ನವೆಂಬರ್ 7, 2015

ತನುವಿನ ತುಂಬೆಲ್ಲಾ ಟೈಟಾನಿಕ್ ತನಿನನನ...


ಸಲ ಸುಮ್ಮನೆ ಗಾಂಧಿನಗರ ಸುತ್ತಿ ಮೆಜೆಸ್ಟಿಕ್ ಗೆ ಬರೋದಿಲ್ಲ, ನೇರವಾಗಿ ವಿಷಯದಿಂದಲೇ ಮಾತು ಆರಂಭಿಸುತ್ತೇನೆ. ಪ್ರಾಯಶಃ ಇಂಗ್ಲೀಷ್ ಸಿನಿಮಾಗಳನ್ನು ನೋಡದೇ ಇರೋರಿಗೂ ಕೂಡ ಗೊತ್ತಿರೋ ಫಿಲಂಗಳು ಎರಡು: ಒಂದು Jurassic Park ಮತ್ತೊಂದು Titanic. ಎರಡೂ ಚಿತ್ರಗಳನ್ನು ನಾನು VCP / VCR ಜಮಾನದಲ್ಲಿ ಒಂಚೂರು ನೋಡಿದ್ದು ಬಿಟ್ಟರೆ, ಮತ್ತೆ ಆ ಫಿಲಂಗಳನ್ನು ನೋಡಲು ಆಗಿರಲಿಲ್ಲ. I mean, ನನಗೆ ಚಿತ್ರಗಳ ಕಥೆ ಗೊತ್ತು, ನಿದ್ದೆ ಮಂಪರಿನಲ್ಲಿ ಕೆಲವು ಸೀನ್ ಗಳು ಮಿಸ್ ಆಗಿ ಹೆಚ್ಚು ಕಡಿಮೆ ಅರ್ಧ ಮುಕ್ಕಾಲು ಚಿತ್ರ ನೋಡಿದ್ದೇನೆ, ಆದರೆ ಪಕ್ಕಾ professionally ಮೊದಲಿಂದ ಕೊನೆಯವರೆಗೂ ನೋಡಿಲ್ಲ. ಅದರಲ್ಲೂ ಟೈಟಾನಿಕ್ ಚಿತ್ರವೊಂದನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುವುದಾದರೆ ಇದುವರೆಗೂ ಫಿಲಂ ನೋಡಲಾಗಿಲ್ಲ, ಅದೊಂದು ಸೀನ್ ಬಿಟ್ಟು! ಯಾವ್ ಸೀನ್ ಅಂತ ಬೇರೆ ಹೇಳೋದು ಬೇಡ ಅನಿಸುತ್ತೆ, ಬ್ಲಾಗ್ ಗಳಿಗೂ ಕೂಡ ಸೆನ್ಸಾರ್ ಬೋರ್ಡ್ ಬರೋ ಹಂಗೆ ನಾವಾಗಿ ನಾವೇ ಯಾಕೆ ಮಾಡಿಕೊಳ್ಳಬೇಕು, ಲ್ವಾ? ವಿಷಯ ಅಲ್ಲೇ ಬಿಟ್ಟು ಮುಂದೆ ಬರ್ತೀನಿ. ಹಿಂಗೇ ಮೊನ್ನೆ ಬಸ್ ಅಲ್ಲಿ ಬರುತ್ತಾ ಹಾಡು ಕೇಳುವಾಗ Céline Dion ಹಾಡಿರುವ My Heart Will Go On ಹಾಡು ಕಿವಿಗೆ ಬಿತ್ತು. ಅರೇ ಇಸ್ಕಿ, ಲ್ಯಾಪ್ಟಾಪ್ ಅಲ್ಲಿ ಟೈಟಾನಿಕ್ ಫಿಲಂ ಡೌನ್ಲೋಡ್ ಮಾಡಿ ಸುಮಾರು 2 ವರ್ಷ ಆಯ್ತು, ಆದರೂ ನೋಡೋಕೆ ಆಗಿಲ್ವಲ್ಲಾ ಅಂತ ಯೋಚಿಸಿ ಮನೆಗೆ ಬಂದವನೇ ನನ್ನ ಮಿನಿ ಟಾಕೀಸ್ ಚಾಲು ಮಾಡಿದೆ. ಮೂರು ಗಂಟೆ ಅವಧಿಯ ಸಿನಿಮಾವನ್ನು 40 ನಿಮಿಷದಲ್ಲಿ ಮುಗಿಸುವ ಪಯಣ ಶುರುವಾಯಿತು. ನನಗೆ ನಾನೇ Bon Voyage ಹೇಳಿಕೊಂಡೆ.



ಸಾಂದರ್ಭಿಕ ಚಿತ್ರ: ಪ್ರದೀಪ್ ಎಂ ಆಚಾರ್

ಆಪ್ತಮಿತ್ರ ಚಿತ್ರದಲ್ಲೊಂದು ದೃಶ್ಯ ಇದೆ. ಕ್ಲೈಮಾಕ್ಸ್ ಭಾಗದಲ್ಲಿ ಅವಿನಾಶ್ ವಿಷ್ಣು ದಾದಾ ಬಗ್ಗೆ ವರ್ಣಿಸುವಾಗ "ರಾಮಾಯಣದಲ್ಲಿ ಬರೋ ರಾವಣನಿಗೆ ಹತ್ತು ತಲೆ ಇದ್ದರೆ, ಈ ಮಹಾನುಭಾವನಿಗೆ ಒಂದೇ ತಲೆಯಲ್ಲಿ ಹತ್ತು ಮೆದುಳಿವೆ ಅಂತ ಗೊತ್ತಾಯ್ತು." ಅಂತ ಹೇಳುತ್ತಾರೆ. Literally, ಡಾ.ವಿಜಯ್ (ಅಭಿನಯ: ವಿಷ್ಣು ದಾದಾ) ತಲೆಯಲ್ಲಿ ಹತ್ತು ಮೆದುಳಿವೆ ಅಂತ ಅಲ್ಲ, ಒಂದೇ ಕ್ಷಣದಲ್ಲಿ ಹತ್ತು ಬೇರೆ ಬೇರೆ ವಿಚಾರಗಳ ಬಗ್ಗೆ ಯೋಚಿಸಿ ವಿಚಾರ ಮಂಡಿಸಬಲ್ಲ ಚಾಣಾಕ್ಷ ಡಾ.ವಿಜಯ್ ಆಗಿದ್ದರು ಅನ್ನೋದು ಅದರ ಅರ್ಥ. ಟೈಟಾನಿಕ್ ಹಡಗಿನಲ್ಲಿ ನ್ಯೂ ಯಾರ್ಕ್ ನಗರದತ್ತ ಪ್ರಯಾಣ ಬೆಳೆಸುತ್ತಿರುವ ಸಂದರ್ಭದಲ್ಲಿ ಡಾ.ವಿಜಯ್ ಬಗ್ಗೆ ಯಾಕೆ ಹೇಳಿದೆ ಅಂದರೆ, ವೈಯಕ್ತಿಕವಾಗಿ ನನಗೂ ಡಾ.ವಿಜಯ್ ಪಾತ್ರಕ್ಕೂ ಒಂದು ಸಣ್ಣ ಸಾಮ್ಯತೆ ಹಾಗೂ ವ್ಯತ್ಯಾಸ ಇದೆ. ಸಾಮ್ಯತೆ ಏನಪ್ಪಾ ಅಂದರೆ, ನಾನೂ ಹತ್ತು ಬೇರೆ ಬೇರೆ ವಿಚಾರಗಳ ಬಗ್ಗೆ ಯೋಚಿಸುತ್ತೇನೆ (ಒಟ್ಟಿಗೆ ಯೋಚಿಸೋ ಅಷ್ಟು ಬುದ್ಧಿವಂತ ನಾನಲ್ಲ, ಒಂದರ ಹಿಂದೆ ಒಂದು ಅಂತಿಟ್ಕೊಳ್ಳೋಣ). ಆದರೆ ವ್ಯತ್ಯಾಸ ಏನಪ್ಪಾ ಅಂದರೆ ಯೋಚಿಸಿದ ಹತ್ತು ವಿಷಯಗಳ ಪೈಕಿ ಯಾವ ಒಂದು ಕೆಲಸವೂ ಮುಗಿದಿರೋದಿಲ್ಲ. ಒಂದು ಕ್ಷಣ ಟೈಟಾನಿಕ್ ನೋಡ್ತಾ ಇರ್ತೀನಿ, ನಂತರ Leonardo DiCaprio ರನ್ನು ನೋಡಿ ಅವರ ಹೊಸ ಚಿತ್ರ The Revenant ನೆನಪಾಗಿ ಚಿತ್ರದ ಟ್ರೈಲರ್ ಡೌನ್ಲೋಡ್ ಮಾಡುವ ಕೆಲಸಕ್ಕೆ ಮುಂದಾಗುತ್ತೇನೆ. ಸರಿಇಂಟರ್ನೆಟ್ ಕನೆಕ್ಟ್ ಮಾಡಿ ಕುಳಿತುಕೊಳ್ಳುವ ಹೊತ್ತಿಗೆ ಧೂಳಾಗಿರುವ ರೂಮಿಗೆ ಒಂದು ಮೋಕ್ಷ ಕಾಣಿಸೋಣ ಬಾ ಅಂತ ಆಮ್ ಆದ್ಮಿ ಪಕ್ಷದಿಂದ ಕರೆ ಬರುತ್ತೆ (ಪೊರಕೆ). ಕಸ ಗುಡಿಸಿ... ಹಿಂಗೆ, ನೋ ಯೋಚನೆ ಮಾಡ್ಕೊಂಡು, ಏನೇನೋ ಮಾಡಲು ಹೋಗಿ, ಕೊನೆಗೂ ಏನೂ ಮಾಡದೇ ಉಳಿಯೋದು ನಮ್ ಸ್ಪೆಷಾಲಿಟಿ. ಟೈಟಾನಿಕ್ ಅಂತ ಶುರು ಮಾಡಿ ಬರೆಯುತ್ತಿದ್ದೆ, ಬರೆಯುತ್ತಾ, ಬರೆಯುತ್ತಾ, ವಿಷಯ ಇನ್ನೆಲ್ಲೋ ಹೋಗಿ ನಿಂತಿರೋದೇ ಇದಕ್ಕೆ ಸಾಕ್ಷಿ ಎಂದು ಹೇಳಲಡ್ಡಿಯಿಲ್ಲ
 
ಚಿತ್ರ: Titanic

Coming back to Titanic, ಫಿಲಂ ಮುಗಿಸಿದ ಮೇಲೆ ಚಿತ್ರದ ಒಂದಷ್ಟು ಮುಖ್ಯ ದೃಶ್ಯಗಳ snapshot ಗಳನ್ನು ತೆಗೆದಿಟ್ಟುಕೊಂಡಿದ್ದೆ. ಅದರಲ್ಲಿ ಜಾಕ್ ಟೈಟಾನಿಕ್ ಟಿಕೆಟ್ ಗೆಲ್ಲೋ ಸೀನ್ಅವನು ತನ್ನ ಪೇಂಟಿಂಗ್ ಗಳನ್ನು ರೋಜ್ ಗೆ ತೋರಿಸೋದು, ಇಬ್ಬರೂ ಟ್ಯಾಪ್ ಡಾನ್ಸ್ ನಲ್ಲಿ ಪಾಲ್ಗೊಳ್ಳೋದುರೋಜ್ ಸೌಂದರ್ಯವನ್ನು ಜಾಕ್ ತನ್ನ ಪೆನ್ಸಿಲ್ ಗೆರೆಗಳಲ್ಲಿ ಸೆರೆಹಿಡಿಯೋದು, ಟೈಟಾನಿಕ್ ತುದಿಯಲ್ಲಿ ನಿಂತು ಇಬ್ಬರೂ ಸಂಭ್ರಮಿಸೋದು, ಹಡಗಿನೊಳಗೆ ನೀರು ತುಂಬಿಕೊಂಡಾಗ ಕಂಬಕ್ಕೆ ಬೇಡಿಯೊಂದಿಗೆ ಬಂಧಿಯಾದ ಜಾಕ್ ನನ್ನು ಭಯದಿಂದಲೇ ರೋಜ್ ಕೊಡಲಿ ಪ್ರಯೋಗಿಸಿ ಬಿಡಿಸೋದು, ಅವಳನ್ನು ಉಳಿಸೋದಕ್ಕೋಸ್ಕರ ಅವನು ನೀರಲ್ಲೇ ಉಳಿದುಕೊಳ್ಳೋದು, ನ್ಯೂ ಯಾರ್ಕ್ ನಗರ ತಲುಪಿದ ನಂತರ ರೋಜ್ ತನ್ನ ಹೆಸರನ್ನು Rose Dawson ಅಂತ ಹೇಳೋದು, ಮತ್ತು ಕೊನೆಯಲ್ಲಿ ತನ್ನ ಅಮೂಲ್ಯ ನೆಕ್ಲೇಸ್ ಅನ್ನು ನೀರಿಗೆಸೆದು ತನ್ನ ಹಾಸಿಗೆಯಲ್ಲಿ ಜಾಕ್ ಮಾತುಗಳನ್ನು ನೆನೆಸಿಕೊಂಡು ರೋಜ್ ಕೊನೆಯುಸಿರೆಳುವುದು, ಎಲ್ಲಾ ದೃಶ್ಯಗಳು ಸೇರಿದ್ದವು. ನೋ ಒಂಥರಾ ಮಿಸ್ ಆಗ್ತಾ ಇದೆಯಲ್ಲ ಅಂತ ಅನಿಸಿ, ಇದರ ಬಗ್ಗೆ ನಮ್ ಹುಡುಗರ ಹತ್ರ ಮಾತಾಡಲೇ ಬೇಕು ಎಂದೆಣಿಸಿ "Boys, Which is your favorite scene in Titanic? Please reply asap and try to give different answers." ಅಂತ ಒಂದು ಮೆಸೇಜ್ WhatsApp ನಲ್ಲಿ ಕಳುಹಿಸಿ, ನಮ್ ಹುಡುಗರ ಉತ್ತರಗಳಿಗಾಗಿ ಕಾಯುತ್ತಿದ್ದೆ. ಗೆ ಸೀನ್ ಇಷ್ಟ, ಸೀನ್ ಇಷ್ಟ, “ಆ ಸೀನ್ ಇದೆಯಲ್ಲ? ಸೀನ್ ಇಷ್ಟ! (ಯಾವ್ ಸೀನ್? ಉತ್ತರ ನಿಮ್ ಊಹೆಗೆ ಬಿಟ್ಟಿದ್ದು) ಎಂಬ ಎಲ್ಲಾ ಬಗೆಯ ಉತ್ತರಗಳು ಬಂದವು. Snapshot ನಲ್ಲಿ ಇದ್ದ ಎಲ್ಲಾ ದೃಶ್ಯಗಳು ಉತ್ತರಗಳಾಗಿ ಬಂದವಲ್ಲಾ ಅಂತ ಒಂದು ಕ್ಷಣ ಖುಷಿ ಆಯ್ತು, ಆದರೆ ಮರುಕ್ಷಣವೇ ಬಲ್ ನನ್ ಮಕ್ಳು ನಮ್ ಹುಡುಗರೆಲ್ಲಾ ಟೈಟಾನಿಕ್ ನೋಡಿದ್ದಾರೆ, ನಾನೊಬ್ನೇ ಇನ್ನೂ ನೋಡಿಲ್ಲ, ಬೇಗ ನೋಡ್ಬೇಕು ಗುರೂ ಅಂತ ಗೆ ನಾನೇ ಹೇಳಿಕೊಂಡೆ.



ಚಿತ್ರ: Titanic


ಟರ್ನಿಂಗ್ ಪಾಯಿಂಟ್ ಗಳು ವಿಸ್ಮಯಕಾರಿ. ಹಾಗೇ ಸುಮ್ಮನೆ ಒಂದು ದಾರಿಯಲ್ಲಿ ಹೋಗ್ತಾ ಇರ್ತೀವಿ ಅಂದ್ಕೊಳ್ಳೋಣ. ರಸ್ತೆ ಡೆಡ್ ಎಂಡ್ ತಲುಪಿ ಕ್ಕೊಂದು ಬಲಕ್ಕೊಂದು ದಾರಿ ಆಗಿರುತ್ತದೆ. ಸಂದರ್ಭದಲ್ಲಿ ನಾವು ಎಡಕ್ಕೆ ಹೋಗ್ತೀವೋ ಬಲಕ್ಕೆ ಹೋಗ್ತೀವೋ ಅನ್ನೋದು ಬೇರೆ ಮಾತು, ಆದರೆ ಯಾವ್ ಕಡೆ ಏನಿದೆ ಅಂತನಾದ್ರೂ ನೋಡಬಹುದು. ವಿಶೇಷ ಏನಪ್ಪಾ ಅಂದ್ರೆ, ರಸ್ತೆ ಕೆಲವು ತಿರುವುಗಳನ್ನು Blind Curve / ಕುರುಡು ತಿರುವು ಎಂದು ಗುರುತಿಸಲಾಗುತ್ತದೆ. ದಾರಿಯ ತಿರುವಿನ ಆಚೆ ಏನಿದೆ ಅಂತ ತಿರುವು ತೆಗೆದುಕೊಳ್ಳೋವರೆಗೂ ಗೊತ್ತಾಗಲ್ಲ. ಅಂತಹ ಒಂದೋ ಎರಡೋ ತಿರುವು ನಮ್ಮೆಲ್ಲ ಲೈಫಲ್ಲಿ ಇವೆ, ಒಂದು ಕ್ಷಣ ಓದುವುದನ್ನು ನಿಲ್ಲಿಸಿ, ಅದನ್ನು ನೆನಪಿಸಿಕೊಳ್ಳಿ. ನೀವು ಇಂಜಿನಿಯರಿಂಗ್ ಮಾಡದೆ ಇದ್ದಿದ್ದರೆ ಏನಾಗ್ತಾ ಇತ್ತು? ನೀವು ಈಗ ಓದಿರುವ ಕಾಲೇಜ್ ಬಿಟ್ಟು ಬೇರೆ ಕಡೆ ಸೀಟ್ ಆಯ್ಕೆ ಮಾಡ್ಕೊಂಡಿದ್ದಾರೆ ಇನ್ನೇನಾಗ್ತಾ ಇತ್ತು? ಇತ್ಯಾದಿ. ಓಕೆ, ನಿಮ್ಮ ಬಾಳಿನ ಹಾದಿಯಲ್ಲಿ ಅಂಥದ್ದೊಂದು ತಿರುವು ನೀವು ತೆಗೆದುಕೊಂಡಿರಲಿಲ್ಲ ಅಂದರೆ ಏನಾಗ್ತಾ ಇತ್ತು? ಈಗ ಗಿರೋದು ಬಿಟ್ಟು ಬೇರೆ ಇನ್ನೇನೋ ಅಗ್ತಾ ಇದ್ರಿ ಅನ್ನೋದು ಸ್ಪಷ್ಟ, ಆದ್ರೆ ಅದು ಈಗಿರೋದಕ್ಕಿಂತ ಚೆನ್ನಾಗಿರ್ತಾ ಇತ್ತಾ? ಗೊತ್ತಿಲ್ಲ! ಅದಿಕ್ಕೆ ಟರ್ನಿಂಗ್ ಪಾಯಿಂಟ್ ಗಳು ವಿಸ್ಮಯಕಾರಿ ಅಂದಿದ್ದು. ಟೈಟಾನಿಕ್ ಟಾಪಿಕ್ ಗೆ ಮರಳಿ ಬರೋದಾದ್ರೆ, ಜಾಕ್ ಡಾಸನ್ ಬಾಳಿನಲ್ಲಿ ಅಂಥದ್ದೊಂದು ಅಪೂರ್ವ ಟರ್ನಿಂಗ್ ಪಾಯಿಂಟ್ ಇದೆ. ಅದೇ ಟೈಟಾನಿಕ್ ಟಿಕೆಟ್ ಅನ್ನು ಅವನು ಕಾರ್ಡ್ಸ್ ಆಟದಲ್ಲಿ ಗೆಲ್ಲೋದು. Just in case, ಆಟದಲ್ಲಿ ಜಾಕ್ ಡಾಸನ್ ಟೈಟಾನಿಕ್ ಟಿಕೆಟ್ ಗೆಲ್ಲದೆ ಹೋಗಿದ್ದರೆ ಏನಾಗ್ತಾ ಇತ್ತು? ಅವನು ಮತ್ತು ರೋಜ್ ಇಬ್ಬರೂ ಭೇಟಿ ಆಗ್ತಾ ಇರಲಿಲ್ಲ, ಅವನು ಟೈಟಾನಿಕ್ ಹಡಗು ಏರುತ್ತಿರಲಿಲ್ಲ, ಅವನು ಯಾರನ್ನೋ ಇವಳು ಇನ್ಯಾರನ್ನೋ ಮದುವೆ ಆಗಿ ಹೇಗೋ ಇರುತ್ತಿದ್ದರು. ಒಂದು ಒಳ್ಳೆ ಕಥೆ ಅಷ್ಟ್ರಲ್ಲೇ ಜಸ್ಟ್ ಮಿಸ್ಸು ಆಗ್ತಾ ಇತ್ತು ಅಷ್ಟೇ

ಟೈಟಾನಿಕ್ ಸಿನಿಮಾ ಹೆಚ್ಚಿನ ಬಜೆಟ್, ಉತ್ತಮ ಗ್ರಾಫಿಕ್ಸ್, ಛಾಯಾಗ್ರಹಣ, ಮತ್ತಿತರ ಹಲವು ಕಾರಣಗಳಿಂದ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಚಿತ್ರದ ಸಂಭಾಷಣೆಗಳು ಕೂಡ ತುಂಬಾ ಪರಿಣಾಮಕಾರಿಯಾಗಿವೆ ಅದನ್ನು ಹೆಚ್ಚಿನ ಜನ ಗಮನಿಸಿಲ್ಲ ಅನ್ನೋದು ನನ್ನ ಅಭಿಪ್ರಾಯ. ಒಂದು ಕಥೆಲ್ಲಿ "ನಾಯಕಿಯ ಆನಂದಕ್ಕೆ ಪಾರವೇ ಇರಲಿಲ್ಲ", "ನಾಯಕನು ತನ್ನ ಕುಟುಂಬದ ರಕ್ಷಣೆಗಾಗಿ ಹೀಗೆ ನಾನಾ ಪಾಡು ಪಡುತ್ತಾನೆ" ಹಾಗೆ ಹೀಗೆ ಅಂತ ಸಾವಿರ ಮಾತುಗಳಲ್ಲಿ ವರ್ಣಿಸಬಹುದು. ಆದರೆ ಸಿನಿಮಾದ ವಿಷಯದಲ್ಲಿ ಆ ಸಂತಸ, ಕಷ್ಟದ ಕ್ಷಣಗಳನ್ನು ಪ್ರೇಕ್ಷಕನಿಗೆ ದಾಟಿಸುವಲ್ಲಿ ಕಲಾವಿದರ ಹಾಗೂ ಸಂಭಾಷಣೆ ಬರಹಗಾರ ಪಾತ್ರ ಬಹು ಮುಖ್ಯ. ಇಬ್ಬರಲ್ಲಿ ಒಬ್ಬರ ಕೆಲಸ ಹೆಚ್ಚು ಕಮ್ಮಿಯಾದರೂ ತೊಂದರೆಯಾಗೋದು ಸಿನಿಮಾಕ್ಕೆ. ಟೈಟಾನಿಕ್ ನಲ್ಲಿ ನನಗೆ ಇಷ್ಟವಾದ ಕೆಲವು ಸಂಭಾಷಣೆಗಳನ್ನು ಚಿತ್ರಸಮೇತ ಯಥಾವತ್ ಹಾಗೇ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. ಅಂಕಣ ಇನ್ನೂ ಓದುತ್ತಿದ್ದರೆ ಮುಗಿದ ಮೇಲೆ ಟೈಟಾನಿಕ್ ಸಿನಿಮಾ ಒಮ್ಮೆ ನೋಡಿ, ಸಂಭಾಷಣೆಗಳು ಇಷ್ಟವಾಗದೇ ಇರದು.





 Jack: Winning that ticket, Rose, was the best thing that ever happened to me... it brought me to you. And I'm thankful for that, Rose. I'm thankful. You must do me this honor. Promise me you'll survive. That you won't give up, no matter what happens, no matter how hopeless. Promise me now, Rose, and never let go of that promise.




Rose: Fifteen-hundred people went into the sea, when Titanic sank from under us. There were twenty boats floating nearby... and only one came back. One. Six were saved from the water, myself included. Six... out of fifteen-hundred.




Carpathia Steward: Can I take your name, please love?  
Rose: Dawson, Rose Dawson. 



ಇದಾದ ನಂತರ Written and Directed by James Cameron ಎಂದು ತೋರಿಸುವ ಮೂಲಕ ಸಿನಿಮಾ ಕೊನೆಯಾಗುತ್ತದೆ. ಆದ್ದರಿಂದ ಅಂಕಣವನ್ನು ಅದೇ ಶೈಲಿಯಲ್ಲಿ ಮುಗಿಸುತ್ತಿದ್ದೇನೆ.

Written and Composed by:
ArunKumar P T

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ