ಜೂನ್ 18, 2014

ಮಧ್ಯ ರಾತ್ರೀಲಿ.. ಒಂಟಿ ಬೀದೀಲಿ..

ನಂಗೊಂದು ದಿನ ಒಂದು weird ಕನಸು ಬಿದ್ದಿತ್ತು. ಕನಸಿಗೇನು ಲಾಜಿಕ್ ಇರಲ್ಲ. ಹಾಗಾಗಿ ಇದಕ್ಕೂ ಲಾಜಿಕ್ ಇಲ್ಲ. Heart patient ಗಳು ಸ್ವಲ್ಪ ಈ ಬರಹದಿಂದ ದೂರ ಉಳಿಯುವುದು ಒಳ್ಳೆಯದು.


ಸಾಂದರ್ಭಿಕ ಚಿತ್ರ (ಚಿತ್ರ: ಕ್ರೇಜಿ ಸ್ಟಾರ್)

ಮಧ್ಯರಾತ್ರಿ ಸುಮಾರು 1 ಗಂಟೆ. ಅದ್ಯಾವುದೋ ಲೋಕ ಮುಳುಗ್ಹೋಗಿದೆ ಅನ್ನೋ ಹಾಗೆ ನಾನು ಬೇಜಾರಾಗಿ ಕಡೂರಿನಲ್ಲಿರುವ ನಮ್ ಮನೆ ಕಾಂಪೌಂಡ್ ಒಳಗೆ ಮೊಬೈಲ್ ನಲ್ಲಿ ಹಾಡು ಕೇಳುತ್ತಾ ನಿಂತಿದ್ದೆ. ಯಾವುದೋ ಎಕ್ಸಾಮ್ ಬರೆಯಲು ಚಿಕ್ಕಮಗಳೂರಿಗೆ ಹೋದ ಒಂದ್ ಹುಡುಗಿ ಯಾಕೋ ಬರೋದು ಲೇಟಾಗಿ ಒಬ್ಬಳೇ ನೆಡೆದುಕೊಂಡು ಹೋಗ್ತಾ ಇರ್ತಾಳೆ. ಅವಳ ಮೊಬೈಲ್ ನಲ್ಲಿ ನಾನು ಕೇಳುತ್ತಿದ್ದ ಹಾಡೇ ಸಣ್ಣ ಧ್ವನಿಯಲ್ಲಿ ನನಗೆ ಕೇಳಿಸಿತು. ಅವಳು ನಮ್ ಮನೆ ದಾಟಿ ಅಷ್ಟು ದೂರ ಹೋದ ಮೇಲೆ ಆಟೋದಲ್ಲಿ ಇಬ್ಬರು ವ್ಯಕ್ತಿಗಳು ಅವಳನ್ನು ಹಿಂಬಾಲಿಸುವುದನ್ನು ನೋಡಿದೆ. ಅವರ ಮೇಲೆ ಯಾಕೋ ಸಂಶಯ ಬಂತು. ಅವರು ಅವಳ ಹಿಂದೆ ಹೋದ ಹಾಗೆ ನನ್ನ ಅನುಮಾನ ಇನ್ನೂ ಜಾಸ್ತಿಯಾಯಿತು. ಇದ್ದಕ್ಕಿದ್ದಂತೆ ನನಗೆ ಒಂದು ಐಡಿಯಾ ಬಂತು. ನನ್ನ ಮೊಬೈಲ್ ನಲ್ಲಿ ಕೇಳುತ್ತಿದ್ದ ಹಾಡನ್ನು ಸ್ವಲ್ಪ ಹಿಂದಕ್ಕೆ ಓಡಿಸಿದೆ (ಪ್ಲೇಬ್ಯಾಕ್ ಸ್ಲೈಡ್ ಮಾಡಿದೆ). ಆ ಹುಡುಗಿ ಮತ್ತು ಆಟೋದಲ್ಲಿ ಹಿಂಬಾಲಿಸಿದ ಇಬ್ಬರೂ ಇದ್ದಕ್ಕಿದ್ದಂತೆ ಹಿಂದಕ್ಕೆ  ನೆಡೆಯಲು ಶುರು ಮಾಡಿದರು (ಡಿವಿಡಿ ಹಿಂದಕ್ಕೆ ಓಡಿಸಿದ ಹಾಗೆ). ಆನಂತರ ಮತ್ತೆ ಆ ಹುಡುಗಿ ನಮ್ ಮನೆ ದಾಟಿ ಮುಂದೆ ಹೋದಳು. ಆನಂತರ ನನ್ನ ಮೊಬೈಲ್ ನಲ್ಲಿ ಬರುತ್ತಿದ್ದ ಹಾಡನ್ನು ಆಟೋದಲ್ಲಿ ಕೇಳುತ್ತಿದ್ದ ಹಾಡಿಗೆ ಬದಲಾಯಿಸಿದೆ. ಆಮೇಲೆ ಆ ಹಾಡನ್ನು pause ಮಾಡಿದೆ. ಅವರಿಬ್ಬರು ನಿಂತಲ್ಲಿಯೇ ನಿಂತುಕೊಂಡರು. ಎಷ್ಟೇ  ಕಷ್ಟ ಪಟ್ಟರೂ ಒಂದಿಂಚೂ ಅಲುಗಾಡಲು ಆಗಲಿಲ್ಲ. ಮನೆ ತಲುಪಿದ ಹುಡುಗಿ bye ಹೇಳಲು ಕೈ ಸನ್ನೆ ಮಾಡಿದಳು. ಖುಷಿಯಿಂದ ಹಾಗೆ ಹಿಂದಕ್ಕೆ  ಬಿದ್ದೆ. ಆಮೇಲೆ ಎಚ್ಚರವಾಯಿತು. ಅಲ್ಲಿಗೆ ಕನಸು ಮುಗಿಯಿತು.

ಜೂನ್ 9, 2014

ತಿರುಕನ ಕನಸು

ಸಾಂದರ್ಭಿಕ ಚಿತ್ರ (ಚಿತ್ರ: ವಾಲಿ)


ದಿನಾಂಕ: 14/05/2014

ಲೋಕಸಭಾ ಚುನಾವಣಾ ಫಲಿತಾಂಶ ಇನ್ನು 2 ದಿನಗಳಲ್ಲಿ ಹೊರಬೀಳಲಿದೆ. ಯಾರು ಪ್ರಧಾನಿ ಆಗಬಹುದು ಅಂತ ಎಲ್ಲಾರೂ ತಲೆ ಕೆಡಿಸ್ಕೊಂಡು ಟಿವಿ ನೋಡ್ತಾ ಇದ್ದಾರೆ. ಆದರೆ ನಾನು ಮಾತ್ರ ಮುಂದೆ ಒಂದು ದಿನ ನಾನೇ ಏನಾದರೂ ಪ್ರಧಾನಿ ಆದ್ರೆ ಏನ್ ಮಾಡೋಣ ಅಂತ ಯೋಚನೆ ಮಾಡ್ತಾ ಇದ್ದೀನಿ.


ಜೂನ್ 8, 2014

ನಾನು ಸತ್ತರೆ....

ಸಾಂದರ್ಭಿಕ ಚಿತ್ರ (ಚಿತ್ರ: ಸಿದ್ಲಿಂಗು)

ನಾನು ಸತ್ತರೆ ನಮ್ ಮನೆಯವರು ಅಳಬಹುದೇನೋ, ಮನೆ ಹತ್ರ ನಮ್ ಹುಡುಗರು ಬರಬಹುದೇನೋ. ಎಲ್ಲಾ ಮಾಮೂಲಿ ಗೋಳಿನ ಹಾಗಿದೆ. ಆದರೆ ನನಗೇಕೋ ನಿನ್ನದೇ ನೆನಪಾಗುತ್ತಿದೆ. ನಾನು ಸತ್ತರೆ ನಿನಗೆ ಹೇಳೋದ್ಯಾರು? ನಾನು ಸತ್ತಾಗ ನನ್ನನ್ನು ನೋಡಲು ನೀನು ಬರ್ತೀಯಾ? ಬರದೇ ಒಬ್ಳೇ ಅಳುತ್ತಾ ಕೂರುತ್ತೀಯಾ? ಅಥವಾ, ಅರುಣ್ ? ಯಾರದು ನೆನಪೇ ಇಲ್ಲಾ ಅಂತೀಯಾ? ಸುತ್ತಲೂ ಪ್ರಶ್ನೆಗಳ ಸರಮಾಲೆ. ನಡುವಲ್ಲಿ ಸತ್ತವನ ಹಾಗೆ ಮಸಣದ ಗುಂಡಿಯಲ್ಲಿ ಮಲಗಿದ ಹಾಗಿದೆ.