ಬ್ಯಾಂಕ್ ಕೆಲಸ ಅಂದರೆ ಎರಡು ವಿಷಯಗಳಿಂದ ತಪ್ಪಿಸಿಕೊಳ್ಳೋಕೆ ಆಗಲ್ಲ: ಒಂದು ಸಂಖ್ಯೆಗಳು, ಇನ್ನೊಂದು ಹೆಸರುಗಳು. ಹೀಗೇ ಬೆಳಿಗ್ಗೆ ಬ್ಯಾಂಕ್ ಗೆ ಬಂದು, ಕಂಪ್ಯೂಟರ್ ಆನ್ ಮಾಡಿ, ಲಾಗಿನ್ ಆಗಿ, ಬಾಕಿ ಉಳಿದ ಸಣ್ಣ ಪುಟ್ಟ ಕೆಲಸಗಳನ್ನು ಮಾಡ್ತಾ ಇದ್ದೆ, ಆಗ 'ಅನುಸೂಯ' ಅನ್ನೋ ಹೆಸರು ಕಾಣಿಸಿತು. ತಲೆಯ ಯಾವ್ ಮೂಲೆಯಲ್ಲಿತ್ತೋ ಏನೋ, "ಹ್ಹ ಹ್ಹ ಹ್ಹ, ಅನುಸೂಯ, ಎಲ್ಲಿ ನಿನ್ನ ಅಂಗಾರ?" ಅನ್ನೋ ಡೈಲಾಗ್ ಬಾಯಿಂದ ಆಚೆ ಬಂದೇ ಬಿಡ್ತು. ಅದರ ಹಿಂದೆಯೇ "ನೀನು ಉದ್ಧಾರ ಆಗಲ್ಲ ಬಿಡು" ಎಂದು ನಗುತ್ತಾ ಯಾರೋ ತುಪುಕ್ ಅಂತ ಉಗಿದಂಗಾಯ್ತು. ನೋಡಿದ್ರೆ ಪಕ್ಕ ಯಾರೂ ಇರಲಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ