ಅವಳು: ಮತ್ತೆ?
ಅವನು: ನೀವು ಹೇಳ್ಬೇಕು, ನಾವು ಕೇಳ್ಬೇಕು.
ಅವಳು: ಹಾ, ಹಿಂಗೆ ಏನಾದ್ರೂ ಚೆನ್ನಾಗಿ ಹೇಳ್ತೀಯಾ, ನೀನೇ ಏನಾದ್ರೂ ಹೇಳು.
ಅವನು: ಸರಿ ಹಾಗಾದ್ರೆ, ಹುಚ್ಚ ಅಂದ್ರೆ ನಿನಗೆ ಏನು / ಯಾರು ನೆನಪಾಗ್ತಾರೆ?
ಅವಳು: ಪ್ರೊಫೆಸರ್ ಹುಚ್ಚುರಾಯ ಫಿಲಂ.
ಅವನು: ಓಹೋ ಬ್ಲಾಕ್ ಅಂಡ್ ವೈಟ್ ಸಿನಿಮಾಗಳ ಸುವರ್ಣ ಯುಗ, ಮತ್ತೆ?
ಅವಳು: ಸಾಯಿ ಕುಮಾರ್ ಫಿಲಂ, ಹೆಸರು ಗೊತ್ತಿಲ್ಲ, ಹುಚ್ಚ ರಘುವೀರ್ ಅಂತಿರ್ತಾನಲ್ಲ, ಅವನು: ಓ ಅದಾ? ಫಿಲಂ ಹೆಸರು ಧೈರ್ಯ ಅಂತ, ಚಿಂದಿ ಇದೆ. ಮುಂದೆ?
ಅವಳು: ಕಿಚ್ಚ ಸುದೀಪ್
ಅವನು: to be precise, ಆ ಫಿಲಂ ಹೆಸರು ಹುಚ್ಚ, ಅದರಲ್ಲಿ ಸುದೀಪ್ ಹೆಸರು ಕಿಚ್ಚ, ಇರಲಿ, ನೀನು ಹೆಂಗೆ ಹೇಳಿದ್ರೂ ಅದೇ ಸರಿ. ಆಮೇಲೆ?
ಅವಳು: ಹುಚ್ಚ ವೆಂಕಟ್!
ಅವನು: ಅಬ್ಬಾ, ಅಣ್ಣ ಕೊನೆಗಾದ್ರೂ ನೆನಪಾದ್ರಲ್ಲ, ಫೇಸ್ ಬುಕ್, ವಾಟ್ಸ್ಯಾಪ್ ಎಲ್ಲಸ ಬ್ಯಾನ್ ಆಗ್ಬೇಕ್!! :p :p ಮತ್ತೆ?
ಅವಳು: ಅಯ್ಯೋ, ಎಷ್ಟು ಹೇಳಿದರೂ ಆಮೇಲೆ, ಮುಂದೆ ಅಂತ ಹೇಳ್ತಾ ಇದ್ದೀಯಲ್ಲ, ನಿನಿಗ್ ನಾನ್ ಇಷ್ಟ ಇಲ್ವಾ? ನಾನ್ ವಾಪಸ್ ಮನೆಗೆ ಹೋಗ್ತೀನಿ.
ಅವನು: ಏ ಇಲ್ಲ ರೀ, ಕೂತ್ಕೊಳಿ, ನಿನ್ ನಗು, ನಿನ್ ಮಾತು, ನಿನ್ ಮೌನ, ನಿನ್ನ ಬೇಜಾರು, ಎಲ್ಲವೂ ನನಗಿಷ್ಟ. ಟಿವಿಯಲ್ಲಿ Tom and Jerry ಬರ್ತಾ ಇದ್ದಾಗ ಹೇಗೆ ಎಲ್ಲವನ್ನೂ ಮರೆತು ನೋಡ್ತಾ ಇದ್ನೋ ಹಾಗೆ ನಿನ್ನನ್ನು ನೋಡ್ತಾ ಇರಬೇಕು ಅನ್ನೋ ಕೆಟ್ಟ ಆಸೆ ಇತ್ತೀಚೆಗೆ ಯಾಕೋ ತುಂಬಾ ಜಾಸ್ತಿ ಆಗ್ತಿದೆ. ಇವತ್ತು ಸ್ವಲ್ಪ ಜಾಸ್ತೀನೇ involve ಆದೆ ಅನ್ಸುತ್ತೆ ಏನ್ ಮಾಡೋಡು ಹೇಳಿ, ಐದು ದಿನ ನಿಮ್ಮನ್ನು ನೋಡದೇ ಕೆಲಸಕ್ಕೆ ಹೋಗೋ ಕಷ್ಟ ಮತ್ಯಾರಿಗೂ ಗೊತ್ತಿಲ್ಲ ಬಿಡಿ. ಅದಿಕ್ಕೆ ವೀಕೆಂಡ್ ನೀವ್ ಸಿಕ್ಕಾಗ ನಮಿಗೆ ಖುಷಿ ಜಾಸ್ತಿಯಾಗಿ ಈ ಥರ ಲೈಟಾಗಿ ಹುಚ್ಚು ಹಿಡಿಯುತ್ತೆ.
ಅವಳು: ಇಡಿಯಟ್
ಅವನು: ಈ ಹುಡುಗೀರಿಗೆ ಲವ್ ಜಾಸ್ತಿ ಆದಾಗ ಕಣ್ಣಲ್ಲೇ ಮುತ್ತಿಡ್ತಾರೆ, ಇನ್ನೂ ಹೆಚ್ಚಾದಾಗ ಈಡಿಯಟ್ ಅಂತ ಸ್ವೀಟಾಗಿ ಬೈತಾರೆ ಅಂತ ಎಲ್ಲೋ ಓದಿದ್ನಪ್ಪಾ!!
ಒಂದು ದಿನ, ಒಂದು ದಿನದ ಮಟ್ಟಿಗೆ ನೀನು ದೊಡ್ಡ ಡೈರೆಕ್ಟರ್ ಅಂದ್ಕೋ, ನೆನಪಿರಲಿ ಪ್ರೇಮ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಕಾಲ್ ಶೀಟ್ ನಿನ್ ಹತ್ರ ಇದೆ. ಇಬ್ಬರ ಮಧ್ಯ ಒಂದು ರೊಮ್ಯಾಂಟಿಕ್ ದೃಶ್ಯ ಶೂಟ್ ಮಾಡ್ಬೇಕು, ಹೆಂಗ್ ಮಾಡ್ತೀಯಾ ಹೇಳು ನೋಡೋಣ"
ಪ್ರಶ್ನೆ ಮುಗಿದ ನಂತರ ಕೋಟಿ ಕುಮಾರ್ ಅವರನ್ನು ಕಂಡ ಆಕಾಂಕ್ಷ್ ಗೆ ವಿಕ್ರಮ-ಬೇತಾಳ ಕಥಾಸರಣಿಯಲ್ಲಿ ವಿಚಿತ್ರ ಪ್ರಶ್ನೆ ಕೇಳಿ ನಗುತ್ತಾ ಕಾಯುವ ಬೇತಾಳದ ನೆನಪಾಗಿ ಒಂದು ಕ್ಷಣ ಭಯ ಆಗುತ್ತೆ. ಫೋಕಸ್ ಮಗಾ ಅಂತ ಮನಸಲ್ಲೇ ಅಂದುಕೊಂಡು ಮೇಲೆ ಹೇಳಿದ ಕಥೆಯನ್ನು ಯೋಚಿಸಿ ವಿವರಿಸುತ್ತಾನೆ.
ಕೋಟಿ ಕುಮಾರ್: ರೊಮ್ಯಾಂಟಿಕ್ ಸೀನ್ ಹೇಳೋ ಅಂದ್ರೆ ಕುಯ್ದುಬಿಟ್ಟಲ್ಲೋ ಹುಡುಗಾ?"
ಆಕಾಂಕ್ಷ್: ಇದೊಂಥರ ಬೇರೆ ಕೆಟಗರಿ ಸರ್, ಬೌದ್ಧಿಕ ಸಾಂಗತ್ಯ, ಮನದಲ್ಲಿ ಪ್ರೀತಿಸಿ ಒಬ್ಬರಲ್ಲೊಬ್ಬರು ಲೀನವಾಗುವ ಕಥೆ.
ಕೋಟಿ ಕುಮಾರ್: You may leave now, we will call you
ಅವನು: ನೀವು ಹೇಳ್ಬೇಕು, ನಾವು ಕೇಳ್ಬೇಕು.
ಅವಳು: ಹಾ, ಹಿಂಗೆ ಏನಾದ್ರೂ ಚೆನ್ನಾಗಿ ಹೇಳ್ತೀಯಾ, ನೀನೇ ಏನಾದ್ರೂ ಹೇಳು.
ಅವನು: ಸರಿ ಹಾಗಾದ್ರೆ, ಹುಚ್ಚ ಅಂದ್ರೆ ನಿನಗೆ ಏನು / ಯಾರು ನೆನಪಾಗ್ತಾರೆ?
ಅವಳು: ಪ್ರೊಫೆಸರ್ ಹುಚ್ಚುರಾಯ ಫಿಲಂ.
ಅವನು: ಓಹೋ ಬ್ಲಾಕ್ ಅಂಡ್ ವೈಟ್ ಸಿನಿಮಾಗಳ ಸುವರ್ಣ ಯುಗ, ಮತ್ತೆ?
ಅವಳು: ಸಾಯಿ ಕುಮಾರ್ ಫಿಲಂ, ಹೆಸರು ಗೊತ್ತಿಲ್ಲ, ಹುಚ್ಚ ರಘುವೀರ್ ಅಂತಿರ್ತಾನಲ್ಲ, ಅವನು: ಓ ಅದಾ? ಫಿಲಂ ಹೆಸರು ಧೈರ್ಯ ಅಂತ, ಚಿಂದಿ ಇದೆ. ಮುಂದೆ?
ಅವಳು: ಕಿಚ್ಚ ಸುದೀಪ್
ಅವನು: to be precise, ಆ ಫಿಲಂ ಹೆಸರು ಹುಚ್ಚ, ಅದರಲ್ಲಿ ಸುದೀಪ್ ಹೆಸರು ಕಿಚ್ಚ, ಇರಲಿ, ನೀನು ಹೆಂಗೆ ಹೇಳಿದ್ರೂ ಅದೇ ಸರಿ. ಆಮೇಲೆ?
ಅವಳು: ಹುಚ್ಚ ವೆಂಕಟ್!
ಅವನು: ಅಬ್ಬಾ, ಅಣ್ಣ ಕೊನೆಗಾದ್ರೂ ನೆನಪಾದ್ರಲ್ಲ, ಫೇಸ್ ಬುಕ್, ವಾಟ್ಸ್ಯಾಪ್ ಎಲ್ಲಸ ಬ್ಯಾನ್ ಆಗ್ಬೇಕ್!! :p :p ಮತ್ತೆ?
ಅವಳು: ಅಯ್ಯೋ, ಎಷ್ಟು ಹೇಳಿದರೂ ಆಮೇಲೆ, ಮುಂದೆ ಅಂತ ಹೇಳ್ತಾ ಇದ್ದೀಯಲ್ಲ, ನಿನಿಗ್ ನಾನ್ ಇಷ್ಟ ಇಲ್ವಾ? ನಾನ್ ವಾಪಸ್ ಮನೆಗೆ ಹೋಗ್ತೀನಿ.
ಅವನು: ಏ ಇಲ್ಲ ರೀ, ಕೂತ್ಕೊಳಿ, ನಿನ್ ನಗು, ನಿನ್ ಮಾತು, ನಿನ್ ಮೌನ, ನಿನ್ನ ಬೇಜಾರು, ಎಲ್ಲವೂ ನನಗಿಷ್ಟ. ಟಿವಿಯಲ್ಲಿ Tom and Jerry ಬರ್ತಾ ಇದ್ದಾಗ ಹೇಗೆ ಎಲ್ಲವನ್ನೂ ಮರೆತು ನೋಡ್ತಾ ಇದ್ನೋ ಹಾಗೆ ನಿನ್ನನ್ನು ನೋಡ್ತಾ ಇರಬೇಕು ಅನ್ನೋ ಕೆಟ್ಟ ಆಸೆ ಇತ್ತೀಚೆಗೆ ಯಾಕೋ ತುಂಬಾ ಜಾಸ್ತಿ ಆಗ್ತಿದೆ. ಇವತ್ತು ಸ್ವಲ್ಪ ಜಾಸ್ತೀನೇ involve ಆದೆ ಅನ್ಸುತ್ತೆ ಏನ್ ಮಾಡೋಡು ಹೇಳಿ, ಐದು ದಿನ ನಿಮ್ಮನ್ನು ನೋಡದೇ ಕೆಲಸಕ್ಕೆ ಹೋಗೋ ಕಷ್ಟ ಮತ್ಯಾರಿಗೂ ಗೊತ್ತಿಲ್ಲ ಬಿಡಿ. ಅದಿಕ್ಕೆ ವೀಕೆಂಡ್ ನೀವ್ ಸಿಕ್ಕಾಗ ನಮಿಗೆ ಖುಷಿ ಜಾಸ್ತಿಯಾಗಿ ಈ ಥರ ಲೈಟಾಗಿ ಹುಚ್ಚು ಹಿಡಿಯುತ್ತೆ.
ಅವಳು: ಇಡಿಯಟ್
ಅವನು: ಈ ಹುಡುಗೀರಿಗೆ ಲವ್ ಜಾಸ್ತಿ ಆದಾಗ ಕಣ್ಣಲ್ಲೇ ಮುತ್ತಿಡ್ತಾರೆ, ಇನ್ನೂ ಹೆಚ್ಚಾದಾಗ ಈಡಿಯಟ್ ಅಂತ ಸ್ವೀಟಾಗಿ ಬೈತಾರೆ ಅಂತ ಎಲ್ಲೋ ಓದಿದ್ನಪ್ಪಾ!!
ಅವಳು ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಅವನ ಎದೆಗೊರಗಿ ಕಣ್ಣು ಮುಚ್ಚುತ್ತಾಳೆ. ಅವಳ ಕಣ್ಣಲ್ಲಿ ಮೂಡಿದ ಹನಿಯು ಜಾರಿ ಅವನ ಅಂಗಿಯ ಮೇಲೆ ಚಿತ್ತಾರವಾಗುತ್ತದೆ.
ಸಾಂದರ್ಭಿಕ ಚಿತ್ರ: ಪ್ರದೀಪ್ ಎಂ
(ಕಟ್ ಮಾಡಿದ್ರೆ ಒಂದು ಕಾಲ್ಪನಿಕ ದೇಶದ ಕಾಲ್ಪನಿಕ ಊರಲ್ಲಿ, ಫಾರ್ಮುಲಾ ಮೂವಿ ಮೇಕರ್ಸ್ ಸಂಸ್ಥೆಯಲ್ಲಿ ಕಥೆಗಾರರ ಕೆಲಸಕ್ಕಾಗಿ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಿರುತ್ತಾರೆ. ನಮ್ ಪ್ರದೀಪ್ ಎಂ ಆಚಾರ್ ನ ಹೋಲುವ 'ಆಕಾಂಕ್ಷ್' ಎಂಬ ನಮ್ಮ ಕಥಾನಾಯಕ ತನ್ನಿಷ್ಟದ ದೈವ 'ಅವಕಾಶೇಶ'ನಿಗೆ ನಮಿಸಿ ಒಳ್ಳೆ ಫಾರ್ಮಲ್ಸ್ ಬಟ್ಟೆ ಧರಿಸಿ ರೂಮ್ ಮೇಟ್ ನ ಷೂ ಹಾಕಿಕೊಂಡು Hotel 500
Crore ನ ಪಕ್ಕದಲ್ಲಿರುವ ಪ್ರೊಡಕ್ಷನ್ ಆಫೀಸ್ ಗೆ ಹೋಗುತ್ತಾನೆ. ಇಂಟರ್ವ್ಯೂ ಗೆಂದು ಒಳಗೆ ಹೋದಾಗ ಕೋಟಿ ಕುಮಾರ್ ಒಂದು ಪ್ರಶ್ನೆ ಕೇಳ್ತಾರೆ,
"ನಾನು ಕೇಳೋ ಪ್ರಶ್ನೆಗೆ ಕಣ್ ಮುಚ್ಚಿ ಎರಡು ನಿಮಿಷ ಯೋಚನೆ ಮಾಡು, ಆದ ಮೇಲೆ ಕಣ್ಣು ಬಿಟ್ಟು ಉತ್ತರ ಕೊಡು.ಒಂದು ದಿನ, ಒಂದು ದಿನದ ಮಟ್ಟಿಗೆ ನೀನು ದೊಡ್ಡ ಡೈರೆಕ್ಟರ್ ಅಂದ್ಕೋ, ನೆನಪಿರಲಿ ಪ್ರೇಮ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಕಾಲ್ ಶೀಟ್ ನಿನ್ ಹತ್ರ ಇದೆ. ಇಬ್ಬರ ಮಧ್ಯ ಒಂದು ರೊಮ್ಯಾಂಟಿಕ್ ದೃಶ್ಯ ಶೂಟ್ ಮಾಡ್ಬೇಕು, ಹೆಂಗ್ ಮಾಡ್ತೀಯಾ ಹೇಳು ನೋಡೋಣ"
ಪ್ರಶ್ನೆ ಮುಗಿದ ನಂತರ ಕೋಟಿ ಕುಮಾರ್ ಅವರನ್ನು ಕಂಡ ಆಕಾಂಕ್ಷ್ ಗೆ ವಿಕ್ರಮ-ಬೇತಾಳ ಕಥಾಸರಣಿಯಲ್ಲಿ ವಿಚಿತ್ರ ಪ್ರಶ್ನೆ ಕೇಳಿ ನಗುತ್ತಾ ಕಾಯುವ ಬೇತಾಳದ ನೆನಪಾಗಿ ಒಂದು ಕ್ಷಣ ಭಯ ಆಗುತ್ತೆ. ಫೋಕಸ್ ಮಗಾ ಅಂತ ಮನಸಲ್ಲೇ ಅಂದುಕೊಂಡು ಮೇಲೆ ಹೇಳಿದ ಕಥೆಯನ್ನು ಯೋಚಿಸಿ ವಿವರಿಸುತ್ತಾನೆ.
ಕೋಟಿ ಕುಮಾರ್: ರೊಮ್ಯಾಂಟಿಕ್ ಸೀನ್ ಹೇಳೋ ಅಂದ್ರೆ ಕುಯ್ದುಬಿಟ್ಟಲ್ಲೋ ಹುಡುಗಾ?"
ಆಕಾಂಕ್ಷ್: ಇದೊಂಥರ ಬೇರೆ ಕೆಟಗರಿ ಸರ್, ಬೌದ್ಧಿಕ ಸಾಂಗತ್ಯ, ಮನದಲ್ಲಿ ಪ್ರೀತಿಸಿ ಒಬ್ಬರಲ್ಲೊಬ್ಬರು ಲೀನವಾಗುವ ಕಥೆ.
ಕೋಟಿ ಕುಮಾರ್: You may leave now, we will call you
ರೋಸಿ ಹೋದ ಆಕಾಂಕ್ಷ್ ಮನೆಗೆ ಬರುವಾಗ ಬರೀ ಹೆಸರು / ವಿಳಾಸ ಬದಲಾಯಿಸಿದ್ದ ತನ್ನ ಗೆಳೆಯ ನೀಡಿದ್ದ Website
Developer Resume ಪ್ರಿಂಟ್ ಮಾಡಿಸಿಕೊಂಡು ಮನೆಗೆ ಬರುತ್ತಾನೆ. ನಾಳೆ ಇಂದ ನಮ್ಮದೇನಿದ್ದರೂ ಐಟಿ ಬದುಕು, ಇನ್ನು ನಮಿಗೂ ಇದಕ್ಕೂ ಸಂಬಂಧ ಇಲ್ಲ ಅಂತ ಯೋಚಿಸಿ ಒಂದೊಂದು ಅಕ್ಷರವನ್ನೂ ಯೋಚಿಸಿ ಬರೆದಿದ್ದ ಕಿರು ಚಿತ್ರ / ಕಥೆಗಳನ್ನು ಹರಿದು ಕಸದ ಬುಟ್ಟಿಗೆ ಎಸೆದ. ಹರಿದ ಆ ಹಾಳೆಗಳಲ್ಲಿ ಒಂದು ಚೂರು ಕಸದ ಬುಟ್ಟಿಗೆ ಬೀಳದೆ ಪಕ್ಕಕ್ಕೆ ಬಿದ್ದಿತು. ಅದರ ಮೇಲೆ 'ಅಪೂರ್ಣ ಕನಸು' ಎಂದು ಬರೆದಿತ್ತು.
(ಕಟ್ ಮಾಡಿದ್ರೆ ನಾನು ಗಣೇಶ ಹಬ್ಬದ ಪ್ರಯುಕ್ತ ಊರಿಗೆ ಹೋಗಲು ಬಸ್ಸಲ್ಲಿ ಹೋಗ್ತಾ ಇದ್ದೆ. ಹಬ್ಬ ಇದ್ರೂ ಬಸ್ಸಲ್ಲಿ ಜನರೇ ಜಾಸ್ತಿ ಇಲ್ವಲ್ಲಾ ಅಂತ ಆಶ್ಚರ್ಯವಾಯಿತು. ಹಂಗೆ ಯೋಚನೆ ಮಾಡ್ತಾ ಇದ್ದಾಗ ಬೆಳಿಗ್ಗೆ ನಮ್ ಎಂ.ಎಲ್.ಎ ಫೋನ್ ಮಾಡಿದಾಗ "ಅಲ್ಲ ಮಗಾ, ಅದೇನೋ advertising ಅಂತ ಓಡಾಡ್ತಾ ಇದ್ದಲ್ಲಾ, ಯಾವ್ದೂ ಮಾಡಲಿಲ್ವಾ" ಅಂತ ಕೇಳಿದ್ದು ನೆನಪಾಯಿತು. ಅರೇ ಹೌದಲ್ವಾ advertising
course ಏನೋ ಮಾಡಿದೆ. ಆದರೆ ಒಂದೂ ad ಮಾಡಲಿಲ್ವಲ್ಲಾ ಅಂತ ಯೋಚಿಸುತ್ತಿದ್ದಾಗ ನಾನು ಬರೆಯುವ ಈ ಬ್ಲಾಗ್ ನ ಕುರಿತು ad ಮಾಡಿದರೆ ಹೇಗೆ ಎಂದು ಅನಿಸಿತು. ಥಟ್ಟನೇ ನೆನಪಾಗಿದ್ದು ರಾಧಿಕಾ ಪಂಡಿತ್, ಪ್ರೇಮ್ ಕುಮಾರ್. ನಂತರ ಬರೆದ ಸಾಲುಗಳಿವು. ಇದು ಬ್ಲಾಗ್ ಅಂಕಣವೋ? ಕಿರು ಚಿತ್ರವೋ? ಜಾಹೀರಾತಿನ ಮೊದಲ ಹಸ್ತಪ್ರತಿಯೋ? ನೀವೇ ಹೇಳಬೇಕು. ಉಪ್ಪಿ2 ಚಿತ್ರದ ಹ್ಯಾಂಗ್ ಓವರ್ ಇನ್ನೂ ಇಳಿದಿಲ್ಲದಿರುವುದರಿಂದ ಈ ಅಂಕಣವೂ ಕೂಡ ಎಲ್ಲಿಂದೆಲ್ಲಿಗೋ ಓಡೋ ಥರ ಇದೆ, ಎಂದಿನಂತೆ ವಸಿ ಅಡ್ಜಸ್ಟ್ ಮಾಡ್ಕೊಂಡು ಓದಬೇಕು.
ಗಣೇಶ ಚತುರ್ಥಿಯ ಈ ಸುದಿನ ನಿಮಗೆಲ್ಲಾ ಒಳಿತಾಗಲಿ.
😂😂 Superb... 👌
ಪ್ರತ್ಯುತ್ತರಅಳಿಸಿ