದು ತಿರುಗಿ ಕಳೆದುಕೊಳ್ಳಿ, ಕಳೆದು ಪಡೆದುಕೊಳ್ಳಿ, I feel you Sonu Nigam.
ನಾನೇನೂ ರಾಮಾಯಣವನ್ನು ಸಂಪೂರ್ಣವಾಗಿ ಓದಿಲ್ಲ, ಅಲ್ಪಸ್ವಲ್ಪ highlights ಗೊತ್ತು ಅಷ್ಟೇ. ರಾಮಾಯಣದ ಹೆಸರು ಕೇಳಿದ ತಕ್ಷಣ ರಾಮ ಒಳ್ಳೆಯ ಗುಣಗಳ ಪ್ರತೀಕ, ರಾವಣ ಕೆಟ್ಟ ಗುಣಗಳ ದ್ಯೋತಕ ಎಂಬ primary
thought ನಮ್ಮನ್ನು ಆವರಿಸುವುದು ಸಾಮಾನ್ಯ. ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ರಾಮ / ರಾವಣ ಎಂದು distinguish ಮಾಡಲಾಗದ complicated ಜಮಾನ ಇದಾಗಿದೆ. ಎಂತಹಾ ಕಸ್ತೂರಿ ನಿವಾಸ ರಾಜಕುಮಾರ್ ರೀತಿಯ ವ್ಯಕ್ತಿ ಆದರೂ ಅಲ್ಲೊಂದು ಇಲ್ಲೊಂದು ತಪ್ಪು ಮಾಡಿರುತ್ತಾರೆ. ದಾರಿ ತಪ್ಪಿದ ಮಗ ಚಿತ್ರದ ರಾಜಕುಮಾರ್ ರೀತಿಯ ವ್ಯಕ್ತಿಯಲ್ಲೂ ತನ್ನ ಸಾವಿನಲ್ಲೂ ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಿ ಹೋಗುವ ಮನೋಭಾವ ಇರುತ್ತದೆ. You see, in their last moments people show you who they really are -
Joker (The Dark Knight).
So, you know, it's hard to draw conclusion, ying yang ಎಂಬ ಮೇಲಿನ ಜಪಾನೀ ಚಿತ್ರದ ಕಾನ್ಸೆಪ್ಟ್ ನ ಹಾಗೆ, ಒಳಿತಿನ ಒಳಗೆ ಕೆಡುಕು ಮತ್ತು ಕೆಡುಕಿನ ಒಳಗೆ ಒಳತು ಬೆರೆತು ಹೋಗಿರುವುದನ್ನು ಕಾಣಬಹುದು. ಟಗರು ಚಿತ್ರದಲ್ಲಿ ಹೇಳಿರುವ ಹಾಗೆ, ಕೆಟ್ಟ ಕಾಲದಲ್ಲಿ ಕೆಟ್ಟೋನೇ ರಾಜ ಆಗೋದು, ಕೆಟ್ಟದನ್ನೇ Market ಮಾಡೋದು ಎಂಬ ಸಾಲು ಇದೆ. But ಯಾವುದು ಒಳ್ಳೆಯದು ಅಥವಾ ಯಾವುದು ಕೆಟ್ಟದ್ದು ಎಂದು differentiation ಮಾಡಿ ಪಾಪ ಪುಣ್ಯಗಳ integration ಮಾಡಿ judgement ಹೊರಡಿಸೋಕೆ ಇಂತಿ ನಿನ್ನ ಪ್ರೀತಿಯ ನಾನ್ಯಾರು? Sorry, off topic ಹೋದೆ, ಜಗತ್ತಿನಲ್ಲಿ ಇಂದು ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತಾ? Not Really! ಕೆಟ್ಟವರಿಗೆ ಒಳ್ಳೆಯದು ಆಗುತ್ತಾ? Possible, ಬೇಕಾದಷ್ಟು ಜನ ನೋಡಿದ್ದೇವೆ. ಇಂತಿಪ್ಪ ಸಂದರ್ಭದಲ್ಲಿ morally right and wrong ಅಂತ ಕೆಲವನ್ನು ಸರಿ ಮತ್ತು ತಪ್ಪು ಎಂದು ವಿಂಗಡಿಸಿ ಒಂದು ಒಳ್ಳೆಯ ದಾರಿಯಲ್ಲಿ ಹೋಗುವಂತೆ ಕಾಲ ಕಾಲಕ್ಕೆ ಪ್ರೇರಣೆ ನೀಡುವ ಭಗವಂತನ ಮಾರ್ಗದರ್ಶನ ನಮ್ಮೆಲ್ಲರಿಗೂ ಅಗತ್ಯವಿದೆ. ಆದರೆ ಆ ದೇವರು ಎಲ್ಲಿರುವನು ಎಂದು ಎಷ್ಟೋ ವರ್ಷ ಹುಡುಕಿ ಕೊನೆಗೆ ಸುಸ್ತಾಗಿ ಕೂತಾಗ ಬಹುಪರಾಕ್ ಚಿತ್ರದ ಹಾಡಿನ ದೇವನಿರುವನು ನಮ್ಮೊಳಗೆ ಇರುವನು ಹಾಡು ಅರ್ಥವಾಗುತ್ತದೆ ಎಂದು Conclusion ಬರೆಯಬಹುದೆ? ಗೊತ್ತಿಲ್ಲ, judge ಮಾಡಲು ನಾನ್ಯಾರು?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ