ಚಿಕ್ಕವನಿದ್ದಾಗ ಎರಡು ಪ್ರಶ್ನೆಗಳಿಗೆ ಎಲ್ಲರ ಉತ್ತರ ಸಂಗ್ರಹಿಸೋದೇ ನನಗೆ ಒಂದು ಕೆಲಸ ಆಗಿತ್ತು.
ಪ್ರಶ್ನೆ ಒಂದು: ದೊಡ್ಡವನಾದ ಮೇಲೆ ಏನಾಗ್ತೀಯಾ?
ಪ್ರಶ್ನೆ ಎರಡು: ನೀನೇನಾದರೂ CM / PM ಆದರೆ ಮೊದಲು ಮಾಡುವ ಕೆಲಸ ಯಾವುದು?
Technically, ಈ ಎರಡೂ ಪ್ರಶ್ನೆಗಳು contradictory. ದೊಡ್ಡವನಾದ ಮೇಲೆ ಏನಾಗ್ತೀಯಾ ಅನ್ನೋ ಪ್ರಶ್ನೆಗೆ ಗಗನಯಾತ್ರಿ, ಶಿಕ್ಷಕ, ಇಂಜಿನಿಯರ್, ಡಾಕ್ಟ್ರು ಇತ್ಯಾದಿ ಉತ್ತರಗಳು ರೆಡಿ ಇರುತ್ತಿದ್ದವು. ಆದರೆ CM / PM ಆದ ತಕ್ಷಣ ಏನು ಮಾಡುತ್ತೀರಾ ಎಂಬ ಪ್ರಶ್ನೆಗೆ "ಶಾಲೆ ಮಕ್ಕಳಿಗೆ ಭಾನುವಾರ ಸ್ಪೆಷಲ್ ಕ್ಲಾಸ್ / ಟ್ಯೂಷನ್ ಹೆಸರಲ್ಲಿ ರೋಧನೆ ಕೊಡಬಾರದು, ಆಟದ ಸಮಯದಲ್ಲಿ ಬೇರೆ ಕ್ಲಾಸ್ ಮಾಡಬಾರದು" ಇತ್ಯಾದಿಯಾಗಿ ನಮ್ಮದೇ ತರಲೆ ವ್ಯಾಪಾರದ ಐಡಿಯಾಗಳು ನಮ್ಮಲ್ಲಿದ್ದವು. "ದೊಡ್ಡವನಾದ ಮೇಲೆ ಏನಾಗ್ತೀಯಾ" ಅನ್ನೋ ಪ್ರಶ್ನೆಗೆ ಸಾವು ಬಂದಾಯ್ತು. ಈಗಾಗಲೇ ಎರಡು ಕತ್ತೆ ವಯಸ್ಸಾಗಿದೆ. So, ಇಂದಿಗೂ, ಇವತ್ತಿಂದ ಇನ್ನೂ ಇಪ್ಪತ್ತು ವರ್ಷಗಳ ನಂತರವೂ ಕೇಳಬಹುದಾದ ಪ್ರಶ್ನೆ: "ನೀನು CM / PM ಆದರೆ ಏನು ಮಾಡುತ್ತೀಯಾ?"
ಸೋಜಿಗ ಏನಪ್ಪಾ ಅಂದರೆ, ಈ ಪ್ರಶ್ನೆಗೆ ಹದಿನೈದು ವರ್ಷಗಳ ಹಿಂದೆ ಉತ್ತರ ಬೇರೆ ಆಗಿತ್ತು, ಈಗ ಬೇರೆ ಆಗಿದೆ, ಮುಂದೆ ಇನ್ನೂ ಬೇರೆ ಏನೋ ಆಗುವುದರಲ್ಲಿ ಸಂಶಯ ಬೇಡ. It's like defining happiness. Then, Happiness was having ice candy at nagesh parlor. It's different now and will change in future. ಈ ಎಲ್ಲಾ ಆಲೋಚನೆ ಶುರುವಾಗಿದ್ದು ಎರಡು ಕಾರಣಗಳಿಂದ.
ಒಂದು: ನಾನು House of Cards ಧಾರವಾಹಿ ನೋಡಲು ಶುರು ಮಾಡಿರೋದರಿಂದ. Political Drama ನಮಗೆ, ಅಲ್ಲಲ್ಲ ನನಗೆ ವೈಯಕ್ತಿಕವಾಗಿ ತುಂಬಾ ಹೊಸ genre. ಈ ನಿಟ್ಟಿನಲ್ಲಿ ಹೀಗೂ ಕಥೆ ನಿರೂಪಣೆ ಮಾಡಬಹುದಾ ಎಂದು ಅಚ್ಚರಿಯಾಗಿದೆ. Kevin Spacey, Robin Wright, Kate Mara ಮತ್ತು ಇನ್ನಿತರರನ್ನು ಒಳಗೊಂಡ ಧಾರವಾಹಿ ಹಲವಾರು ಕಾರಣಗಳಿಂದ ವಿಶಿಷ್ಟ. ಅದರ ಬಗ್ಗೆ ಇನ್ನೊಮ್ಮೆ ಮಾತಾಡೋಣ.
ಎರಡು: ನಾಲ್ಕು ವರ್ಷದ ರಾಜ್ಯ ಆಡಳಿತವನ್ನು ಮುಗಿಸಿದ ಸಿಎಂ ಸಿದ್ಧರಾಮಯ್ಯ ಮತ್ತು ಮೂರು ವರ್ಷ ಕೇಂದ್ರ ಆಡಳಿತ ಮುಗಿಸಿದ ಪಿಎಂ ನರೇಂದ್ರ ಮೋದಿ. ನಮ್ಮ ದೇಶದಲ್ಲಿ ಸಾರ್ವಜನಿಕರ ಗಮನ ಸೆಳೆಯುವ ಮೂರು ಕ್ಷೇತ್ರಗಳೆಂದರೆ: ಸಿನಿಮಾ, ರಾಜಕೀಯ ಮತ್ತು ಕ್ರಿಕೆಟ್. ಈ ಮೂರರಲ್ಲಿ ಆಸಕ್ತಿ ಇರುವವರಿಗೆ ಬೇರೆ ಮನೋರಂಜನೆ ಅಗತ್ಯ ಇಲ್ಲ ಎಂಬುದು ಕೂಡ ಸತ್ಯ.
ಮೊದಲು ಒಂಥರಾ ಚೆನ್ನಾಗಿತ್ತು, ರಾಜಕೀಯ ನಾಯಕರೆಲ್ಲಾ ಎಲೆಕ್ಷನ್ ಸಂದರ್ಭದಲ್ಲಿ ಮತ ಯಾಚಿಸಲು ಮನೆಗೆ ಬಂದಾಗ, ಜನರು ನಮ್ಮ ವೋಟ್ ನಿಮಗೆ ಎಂದು ಭರವಸೆ ನೀಡಿ ಕಳುಹಿಸುತ್ತಿದ್ದರು. ಆಮೇಲೆ ತಮಗೆ ಯಾರು ಬೇಕೋ ಅವರಿಗೆ ಮತ ಹಾಕುತ್ತಿದ್ದರು. ಯಾರು ಯಾರಿಗೆ ವೋಟ್ ಮಾಡಿದರು ಎಂದು ಅವರೊಬ್ಬರನ್ನು ಬಿಟ್ಟು ಬೇರೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಕಟ್ ಮಾಡಿದ್ರೆ 201೮. ಸಾಮಾಜಿಕ ಜಾಲತಾಣಗಳಲ್ಲಿ ನಮಗೇ ಗೊತ್ತಿಲ್ಲದೇ ನಾವು ನಿರಂತರ ರಾಜಕೀಯ ಸ್ಕೀಮುಗಳನ್ನು ಪರಾಮರ್ಶಿಸುತ್ತೇವೆ. ಅನ್ನ ಭಾಗ್ಯ ಯೋಜನೆಯ 'ಮಿಸ್ಟೀಕ್' ಏನು, ಡಿಜಿಟಲ್ ಇಂಡಿಯಾ' ಮುಂದಿರುವ ಸವಾಲುಗಳೇನು? ಎಲ್ಲದರಲ್ಲೂ ನಮ್ಮ ಅಭಿಪ್ರಾಯ ಇದ್ದೇ ಇರುತ್ತದೆ. ಮತ್ತೆ ನಾವು ಪಬ್ಲಿಕ್ ಆಗಿ ನಮ್ಮ ಮೆಚ್ಚಿನ ರಾಜಕೀಯ ನಾಯಕರ, ಪಕ್ಷಗಳ ಸಾಧನೆಗಳನ್ನು, ಇತರರ ತಪ್ಪುಗಳನ್ನು ಓಪನ್, ಓಪನ್ ಆಗಿ ಟೀಕೆ ಮಾಡಲು ಶುರು ಮಾಡಿದ್ದೇವೆ. ಗೋ ಹತ್ಯೆ ನಿಷೇಧದ ಪರಿಣಾಮಗಳೇನು, ರಾಜ್ಯದ ಕಾವೇರಿ ಸಮಸ್ಯೆಗೆ ಪರಿಹಾರ ಹೇಗೆ ಎಂಬ ಇತ್ಯಾದಿ ವಿಷಯಗಳ ಬಗ್ಗೆ ಒಂದು ಆರೋಗ್ಯಕರ ಚರ್ಚೆ ಆಗಲಿ, ಒಳ್ಳೆಯದು. ಆದರೆ ನಾನು ಕಂಡಂತೆ ಇತರ ರಾಜಕೀಯ ಪಕ್ಷ ಬೆಂಬಲಿಸುವವರನ್ನು ಬೈಯ್ಯುವ, ಸ್ನೇಹದ ಮಧ್ಯ ರಾಜಕೀಯದ ಗೋಡೆ ಕಟ್ಟುವ ಕೆಲಸ ಆಗಬಾರದು. ಯಾರು ಯಾರನ್ನಾದರೂ ಬೆಂಬಲಿಸಲಿ, ಆದರೆ ಇನ್ನೊಬ್ಬರ ಅಭಿಪ್ರಾಯವನ್ನು ಗೌರವಿಸದೇ ಏಕಮುಖ ವಾದಗಳಿಂದ ಯಾರಿಗೂ ಲಾಭವಿಲ್ಲ. ಅದನ್ನು ಅರಿತು ಮುಂದೆ ಸಾಗೋಣ.
ಇಷ್ಟು ಆದ ಮೇಲೆ ಬೇತಾಳನ ರೀತಿ ನನ್ನದೊಂದು ಚಿಕ್ಕ ಪ್ರಶ್ನೆ: ನೀವು CM / PM ಆದರೆ ಮೊದಲು ಮಾಡುವ ಕೆಲಸ ಏನು?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ