(ಹಿಂಗೇ ವಾಟ್ಸ್ಯಾಪ್ ಗ್ರೂಪಲ್ಲಿ ಚಾಟ್ ಮಾಡುತ್ತಿದ್ದಾಗ...)
ನಾನು: ಮಗಾ, ದಸರಾ ಹಬ್ಬಕ್ಕೆ ಬರ್ತಾ ನಿನ್ ಎಸ್.ಎಲ್.ಆರ್. ಕ್ಯಾಮೆರಾ ತಗೊಂಡು ಬಾ, ಆಗಿದ್ದು ಆಗಲಿ ಒಂದು ಶಾರ್ಟ್ ಮೂವಿ ಮಾಡೇ ಬಿಡೋಣ ಅತ್ಲಾಗೆ.
ಅವನು: 😳😳😳😳😳😳
ಇವನು: ದಸರಾ ಹಬ್ಬಕ್ಕೆ ಮೈಸೂರಿಗೆ ನೆಡೆದುಕೊಂಡು ಹೋಗ್ತಾ ಇದ್ದೀನೋ, ಬರೋಕಾಗಲ್ಲ, ಈಗಿನ್ನೂ ಚನ್ನಪಟ್ಟಣದ ಹತ್ರ ಇದ್ದೀನಿ, ನಿನಗೆ ಶಾರ್ಟ್ ಮೂವಿಗಾಗಿ ಗೊಂಬೆ ಏನಾದ್ರೂ ಕಳುಹಿಸಬೇಕಾ?
ಒಬ್ಬ: ಮಗಾ, ಹಳ್ಳಿಯಲ್ಲಿ ಮದುವೆ ಇದೆ ಬರೋಕಾಗಲ್ಲ, ನೀನೇ ಇಲ್ಲಿಗೆ ಬಂದುಬಿಡು, ಮದುವೆ ಸೀನ್ಸ್ ಇದ್ರೆ ಶೂಟ್ ಮಾಡ್ಕೋಬಹುದು.
ಇನ್ನೊಬ್ಬ: ಆಫೀಸಲ್ಲಿ ರಜಾ ಕೊಟ್ಟಿಲ್ವೋ, ಏನ್ ಮಾಡೋದು ಈಗ??
ಮತ್ತೊಬ್ಬ: ನಾನು ಬೆಂಗಳೂರಲ್ಲೇ ಇದ್ದೀನೋ, ಯಾಕೆ ಅಂತ ಗೊತ್ತಲ್ಲ!! 😜 ಸಾರಿ ಕಣೋ.
ಕ್ಯಾಮೆರಾ ಹುಡುಗ: ಅಯ್ಯೋ, ಎಂಥ ಕೆಲಸ ಆಯ್ತು ಮಗಾ, ಆಗಲೇ ನನ್ ಫ್ರೆಂಡ್ ಒಬ್ಳಿಗೆ ಕ್ಯಾಮೆರಾ ಕೊಟ್ಟುಬಿಟ್ನಲ್ಲೋ, ಅವಳು ಹೈದರಾಬಾದ್ ಗೆ ಹೋಗಾಯ್ತು.
ಸಾಂದರ್ಭಿಕ ಚಿತ್ರ: ಪ್ರದೀಪ್ ಎಂ
ಗಾಂಧಿನಗರದಲ್ಲಿ ಕೆಲವು ನಿರ್ದೇಶಕರು “ಒಂದು ಒಳ್ಳೆ ಕಥೆ ಮಾಡಿದ್ದೀನಿ, ಬನ್ನಿ ಫಿಲಂ ಮಾಡೋಣ” ಅಂದ್ರೆ ನಿರ್ಮಾಪಕರು / ಫೈನಾನ್ಸ್ ಮಾಡೋರು ನಂಬರ್ ಚೇಂಜ್ ಮಾಡಿ ಯಾರ ಕೈಗೂ ಸಿಗದೆ ಕಣ್ಮರೆಯಾಗಿ ಹೋಗುವ ಸುದ್ದಿಯನ್ನು ಆಗಾಗ ಪೇಪರಲ್ಲಿ ಓದಿರಬಹುದು. ನಾನು ಬರೀ ಶಾರ್ಟ್ ಮೂವಿ ಮಾಡಿ ನಮ್ ಹುಡುಗರಲ್ಲಿ ಈ ಮಟ್ಟಕ್ಕೆ ಭಯ ಇಟ್ಟಿದ್ದೀನಲ್ಲಾ ಏನಪ್ಪಾ ನನ್ನ ಕಥೆ ಅಂತ ಯೋಚಿಸುತ್ತಿರುವಾಗಲೇ ಪಕ್ಕ ನಿಂತಿದ್ದ ಆಟೋದಲ್ಲಿ “ನಗುವುದೋ ಅಳುವುದೋ ನೀವೇ ಹೇಳಿ” ಹಾಡು ಕೇಳಿಸಿತು.
What happens
behind the camera, stays behind the camera!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ