ಮಾರ್ಚ್ 17, 2018

ಅಪ್ಪು ಚಿತ್ರಗಳಿಂದ ಕಲಿಯಬಹುದಾದ 10 ಜೀವನ ಪಾಠಗಳು


1. ಯಾರೇ ಕೂಗಾಡಲಿ
ಸದಾ ಒಳ್ಳೆಯದನ್ನು ಮಾಡು, ಕೆಟ್ಟವರಿಂದ ಪಾರಾಗುವ ದಾರಿ ಸಿಕ್ಕೇ ಸಿಗುತ್ತದೆ.

2. ಪರಮಾತ್ಮ
ನಮ್ಮೆಲ್ಲರಲ್ಲೂ ಒಬ್ಬ ಪರಮಾತ್ಮ ಇರುತ್ತಾನೆ, ಅವನ ಮಾತು ಕೇಳಿದವನು ಏನಾದರೂ ಕಡಿದು ಕಟ್ಟೆ ಹಾಕ್ತಾನೆ.

3. ಧೀರ ರಣವಿಕ್ರಮ
ಗೋಲ್ ಅಂತ ಒಂದು ಫಿಕ್ಸ್ ಮಾಡಿಕೊಳ್ಳಬೇಕು, ಅದನ್ನು ತಲುಪಲು ಛಲ ಬಿಡದೇ ಪ್ರಯತ್ನಿಸಿ ಸಾಧಿಸಬೇಕು

4. ಪೃಥ್ವಿ
ದೇವರಿಗೇ ಕಷ್ಟ ತಪ್ಪಿದ್ದಲ್ಲ ಒಳ್ಳೆಯವರಿಗೆ ಇರಲ್ವಾ? ಎಷ್ಟೇ ಕಷ್ಟ ಬಂದರೂ ನಮ್ಮತನವನ್ನು ಬಿಟ್ಟುಕೊಡಬಾರದು, ಎಲ್ಲವೂ ಒಳ್ಳೆಯದಾಗುತ್ತೆ.

5. ಮಿಲನ
ಪ್ರೀತಿ ಅಂದ ಮೇಲೆ ಅಲ್ಲಿ ಕಲ್ಲು ಹಾಕೋರು, ಕಾಲು ಎಳೆಯೋರು ಯಾವಾಗಲೂ ಇದ್ದೇ ಇರುತ್ತಾರೆ. ಅವರಿಗೆಲ್ಲಾ ಹೆದರಿಕೊಂಡರೆ ಜೀವನ ಮಾಡೋಕಾಗಲ್ಲ.

6. ಜಾಕಿ
ನಮ್ಮ ಸ್ವಂತ ಕಾಲ ಮೇಲೆ ನಾವು ನಿಲ್ಲೋದಕ್ಕೆ ಇಂಥದೇ ಕೆಲಸ ಆಗಬೇಕು ಅಂತ ಇಲ್ಲ, ಯಾರಿಗೂ ಮೋಸ ಆಗದಿರೆ ಸಾಕಷ್ಟೇ.

7. ಹುಡುಗರು
ಜೀವದ ಗೆಳೆಯರು ಜೊತೆಗಿದ್ದರೆ ಸಾಕು, ಎಂಥಾ ಶಕ್ತಿಯನ್ನು ಬೇಕಾದರೂ ಎದುರಿಸಬಹುದು.

8. ಅರಸು
ದುಡ್ಡಿದ್ದವನು ಅರಸ ಅಷ್ಟೇ, ಆದರೆ ಮನುಷ್ಯತ್ವ, ಕರುಣೆ, ಪ್ರೀತಿ, ಜೀವನ ಮೌಲ್ಯಗಳನ್ನು ಹೊಂದಿದವ ಅರಸು ಎಂಬ ಶಕ್ತಿ.

9. ವಂಶಿ
ದೇವರು ನಮ್ಮ ನಡುವೆ ಇದ್ದರೆ ಅದು ತಾಯಿ ರೂಪದಲ್ಲಿ ಮಾತ್ರ; ಆಕೆಯನ್ನು ಪೂಜಿಸದಿದ್ದರೂ ಪರವಾಗಿಲ್ಲ, ಮನಸ್ಸು ನೋಯಿಸುವ ಕೆಲಸ ಮಾಡಬಾರದು, ಯಾಕೆಂದರೆ ನಮ್ಮನ್ನು ಒಂದು ಹಂತಕ್ಕೆ ತಂದು ನಿಲ್ಲಿಸಲು ಆಕೆ ಮಾಡಿರುವ ತ್ಯಾಗದ ಒಂಚೂರು ಅಂದಾಜು ಕೂಡ ನಮಗಿರುವುದಿಲ್ಲ.

10. ರಾಜಕುಮಾರ
ಯೋಗವು ಒಮ್ಮೆ ಬರುವುದು ನಮಗೆ, ಯೋಗ್ಯತೆ ಒಂದೇ ಉಳಿವುದು ಕೊನೆಗೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ