ಫೆಬ್ರವರಿ 14, 2018

ಕಡಲ ಮೌನ

ಕಡಲ ಮೌನದ ಹಾಗೆ
ಮನವು ಸುಮ್ಮನೆ ಕುಳಿತಿತ್ತು
ನಾಳೆಯ ಚಿಂತೆಯು ಆವರಿಸಿ
ಇಂದು ಮಂಕು ಕವಿದಿತ್ತು

ಒಮ್ಮೆಲೇ ಗಾಳಿ ಬೀಸಿ
ಗಾಳಿಪಟ ಹಾರಿ ಬಂದಿತ್ತು,
ಅದರ ಮೇಲಣ ಯಾವುದೋ
ಕವಿತೆ ಬರೆದಂತೆ ಅನಿಸಿತ್ತು

ಕರದಲ್ಲಿ ಹಿಡಿದು ನೋಡಿದೆ
ಪ್ರೇಮ ಪತ್ರವೊಂದು ಅಲ್ಲಿತ್ತು,
ನಾಲ್ಕು ಸಾಲಿನ ಹಾಡಿನಲ್ಲಿ
ಆಶಾ ಭಾವವೇ ಹರಿದಿತ್ತು

ಸುಂದರ ನಿನ್ನೆಯ ನೆನೆದು
ಇಂದೇಕೆ ಅಳುವೆ ಮೇಘವೇ,
ಹೊಸ ಪಯಣವ ಶುರು ಮಾಡಿ
ನಾಳೆಯು ನಮ್ಮದೇ ಎನ್ನೋಣವೇ
- ಅರುಣ್ ಕುಮಾರ್ ಪಿ ಟಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ