ಹೀಗೇ ಬಸ್ ಅಲ್ಲಿ ಬರುವಾಗ, ಮೊಬೈಲ್ ನಲ್ಲಿ Subway Surfers ಆಡುತ್ತಿದ್ದೆ. Subway Surfers ಆ? ಹೆಸರು ಎಲ್ಲೋ ಹಳೇ ಹುಡುಗಿಯರ ಹಳೇ ನೆನಪಿನ ನಡುವಲ್ಲೆಲ್ಲೋ ಕೇಳಿದ ಹಾಗೆ ಇದೆಯಲ್ಲಾ ಅಂತ ಅಂದ್ಕೊಂಡ್ರಾ?!? ಸುಮಾರು ನಾಲ್ಕು - ಐದು ವರ್ಷಗಳ ಹಿಂದೆ ನಾನು, ನಮ್ ಹುಡುಗರು ಈ ಗೇಮ್ ಅನ್ನು ಸಖತ್ತಾಗಿ ರುಬ್ಬಿ ಬಿಸಾಕಿದ್ವಿ!!! ನಮ್ ಹುಡುಗರಿಗೆ ಅವರ ಹಳೇ ಹುಡುಗಿಯರು ನೆನಪಾಗಿ ನಮಗೆ ಫೋನ್ ಮಾಡಿ ತಲೆ ತಿನ್ನುತ್ತಾರಲ್ಲಾ, ಹಾಗೇ ಯಾವುದೋ ಹಳೆ ವಿಷಯದ ಕುರಿತು ಯೋಚಿಸುತ್ತಿದ್ದಾಗ ಮತ್ತೆ Subway Surfers ನೆನಪಾಯ್ತು. ಅರೇ ಇಸ್ಕಿ, ಧಾರವಾಹಿ, ಫಿಲಂಗಳ ನಡುವೆ ಮರೆತೇ ಹೋಗಿತ್ತಲ್ಲಾ ಅಂತ after a long time, ಇವತ್ತು ಮತ್ತೆ install ಮಾಡಿ ಆಡಲು ಶುರು ಮಾಡಿದೆ. ಈ ಆಟ ಒಂಥರಾ ಚಿಪ್ಸ್ ಪ್ಯಾಕೆಟ್ ಇದ್ದಂತೆ, ಶುರು ಮಾಡಿದರೆ, ಅಷ್ಟು ಬೇಗ ಮುಗಿಸದೇ ಕೆಳಗಿಡಲು ಮನಸ್ಸಾಗಲ್ಲ.
ಇಂತಿಪ್ಪ ಸಂದರ್ಭದಲ್ಲಿ, coming back to topic, ಇಂದು ಬಸ್ ನಲ್ಲಿ ಬರುತ್ತಾ Subway Surfers ಆಡಲು ಶುರು ಮಾಡಿದೆ. ಅದ್ಯಾಕೋ ಗೇಮ್ ಮ್ಯೂಸಿಕ್ ಸರಿ ಇಲ್ಲ ಅಂತ ಮ್ಯೂಟ್ ಮಾಡಿ, ಹಿನ್ನಲೆಯಲ್ಲಿ ಮ್ಯುಸಿಕ್ ಪ್ಲೇಯರ್ ನಲ್ಲಿ shuffled playlist ರೆಡಿ ಇತ್ತಲ್ಲಾ, ಅಲ್ಲಿ ಪ್ಲೇ ಕ್ಲಿಕ್ಕಿಸಿ, ಮತ್ತೆ ಆಟ ಮುಂದುವರೆಸಿದೆ. ಒಂದು ಎರಡು 'ಬೋರ್ ಹೊಡೆಸುವ ರೊಮ್ಯಾಂಟಿಕ್ ಹಾಡುಗಳ ನಂತರ' (!) ಢಣ್ ಢಣಣ್ ಢಣ್ ಅಂತ ಹುಡುಗರು ಚಿತ್ರದ ಶಂಭೋ ಶಿವ ಶಂಭೋ ಹಾಡು ಶುರುವಾಯಿತು. ಅಷ್ಟು ಹೊತ್ತಿಗಾಗಲೇ ಆಟದಲ್ಲಿ ಸ್ವಲ್ಪ ಮುಂದೆ ಹೋಗಿದ್ದರಿಂದ ನಮ್ಮ 'ಹುಡುಗ' ಇನ್ನೂ ಸ್ಪೀಡಾಗಿ ಮುಂದೆ ಓಡುತ್ತಿದ್ದ. ಹಾಡಿನಲ್ಲಿ ಬೀಟ್ಸ್, ಎಮೋಷನ್, ಢಣಣ್ ಅಂತ ಹಾಡಿನ ಓಘದೊಂದಿಗೆ ಏರುತ್ತಿದ್ದಂಗೆ ಸ್ನೇಹ, ತ್ಯಾಗ, ಪ್ರೀತಿಗಾಗಿ ಮಾಡುವ ಹೋರಾಟದ ಎಲ್ಲಾ ಭಾವಗಳು ಮನದ ಹಿನ್ನೆಲೆಯಲ್ಲಿ ಅಪ್ಪು, ಕಿಟ್ಟಿ, ಲೂಸ್ ಮಾದ ರೂಪಕವಾಗಿ ಕಣ್ಣಿನ ಮುಂದೆ ಬಂದಂತಾಗುತ್ತಿತ್ತು.ಫೀಲ್ ಅಲ್ಲಿ ಮಿಸ್ ಆಗಿ ಆಗಿ ಟ್ರೈನ್ ಪಕ್ಕಕ್ಕೆ ಗುದ್ದಿಕೊಂಡೆ. ಹಿಂದೆ ಇದ್ದ ಪೊಲೀಸ್ ಮತ್ತು ನಾಯಿ ಜ಼ುಗ್ ಅಂತ ಮುಂದೆ ಬಂದು ಬಿಟ್ಟರು. ಹುಡುಗರು ಫಿಲಂ ನಲ್ಲಿ ಅಷ್ಟೆಲ್ಲಾ ಕಷ್ಟಗಳ ನಡುವೆ ಒಂದು ಜೋಡಿಯನ್ನು ಒಂದು ಮಾಡಲು 'ಹುಡುಗರು' ಮಾಡುವ ಕಷ್ಟ ನೆನಪಾಗಿ ಸಡನ್ನಾಗಿ ನಾನೂ ಅಂತಹ ಒಂದು hypothetical chasing scene ನಲ್ಲಿ ಇದ್ದೀನಾ ಅನಿಸಿಬಿಡ್ತು!! ಇನ್ನೂ ಜಾಸ್ತಿ ಹೊತ್ತು ಆಡಿದರೆ ಗಂಗಾ ನಾಗವಲ್ಲಿ ಅಂತ ಅಂದು ಕೊಂಡು, ತಾನೂ ನಾಗವಲ್ಲಿ ಆದ ಹಾಗೆ, ನಾವೇನಾದರೂ ಪ್ರಭು (ಹುಡುಗರು ಚಿತ್ರದಲ್ಲಿ ಅಪ್ಪು ಹೆಸರು) ಆದರೆ ಓಕೆ, ಗ್ರಹಾಚಾರ ತಪ್ಪಿ ಲೂಸ್ ಮಾದ ಥರ ಕಿವಿನೋ, ಕಿಟ್ಟಿ ಥರ ಕಾಲು ಹೋಗಿ ಬಿಟ್ಟರೆ ಎಲ್ಲಿ ಸಹವಾಸ ಅಂತ ನಕ್ಕು ಸುಮ್ಮಾನಾದೆ.
ಈಗ ನಮ್ಮಲ್ಲಿ ಕಟ್ಟ ಕಡೆಯದಾಗಿ ಉಳಿಯುವ ಪ್ರಶ್ನೆ, "ಹಳೇ ಹುಡುಗಿ ಅಚಾನಕ್ ಆಗಿ ನೆನಪಾದರೆ, ನೀವು ಫೋನ್ ಮಾಡಿ ಗೋಳು ಹೊಯ್ದುಕೊಳ್ಳುವ ನಿಮ್ಮ #ಹುಡುಗರು ಯಾರು??"
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ