ಜೂನ್ 20, 2015

ಗೌತಮಿ ಕಣ್ಣಲ್ಲಿ...



[ಓದುವ ಮುನ್ನ: ಪ್ರತಿ ಬಾರಿ ಬ್ಲಾಗ್ ನಲ್ಲಿ ಒಂದು ವಿಷಯವನ್ನು ಆಯ್ದುಕೊಂಡು, ಅದರ ಕುರಿತು ಕೆಲವು ವಿಷಯಗಳನ್ನು ಪ್ರಸ್ತಾಪಿಸಿ, ಅದಕ್ಕೆ ಹೊಂದಿಕೊಂಡ ಕೆಲವು ನೆನಪುಗಳು ಹಾಗೂ ಸಿನಿಮಾ ಪ್ರಸಂಗಗಳು ಮತ್ತು ಇನ್ನಿತರೆ ಸಂಬಂಧಿಸಿದ ವಿಷಯಗಳನ್ನು ಬರೆಯುತ್ತಿದ್ದೆ. ಆದರೆ ಬಾರಿ ಕೊಂಚ ಬದಲಾವಣೆಯಿರಲಿ ಎಂದು ಒಂದು ಕಥೆ ಬರೆಯುತ್ತಿದ್ದೇನೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಇದು ಹುಡುಗನ ಕಥೆ ಅಲ್ಲ, ಗೌತಮಿ ಎಂಬುವ ಹುಡುಗಿಯ ಕಥೆ. ಅಂದರೆ ಕಥೆಯಲ್ಲಿ ಬರುವ ಗೌತಮಿ ಎಂಬ ಪಾತ್ರ ತನ್ನ ಕಥೆಯನ್ನು ತಾನೇ ಹೇಳಿಕೊಂಡರೆ ಹೇಗಿರುತ್ತದೆ ಎಂಬ ಯೋಚನೆಯ ಫಲಿತಾಂಶವೇ 'ಗೌತಮಿ ಕಣ್ಣಲ್ಲಿ...' ಕಥೆಯನ್ನು ಬರೆಯುವಾಗ ನನಗೆ ಆಗಾಗ ನೆನಪಾಗಿದ್ದು ರಾಧಿಕಾ ಪಂಡಿತ್ ಮತ್ತು ದೀಪಾ ಸನ್ನಿಧಿ. ಕಲ್ಪನೆಗೆ ಬಜೆಟ್ ಸಮಸ್ಯೆ ಇಲ್ಲ, ಆದ್ದರಿಂದ ಓದುವಾಗ ನಿಮಗೆ ಯಾರನ್ನು ಬೇಕೋ ಅವರನ್ನು ಊಹಿಸಿಕೊಳ್ಳಿ. ಮುಂದಿನ ಬಾರಿ ಕಥೆ ಬರೆದಾಗ ಇಷ್ಟೆಲ್ಲಾ ಬ್ಲೇಡ್ ಹಾಕಲ್ಲ, ನನ್ನನ್ನ ನಂಬಿ, ಪ್ಲೀಸ್, ಪ್ಲೀಸ್! Over to Goutami]

ಪ್ರೀತಿಯ ಗೆಳತಿ ಆಕಾಂಕ್ಷ,
ಏನೇ ಕತ್ತೆ! ಪ್ರೀತಿಯ ಗೆಳತಿ ಅಂದ ತಕ್ಷಣ ಖುಷಿಯಾಗಿಬಿಡ್ತೇನೋ, ಅಲಾ? ಅದೆಲ್ಲಾ ನಿಮ್ ಮುಂಬೈಯಲ್ಲಿ ನೆಡಿಬಹುದು, ನಮ್ ಜೊತೆ ಅಲ್ಲ. ನೀನು ಯಾವತ್ತಿದ್ರೂ ನನ್ನ ಮುದ್ದಿನ sweet panda. ಸ್ವಲ್ಪ ದಪ್ಪ, ಸ್ವಲ್ಪ ಮುದ್ದು, ತುಂಬಾನೇ ಟೇಸ್ಟಿ. ಹ್ಹ, ಹ್ಹ ಹ್ಹ, ಗಾಬರಿಯಾಗಬೇಡ ಕಣೇ 'ನಾನು-ವೆಜಿಟೇರಿನ್', 'ನಾನ್-ವೆಜಿಟೇರಿಯನ್' ಅಲ್ಲ. ನನ್ನ ವಿಷಯ ಬಿಡು, ನಿನ್ನ ಸಮಾಚಾರ ಹೇಳು. ಆರಾಮಾ? ಹೇಗಿದೆ ಮುಂಬೈ? ನಿನ್ನ childhood crush SRK ನೋಡೋಕಾಯ್ತಾ? ಅಯ್ಯೋ, ನಾನು ನೋಡು, ಫೋನಲ್ಲಿ ಕೇಳೋ ಥರ questions ಗಳನ್ನ ಲೆಟರಲ್ಲಿ ಕೇಳ್ತಾ ಇದ್ದೀನಿ! Technology ಎಷ್ಟೇ ಮುಂದುವರೆದರೂ ತಿಂಗಳಿಗೊಂದು ಪತ್ರ ಬರೆಯಲೇಬೇಕು ಅಂತ ಸುಮಾರು 6 ವರ್ಷಗಳ ಹಿಂದೆ ನೀನು PUC ಓದಲೆಂದು ಮಂಗಳೂರಿಗೆ ಹೋಗುವಾಗ ಇಬ್ಬರೂ pact ಮಾಡಿಕೊಂಡಿದ್ವಿ, ನೆನಪಿದೆ ತಾನೆ? ಲೆಟರ್ ಬಂದ ತಕ್ಷಣ ಫೋನ್ ಮಾಡು, ಮಾತಾಡೋದು ತುಂಬಾ ಇದೆ. ಬೇಗ ಫೋನ್ ಮಾಡಲಿಲ್ಲ ಅಂದರೆ ಗೊತ್ತಲ್ಲ, ನೀನು ಚಿಕ್ಕವಳಿದ್ದಾಗ fancy dress competition ಗಾಗಿ ಗುಬ್ಬಿ ಮರಿ ವೇಷ ಹಾಕಿರೋ ಫೋಟೋನ ನಿನ್ ರೂಮ್ ಹುಡುಗಿಯರಿಗೆ mail ಮಾಡಿ ಬಿಡ್ತೀನಿ, ಹುಷಾರ್! ಹ್ಹ ಹ್ಹ ಹ್ಹ.

ಸಾಂದರ್ಭಿಕ ಚಿತ್ರ: ಡ್ರಾಮಾ

ಕುಶಲ ಕ್ಷೇಮ ಎಲ್ಲಾ ವಿಚಾರಿಸಿ ಆಯಿತು, ತಿಂಗಳ highlights. ಮಳೆಗಾಲದ ಶಾಪಿಂಗ್ ಮಾಡಿ ಬಂದೆ, ಬಹಳ ಸಮಯದಿಂದ ನಾನು ಹುಡುಕುತಿದ್ದ yellow umbrella ಸಿಕ್ತು. ಮನೆಗೆ ಹೋದಾಗ ಅಮ್ಮ ಪಕೋಡ ಮತ್ತು ಟೀ ಮಾಡಿದ್ರು, ಏನ್ ಚೆನ್ನಾಗಿತ್ತು ಅಂತೀಯಾ! ಆಮೇಲೆ ನಮ್ ಸ್ಕೂಲ್ ಅಲ್ಲಿ ಮಿಂಚು ಅಂತ ಒಬ್ಬಳು ಇದ್ದಳಲ್ಲಾ, ಅವಳು ಫೋನ್ ಮಾಡಿದ್ಳು. ಮುಂದಿನ ತಿಂಗಳು ಮದುವೆ ಅಂತೆ, ನಿನ್ ನಂಬರ್ ಕೂಡ ಕೇಳಿದ್ಳು. ಇಬ್ರೂ ಬರಲೇಬೇಕು ಅಂತ ಬಹಳ ಹೇಳಿದಳು. ನೀನು ಫ್ರೀ ಇದ್ರೆ ಹೋಗೋಣ, ನನಗೇನೂ leave problem ಇಲ್ಲ, ಟೀಮ್ ಲೀಡ್ ಒಳ್ಳೆಯವರು. ಮತ್ತೆ, ನಿನಗೆ ಇಷ್ಟ ಅಂತ loop earrings ತಗೊಂಡಿದ್ದೀನಿ, ತುಂಬಾ ಚೆನ್ನಾಗಿದೆ, ಬಂದಾಗ ತಗೊಂಡು ಹೋಗು. ನೀನು ಮರೆತರೆ ನನಗೇ ಒಳ್ಳೆದು, ನಾನ್ ಮಾತ್ರ ನೆನಪಿಸಲ್ಲ, ಈಗ್ಲೇ ಹೇಳಿದ್ದೀನಿ, ಹಾ! ಅದು ಬಿಟ್ಟರೆ, ನಮ್ ಆಫೀಸ್ ಸ್ಟಾಫ್ ಎಲ್ಲಾ ಲಾಲ್ ಬಾಗ್ ಗೆ ಹೋಗಿದ್ವಿ, ಎಷ್ಟೊಂದು ವೆರೈಟಿ ಹೂಗಳಿದ್ವು ಗೊತ್ತಾ, ನೀನಾಗಿದ್ರೆ ಫೋಟೋ ತಗೀತಾ 3 ದಿನ ಅಲ್ಲೇ ಇರೋ ಹಾಗೇ ಮಾಡ್ತಿದ್ದೆ. ಅಷ್ಟೇ ಕಣಮ್ಮ, ಇನ್ನೊಂದು ಮುಖ್ಯ ವಿಷಯ ಬಿಟ್ರೆ ಹೇಳಿಕೊಳ್ಳುವಂತಹದೇನೂ ಇಲ್ಲ.

ಹಾ, ಇನ್ನೊಂದು ವಿಷಯ, ಮೇಲಿನ ಲೈನಲ್ಲಿ ಇನ್ನೊಂದು ವಿಷಯ ಮುಖ್ಯ ವಿಷಯ ಬಿಟ್ರೆ ಹೇಳಿಕೊಳ್ಳುವಂತಹದೇನೂ ಇಲ್ಲ ಅಂದೆ, ಸರಿಯಾಗಿ ಓದಿದೋ ಇಲ್ವೋ, ರೀಡಿಂಗ್ ಗ್ಲಾಸ್ ಹಾಕಿಕೋ ಮಾರಾಯ್ತಿ ಮೊದಲು. ಹೋಗಲಿ, ವಿಷಯ ಏನು ಅಂತ guess ಮಾಡಿರುತ್ತೀಯಾ ಅಂದ್ಕೊಳ್ತೀನಿ. ಹೌದು, ಅದು ಅವನ ಬಗ್ಗೆಯೇ. ಪರಿಚಯವಾದ ಯಾರೂ ಮರೆಯಲಾಗದ ಹುಡುಗ ಅವನು. ಯಾವಾಗಲೂ ಚಾರ್ಲಸ್ ಚಾಪ್ಲಿನ್ ಥರ ಎಲ್ಲರನ್ನೂ ನಗಿಸುತ್ತಲೇ ಇರುತ್ತಾನೆ. ನಮ್ಮಿಬ್ಬರ ಬಗ್ಗೆ ಜಾಸ್ತಿ ಗೊತ್ತಿರೋದು ನಿನಗೆ ಮಾತ್ರ. ಅದರೂ ನನ್ನ ಕತೆಯನ್ನು ಮೊದಲಿಂದ ನಿನ್ ಜೊತೆ ಹೇಳಬೇಕು ಅನಿಸ್ತಾ ಇದೆ. ಇದು ನನ್ನ ಸಮಾಧಾನಕ್ಕೆ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳೇ, ನೀನು ಮುದ್ದು ಪಾಂಡಾ ಅಲ್ವಾ!

 ಸಾಂದರ್ಭಿಕ ಚಿತ್ರ: ಸಕ್ಕರೆ

ಇಂಜಿನಿಯರಿಂಗ್ ಶುರುವಾಗಿ ಆಗಲೇ ಒಂದು ಸೆಮಿಸ್ಟರ್ ಮುಗಿದಿತ್ತು. 2ನೇ ಸೆಮಿಸ್ಟರ್ ಅಂದ್ರೆ ಗೊತ್ತಲ್ವಾ, ಎಲ್ಲೆಲ್ಲೂ college fest ಹಾಗೂ sports events ಗಳು. ಹೆಂಗೋ ಸದ್ಯ chess competition ಗಳು ಇದ್ದದ್ದಕ್ಕೆ ಸ್ವಲ್ಪ ಚೆನ್ನಾಗಿತ್ತು college life, ಉಳಿದಂತೆ ಎಲ್ಲಾ ಬೋರು. ಒಂದು ದಿನ Chess competition ಸೆಮಿ ಫೈನಲ್ ಮುಗಿಸಿ ಫೈನಲ್ ಗೆ contestant ಆಗಿ ಯಾರು ಬರುತ್ತಾರೋ ಅಂತ ಯೋಚಿಸುತ್ತಾ ಇದ್ದಾಗ event organizers ಬಂದು finals ನಾಳೆ ಇದೆ ಎಂದು ಹೇಳಿ ಹೋಗಿಬಿಟ್ಟರು. ಏನ್ ಮಾಡೋದು ಅಂತ ಯೋಚಿಸುತ್ತಾ ಫ್ರೆಂಡ್ಸ್ ಎಲ್ಲಾ ಎಲ್ಲಿ ಹೋದರು ಅಂತ ಫೋನ್ ಮಾಡಿದೆ. ಅವರೆಲ್ಲಾ ಕ್ರಿಕೆಟ್ ಗ್ರೌಂಡಲ್ಲಿ ಇದ್ದುದಾಗಿ ಹೇಳಿದ್ರು. ನಾನು ಹೋಗೋ ಹೊತ್ತಿಗೆ ಆಗಲೇ ಕಡೆ ಕ್ರಿಕೆಟ್ ಮುಗಿದು ಇನ್ನೊಂದು ಕಡೆ ಕಬಡ್ಡಿ ಶುರುವಾಗಿತ್ತು. ನನಗೇ ಕ್ರಿಕೆಟ್ ರೂಲ್ಸ್ ಗಳೇ ಗೊತ್ತಿಲ್ಲ, ಇನ್ನು ಕಬಡ್ಡಿ  ಎಲ್ಲಿ ಅರ್ಥವಾಗುತ್ತೆ! ಹೇಗಿದ್ರೂ ಕಾಲೇಜ್ ಬಸ್ ಗೆ ಇನ್ನೂ 40 ನಿಮಿಷ ಟೈಮ್ ಇತ್ತು. ಆಟ ಶುರುವಾಯಿತು, ಪೂರ್ತಿ ಗೊತ್ತಾಗಲಿಲ್ಲ, ಆದರೆ ಒಂದು ಟೀಮ್ ನವರು ಇನ್ನೊಂದು ಟೀಮ್ ನವರನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಬಂದು ಮುಟ್ಟಿ ವಾಪಸ್ ಹೋದರೆ ಔಟ್ ಮಾಡಿದ ಹಾಗೆ ಅಂತ ಗೊತ್ತಾಗೋಕೆ ಜಾಸ್ತಿ ಟೈಮ್ ಬೇಕಾಗಲಿಲ್ಲ. ಹೀಗಿದ್ದಾಗ ride ಗೆ ಅಂತ ಬಂದ ಒಬ್ಬ ಹುಡುಗ ಒಂದೇ ಸಲ ಇಬ್ಬರನ್ನು ಔಟ್ ಮಾಡಿ ಹೋದ. ಯಾರು ಅಂತ ನೋಡೋಕೆ ಆಗಲಿಲ್ಲ, ಮುಖ ಎಲ್ಲಾ ಮಣ್ಣು ಮಣ್ಣು. ಅವತ್ತೇ ಮೊದಲು ನಾನು ವಿಶಾಲ್ ನೋಡಿದ್ದು.

ಮತ್ತೆ ಒಂದು ವರ್ಷದ ನಂತರ VTU Fest ಗಾಗಿ ನಮ್ಮ ಕಾಲೇಜಿನಿಂದ ಒಂದಷ್ಟು ಜನರನ್ನು ಕಳಿಸಲು ತೀರ್ಮಾನಿಸಿದ್ದರು. Luckily, list ಅಲ್ಲಿ ನಾನೂ ಇದ್ದೆ. 4 ದಿನ ಮನೆಯಿಂದ ಹೊರಗೆ ಇರಬೇಕು ಅಂತ ಅಮ್ಮ ಬೇಡ ಅಂತ ಹೇಳಿಬಿಟ್ರು. ಆದರೆ ನಮ್ sports director ಫೋನ್ ಮಾಡಿ ತುಂಬಾ ಒತ್ತಾಯ ಮಾಡಿದಾಗ ಒಪ್ಪಿಕೊಂಡರು. VTU fest ಗಾಗಿ ಧಾರವಾಡಕ್ಕೆ ಹೋಗಿದ್ದ ನಾಲ್ಕು ದಿನದಲ್ಲಿ ನಾನು-ವಿಶಾಲ್ ಒಳ್ಳೆ ಫ್ರೆಂಡ್ಸ್ ಆಗಿದ್ವಿ. ಈಗಲೇ ಏನೇನೋ imagine ಮಾಡ್ಕೊಬೇಡ, ಇನ್ನೂ 'just-friends' ಅಷ್ಟೇ.

ಹಾ, ಟೂರ್ ಅಂದ್ನಲ್ಲಾ, ಅದಾದ ನಂತರ ನಾವಿಬ್ರೂ ಕ್ಯಾಂಪಸಲ್ಲಿ ಆಗಾಗ ಎದುರು ಸಿಕ್ಕಾಗ ಮಾತಾಡಿಸ್ತಾ  ಇದ್ವಿ. ಅಂದರೆ ನಮ್ಮ friend circle ಅಲ್ಲಿ ಎಲ್ಲರೂ ಎಲ್ಲರಿಗೂ ಗೊತ್ತಿದ್ದರಿಂದ ಅಷ್ಟೇನೂ weird ಅನಿಸಲಿಲ್ಲ. ಒಮ್ಮೊಮ್ಮೆ ಯಾರೂ ಇಲ್ಲದಿದ್ದರೂ ನಾವಿಬ್ಬರು ಗ್ರೌಂಡ್ ಹತ್ತಿರ ಕುಳಿತು ಗಂಟೆಗಟ್ಟಲೆ ಮಾತಾಡ್ತಾ ಇದ್ವಿ. ಫೈನಲ್ ಈಯರ್ ಬರೋ ಹೊತ್ತಿಗೆ ನಮ್ಮಿಬ್ಬರನ್ನು ಎಲ್ರೂ lovers ಅಂತ confuse ಅಗೋ ಅಷ್ಟು ಜೊತೆಯಲ್ಲಿ ಇರುತ್ತಿದ್ವಿ. ಆದರೆ ನಮ್ಮಿಬ್ಬರ ಬಗ್ಗೆ ನಮ್ಮಲ್ಲಿ clarity ಇತ್ತು. So, no problem. ಆಮೇಲೆ ಅವನಿಗೆ ಯಾವುದೋ Vismaya Developers ಕಂಪನಿಯಲ್ಲಿ  placement ಆಯಿತು. ಕಾಲೇಜ್ ಮುಗಿದಿತ್ತು, ಹಾಗಾಗಿ ಇಬ್ಬರೂ ಮೊದಲಿನಷ್ಟು meet ಆಗೋಕೆ ಆಗಲಿಲ್ಲ. ಆಗಲೇ ನನಗೆ ಮದುವೆ ಮಾಡೋಕೆ preparations ಮಾಡ್ತಾ ಇದ್ರು. ಏನೋ ನನ್ ಲಕ್, ನೀನು ಮನೆಗೆ ಬಂದು ಅವರನ್ನೆಲ್ಲಾ convince ಮಾಡಿದಾಗ ಒಂದು headache postpone ಆಯ್ತು. ಆಮೇಲೆ ಕೆಲವು ಸಮಯ ನಿನ್ನ ಜೊತೆ BTM ಲೇಔಟ್ ಅಲ್ಲಿ ಇದ್ದೆ. ಆಗ ಬಹಳ ಸಲ ವಿಶಾಲ್ ಫೋನ್ ಮಾಡಿದ್ದ, ಆದರೆ ನನಗೇ ಯಾಕೋ ಮಾತಾಡಲು ಮನಸ್ಸಾಗಲಿಲ್ಲ. ನನಗೆ web designing ಅಲ್ಲಿ ಒಂದು ಕೆಲಸ ಸಿಕ್ಕಿ ಎಲ್ಲವೂ ಸರಿ ಹೋಗೋ ಹೊತ್ತಿಗೆ ನೀನು ಮುಂಬೈಗೆ ಹೊರಟುಬಿಟ್ಟೆ. I was all alone, literally. ಆಗಾಗ ತುಂಬಾ lonely ಅನಿಸ್ತಾ ಇತ್ತು. ನಿನ್ನನ್ನು ಬಿಟ್ಟರೆ ನಾನು ತುಂಬಾ attached ಆಗಿದ್ದು ಅಂದರೆ ಅದು ವಿಶಾಲ್ ಗೆ ಮಾತ್ರ. ಒಂದು ದಿನ ಫೋನ್ ಮಾಡೋಣ ಅಂತ ಅವನಿಗೆ dial ಮಾಡಿದೆ, ರಿಂಗ್ ಆಗೋದ್ರಳಗೆ 6 months ಇಂದ ಫೋನ್ ಮಾಡಿಲ್ಲ, ಈಗ ಕೆಲಸ ಇದ್ದಾಗ ಮಾತ್ರ ಫೋನ್ ಮಾಡಿದ್ಳು ಅಂದ್ಕೊಂಡರೆ ಅಂತ thought ಬಂತು. Disconnect ಮಾಡೋ ಹೊತ್ತಿಗೆ ಆಗಲೇ ring ಆಗಿತ್ತು ಅನಿಸುತ್ತೆ. 2 ನಿಮಿಷದ ನಂತರ ಅವನೇ ಫೋನ್ ಮಾಡಿದ. Roughly ಒಂದು 2 hours ಮಾತಾಡಿದ್ವಿ ಅವತ್ತು. ಸಂಜೆ ಇಬ್ರೂ Cafe Catch-Up ಗೆ ಹೋಗಿ ಕಾಫಿ ಕುಡಿದಿದ್ವಿ.

ಸಾಂದರ್ಭಿಕ ಚಿತ್ರ: ಟೋನಿ

ಹೀಗಿರುವಾಗ ಒಂದು ದಿನ ಅವನು ತನ್ನ ಮನೆಯನ್ನು ತೋರಿಸೋಕೆ ನನ್ನನ್ನು ಕರೆದುಕೊಂಡು ಹೋದ. Trust me, ಅವನ ರೂಮ್ ನಮ್ ಮನೆಗಿಂತ ನೀಟಾಗಿತ್ತು. ಅಲ್ಲೇ ಮನೆ ಹತ್ತಿರವಿದ್ದ ಹೋಟೆಲ್ ಇಂದ ಪಾರ್ಸಲ್ ತಗೊಂದು ಹೋಗಿದ್ವಿ. ಟೆರೇಸ್ ಗೆ ಹೋಗೋಣ ಅಂದೆ, ನೋಡಿದ್ರೆ ವಿಶಾಲ್ ಆಗಲೇ ಟೇಬಲ್ ಎಲ್ಲಾ ರೆಡಿ ಮಾಡಿದ್ದ. Candle light dinner ಅನ್ನೋಕೆ candle ಇರಲಿಲ್ಲ, moonlight dinner ಅನ್ನೋಕೆ moon ಕೂಡ ಮೋಡಗಳಿಂದ ಮುಚ್ಚಿಹೋಗಿದ್ದ. ಇದ್ದದ್ದು ಅವರಜ್ಜಿ ಮನೆಯಿಂದ ತಂದಿದ್ದ ಎರಡು ಸೀಮೆಎಣ್ಣೆ ಬುಡ್ಡಿ ದೀಪಗಳು. ಅದರ ಬಗ್ಗೆನೂ 4 ನಿಮಿಷ ಹೇಳಿದ, ಸಿಕ್ಕಾಗ ಹೇಳ್ತೀನಿ ಬಿಡು. ಊಟವೆಲ್ಲಾ ಮುಗಿದ ಮೇಲೆ ಹಾಗೆ ಆಕಾಶ ನೋಡುತ್ತಾ ಮಾತನಾಡುತ್ತಾ ಕುಳಿತೆವು. ಮಧ್ಯರಾತ್ರಿ ಸರಿಯಾಗಿ 12 ಗಂಟೆಗೆ ಮೊಬೈಲ್ ಗೆ ಒಂದು ಮೆಸೇಜ್ ಬಂತು, ಅದರಲ್ಲಿ ಯಾವುದೋ ಒಂದು ವೆಬ್ ಲಿಂಕ್ ಇತ್ತು, ಹೇಗಿದೆ ಅಂತ ನೋಡಿ ರಿವ್ಯೂ ಹೇಳಿ ಅಂತ ಮೆಸೇಜಲ್ಲಿ ಇತ್ತು. ಯಾರೋ ಆಫೀಸ್ ಸ್ಟಾಫ್ ಇರಬೇಕು ಅಂತ ಸುಮ್ಮನಾದೆ. ಯಾರದು? Friend ? ಹೋಗಬೇಕಾ? ಬಿಟ್ಟು ಬರಲಾ? ಅಂತ ಕೇಳೋಕೆ ಶುರು ಮಾಡಿದ. “ಏನು ಸಾಹೇಬ್ರು ಆಗ್ಲೇ ಕಳಿಸೋ ಅರ್ಜೆಂಟಲ್ಲಿ ಇದ್ದೀರಾ? ಇನ್ನೊಬ್ಬರ ಜೊತೆ ಕ್ಯಾಂಡಲ್ ಲೈಟ್ ಡಿನ್ನರ್ ಮಾಡೋ ಪ್ಲಾನ್ ಇದೆಯಾ?” ಅಂತ ಕೇಳಿ ಸ್ವಲ್ಪ ಟೀಸ್ ಮಾಡಿದೆ. ಅವನ ಮುಖ ನೋಡಬೇಕಿತ್ತು ನೀನು ಆಗ! ಹೋಗ್ಲಿ ಇಷ್ಟೊಂದು ಹೇಳ್ತಿದ್ದಾನೆ ಮೆಸೇಜ್ ಆದರೂ ನೋಡೋಣ ಅಂತ ಕ್ಲಿಕ್ ಮಾಡಿದೆ. ಅದು ಅವನದೇ ಇನ್ನೊಂದು ನಂಬರ್ ಇಂದ ಕಳಿಸಿದ್ದು ಅಂತ ಆಮೇಲೆ ಹೇಳಿದ. ಕ್ಲಿಕ್ ಮಾಡಿದಾಗ ಒಂದು ಹೊಸ  web page open ಆಯ್ತು. ಪೇಜ್ layout, ಅದರಲ್ಲಿದ್ದ ಒಂದೊಂದು ಅಕ್ಷರವೂ ಇನ್ನೂ ಹಾಗೇ ನನ್ನ ಕಣ್ಣ ಮುಂದಿದೆ.

Happy Birthday ಗೌತಮಿ
ನನ್ನ ಮೆಚ್ಚಿನ amazing ಗೆಳತಿ,
ಹೀಗೆ ಎಂದಿಗೂ amazing ಆಗಿರು" ಎಂದು ಬರೆದಿತ್ತು. ಅಯ್ಯೋ, ಎಲ್ಲರ birthday ನೆನಪಿಟ್ಟುಕೊಳ್ಳುವ ನನಗೇ ನನ್ನ birthday ಹೇಗೆ ಮರೆತು ಹೋಯಿತು ಅಂತ ಶಾಕ್ ಆಯ್ತು, but in the end, ನನ್ನ birthday ಇಷ್ಟು ಚೆನ್ನಾಗಿ ಆಯ್ತಲ್ಲಾ ಅಂತ ಖುಷಿ ಆಯಿತು. "ಹೇಗಿದೆ ವೆಬ್ ಸೈಟ್ ನಾನೇ ಡಿಸೈನ್ ಮಾಡಿದ್ದು" ಅಂತ ಕೇಳಿದ. ತುಂಬಾ awesome ಆಗಿತ್ತು ಅಂತ ಸುಳ್ಳು ಹೇಳೋದಿಲ್ಲ, ಒಬ್ಬ ಸಿವಿಲ್ ಇಂಜಿನಿಯರ್ ಮಟ್ಟಿಗೆ ಅದು extraordinary ಆಗಿತ್ತು. ಅದರಲ್ಲೂ  amazing ಗೆಳತಿ ಅಂತ ಬರೆದಿರೋದನ್ನ ನೋಡಿ ತುಂಬಾ ಖುಷಿಯಾಯಿತು. ನಾನಷ್ಟು ಸಲ amazing ಅಂತ ಹೇಳುತ್ತಿರುತ್ತೇನೆ ಅಂತ ನಾನೇ notice ಮಾಡಿರಲಿಲ್ಲ. ಅಷ್ಟರಲ್ಲಾಗಲೇ birthday wishes ಗಾಗಿ ಫೋನ್ ಗಳು ಬರೋಕೆ ಶುರುವಾಯಿತು. ನಿನ್ನೊಬ್ನಳ ಜೊತೆ ಮಾತನಾಡಿ ಫೋನನ್ನು ಸೈಲೆಂಟ್ ಮಾಡಿದೆ.

ಸಾಂದರ್ಭಿಕ ಚಿತ್ರ: ಯಾರೇ ಕೂಗಾಡಲಿ!



ಫೋನ್ ಮುಗಿಸಿ ವಾಪಸ್ ಬಂದಾಗ, "ಅಷ್ಟು ಬೇಗ ಆಗೋಯ್ತಾ" ಅಂತ ಕೇಳಿದ. ಫೋನ್ ಸೈಲೆಂಟ್ ಮಾಡಿದೆ, ಬೆಳಿಗ್ಗೆ ಮಾತಾಡ್ತೀನಿ ಅಂದೆ. ಆನಂತರ ಕೇಕ್ ಕಟ್ ಮಾಡಿದೆ, ಅವನಿಗೆ ಸ್ವಲ್ಪ ಮಾತ್ರ ತಿನ್ನಿಸಿ ನಾನೇ ಜಾಸ್ತಿ ತಿಂದೆ. ದಸರಾ ಹಬ್ಬಕ್ಕೆ decorate ಮಾಡುವ ಚನ್ನಪಟ್ಟಣದ ಗೊಂಬೆಗಳನ್ನು gift ಆಗಿ ಕೊಟ್ಡಿದ್ದ. ಅದರಲ್ಲಿ ಒಂದು ಅಜ್ಜ-ಅಜ್ಜಿ ಗೊಂಬೆ ಇತ್ತು. ತುಂಬಾ ಕ್ಯೂಟ್ ಆಗಿತ್ತು ಕಣೇ. ಅದಾದ ನಂತರ ನನ್ನನ್ನು ಕೂರಿಸಿ ಅವನು ಹೇಳಿದ ಮಾತುಗಳು ನಾನೆಂದೂ ಮರೆಯುವುದಿಲ್ಲ. ಅವನು ಹೇಳಿದ ಮಾತುಗಳನ್ನು ಹಾಗೇ ಇಲ್ಲಿ ಬರೆದಿದ್ದೇನೆ.



"ಗೌತಮಿ,
surprise birthday party ನೀವು ಯಾವತ್ತು ಮರೆಯಲ್ಲ ಅಂತ ನಾನು ಗ್ಯಾರಂಟಿ ಕೊಡ್ತೀನಿ. ಯಾಕಂದ್ರೆ ಇಷ್ಟು weird ಆಗಿ ಸೀಮೆಎಣ್ಣೆ ಬುಡ್ಡಿ ದೀಪ ಇಟ್ಟು ಯಾರೂ ಡಿನ್ನರ್ ಗೆ invite ಮಾಡಲ್ಲ. ಏನ್ ಮಾಡೋದು ಹೇಳಿ, moonlight dinner ಗೆ ಅಂತ ಒಂದು ವಾರದಿಂದ preparations ಮಾಡ್ಕೊಂಡಿದ್ದೆ. ಕಳ್ ನನ್ಮಗ ಚಂದ್ರ ಕಡೇ ಕ್ಷಣದಲ್ಲಿ ಕೈ ಕೊಟ್ಡ. ಇರಲಿ ಬಿಡಿ, ಅದರಿಂದ ಒಂಥರಾ ಒಳ್ಳೆದೇ ಆಯ್ತು. ನೀವು ನಿಮ್ಮ ಅಜ್ಜ ಮತ್ತು ಅಜ್ಜಿಯರನ್ನು ನೋಡಿಲ್ಲ ಅಂತ ಆಗಾಗ ಆಕಾಂಕ್ಷ ಹತ್ತಿರ ಹೇಳ್ತಾ ಇದ್ರಿ ಅಂತ ಗೊತ್ತಾಯ್ತು. ಅದಕ್ಕೆ ನಮ್ ಊರಿಗೆ ಹೋಗಿ ಅಟ್ಟ ಎಲ್ಲಾ ಹುಡುಕಾಡಿ ದೀಪಗಳನ್ನು ತಂದೆ. ನಿಮ್ಮೂರು ದಾವಣಗೆರೆ, ಆದ್ದರಿಂದ ನಿಮ್ ಅಜ್ಜ ಅಜ್ಜಿ ಹೀಗೆ ಇದ್ದಿರಬಹುದು ಅನ್ನೋ ಕಲ್ಪನೆಯಲ್ಲಿ ಪೇಟಧಾರಿ ಅಜ್ಜ ಮತ್ತು ಜರತಾರಿ ಸೀರೆ ಉಟ್ಟಿರುವ ಅಜ್ಜಿ ಥರ ಇರುವ ಗೊಂಬೆಗಳನ್ನು ನಿಮಗೆ ಕೊಟ್ಟೆ. ಹೀಗಾದ್ರೂ ಅವರ ಕಲ್ಪನೆ ನಿಮ್ಮೊಂದಿಗೆ ಸದಾ ಇರಲಿ ಇಂತ.

ಈಗ ವಿಷಯಕ್ಕೆ ಬರ್ತೀನಿ, ಸಿಟ್ಟು ಬಂದ್ರೆ ದಯವಿಟ್ಟು ಟೆರೇಸ್ ಇಂದ ತಳ್ಳಬೇಡಿ, ನಾನಿನ್ನೂ ಪೂರ್ತಿ ಕೇಕ್ ಖಾಲಿ ಮಾಡಿಲ್ಲ!! ನಾನು ಬಹಳ ಜನ ಹುಡುಗಿಯರನ್ನು ನೋಡಿದೆ, ಆದರೆ ನೀವು ಮಾತ್ರ ತುಂಬಾ ಇಷ್ಟ ಆಗೋದ್ರಿ ಅಂತ ಡವ್ ಮಾಡಲ್ಲ. ನಾನು ನಿಮ್ಮನ್ನು ಮೊದಲು ನೋಡಿದ್ದು first year engineering ಅಲ್ಲಿ ಕಬಡ್ಡಿ finals ದಿನ. ನೀವು ಯಾರು ಏನು ಅಂತ ತಿಳಿದುಕೊಳ್ಳೋದರಲ್ಲಿ celebration ಮಾಡ್ತಾ ನನ್ನನ್ನು ಎತ್ತಿಕೊಂಡು ಕಡೆ ಹೋಗಿಬಿಟ್ರು. ಮತ್ತೆ ನಾನು ನಿಮ್ಮನ್ನು ನೋಡಿದ್ದು VTU fest ಗೆ ಹೋಗುವಾಗ. ಅಲ್ಲಿಂದ ಮುಂದೆ ನಿಮಗೇ ಎಲ್ಲಾ ಗೊತ್ತು. ನನಗೆ ನೀವು ಇಷ್ಟ, ನಿಮ್ ನಗು ಇಷ್ಟ, ಅದು ನನ್ನಿಂದಾಗಿ ನಕ್ಕರೆ ಅಂತು ಇನ್ನೂ.ಇಷ್ಟ.
"So, with all my heart, I love you, do you love me?"

ಹಿಂಗೂ ಯಾರಾದ್ರೂ ಪ್ರಪೋಸ್ ಮಾಡ್ತಾರಾ ಅಂತ ಅನಿಸಿತು. ಏನೂ ಮತಾನಾಡದೇ ಗೋಡೆಗೆ ಒರಗಿ ಸುಮ್ಮನೇ ಸ್ವಲ್ಪ ಹೊತ್ತು ಇದ್ದುಬಿಟ್ಟೆ. "ಗೌತಮಿ," ಅಂತ ಮತ್ತೆ ನನ್ನನ್ನು ಮಾತನಾಡಿಸಿ ಎಲ್ಲವನ್ನೂ ಹೇಳಿಕೊಂಡ. ಮುಗಿದ ನಂತರ
"ಗೌತಮಿ, do you love me?"
ಎಂದು ಮತ್ತೊಮ್ಮೆ ಕೇಳಿದ. ಯಾಕೋ ಮನಸ್ಸು ತಡೆಯಲಿಲ್ಲ. ಅವನ proposal ಗೆ ಒಪ್ಪಿ,
"Yes, yes, ಆದರೆ ನಾನು ನಿನಗೆ I love you ಅಂತ ಹೇಳೋಕೆ ಇನ್ನೂ ತುಂಬಾ ಟೈಮ್ ಬೇಕು, ಕಾಯ್ತೀಯಾ?" ಅಂದೆ.”
ಅಷ್ಟೊಂದು ಕಾಯೋದು ಬೇಕಿಲ್ಲ, ನೀವು ಈಗ ತಾನೆ ಹೇಳಿದ್ರಿ" ಅಂತ ಹೇಳಿದ.
ಅವನನ್ನು ಗಟ್ಟಿಯಾಗಿ hug ಮಾಡಿದೆ. ಆನಂತರ ಇಡೀ ರಾತ್ರಿ ಇಬ್ಬರೂ ಆಕಾಶ ನೋಡುತ್ತಾ ಕುಳಿತೆವು. ನಾನು ಒಬ್ಬಳೇ ಮಾತನಾಡುತ್ತಾ ಏನೇನೋ ಹೇಳ್ತಾ ಇದ್ದೆ. ಪಾಪ, ಪೆದ್ದು ಥರ ಎಲ್ಲಾ ಕೇಳಿದ. ಬೆಳಿಗ್ಗೆ ನನ್ನನ್ನು ಮನೆಗೆ drop ಮಾಡಿ ಹೋಗುವಾಗ, ಅವನ ಕಿವಿಯಲ್ಲಿ "Thanks for the amazing birthday party" ಅಂತ ಹೇಳಿದೆ. "Amazing treat ಕೊಡಬೇಕು, ಮಿಸ್ ಮಾಡಂಗಿಲ್ಲ" ಅಂತ ಹೇಳಿದ. Bye ಹೇಳಿ ಅವನನ್ನು ಕಳುಹಿಸಿ ನಾನು ಮಾಡಿದ ಕೆಲಸವೇ ನಿನಗೆ ಪತ್ರ ಬರೀತಾ ಇರೋದು. ಇಷ್ಟು ಓದೋ ಹೊತ್ತೊಗಾಗಲೇ ನೀನು ನಿನ್ನ ಫೋನ್ ಕೈಗೆ ತಗೊಂಡಿರ್ತೀಯಾ ಅಂತ ಗೊತ್ತು. ಬೇಗ ಕಾಲ್ ಮಾಡು. ಬಹಳ ಮಾತನಾಡ್ಬೇಕು. Take care"
ನಿನ್ನ amazing ಗೆಳತಿ
ಗೌತಮಿ

*** The End ***

[ಇಲ್ಲಿಗೆ 'ಗೌತಮಿ ಕಣ್ಣಲ್ಲಿ' ಕಥೆ ಮುಗಿಯಿತು. ನನ್ನ ವೈಯಕ್ತಿಕ ಅಭಿಪ್ರಾಯ ಕೇಳೋದಾದ್ರೆ ನನಗಂತೂ ಲವ್ ಸ್ಟೋರಿಗಳು ಆಗಲೇ ಬೋರ್ ಆಗಲು ಶುರುವಾಗಿದೆ. ಲವ್ ಸ್ಟೋರಿ ಇದೆಯಲ್ಲಾ ಅಂತ ಎಷ್ಟೋ ಫಿಲಂಗಳಿಗೆ ಹೋಗೇ ಇಲ್ಲ. ಒಮ್ಮೊಮ್ಮೆ ಬಗ್ಗೆ ಯೋಚಿಸಿದಾಗ Lethal Weapon “I'm too old for this s**t” ಡೈಲಾಗ್ ನೆನಪಾಗುತ್ತೆ. ಆದರೆ ಹುಡುಗಿಯರ ದೃಷ್ಟಿಕೋನದಿಂದ ಪ್ರೀತಿಯನ್ನು ಹೆಚ್ಚು ಬಿಂಬಿಸದೇ ಪ್ರೀತಿ ಇರುವ ಒಂದು ಸಣ್ಣ ಕತೆಯನ್ನು ಬರೆದರೆ ಹೇಗೆ ಎಂಬ ಐಡಿಯಾ ಬಂತು. ಬರೀತಾ ಬರೀತಾ 11 ಪೇಜ್ ಆಗೋಯ್ತು. ನೀವು ನೋಡದಿರುವ / ಓದದಿರುವ ಅಸಾಧಾರಣ ಲವ್ ಸ್ಟೋರಿ ಇದೇನಲ್ಲ, ನಿರೂಪಣೆಗೆ ಮಾರ್ಕ್ಸ್ ಕೊಡಿ ಸಾಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ