ಫೆಬ್ರವರಿ 1, 2016

The things you own...



ಮೊನ್ನೆ ಹಿಂಗೆ Zee ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಿ L’ll Champs ಕಾರ್ಯಕ್ರಮ ನೋಡ್ತಾ ಇದ್ದೆ. ವೈಯಕ್ತಿಕವಾಗಿ ನನಗೆ ಕಾರ್ಯಕ್ರಮದ ನಿರೂಪಕಿ ಅನುಶ್ರೀ ಅವರ ನಿರೂಪಣೆ ತುಂಬಾ ಕೃತಕ ಅನಿಸುತ್ತೆ. ಕೃತ್ತಿಕ ಅಲ್ಲ ಮಗಾ, ಕೃತಕ, ಅದೇ artificial ಅಂತಾರಲ್ಲ, ಅದು. ಮೇಲಿನ ಮಾತು ನನ್ನೊಬ್ಬನ ವೈಯಕ್ತಿಕ ಅಭಿಪ್ರಾಯವಾದ್ದರಿಂದ ಅದು ಅಲ್ಲೇ ಪಕ್ಕದಲ್ಲಿರಲಿ. ಒಂದೊಂದು ಸಲ ನಮ್ ಅಮ್ಮ ಟಿವಿ ನೋಡುವಾಗ ಒಂದ್ ಸ್ವಲ್ಪ ಹೊತ್ತು ಕಾರ್ಯಕ್ರಮ ನೋಡಿರಬಹುದಷ್ಟೇ ವಿನಃ, ನಾನೇ ಸ್ವತಃ ಕಾರ್ಯಕ್ರಮಕ್ಕಾಗಿ ಕಾದಿದ್ದು ಇಲ್ಲವೇ ಇಲ್ಲ. ಇಂತಿಪ್ಪ ಸಂದರ್ಭದಲ್ಲಿ ಅನುಶ್ರೀ ಮಾತುಗಳು ಶುರುವಾಯಿತು. ಅದರ ಒಂದು ಭಾಗ ಹೀಗಿದೆ.

airtel Sa Re Ga Ma Pa Season 10
co powered by Fortune Sunlight Sunflower Oil
Playtime Partner Kinder Joy
Associate Sponsors
Zandu Gel Balm Junior
Surf Excel Matic
Butterfly Gandhavathi Appliances
ಹಾಗೂ Water Sponsors aquaguard
Radio Partner Big FM 92.7

ಶಿವ ಶಿವಾ!! ನಮ್ಮ ವಯೋಮಾನದ ಹುಡುಗರ amazon ಅಥವಾ flipkart ಜಾಲತಾಣಗಳಲ್ಲಿನ 'wishlist' ಕೂಡ ಇಷ್ಟು ಉದ್ದ ಇರೋದಿಲ್ಲ. ಮೇಲಿನ ಮಾತುಗಳನ್ನು ಕೇಳುತ್ತಿದ್ದ ಹಾಗೆ ಒಂದು ಕ್ಷಣ ಕಾರ್ಯಕ್ರಮದಲ್ಲಿ ಜಾಹೀರಾತು ಇದೆಯೋ, ಇಲ್ಲಾ ಜಾಹೀರಾತಿನ ನಡುವಲ್ಲೆಲ್ಲೋ ಕಾರ್ಯಕ್ರಮ ಇಟ್ಟಿದಾರೋ ಅನ್ನೋದೇ ಗೊತ್ತಾಗ್ಲಿಲ್ಲ. ಇದೇ ನಿಟ್ಟಿನಲ್ಲಿ ಯೋಚಿಸುತ್ತಿದ್ದಾಗ Fight Club ಚಿತ್ರದ ಹಲವು ದೃಶ್ಯಗಳು ಕಣ್ಣ ಮುಂದೆ ಬಂದವು. ಕೇವಲ ನೋಡಿಯೇ ಅನುಭವಕ್ಕೆ ದಕ್ಕಿಸಿಕೊಳ್ಳಬೇಕಾದ ತೀರಾ complicated ಚಿತ್ರ Fight Club. ಕೊಳ್ಳುಬಾಕ ಸಂಸ್ಕೃತಿಯನ್ನು ಹೀಯಾಳಿಸುತ್ತಲೇ, ಜಾಹೀರಾತುಗಳೆಂದರೆ ಕೇವಲ ಸುಳ್ಳನ್ನು ಮಾರಾಟ ಮಾಡುವ ಲೋಕವೆಂದು ವಾದಿಸುತ್ತ, ತನ್ನದಲ್ಲದ ಎಲ್ಲವೂ ತನಗೆ ಬೇಕೆಂಬ ಹಂಬಲದ ಯುವ ಮನಸ್ಸುಗಳ ಮರ್ಕಟ ಬುದ್ಧಿಗೆ  ಹಿಡಿದ ಕನ್ನಡಿಯಂತಿದೆ ಚಿತ್ರ. ಆಗಲೇ ಹೇಳಿದ ಹಾಗೆ ಹೇಳಿ ವಿವರಿಸಲಾಗದ, ನೋಡಿಯೇ ಅರ್ಥ ಮಾಡಿಕೊಳ್ಳಬೇಕಾದ ಚಿತ್ರ Fight Club. Fight Club ಚಿತ್ರದಲ್ಲಿ ಕೆಲವು ಪರಿಣಾಮಕಾರಿ ಸಂಭಾಷಣೆಗಳಿವೆ. ಅದರಲ್ಲಿ ಕೆಲವನ್ನು ಇಲ್ಲಿ ದಾಖಲಿಸಿದ್ದೇನೆ. ಒಮ್ಮೆ ಓದಿ ಬಿಡಿ:

"I found freedom. Losing all hope was freedom."

"It's only after we've lost everything that we're free to do anything."

"Hey, you created me. I didn't create some loser alter-ego to make myself feel better. Take some responsibility!"

“If you wake up at a different time in a different place, could you wake up as a different person?”

"The things you own end up owning you."

 ಸಾಂದರ್ಭಿಕ ಚಿತ್ರ: Fight Club


Coming back to ರಿ , ಯಾವುದೇ ಒಂದು ಸ್ಪರ್ಧೆ / ಕಾರ್ಯಕ್ರಮ / ಕ್ರೀಡಾಕೂಟ / ದಿನಪತ್ರಿಕೆ / ಸಿನಿಮಾ ಇರಲಿ, ಎಲ್ಲಾ ಕಡೆ ಪ್ರಾಯೋಜಕರ ಅವಶ್ಯಕತೆ ತುಂಬಾ ಇರುತ್ತೆ. ಆದರೆ ಆದಕ್ಕೂ ಒಂದು ಮಿತಿಯನ್ನೋದು ಇರಲೇಬೇಕು. Times of India ದಿನಪತ್ರಿಕೆಯನ್ನು ಈಗಾಗಲೇ ಓದುಗರ ಬಳಗದಲ್ಲಿ Ads of India ಎಂಬ ಅಡ್ಡಹೆಸರಿಂದ ಗುರುತಿಸುತ್ತಾರೆ ಅನ್ನೋದು ಗೊತ್ತಿರಲಿ. ಮುಂದೊಂದಿನ ಕಾರ್ಯಕ್ರಮಗಳಲ್ಲಿ ವಿಷಯವೇ ಇಲ್ಲದಂತಾಗಿ ಅಲ್ಲಿ ಕೇವಲ ಜಾಹೀರಾತುಗಳೇ ಮೆರೆದರೆ ಮೇಲೆ ಹೇಳಿರುವ "The things you own end up owning you" ಎಂಬ ವಾದವನ್ನು ಇವೇ ಕಾರ್ಯಕ್ರಮಗಳೇ ನಿರೂಪಿಸಿದವು ಎಂದು ಹೇಳಲಡ್ಡಿಯಿಲ್ಲ.

2 ಕಾಮೆಂಟ್‌ಗಳು: