ಆಗಸ್ಟ್ 20, 2016

ಅಪೂರ್ವ ಕಿಕ್

Small milaate jao, large banaate jao. ಸ್ಬಲ್ಪವೇ ಸೇರಿಸುತ್ತಾ ಹೋಗು, ಲಾರ್ಜ್ ಮಾಡುತ್ತಾ ಹೋಗು. Seagram's Royal Stag Mega Music: Make it Large. 

ಎಲ್ಲರಿಗೂ ಗೊತ್ತು, Seagram's Royal Stag ಅವರು ಜಾಹೀರಾತು ನೀಡುವಂತೆ ಅದು ಖಾಲಿ ಸಿಡಿ ತಟ್ಟೆ ಅಲ್ಲ‌ ಅಂತ. ಆದರೂ ನಮ್ ದೇಶದ ಕಾನೂನಿನ ಅನ್ವಯ ಹಂಗೆಲ್ಲಾ ನೇರವಾಗಿ ಸಿಗರೇಟ್, ಗುಟ್ಕಾ, ತಂಬಾಕು, ಮದ್ಯ ಜಾಹೀರಾತು ನೀಡುವಂತಿಲ್ಲ. ಹಾಗಾಗಿ ಅವರೂ‌ ಆ ರೀತಿ ಸೂಚ್ಯವಾಗಿ ಜಾಹೀರಾತು ನೀಡುತ್ತಲೇ ಇದ್ದಾರೆ, ನಾವು ನೋಡಿಯೂ ನೋಡದವರಂತೆ ಸುಮ್ಮನಿರುತ್ತೇವೆ. ಆದರೆ ವಿಷಯ ಅದಲ್ಲ, ಸಂಪರ್ಕವಿಲ್ಲದ ಎರಡು ಭಿನ್ನ ವಿಷಯಗಳನ್ನು ಇಟ್ಟುಕೊಂಡು ಒಂದು‌ ಪ್ರಾಡಕ್ಟ್ (ಇಲ್ಲಿ ರಾಯಲ್ ಸ್ಟ್ಯಾಗ್) ಅನ್ನು ಪ್ರಸ್ತುತ ಪಡಿಸುವ ರೀತಿ‌ ಅತ್ಯಂತ ಶ್ಲಾಘನೀಯ. ಹೇಗೆ ಎಂಬುದರ ವಿವರ ಓದುವ ಮೊದಲು ಈ ಜಾಹೀರಾತು ಒಮ್ಮೆ ನೋಡಿಬಿಡಿ. 


ಶಾರುಖ್ ಖಾನ್ ಎಷ್ಟು ಪ್ರಸಿದ್ಧ ನಟ ಎಂದು‌ ನಿಮಗೆ‌ ಗೊತ್ತೇ ಇದೆ. ವಿಮರ್ಶಕರ ಮೆಚ್ಚಿನ Swades, Chak De India ಇಂದ ಹಿಡಿದು ಅಭಿಮಾನಿಗಳ‌ ಮೆಚ್ಚಿನ Badshah, Om Shanti Om ವರೆಗೂ‌ ಎಲ್ಲಾ ಬಗೆಯ ಪಾತ್ರ ಮಾಡಿರುವ ಇವರ ಮೇಣದ ಪ್ರತಿಕೃತಿ Madame Tussauds ಸಂಗ್ರಹಾಲಯದಲ್ಲಿ ಸೇರಿ ಯಾವುದೋ‌ ಕಾಲವಾಯಿತು. ಈಗ ಒಂದೆರಡು‌ ವರ್ಷಗಳಲ್ಲಿ ಕೆಲವು ಬೇಡದ ಹೇಳಿಕೆ, ಸ್ಟೇಡಿಯಂನಲ್ಲಿ ಅನುಚಿತ ವರ್ತನೆಯಿಂದ ಒಂದಷ್ಟು ಜನ ಇಷ್ಟ ಪಡದಿರುವುದು ಬಿಟ್ಟರೆ ಒಂದು‌ ರೀತಿ‌ ಕ್ಲೀನ್ ಆಸಾಮಿ. ಅದೆಲ್ಲಕ್ಕಿಂತ ಮಿಗಿಲಾಗಿ started from bottom, now we're here ಎನ್ನುವಂತೆ ಸಿನಿಮಾದಲ್ಲಿ ಒಂದು ಚಾನ್ಸ್ ಸಿಕ್ಕರೆ ಸಾಕಪ್ಪ ಒಂದು ಓಡಾಡುವ ಒಬ್ಬ ಸಾಮಾನ್ಯ ತರುಣನಿಂದ, ಯಾವುದೇ ಪ್ರಸಿದ್ಧ ನಾಯಕಿ ಅಥವಾ ರೂಪದರ್ಶಿಗಳಿಗೆ "ಯಾರ ಜೊತೆ ನಟಿಸೋದು‌ ನಿಮ್ಮ ಕನಸು?" ಎಂದು ಕೇಳಿದರೆ ಶಾರುಖ್ ಖಾನ್ ಎಂದು ಹೇಳುವ ಮಟ್ಟಿಗೆ ಒಬ್ಬ ನಟನಾಗಿ ಅವರ ಪಯಣ ಎಂಥವರಿಗೇ ಆದರೂ ಸಖತ್ ಕಿಕ್ ಕೊಡುತ್ತದೆ.

ಇಂತಿಪ್ಪ ಶಾರುಖ್ ಖಾನ್ ಕರಿಯರ್ ಅನ್ನು ತೋರಿಸುತ್ತಾ, ದಿನವೂ ಏನಾದರೊಂದು ಹೊಸತನಕ್ಕೆ ನಮ್ಮನ್ನು ನಾವು ಒಡ್ಡಿಕೊಳ್ಳುತ್ತಾ ಹೋಗಬೇಕು, ಆಗ‌ ನಮ್ಮ ಜೀವನ ದೊಡ್ಡದಾಗುತ್ತದೆ ಎಂಬ ಮೋಟಿವೇಷನ್ ಹೇಳಿಕೆಯನ್ನು ಈ‌ ಮೇಲಿನ ಜಾಹೀರಾತಿನಲ್ಲಿ ತೋರಿಸಿರುವ ಪರಿಯೇ ಅನನ್ಯ. ಆದರೂ ಕೊನೆಯಲ್ಲಿ ಅದೊಂದು 'ಎಣ್ಣೆ ಜಾಹೀರಾತು' ಎನಿಸದೇ ಒಂದು ವಿಶಿಷ್ಟ ಬಗೆಯ ಉತ್ಸಾಹ ತುಂಬುವ ಜೊತೆಗೆ ಅದರ ಪ್ರಾಡಕ್ಟ್ ಅಂದರೆ Royal Stag ಅನ್ನು ನೆನಪಿಸುವ ವಿಷಯವೇ ಸೂಪರ್. ಏನೋ ಹೇಳೋಕೆ ಹೋಗಿ ಇನ್ನೇನನ್ನೋ ಹೇಳಿ ತಡಬಡಿಸುವ ನಮ್ಮಂಥವರೇ ಊರು ತುಂಬಾ ಇರುವಾಗ, ಹೀಗೆ ಒಂದೇ ವಿಷಯದಲ್ಲಿ ಎರಡು ಭಿನ್ನ ವಿಷಯಗಳನ್ನು ಪ್ರೇಕ್ಷಕರಿಗೆ ದಾಟಿಸುವ ಕೆಲಸವೇ ಅಪೂರ್ವ.

Royal Stag ರುಚಿ ಏನು, ಅದರ ಕಿಕ್ ಎಂತದು ಎಂಬುದರ ಸ್ವಲ್ಪವೂ ಅರಿವಿಲ್ಲದ ಎಲ್ಲರಿಗೂ ಕೂಡ ಈ ಜಾಹೀರಾತು ಕಿಕ್ ನೀಡುವುದರಲ್ಲಿ ಅನುಮಾನವಿಲ್ಲ. ನಾನು ಹೇಳಿದ್ದರ ಬಗ್ಗೆ‌ ನಿಮ್ ಅಭಿಪ್ರಾಯವೇನು?

1 ಕಾಮೆಂಟ್‌: