ಅಕ್ಟೋಬರ್ 23, 2014

ಎಂದೂ ಮುಗಿಯದ ಈ ಹಾಡು

ಬರವಣಿಗೆ ಒಂದು ಕಲೆ. ನನ್ನ ಪ್ರಕಾರ ಕಲೆಯನ್ನು ಮೀರಿದ ಒಂದು ಧ್ಯಾನ. ಎಷ್ಟೋ ಸಲ ನನಗೇ ಅನಿಸುತ್ತೆ, ನಮ್ಮಂಥವರೆಲ್ಲಾ ಬರೆಯುತ್ತಾ ಹೋದರೆ ಬರವಣಿಗೆ ದೇವರ ಕೋಣೆಯಿಂದ ಎದ್ದು ಬಂಗಾರದ ಮನುಷ್ಯ ಸಿನಿಮಾದಲ್ಲಿ ಅಣ್ಣಾವ್ರ ಹಾಗೆ ಮತ್ತೆ ತಿರುಗಿ ಬರದ ಜಾಗಕ್ಕೆ ಹೋಗಿಬಿಡುತ್ತದೆಯೇನೋ ಅಂತ. ಆದರೆ ಏನು ಮಾಡೋದು "old habits die hard" ಅಂತಾರೆ. ಆದರೆ ಎಲ್ಲದಕ್ಕೂ ಕೊನೆ ಅಂತ ಒಂದು ಇದೆ. ನನ್ನ ಬರವಣಿಗೆಗೂ ಕೂಡ. ಪ್ರಾಯಶಃ ಇದು ನನ್ನ ಕೊನೆಯ ಕವನ. ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಎಂದೂ ಮರೆಯದ ಹಾಡು" ಎಂಬ ಕಾರ್ಯಕ್ರಮದ ಶೀರ್ಷಿಕೆಯಿಂದ ಪ್ರಭಾವಿತನಾಗಿ ಹಾಡನ್ನು ಬರೆದಿರುವೆ.
ನನ್ನೊಳಗೆ ಇಳಿದು
ಸದಾ ನನ್ನೊಂದಿಗೆ ಬಾಳುತ್ತಿರುವ
ನನ್ನವಳಿಗೆ ನನ್ನ
ಕೊನೆ ಸಾಲುಗಳ ಅರ್ಪಣೆ

"ಎಂದೂ ಮುಗಿಯದ ಹಾಡು"

ಎಂದೂ ಮುಗಿಯದ ಹಾಡು
ಗುನುಗುತ್ತಿದೆ ಇಂದು
ನನ್ನ ಮನದ ಮನೆಯ
ನೀನಿರುವ ಕೋಣೆಯಲಿ


ಎಂದೂ ಮುಗಿಯದ ಹಾಡು

ಇಂದು ಬರೆಯಲು ನೆನಪಾಗಿದೆ
ಆಡದೇ ಉಳಿದ ಮಾತುಗಳು
ಬರೆಯುತ್ತಾ ತಾನೇ ಹಾಡಾಗಿದೆ


ಎಂದೂ ಮುಗಿಯದ ಹಾಡು

ಇಂದು ಕೇಳುತಾ ಕುಳಿತಿರುವೆ
ಪ್ರತಿನಿತ್ಯವೂ ಕುಳಿತು
ನಾವು ಹರಟುತ್ತಿದ್ದ ಜಾಗದಲಿ


ಎಂದೂ ಮುಗಿಯದ ಹಾಡು

ಇಂದೇಕೋ ನೆನಪಾಗಿದೆ
ಅಪೂರ್ಣ ಕನಸಂತೆ ತಾನು
ನೋಡುವ ಮೊದಲೇ ಮರೆಯಾಗಿದೆ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ