ಒಬ್ಬ: ಮಗಾ, ಈ ವಾರ ಆ ಫಿಲಂ ಹಾಡು ರಿಲೀಸ್ ಆಯ್ತು, ಡೌನಲೋಡ್ ಮಾಡ್ಕೊಂಡಾ?
ಇನ್ನೊಬ್ಬ: ಇಲ್ಲಾ ಮಗಾ, ಟೈಮ್ ಆಗಲಿಲ್ಲ, ನೀನೇ ವಸಿ whatsapp ಅಲ್ಲಿ ಕಳಿಸಿಬಿಡು.
ಇನ್ನೊಬ್ಬ: ಇಲ್ಲಾ ಮಗಾ, ಟೈಮ್ ಆಗಲಿಲ್ಲ, ನೀನೇ ವಸಿ whatsapp ಅಲ್ಲಿ ಕಳಿಸಿಬಿಡು.
ಇತ್ತೀಚಿನ ದಿನಗಳಲ್ಲಿ whatsapp ನಲ್ಲಿ ನಾನು ಕಂಡ common conversation ಗಳಿವು. ಚಿತ್ರ ರಂಗಿತರಂಗ ಆಗಿರಬಹುದು, ಶ್ರೀಮಂತುಡು ಆಗಿರಬಹುದು, ಮಾತು ಮಾತ್ರ ಅದೇ. ಇದರ ಬಗ್ಗೆ ಯೋಚನೆ ಮಾಡಿದಾಗ 45-60 ರುಪಾಯಿ ಕೊಟ್ಟು ಕ್ಯಾಸೆಟ್ ಖರೀದಿಸಿ ಹಾಡು ಕೇಳುತ್ತಾ ಇದ್ದ ಕಾಲ ನೆನಪಾಯಿತು. ಆದರೆ ಬಹಳ ಜನಕ್ಕೆ ಗೊತ್ತಿದೆಯೋ ಇಲ್ವೋ ಗೊತ್ತಿಲ್ಲ, ಸ್ಟೋರಿ ಕ್ಯಾಸೆಟ್ಟುಗಳು ಸಿಗ್ತಾ ಇದ್ವು. 'ಎ' ಫಿಲಂ ನಾನು ಆಗಲೇ ಒಂದೆರಡು ಮೂರು ಸಲ ನೋಡಿದ್ದೆ ಅನಿಸುತ್ತೆ. ಕ್ಯಾಸೆಟ್ ತಗೊಂಡು ಮನೆಗೆ ಬಂದಾಂಗಂತೂ ಹಬ್ಬ ಮಾಡಿದ್ದೆ. “India is Great, Indian culture is great,... But Indians are not great”
“ಈ ಜೀವನ ಒಂಥರಾ ಕನ್ನಡಿ ಇದ್ದಂಗೆ..” “90 Crore minus 1 God is Great” ಎಂಬಿತ್ಯಾದಿ ಡೈಲಾಗ್ ಗಳೇ ತಲೆ ತುಂಬಿ ಹೋಗಿದ್ದವು. ಅಲ್ಲಿಂದ ಶುರುವಾದ ಉಪ್ಪಿ ಪ್ರಭಾವಳಿ ಇಂದಿಗೂ ನನ್ನ ಮೇಲೆ ಹಾಗೇ ಇದೆ. ಇನ್ನೂ ಸುಮಾರು ಪಟ್ಟು ಜಾಸ್ತಿ ಆಗಿದೆ ಅಂದರೆ ತಪ್ಪಲ್ಲ. ಕಳೆದ ವರ್ಷ ಉಪ್ಪಿ ಹುಟ್ಟುಹಬ್ಬಕ್ಕಾಗಿ “Happy Birthday ಉಪ್ಪಿಟ್ಟು” ಅಂತ ಕೇಕ್ ಮೇಲೆ ಅಕ್ಷರ ಬರೆದುಕೊಂಡು ನಾನು, ಹೋಗಿದ್ವಿ. ಆ ದಿನ ಉಪ್ಪಿಯನ್ನು ನೋಡಲಾಗಲಿಲ್ಲ, ಜೊತೆಗೆ ಪೊಲೀಸರ ಏಟಿಂದ ತಪ್ಪಿಸಿಕೊಳ್ಳಲು ಹೋಗಿ ಕೇಕ್ ನೆಲಕ್ಕೆ ಬಿದ್ದು ಅಕ್ಷರಶಃ ಉಪ್ಪಿಟ್ಟಾಗಿದ್ದು ವಿಪರ್ಯಾಸವೇ ಇರಬಹುದು. ಇನ್ನೂ ಏನೇನೋ ಬರೆಯಬೇಕು ಆದರೆ ಸದ್ಯಕ್ಕೆ ಇಲ್ಲಿಗೇ ನಿಲ್ಲಿಸಿ ಪೂರ್ತಿ ಕಥೆಯೊಂದಿಗೆ ಮತ್ತೆ ಹಾಜರಾಗುವೆ. ಸದ್ಯಕ್ಕೆ Happy Birthday Uppi.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ