ಫೆಬ್ರವರಿ 29, 2016

ನನಸಾದ ಬಹುಧೀರ್ಘ ಕನಸು



ಯಶಸ್ಸು ಮತ್ತು ಪ್ರಶಸ್ತಿಗಳೆರಡು 'ನೀನು' ಮತ್ತು 'ಮಾಯೆ' ಹಾಗೆ. ಕನಕದಾಸರ 'ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ' ಎಂಬಂತೆ ಯಶಸ್ಸು ಗಳಿಸಿದವರನ್ನು ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೋ, ಇಲ್ಲಾ ಪ್ರಶಸ್ತಿ ಪುರಸ್ಕೃತರನ್ನು ಯಶಸ್ವಿ ವ್ಯಕ್ತಿಗಳೆಂದು ಪರಿಗಣಿಸಲಾಗುತ್ತದೋ ಗೊತ್ತಿಲ್ಲ. ಎಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭವಿರುತ್ತದೆಯೋ ಅಲ್ಲಿ ಅಸಮಾಧಾನದ ಹೊಗೆಯಾಡುವುದೂ ಕೂಡ ತೀರಾ ಸಾಮಾನ್ಯ. ಅರ್ಥಶಾಸ್ತ್ರದ ಬೇಡಿಕೆ ಮತ್ತು ಪೂರೈಕೆ ನಿಯಮ (Supply and Demand Rule) ಗೊತ್ತಲ್ಲವೇ, ಇದೂ ಹಾಗೆಯೇ! ಭಾರತ ರತ್ನ, ಪದ್ಮಶ್ರೀ, ಪರಮಚಕ್ರ ಪ್ರಶಸ್ತಿಗಳು ಅರ್ಹರಿಗೆ ಮಾತ್ರ ಸಿಗುತ್ತದೆ, ಪ್ರಶಸ್ತಿಗಳನ್ನು ಕೊಟ್ಟಿಲ್ಲವೆಂದ ಮಾತ್ರಕ್ಕೆ ಸಾಧಕರು ಅನರ್ಹ ಅಂತ ಏನಲ್ಲ. ಮತ್ತಿನ್ನು ಕೆಲವು ಪ್ರಶಸ್ತಿಗಳನ್ನು ಇಂಥವರಿಗೇ ಕೊಡಬೇಕೆಂದು ಮೊದಲೇ ಗುಟ್ಟಾಗಿ ಮಾತಾಗಿ ಒಳರಾಜಕೀಯ ಆಗಿರುತ್ತದೆ ಎಂಬುದು ಕೂಡ ಹಳೇ ವಿಷಯವೇ. ಅದೇ ಸಿನಿಮಾ ಪ್ರಶಸ್ತಿಗಳ ವಿಚಾರಕ್ಕೆ ಬಂದರೆ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ, IIFA Utsavam, Zee Cine Awards, Filmfare Awards ಗಳು ಸಾಲದೆಂಬಂತೆ Star Parivar Awards, Colors Anubandha Awards ಎಂಬಿತ್ಯಾದಿಯಾಗಿ ಧಾರವಾಹಿಗಳಿಗೂ ಪ್ರಶಸ್ತಿ ನೀಡುವ ಪರಂಪರೆ ಶುರುವಾಗಿದೆ. ನಮ್ ಇಷ್ಟದ ವಿಷಯ ಸಿನಿಮಾನೇ ಆದರೂ, ಯಾವ್ ಸಿನಿಮಾ ಪಾಸ್ ಆಗಬೇಕು, ಯಾವುದನ್ನು ಫೇಲ್ ಮಾಡಬೇಕು, ಮತ್ತು ಯಾವ ಚಿತ್ರಗಳಿಗೆ ಅತ್ತ್ಯುತ್ತಮ ಚಿತ್ರ, ಅತ್ತ್ಯುತ್ತಮ ನಟ, ಅತ್ತ್ಯುತ್ತಮ ನಿರ್ದೇಶಕ ಇತ್ಯಾದಿ ಪ್ರಶಸ್ತಿಗಳನ್ನು ಕೊಡಬೇಕು ಎಂಬುದನ್ನು ನಿರ್ಧರಿಸುವ ದೊಡ್ಡ ಮಟ್ಟದ ಪಾಂಡಿತ್ಯ ನನಗಿಲ್ಲ. Hit ಮತ್ತು Flop ಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸಿನಿಮಾಗಳನ್ನು ನೋಡೋದಷ್ಟೇ ನಮ್ಮ ಬಿಡುವಿನ ವೇಳೆಯ ಕಾಯಕ.

ಚಿತ್ರ ಕೃಪೆ:  passionconnect


ಪ್ರಶಸ್ತಿಗಳ ಬಗ್ಗೆ ಯಾಕಿಷ್ಟೊತ್ತು ಸೈಡ್ ರೀಲ್ ತೋರಿಸಿದೆ ಅಂತ ಗೊತ್ತಾಗಿರಬೇಕಲ್ಲಾ? ತಮ್ಮ ಅತ್ತ್ಯುತ್ತಮ ನಟನೆಗಾಗಿ ನಟ Leonardo DiCaprio ಕೊನೆಗೂ Oscar ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅಯ್ಯೋ, ಮುಡಿಗೇರಿಸಿಕೊಂಡಿದ್ದಾರೆ ಅಂದರೆ ತಪ್ಪಾಗುತ್ತೆ. ಹೆಗಲೇರಿಸಿಕೊಂಡಿದ್ದಾರೆ ಅಂದರೆ ಬಾಹುಬಲಿ ಚಿತ್ರ ನೆನಪಾಗುತ್ತೆ, ಬೆನ್ನೇರಿಸಿಕೊಂಡಿದ್ದಾರೆ ಅನ್ನೋಕೆ Oscar ಬೇತಾಳ ಅಲ್ಲ, ಪ್ರಶಸ್ತಿ. ಏನೋ ಒಂದು, ಕೊನೆಗೂ Leo ಗೆ Oscar ಸಿಕ್ಕಿತಲ್ಲ ಎಂಬುದಷ್ಟೇ ಖುಷಿ. ಒಬ್ಬ ಪ್ರೇಕ್ಷಕನಾಗಿ ಹಳೇ ಕನ್ನಡ ಸಿನಿಮಾಗಳ ಡೈಲಾಗ್ 'ಒಂದು ತಂಬಿಗೆ ಅಮೃತ ಕುಡಿದಷ್ಟು ಸಂತೋಷ ಆಯ್ತು' ಅನ್ನೋ ಥರ ಆಗಿದೆ ಅಂದರೆ ಅತಿಶಯೋಕ್ತಿ ಅಲ್ಲ. Robert Downey Jr., Johnny Depp, Brad Pitt, Jim Carrey ರಂತಹ ಅತ್ಯದ್ಭುತ ಕಲಾವಿದರಿಗೂ ಕೂಡ ಆಸ್ಕರ್ ಪ್ರಶಸ್ತಿ ಲಭಿಸಿಲ್ಲ ಅಂತ ಕೆಲವು ವರ್ಷಗಳ ಹಿಂದೆ ಯಾವುದೋ ಜಾಲತಾಣದಲ್ಲೊಮ್ಮೆ ಓದಿದ್ದೆ. ಆಗಿಂದ ಆಸ್ಕರ್ ಪ್ರಶಸ್ತಿಯ ಮೇಲೆ ಇದ್ದ ಗೌರವ / ಅಭಿಮಾನ / ಕಾತುರ ಎಲ್ಲವೂ ಮಾಯವಾಗಿದ್ದವು. ಆದರೀಗ ಲಿಯೋಗೆ ಆಸ್ಕರ್ ಮತ್ತೆ ಲಭಿಸಿದ್ದು ನೋಡಿ 'ಡ್ರಾಮಾ' 'Businessman', ಚಿತ್ರಗಳ ಹಾಗೆ ಬುಲೆಟ್ ಬಿದ್ದರೂ ಕೊನೆ ಕ್ಷಣದಲ್ಲಿ ಬದುಕುಳಿಯುವ ನಾಯಕನ ಹಾಗೆ ಆಸ್ಕರ್ ಮೇಲೆ ಮತ್ತೆ ಗೌರವ / ಅಭಿಮಾನ / ಕಾತುರ ಚಿಗುರಿವೆ. ಕೆಲವು ಪ್ರಶಸ್ತಿ ಗಳನ್ನು ಪಡೆದು ಪುರಸ್ಕೃತರು ಧನ್ಯರಾಗುತ್ತಾರೆ, ಹಾಗೆಯೇ ಕೆಲವೊಮ್ಮೆ ಪುರಸ್ಕೃತರು ಪಡೆಯುವುದರಿಂದ ಪ್ರಶಸ್ತಿಗಳೇ ಧನ್ಯವಾಗುವ ಅಪರೂಪದ ಸಮಯ ಇದು ಎಂದರೆ ತಪ್ಪಾಗಲಾರದು. ಪ್ರಶಸ್ತಿ ಪಡೆಯಲು ಕಾರಣವಾದ ಮಮ್ಮಿ, ಪಪ್ಪಾ, ಅಂಕಲ್, ಆಂಟಿ, ನಿರ್ದೇಶಕ, ನಿರ್ಮಾಪಕ, ಅವರು, ಇವರು, ಮತ್ತು last but not least ನನ್ನೆಲ್ಲಾ cute cute lovely fans ಗಳಿಗೆ thank you thank you so much” ಎಂದು ಕೇಳಿ ಕೇಳಿ ಬೋರಾಗಿದ್ದ ಕಿವಿಗಳಿಗೆ ಲಿಯೋ ಅವರ ಮಾತುಗಳು ಅಂತರಂಗದಲ್ಲಿ ಒಂದು ಹೊಸ ಶಕ್ತಿಯನ್ನು ಹುಟ್ಟು ಹಾಕಿವೆ. ಭಾಷಣದ ವಿಡಿಯೋಕೊಂಡಿ ಇಲ್ಲಿದೆ. ಅದರ ಆಯ್ದ ಭಾಗವನ್ನು bustle.com ಜಾಲತಾಣದಿಂದ ನಕಲಿಸಿ, ಅಕ್ಷರಶೈಲಿ ಬದಲಾಯಿಸಿ, ಇಲ್ಲಿ ಹಾಗೇ ಅಂಟಿಸಿದ್ದೇನೆ. ಹಾಗೇ ಓದಿಬಿಡಿ, ವಿಡಿಯೋ ಆಮೇಲೆ ನೋಡಿದರಾಯಿತು.

The Revenant ಚಿತ್ರಕ್ಕಾಗಿ ಅತ್ತ್ಯುತ್ತಮ ನಟ ಪ್ರಶಸ್ತಿ ಪಡೆದ Leonardo DiCaprio
 


And lastly I just want to say this: Making ‘The Revenant’ was about man's relationship to the natural world. A world that we collectively felt in 2015 as the hottest year in recorded history. Our production needed to move to the southern tip of this planet just to be able to find snow. Climate change is real, it is happening right now. It is the most urgent threat facing our entire species, and we need to work collectively together and stop procrastinating. We need to support leaders around the world who do not speak for the big polluters, but who speak for all of humanity, for the indigenous people of the world, for the billions and billions of underprivileged people out there who would be most affected by this. For our children’s children and for those people out there whose voices have been drowned out by the politics of greed. I thank you all for this amazing award tonight. Let us not take this planet for granted. I do not take tonight for granted. Thank you so very much.

ಈಗ ಕಣ್ಣ ಮುಂದೆ ಲಿಯೋ ಅಭಿನಯದ Titanic, Body of Lies, The Wolf of Wall Street, The Great Gatsby, Blood Diamond, Django Unchained, Shutter Island ಚಿತ್ರಗಳಿವೆ. ಯಾವುದು ನೋಡಬೇಕು ಅನ್ನೋದೇ ಗೊತ್ತಾಗ್ತಾ ಇಲ್ಲ. ಪ್ರಾಯಶಃ ಇವತ್ತು ರಾತ್ರಿ Inception ಹಾಗೆ ಕನಸೊಳಗೆ ಕನಸು ಬಿದ್ದು ಉತ್ತರ ಸಿಗಬಹುದಾ? ಕಾದು ನೋಡಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ