ಮುಳ್ಳಯ್ಯನಗಿರಿ ಹೋಗುವಾಗ ಕಾರ್ ಕಿಟಕಿಯಿಂದ ಇಣುಕಿ ಕೆಳಗೆ ನೋಡೋದು, ಕ್ಯಾಷ್ ಕೌಂಟರ್ನಲ್ಲಿ ಕೆಲಸ ಮಾಡುವಾಗ ಎಷ್ಟು ಜನ ಕ್ಯೂನಲ್ಲಿ ನಿಂತಿದ್ದಾರೆ ಅಂತ ನಿಂತು ನೋಡೋದು ಎರಡೂ heart attack ತರಿಸಬಹುದಾದ ಕೆಲಸಗಳು. Coming to topic, 10am ಯಿಂದ ಎಂದಿನಂತೆ ಕ್ಯಾಶ್ ಕೌಂಟರ್ ತೆರೆದು ಕೆಲಸ ಶುರು ಮಾಡಿದೆ, 12pm ಆದರೂ ಜನ ಖಾಲಿಯಾಗಲೇ ಇಲ್ಲ. ಎದುರಿಗೆ ನೋಡಿದೆ, ಸುಮಾರು 6 ಜನ ಇದ್ದರು. ಮತ್ತೆ ಯಾವಾಗಲೋ 1.30pm ಹೊತ್ತಿಗೆ ಮತ್ತೆ ನೋಡಿದೆ, ಹೆಚ್ಚು ಕಮ್ಮಿ ಅಷ್ಟೇ ಜನರಿದ್ದರು. ಅಂದರೆ ಜನಸಂದಣಿ ಕಡಿಮೆ ಇತ್ತು, ಆದರೆ ಖಾಲಿಯಾಗುತ್ತಿರಲಿಲ್ಲ. ಇದು ಯಾರು ಬರೆದ ಕಥೆಯೋ, ಜನ ಬರುತ್ತಲೇ ಇದ್ದಾರೆ, ನಮ್ ಮನೋರಂಜನೆ ಪಾಡು ನಾವು ನೋಡಿಕೊಳ್ಳಬೇಕು, ಹೋಗಲಿ ಬಿಡಪ್ಪಾ ಅಂತ mobile data on ಮಾಡಿ ಟೇಬಲ್ ಮೇಲೆ ಫೋನ್ ಇಟ್ಟುಕೊಂಡೆ. ಸ್ವಲ್ಪ ಹೊತ್ತಿನ ನಂತರ screen lock ಆಗಿ ಮತ್ತೆ ಪರದೆ blank ಯಾಯಿತು. ಅಲ್ಲೇ ಪಕ್ಕದಲ್ಲಿ seal pad ಕೂಡ ಇತ್ತು. ಸೀಲ್ ಗುದ್ದುವ ಅವಸರದಲ್ಲಿ ಮೊಬೈಲ್ ಸ್ಕ್ರೀನ್ ಮೇಲೆ ಠಸ್ ಅಂತ ಗುನ್ನ ಬಿದ್ದರೆ ಏನು ಗತಿ, ತೆಗೆದು ದೂರ ಇಡೋಣ ಅಂದ್ಕೊಂಡೆ. ಛೇ, ಹಂಗೆಲ್ಲಾ ಆಗಲ್ಲ ಬಿಡು, ಅಷ್ಟೂ common sense ಇರೋದಿಲ್ವಾ ಅಂತ ತುಸು over confident ಆಗಿ ಫೋನ್ ಅಲ್ಲೇ ಬಿಟ್ಟಿದ್ದೆ. ಕಟ್ ಮಾಡಿದ್ರೆ, ಐದು ನಿಮಿಷಗಳ ನಂತರ ಠಸ್ ಅಂತ ಸೀಲ್ ಇಂದ ಗುನ್ನ ಬಿದ್ದೇ ಬಿಡ್ತು. ಅದೃಷ್ಟವಶಾತ್ ಏನೂ ಆಗಲಿಲ್ಲ ನೋಡಿ. ಆದರೆ ಹೊಡೆತಕ್ಕೆ Interstellar ದೃಶ್ಯ ನೆನಪಾಗಿ ಬಿಟ್ಟಿತು.
Murphy's law doesn't mean
that something bad will happen. It means that whatever *can* happen, will
happen.
ಸಾಂದರ್ಭಿಕ ಚಿತ್ರ: Interstellar
Moral of the story: Being a
cinemaholic, there is and always will be a way to connect any incident in life
to films you love.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ