ಮಾರ್ಚ್ 14, 2023

Hiding In Plain Sight

ಸಾಂದರ್ಭಿಕ ಚಿತ್ರ: ಯುವರತ್ನ 


ಗಣರಾಜ್ಗೋತ್ಸವದ ನಂತರ ನಮ್ಮ ಬ್ಯಾಂಕ್ ನಿಂದ ಸಮೀಪದ‌ ಸರ್ಕಾರಿ ಶಾಲೆಗೆ ರೆಫ್ರಿಜರೇಟರ್ ಉಡುಗೊರೆಯಾಗಿ ಕೊಡಲಾಯಿತು. ಕಾರಣಾಂತರಗಳಿಂದ ನಾನು ಆ ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲ. ಕನಸು ಕಾಣೋಕೆ ಕಾಸು ಕೊಡಬೇಕೇ? ಎಂಬಂತೆ ನಾನು ಹೋಗಿದ್ದರೆ ಏನೇನು ಆಗಿದ್ದಿರಬಹುದು ಅಂತ ಒಂದು ಕಾಲ್ಪನಿಕ alternate reality version ಇದು. ಹೆಡ್ ಮೇಡಂ‌ ಅವರು ಶಿಕ್ಷಕರು ಮತ್ತು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಬ್ಯಾಂಕ್ ಮತ್ತು ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು. ಶಾಲೆಯ ಕೊನೆಯ ಪಿರಿಯಡ್ ಆಗಿದ್ದರಿಂದ ಎಲ್ಲಾ ಮಕ್ಕಳು ಹೆಚ್ಚು ಕಡಿಮೆ‌ ಒಂದು ಕಾಲು ಹೊರಗೇ ಇಟ್ಟಿದ್ದರು ಅಂದರೆ‌ ತಪ್ಪಾಗಲ್ಲ ಅನಿಸುತ್ತೆ‌. ಮೊದಲೇ‌ ಶನಿವಾರ, ಅರ್ಧ ದಿನ, ಯಾವಾಗ ಮನೆಗೆ ಹೋಗ್ತೀವೋ ಅಂತ ಕಾಯ್ಕೊಂಡು ಕೂತಿದ್ದರು.‌ ಈ ಸಂದರ್ಭದಲ್ಲಿ ಹೆಡ್ ಮೇಡಂ ಅವರು ನನ್ನ ಕಡೆ ತಿರುಗಿ, ಮಕ್ಕಳಿಗೆ ಇದು ಎಗ್ಸಾಮ್ ಸಮಯ, ಅವರಿಗೆ ಓದಲು ಸಹಾಯ ಆಗುವಂತೆ ಏನಾದರೂ ಎರಡು ಮಾತನಾಡಬೇಕೆಂದು ಕೋರಿದರು. ನಾನು ಅಲ್ಲಿಯವರೆಗೂ ಹಾಗೇ ಹಿಂದೆ ನಿಂತು ಚಪ್ಪಾಳೆ ಹೊಡೆಯುತ್ತಾ ಆರಾಮಾಗಿ‌ ನಿಂತಿದ್ದೆ, ಇದು ಒಳ್ಳೆ ಇಕ್ಕಟ್ಟಿನ‌ ಪರಿಸ್ಥಿತಿಯಲ್ಲಿ ಲಾಕ್ ಆದೆ, ಸರಿ‌ ಹೆಂಗೋ ಮ್ಯಾನೇಜ್ ಮಾಡೋಣ ಅಂತ ಮುಂದೆ ಬಂದೆ. 

ಅವರು‌ ಇವರು ಅಂತ‌ ಇಲ್ಲ, ಯಾರು ಬೇಕಾದರೂ ಉತ್ತರ ಹೇಳಬಹುದು. ದೊಡ್ಡವರಾದ‌ ಮೇಲೆ ನೀವೆಲ್ಲಾ‌ ಏನಾಗಬೇಕು ಅಂತ ಇದ್ದೀರಾ? ಅಂತ ಕೇಳಿದೆ.‌ ಡಾಕ್ಟರ್,‌ ಇಂಜಿನಿಯರ್, ಸಿನಿಮಾ ನಟ, ರಾಜಕೀಯ, ‌ಇತ್ಯಾದಿ ಎಲ್ಲಾ‌ ಉತ್ತರಗಳು‌ ಅದರಲ್ಲಿ‌ ಇದ್ದವು. ಒಬ್ಬನೂ ಕೂಡ‌ ಬ್ಯಾಂಕ್ ಎಂಪ್ಲಾಯಿ ಆಗ್ತೀನಿ‌ ಅಂತ ಹೇಳಲಿಲ್ಲ ಅಲ್ವಾ ಅಂತ ತುಸು ಬೇಜಾರಾದರೂ, ನಾನೂ ಚಿಕ್ಕವನಿದ್ದಾಗ ಬ್ಯಾಂಕರ್ ಆಗಬೇಕು ಅಂತ ಅಂದುಕೊಂಡಿರಲಿಲ್ಲ. You start somewhere, you end up somewhere else ಎಂಬ ಮಾತಿನಂತೆ ಅವರವರ ಪಾಡು ಅವರವರ ಹಾಡು‌ ಅಂತ ಸುಮ್ಮನಾದೆ.‌ ಆಗ‌ ಒಂದಿಬ್ಬರು ಮಕ್ಕಳ ಮುಖ ಡಲ್ ಆದಂಗೆ ಇತ್ತು. ಮೊದಲೇ‌ ಕೊನೆಯ ಪಿರಿಯಡ್ ಬೇರೆ, ಪಾಪ‌ ಜಾಸ್ತಿ ತಲೆ ತಿನ್ನೋದು ಬೇಡ, ಒಂದು ಕಥೆ‌ ಹೇಳ್ತೀನಿ, ಯಾರು ಕಥೆ ಕೇಳೋಕೆ‌ ಇಷ್ಟ ಪಡುತ್ತೀರಾ? ಅಂತ ಕೇಳಿದೆ. ಒಂದು ಮೂವತ್ತು ಮಕ್ಕಳಲ್ಲಿ‌ ಒಂದು ಇಪ್ಪತ್ತೈದು ಮಕ್ಕಳು ಕೈ ಎತ್ತಿದರು. ಈಗ‌ ಅರ್ಜೆಂಟಾಗಿ ಯಾರು ಮನೆಗೆ ಹೋಗೋಕೆ‌ ಇಷ್ಟ ಪಡುತ್ತೀರಾ? ಅಂತ ಕೇಳಿದೆ. ಎಲ್ಲಾ ಮಕ್ಕಳು ಕೈ ಎತ್ತಿದರು, ಜೊತೆಗೆ ನಮ್ ಬ್ಯಾಂಕ್ ಸಬ್ ಸ್ಟಾಫ್ ಕೂಡ. ನಮ್ ಸಬ್ ಸ್ಟಾಫ್‌ ಕಡೆ ತಿರುಗಿ, ಓ ಇರಪ್ಪಾ ಅಣ್ಣ, day end ಆಗಿಲ್ಲ ಇನ್ನಾ, ಆಮೇಲೆ‌ ಮನೆಗೆ ಹೋಗೋಣ ಅಂದೆ, ಮಕ್ಕಳೆಲ್ಲಾ ಜೋರಾಗಿ ನಕ್ಕರು.‌ 

ಸರಿ, ಎಲ್ಲರೂ ಉತ್ಸುಕರಾಗಿದ್ದಾರೆ, ಕಥೆ ಬೇಗ ಮುಗಿಸೋಣ ಅಂತ ಶುರು‌ ಮಾಡಿದೆ. ಒಂದು ಊರಲ್ಲಿ ಒಬ್ಬ ಮರ ಕಡಿಯೋನು ಇರ್ತಾನೆ. ಅವನು‌‌ ಪ್ರತಿ ದಿನ ಕಾಡಿಗೆ ಹೋಗಿ, ಮರ‌‌ ಕಡಿದು, ಊರಿಗೆ ತಂದು, ಸೌದೆಯಾಗಿ ಮಾರುತ್ತಾ ದುಡ್ಡು ಸಂಪಾದನೆ ಮಾಡಿ ಜೀವನ ನೆಡೆಸುತ್ತಾ‌ ಇರುತ್ತಾನೆ. ಅವನು ಒಂದು‌ ದಿನ ನದಿ‌ ಪಕ್ಕ ಮರ ಕಡಿಯುವಾಗ ಅಚಾನಕ್ ಆಗಿ‌ ಕೊಡಲಿ ನೀರಿಗೆ ಬೀಳುತ್ತೆ. ಹಿಂದೆ ಸಾಲಿನಲ್ಲಿ ಕೂತಿದ್ದ‌ ಹುಡುಗ ಕೈ ಎತ್ತಿದ.‌ ನಾನು ಹೇಳಿ‌ ಅಂದೆ.‌ ಆ ಹುಡುಗ ಮುಂದಕ್ಕೆ ಅವನು‌ ಅಳುತ್ತಾನೆ, ದೇವತೆ ಪ್ರತ್ಯಕ್ಷ ಆಗಿ ಚಿನ್ನದ‌ ಕೊಡಲಿ, ಬೆಳ್ಳಿ‌ ಕೊಡಲಿ ಎಲ್ಲಾ ಕೊಡುತ್ತಾರೆ.‌ ಅವನು ನೀಯತ್ತಾಗಿ ಅವು ಅವನದ್ದಲ್ಲ ಅಂದಾಗ ಅವನ ಶ್ರದ್ಧಾ ಭಕ್ತಿಗೆ ಮೆಚ್ಚಿ ಆ ದೇವತೆ ಎಲ್ಲಾ‌ ಕೊಡಲಿಯನ್ನು ಅವನಿಗೆ‌ ಕೊಟ್ಟು ವರವನ್ನು ಕೊಟ್ಟು ಮಾಯ ಆಗುತ್ತಾರೆ, ಆ ಸ್ಟೋರಿ ನಮಗೆ ಗೊತ್ತು ಸಾರ್, ನಮ್‌ ಟೀಚರ್ ಹೇಳಿದ್ದಾರೆ ಅಂದ. ಈ ಕಥೆ‌ ಅದೇ ರೀತಿ, ಸ್ವಲ್ಪ ಬೇರೆ‌ ರೀತಿ‌, ಮುಂದಕ್ಕೆ ಕೇಳಿ ಅಂದೆ. ಅವನು ಒಂದು‌ ದಿನ‌ ಕಟ್ಟಿಗೆ ಕಡಿಯುವಾಗ ಕೊಡಲಿ ನೀರಿಗೆ ಬಿದ್ದು ಹೋಗುತ್ತದೆ. ಕೊಡಲಿ‌ ಕಾಪಡಾಲು ನೀರಿಗೆ ಜಿಗಿಯುತ್ತಾನೆ, ನೀರಿನ ಹರಿವು ಜಾಸ್ತಿ‌ ಇದ್ದದ್ದರಿಂದ‌ ಕೊಡಲಿ ಸಿಗೋದಿಲ್ಲ,‌ ಮತ್ತು‌ ಅದು ಅಪಾಯಕಾರಿ ಅಂತ ವಾಪಸ್ ದಡಕ್ಕೆ ಬಂದು ಕಳೆದುಕೊಂಡ ಕೊಡಲಿಗಾಗಿ‌ ಸಂಜೆಯ ತನಕ‌ ಅಳುತ್ತಾ ಕೂರುತ್ತಾನೆ.‌ ಕೊನೆಗೆ ಬರೀ ಕೈಯಲ್ಲಿ ಮನಗೆ ಬಂದು ಖಾಲಿ ಹೊಟ್ಟೆಯಲ್ಲಿ ಮಲಗುತ್ತಾನೆ. ಮರುದಿನ‌ ಈ ಕಟ್ಟಿಗೆ ಕಡಿಯುವವನು‌ ಚಿಂತೆ ಮಾಡುತ್ತಾ ಕುಳಿತಾಗ ಈ‌‌ ವಿಷಯವನ್ನು ತಿಳಿದ ಪಕ್ಕದ ಮನೆಯವನು ಅವನ ಬಳಿ‌ ಇದ್ದ ಕೊಡಲಿಯನ್ನು ಕೊಟ್ಟು ಸಂಜೆ ಕೊಡಲು‌ ಹೇಳಿ ಅವನ‌ ಕೊಡಲಿ ಹಿಡಿದು ಅವನು‌‌ ಕೆಲಸಕ್ಕೆ ಹೋಗುತ್ತಾನೆ. ಕೊಡಲಿ‌ ಸಿಕ್ಕ‌ ಖುಷಿಯಲ್ಲಿ‌ ಇವನೂ ಕೆಲಸಕ್ಕೆ ಹೋಗಿ,‌ ಸಾಯಂಕಾಲದ ವರೆಗೂ ಕಟ್ಟಿಗೆ ಕಡಿದು, ಮಾರಿ, ಬಂದ‌‌ ದುಡ್ಡಲ್ಲಿ ತನಗೆ ಅಂತ ಹೊಸ‌ ಕೊಡಲಿ ತಗೊಂಡು,  ಪಕ್ಕದ‌ ಮನೆಯವನ ಕೊಡಲಿಯನ್ನು ಅವನಿಗೆ ವಾಪಸ್ ಮಾಡುತ್ತಾನೆ. ಇದು‌ ಕಥೆ.

Now coming back to classroom, ಈ ಕಥೆಯಿಂದ ಯಾರಿಗೆ ಏನು‌ ಅರ್ಥ ಆಯ್ತು ಹೇಳಿ ಅಂತ ಕೇಳಿದೆ.‌ ಒಬ್ಬ ಹುಡುಗ ನದಿ ಪಕ್ಕ‌ ಮರ ಕಡಿಯಬಾರದು,‌‌ ಕೊಡಲಿ ನೀರಿಗೆ ಬಿದ್ದರೆ‌ ಕಷ್ಟ ಅಂತ ಹೇಳಿದ,‌ ಇಡೀ‌‌‌ ಕ್ಲಾಸ್ ರೂಮ್ ಗೊಳ್ಳ್ ಅಂತ ಬಿದ್ದು ಬಿದ್ದು ನಗೋಕೆ ಶುರು ಮಾಡಿದರು. It was a clever joke, actually, ನನಗೂ ನಗು ಬಂತು. ಹಾಗಾದರೆ, ದೇವರು ಇಲ್ಲವಾ? ನಮಗೆ ಕಷ್ಟ ಬಂದಾಗ ಸಹಾಯ ಮಾಡೋದಿಲ್ಲವಾ? ಅಂತ ಇನ್ನೊಂದು ಹುಡುಗಿ ಕೇಳಿದಳು.‌ Tricky Question, kind of grey area there, ನೋಡಿ ದೇವರು ಇದ್ದಾರೆ, ಆದರೆ‌‌ ಪ್ರತಿ ಬಾರಿ ನಾವು ಸಮಸ್ಯೆಯಲ್ಲಿ ಸಿಲುಕಿಕೊಂಡಾಗ ಪ್ರತ್ಯಕ್ಷ ಆಗಿ ಚಿನ್ನ ಬೆಳ್ಳಿ ಕೊಡುವುದೆಲ್ಲಾ ಇಲ್ಲ. ಅದು ಕಥೆ‌ ಅಷ್ಟೇ.‌ If you observe carefully, ಈ‌ ಕಥೆಯಲ್ಲಿ ದೇವರು‌ ಇದ್ದಾರೆ, ಎಲ್ಲಿ ಹೇಳಿ? ಅಂತ ಕೇಳಿದೆ. ಕ್ಲಾಸ್ ರೂಮ್ ನಿಶಬ್ದವಾಗಿ ಕೇಳುತ್ತಿತ್ತು,‌ ಮುಂದುವರೆದೆ. ಆ‌ ಕಟ್ಟಿಗೆ ಕಡಿಯುವವನು ಖಾಲಿ ಹೊಟ್ಟೆಯಲ್ಲಿ ಮಲಗಿರೋದು ಗೊತ್ತಾದಾಗ ಪಕ್ಕದ ಮನೆಯವನು ಅವನ ಬಳಿ‌ ಇದ್ದ ಎಕ್ಸ್‌ಟ್ರಾ ಕೊಡಲಿಯನ್ನು ಕೊಡುತ್ತಾನಲ್ಲಾ, ಅವನೇ ದೇವರು. ನಮ್ಮ ಹತ್ತಿರ ಎಷ್ಟು ದುಡ್ಡಿದೆ, ಲಕ್ಷನಾ? ಕೋಟಿನಾ? ಅನ್ನೋದು ಮುಖ್ಯ ಅಲ್ಲ. Within our limit, ನಮ್ಮ capacity ಒಳಗೆ ನಾವು ಇನ್ನೊಬ್ಬರಿಗೆ ಸಹಾಯ ಮಾಡುತ್ತೀವಲ್ಲಾ, ಅದರಲ್ಲಿ ದೇವರು ಇರುತ್ತಾರೆ. ಮತ್ತೆ ಆ‌ ಕೊಡಲಿಯನ್ನು ನೀಯತ್ತಾಗಿ‌ ಸಂಜೆ ವಾಪಾಸ್ ತಂದು ಕೊಡುತ್ತಾನಲ್ಲ,‌ ಅದೇ ನಂಬಿಕೆ. ಆ ನಂಬಿಕೆಯೇ ದೇವರು, ನಾವು ಯಾವಾಗಲೂ ನಮ್ಮ‌ ಕೈಲಾದಷ್ಟು ನಾವು ಬೇರೆಯವರಿಗೆ ಸಹಾಯ ಮಾಡಬೇಕು.‌ ಮತ್ತು ನಮಗೆ ಸಹಾಯ ಮಾಡಿದವರಿಗೆ‌ ನಾವು ಯಾವುತ್ತೂ ಮೋಸ ಮಾಡಬಾರದು, ‌ಇದೇ ಆ‌ ಕಥೆಯ ನೀತಿ ಅಂತ‌ ಹೇಳಿ ಕಥೆ pause ಮಾಡಿದೆ. 

ಮಕ್ಕಳೆಲ್ಲಾ ಖುಷಿಯಾಗಿ ಬ್ಯಾಗ್ ಹೆಗಲಿಗೆ ಹಾಕೋ‌ ಹೊತ್ತಿಗೆ‌ ಮತ್ತೆ‌ ಕಥೆ‌ ಮುಂದುವರೆಸಿದೆ. ಸ್ವಲ್ಪ ಹೊತ್ತಿಗೆ ಮುಂಚೆ ನೀವು ದೊಡ್ಡವರಾದಾಗ ಏನಾಗ್ತೀರಾ ಅಂತ ಕೇಳಿದೆ, ಒಬ್ಬೊಬ್ಬರೂ ಒಂದೊಂದು ಉತ್ತರ ಹೇಳಿದ್ದೀರಾ, ಒಳ್ಳೆಯದು, Dream Big ಅಂತ ಹೇಳುತ್ತಾರೆ. ಆದರೆ ಅದರ ನಂತರ ನಾನು ಒಂದು ಕಥೆ ಹೇಳಿ ಜೀವನದಲ್ಲಿ ನಮ್ಮ‌ ನಡುವೆಯೇ ದೇವರು ಇರುತ್ತಾರೆ,‌ ಕಷ್ಟದಲ್ಲಿರುವ ಇನ್ನೊಬ್ಬರಿಗೆ ನಾವು ಮಾಡುವ ಸಹಾಯವೇ ದೇವರ ಕೆಲಸ ಅಂತ ಹೇಳಿದೆ ಅಲ್ವಾ, ಅಂತಹ ಅತ್ಯುತ್ತಮ ಜೀವನ ಮೌಲ್ಯಗಳನ್ನು ನಮಗೆ ಹೇಳಿ ಕೊಟ್ಟಿದ್ದೇ ನಮ್ಮ ಗುರುಗಳು. You never know when and where you learn something. On that note, ನಿಮ್ಮಲ್ಲಿ ಒಬ್ಬರೂ ನಾನು ದೊಡ್ಡವನಾದಾಗ ಶಿಕ್ಷಕ, ಮೇಷ್ಟ್ರು,‌ ಪ್ರೊಫೆಸರ್ ಆಗ್ತೀನಿ ಅಂತ ಹೇಳಲಿಲ್ಲವಲ್ಲಾ? How Strange! Knowledge is Great, Anyone who shares it with you is greatest. ನೀವು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಹೇಳಿದರೆ ನೀವು inspiration ಗಾಗಿ ಎಲ್ಲೆಲ್ಲೋ ಹುಡುಕಬೇಕಿಲ್ಲ, you can look at your teachers, they are 'gems' hiding in plain sight ಅಂತ‌ ಹೇಳಿ ಕಥೆ ಮುಗಿಸಿದೆ. ಮಕ್ಕಳಿಗೆ ಸ್ಟೋರಿ reach ಆಯ್ತಾ ಇಲ್ವಾ ಅಂತ ಯೋಚನೆ ಮಾಡುತ್ತಾ ನಿಂತಿದ್ದೆ, ಆಗ ಒಬ್ಬ ಹುಡುಗ "ಏಏ, ಬ್ಯಾಂಕ್ ಅಂಕಲ್ gems ಚಾಕೊಲೇಟ್ ಕೊಡ್ತಾರಂತೆ ಕಣೋ" ಅಂತ ಪಕ್ಕದ ಹುಡುನಿಗೆ ಹೇಳಿದ. ಅದು ಒಬ್ಬರಿಂದ ಒಬ್ಬರಿಗೆ ರೀಚ್ ಆಗಿ ಇಡೀ ಕ್ಲಾಸ್ ರೂಮ್ ಫುಲ್ ಜೋಶಲ್ಲಿ ಎದ್ದು ನಿಂತಿತು. ನಾನು ಹೇಳಿದ್ದೇ ಬೇರೆ, ಈ ಮಕ್ಕಳು ಅರ್ಥ ಮಾಡ್ಕೊಂಡಿದ್ದೇ ಬೇರೆ, hit and miss ಎನ್ನುವಂತೆ ಒಂದ್‌ ಒಂದ್‌ ಸಲ ಸಿನಿಮಾಗಳು ಹಿಟ್ ಆಗ್ತವೆ, ಕೆಲವು ಸಲ ಮಿಸ್ ಆಗ್ತವರ, ಹೋಗಲಿ ಅಣ್ಣಾ gems chocolate ತಗೊಂಡ್ ಬನ್ನಿ, ಎಲ್ಲಾ‌ ತಿನ್ನೋಣ ಅಂತ ಪರ್ಸ್ ಹುಡುಕಾಡಿದೆ.