ಡಿಸೆಂಬರ್ 24, 2020

ಒಳಿತು ಕೆಡುಕಿನ ಸಂಘರ್ಷದಲಿ..

 

ಒಂದು ದಿನ ನಾನು ಆಫೀಸ್ ಕೆಲಸ ಮುಗಿಸಿಕೊಂಡು ಮನೆಗೆ ಆಟೋದಲ್ಲಿ ಹೋಗುತ್ತಿದ್ದೆ. ಬನಶಂಕರಿ ಇಂದ ಮುಂದೆ ಎಲ್ಲೋ ಆಟೋ ಸಾಗುತ್ತಿತ್ತು. ನನ್ನ ಪಾಡಿಗೆ ನಾನು ಕಿವಿಗೆ earphones ಏರಿಸಿಕೊಂಡು ಕರಾಬು ಬಾಸು ಕರಾಬು ಅಂತ ಹಾಡು ಕೇಳ್ಕೋಂಡು ಫುಲ್ ಗಮ್ಮತ್ತಿನ ಮೂಡಲ್ಲಿ ಇದ್ದೆ. ದಯಾನಂದ್ ಸಾಗರ್ ಕಾಲೇಜ್ ಸಮೀಪ ಬರುತ್ತಿದ್ದ ಹಾಗೆ ಆಟೋದಲ್ಲಿ ಪೆಟ್ರೋಲ್ ಖಾಲಿಯಾಗಿ ಗಾಡಿ ಧಡಕ್ಕನೆ ನಿಂತಿತು. ಆಗ ಆಟೋ ಡ್ರೈವರ್, “ಗ್ಯಾಸ್ ಮೋಡ್ ಗೆ ಸ್ವಿಚ್ ಮಾಡಿಕೊಳ್ತೀನಿ. ಎರಡೇ ನಿಮಿಷ ಸಾರ್, ಹೊರಟು ಬಿಡೋಣಅಂದರು. “ಇರಲಿ ಬ್ರದರ್ ಇಲ್ಲೇ ಪಕ್ಕ ಬಿಡಿ, ನೆಡೆದುಕೊಂಡೇ ಹೋಗ್ತೀನಿಅಂತ ಬಿಲ್ ಕೊಟ್ಟು ಹಾಗೇ ಹಾಡು ಕೇಳಿಕೊಂಡು ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದೆ. ನೋಡಿದರೆ ದಾರಿಯಲ್ಲಿ ಸುಮಾರು 8-10 ಬೀದಿ ನಾಯಿಗಳ ಗ್ಯಾಂಗ್ ವಾರ್ ನೆಡೆಯುತ್ತಿತ್ತು. ಅರೇ ಇಸ್ಕಿ ಎಲ್ಲಿಗ್ ಬಂದು ತಗಲಾಕ್ಕಂಡೆ ಶಿವಾ ಅಂತ ಹಂಗೇ ಧೈರ್ಯ ಮಾಡಿ ಸೈಡಲ್ಲೇ ನೆಡೆದುಕೊಂಡು ಹೋಗೋಣ ಅಂತ ಮೆಲ್ಲಗೆ ಕಳ್ಳಬೆಕ್ಕಿನ ಥರ ಸೈಡಲ್ಲೇ ಹೋಗುತ್ತಿದ್ದೆ. ಅದರಲ್ಲಿ ಒಂದು ನಾಯಿ ಬೊಗಳುತ್ತಾ ಜ಼ುಗ್ ಅಂತ ನನ್ನ ಕಡೆ ಬಂದು ಬಿಡ್ತು. ಎಸ್ಕೇಪ್ ಮಾಮು ಅಂತ ನಾನು ಅಲ್ಲೇ ಪಕ್ಕ ರೈಟ್ ಕ್ರಾಸಲ್ಲಿ ಕಟ್ ಆಗಿ, ಹೋದರೆ ಹೋಗಲಿ ಬಿಡು, ಇವತ್ತು ಬೇರೆ ದಾರಿಯಲ್ಲಿ ಮನೆ ಹೋಗೋಣ ಅಂತ ಕಡೆ ಬಂದೆ. ವಿನಾಯಕ ಡ್ರೈವಿಂಗ್ ಸ್ಕೂಲ್ ದಾಟಿ, ಆಹಾರ್ ವಿಲ್ಲಾ ಇಂದ ಮುಂದೆ ಬಂದು ಕಲ್ಲೇಶ್ವರ ಜ಼ೆರಾಕ್ಸ್ ಅಂಗಡಿಯ ಹತ್ತಿರ ನಿಧಾನವಾಗಿ ಬರುತ್ತಿದ್ದೆ. ಅಲ್ಲಿ ಒಬ್ಬ ವ್ಯಕ್ತಿ ಬುಕ್ ಬೈಂಡಿಂಗ್ ಮಾಡಿಸಿದ ಪುಸ್ತಕ ತಗೊಂಡು ಹೊರಡುತ್ತಿದ್ದಾಗ ಪರ್ಸ್ ಗೆ ದುಡ್ಡು ತುಂಬಿಸಿಕೊಂಡು ಹೋಗುವ ಆತುರದಲ್ಲಿ 500 ಕೆಳಗೆ ಬಿದ್ದಿತು. ಅಚಾನಕ್ ಆಗಿ ನಾನೂ ಏನು ಯೋಚನೆ ಮಾಡುತ್ತಿದ್ನೋ ಗೊತ್ತಿಲ್ಲ, ಥಟ್ ಅಂದ ಬಂದು 500 ನೋಟ್ ಮೇಲೆ ನಿಂತುಕೊಂಡೆ. ಅಂಗಡಿಯವನು, “ಹೇಳಿ ಸಾರ್ಅಂದರು. ಅರೆರೆರೇ, ಯಾಕೆ ಬಂದೆ ಅಂದರೆ ಏನ್ ಹೇಳೋದು ಮೈಂಡ್ ಓಡ್ತಾನೇ ಇಲ್ವಲ್ಲಾ ಅಂತ ತಲೆ ಬಿಸಿ ಮಾಡಿಕೊಂಡಿರುವಾಗ ಶರ್ಟ್ ಮುಂದೆ ನೇತಾಡುತ್ತಿದ್ದ ಐಡಿ ಕಾರ್ಡ್ ಕಾಣಿಸಿತು. “ಐಡಿ ಕಾರ್ಡ್ 5 ಕಾಪಿ, ಡ್ರೈವಿಂಗ್ ಲೈಸನ್ಸ್ 5 ಕಾಪಿಅಂತ ಹೇಳಿ ನಿಂತುಕೊಂಡೆ. ಅವರು ಅಂಗಡಿ ಹಿಂಭಾಗದ ಮೆಷಿನ್ ಹತ್ತಿರ ಬ್ಯುಸಿಯಾದರು. ಸುತ್ತಾ ಮುತ್ತಾ ಯಾರೂ ಇಲ್ಲ, ನಾನೂ ನೀನು ಇಲ್ಲಿ ಎಲ್ಲಾ, ಬಾರೇ ಸನಿಹಕೆ ಅಂತ ಯಾರಿಗೂ ಕಾಣದ ಹಾಗೆ ಸುಯ್ ಟಪಕ್ ಅಂತ 500 ನೋಟ್ ಪ್ಯಾಂಟ್ ಗ್ ಒರೆಸಿಕೊಂಡು ಪರ್ಸ್ ಗೆ ಹಾಕಿಕೊಂಡೆ. ಅಂಗಡಿಯವರು ಜ಼ೆರಾಕ್ಸ್ ಮುಗಿಸಿಕೊಂಡು ಬಂದರು. ಒರಿಜಿನಲ್ ಮತ್ತು ಜ಼ೆರಾಕ್ಸ್ ಡಾಕ್ಯುಮೆಂಟ್ ತಗೊಂಡು ಬಿಲ್ ಕೊಟ್ಟು ಮನೆಗೆ ಬಂದೆ. ಅದಾದ ಮೇಲೆ 500 ಇಂದ ನಾನೇನು ಪಾರ್ಟಿ ಮಾಡಿಲ್ಲ. ಕರೆಂಟ್ ಬಿಲ್ಲು, ಆಟೋ, ಬೈಕ್ ರಿಪೇರಿ ಅದು ಇದು ಅಂತ ಎಲ್ಲಿ ಖರ್ಚು ಆಯ್ತೋ ನಾನೂ ಗಮನ ಹರಿಸಲಿಲ್ಲ



 ಸುಮಾರು ಆರು ತಿಂಗಳ ನಂತರ ಒಂದು ದಿನ ನಮ್ಮ ಆಫೀಸ್ ವತಿಯಿಂದ Corporate Social Responsibilities (CSR) ಕಾರ್ಯಕ್ರಮದಲ್ಲಿ ಒಂದು ಶಾಲೆಗೆ ಪುಸ್ತಕ, ಪೆನ್, ಬಳಪ ಇತ್ಯಾದಿ ಸಾಮಾಗ್ರಿಗಳನ್ನು ಕೊಟ್ಟು ಮತ್ತು ಕಂಪನಿಯ ವತಿಯಿಂದ ಒಂದು ಲಕ್ಷ ದೇಣಿಗೆಯನ್ನು ಕೊಟ್ಟು ಬಂದೆವು. ಕೊರೊನ ನಿಮಿತ್ತ ಶಾಲೆಯಲ್ಲಿ ಮಕ್ಕಳು ಇರಲಿಲ್ಲ. ಬಿಸಿ ಊಟದ ಕಾರ್ಯಕ್ರಮ ಕ್ಯಾನ್ಸಲ್ ಆಗಿ ವರ್ಷ ಮಕ್ಕಳ ಮನೆಗೇ ರೇಷನ್ ಕೊಡುವ ಪರಿಪಾಠವಿದೆ ಎಂದು ಹೆಡ್ ಮಾಸ್ಟರ್ ಹೇಳಿದರು. ಹಾಗಾಗಿ ಮನೆಗೆ ರೇಷನ್ ತೆಗೆದುಕೊಂಡು ಹೋಗಲು ದಿನ 4 ಜನ ಹುಡುಗರು 5 ಜನ ಹುಡುಗಿಯರು ಬಂದಿದ್ದರು. Photo ಗಾಗಿ ಮಕ್ಕಳನ್ನು ಕೂಡ ಫ್ರೇಮ್ ಒಳಗೆ ಸೇರಿಸಿಕೊಂಡೆವು. Morally wrong, ನಿಜ. But, kya bhi nahi karnaa. ನಂತರ ಹಾಗೇ ಅಲ್ಲೇ ಸ್ವಲ್ಪ ಹೊತ್ತು ಶಾಲೆಯಲ್ಲಿ ಟೈಂ ಪಾಸ್ ಮಾಡುತ್ತಾ ಕುಳಿತಿದ್ದೆವು. ಬಾಸ್, ಅಶ್ವಿನಿ, ಶ್ರೇಯಸ್ ಮೂವರೂ ಹೆಡ್ ಮಾಸ್ಟರ್ ಹತ್ತಿರ ಭರ್ಜರಿ ಡಿಸ್ಕಶನ್ ನಲ್ಲಿ ಮುಳುಗಿದ್ದರು. ನಾನು ಕಡೆ ನೀರು ಕುಡಿಯೋಕೆ ಬಂದು ಬಾಟಲ್ ನಲ್ಲಿ ಉಳಿದಿದ್ದ ನೀರನ್ನು ಗಿಡಕ್ಕೆ ಹಾಕುತ್ತಾ ಇದ್ದಾಗ ಮಕ್ಕಳು ಮಾತಿಗೆ ಸಿಕ್ಕರು. ಟಿವಿಯಲ್ಲಿ ಯಾವ ಫಿಲಂ ನೋಡಿದ್ರಿ? ಫೇವರೇಟ್ ಹೀರೋ / ಹೀರೋಯಿನ್ ಯಾರು? ದೊಡ್ಡವರಾದ ಮೇಲೆ ಏನಾಗಬೇಕು ಅಂತಿದ್ದೀರಾ? ಇತ್ಯಾದಿ slam book ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅದರಲ್ಲಿ ಎಲ್ಲಾ ಮಕ್ಕಳ ಹಾಗೆ ದೊಡ್ಡವನಾದ ಮೇಲೆ ಟೀಚರ್ ಆಗ್ತೀನಿ, ಪೊಲೀಸ್ ಆಗ್ತೀನಿ ಇತ್ಯಾದಿ motivation ಉತ್ತರಗಳಿಂದ ಹಿಡಿದು ರಾಜಕೀಯ ಸೇರ್ತೀನಿ, ಮದುವೆ ಆಗ್ತೀನಿ ಎಂಬಿತ್ಯಾದಿ ತರ್ಲೆ ಉತ್ತರಗಳೂ ಇದ್ದವು. ಮೂರ್ತಿ ಚಿಕ್ಕದಾದರೂ ಪಂಚ್ ದೊಡ್ಡದು ಬಿಡು ಅಂತ ನಕ್ಕು ಸುಮ್ಮನಾದೆ. ಸಂದರ್ಭದಲ್ಲಿ ಅದು ಇದು ಮಾತನಾಡುವಾಗ ಮಕ್ಕಳಿಗೆ ಏನಾದರೂ ತಿನ್ನೋಕೆ ಕೊಡಿಸಬೇಕಿತ್ತು ಅಂತ ಬಾಸ್ ಬಂದು ಹೇಳಿದರು. ಓಕೆ ಅಂತ ಅಲ್ಲೇ ಪಕ್ಕದ ಹಣ್ಣಿನ ಅಂಗಡಿಗೆ ಎಲ್ಲರೂ ಹೋದೆವು. ಮಕ್ಕಳ ರೇಷನ್ ಕವರ್ ಗೆ ತಲಾ ಒಂದು ಎರಡು apple orange ಕೊಟ್ಟು ಉಳಿದದ್ದನ್ನು ಕಾರ್ ನಲ್ಲಿ ಇಟ್ಟೆ. ನಮ್ ಟೀಮ್ ಎಲ್ಲರೂ ಮಕ್ಕಳಿಗೆ bye ಹೇಳಿ ಬಂದು ಕಾರಲ್ಲಿ ಕುಳಿತರು. ನಾನು ಬಂದು ಬಿಲ್ ಕೊಟ್ಟು, ಕಾರ್ ಅಲ್ಲಿ ಕುಳಿತು ಹೋಗೋಣ ಅಂತ ರಿವರ್ಸ್ ತೆಗೆಯುವ ಅವಸರದಲ್ಲಿದ್ದೆ. ಆಗ ಒಂದು ಚಿಕ್ಕ ಹುಡುಗಿ ಬಂದು ಕಾರ್ ಕಿಟಕಿ ಬಡಿದಳು. ನಾನು ಕಿಟಕಿ ಇಳಿಸಿದೆ. ಹುಡುಗಿಅಂಕಲ್, ತಗೊಳ್ಳಿ ಅಂಕಲ್, ಅಲ್ಲಿ ನಿಮ್ಮ 20 ಕೆಳಗೆ ಬಿದ್ದಿತ್ತುಅಂತ ಕೊಟ್ಟಳು. ಎದೆಯಲ್ಲಿ ಕಲ್ಲು ಇದ್ದೋನಿಗೆ ಅಂಕಲ್, ಅನ್ನೋದೆಲ್ಲಾ ಅಂಟೋದೇ ಇಲ್ಲ ಬಿಡು, ಅದೇನೇ ಇರಲಿ ಹೆಂಗೋ ನಮ್ಮ 20 ನಮಿಗೆ ಸಿಕ್ಕಿತಲ್ಲಾ ಅಂತ ಹುಡುಗಿಗೆ ಗಾಳಿಯಲ್ಲೇ ಶೇಕ್ ಹ್ಯಾಂಡ್ ನೀಡಿ ಅಲ್ಲಿಂದ ಹೊರಟೆವು



 ಇದೆಲ್ಲಾ ಆಗಿ ಸುಮಾರು ಒಂದು ತಿಂಗಳಾಯಿತು. Almost ಘಟನೆ ಮರೆಯುತ್ತೇನೆ, ಹಂಗೂ ಹಿಂಗೂ ಸೈಕಲ್ ಗ್ಯಾಪಲ್ಲಿ ಮತ್ತೆ ನೆನಪಾಗುತ್ತೆ. Kind of a bad breakup, ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬ ಅಕ್ಕಮಹಾದೇವಿ ವಚನದಂತೆ ಏನೇ ಮಾಡೋಕ್ ಹೋದರೂ ಎರಡು ಘಟನೆಗಳು ತಿರುಗಾ ಮುರುಗಾ ನೆನಪಾಗುತ್ತಲೇ ಇದೆ. ಒಂದು ದಿನ ಜ಼ೆರಾಕ್ಸ್ ಅಂಗಡಿಯ ಬಳಿ ಯಾರೋ ಕಳೆದುಕೊಂಡ 500 ನಾನು ತೆಗೆದುಕೊಂಡು ಖರ್ಚು ಮಾಡಿದೆ. ಇನ್ನೊಂದಿನ ಹಣ್ಣಿನ ಅಂಗಡಿಯ ಬಳಿ ನನಗೇ ಗೊತ್ತಿಲ್ಲದೆ ನಾನು ಬೀಳಿಸಿಕೊಂಡ 20 ರೂಪಾಯಿಯನ್ನು ಒಂದು ಚಿಕ್ಕ ಹುಡುಗಿ ಹಿಂದಿರುಗಿಸಿದಳು. Probably 20 ವರ್ಷದ ಹಿಂದೆ ನಾನೇನಾದರೂ ಹಿಂಗೆ ಯಾರಾದರೂ ದುಡ್ಡು ಬೀಳಿಸಿಕೊಂಡಿದ್ದನ್ನು ನೋಡಿದ್ದರೆ ಹುಡುಗಿಯಂತೆ ಪ್ರಾಯಶಃ ನಾನೂ ಅದನ್ನು ಸತ್ಯವಂತನಂತೆ ಅವರಿಗೇ ಹಿಂದಿರುಗಿಸುತ್ತಿದ್ದೆ. ಅದೇ ಈಗ ಇಪ್ಪತ್ತು ವರ್ಷಗಳ ನಂತರ ಯಾರೋ 500 ಬೀಳಿಸಿಕೊಂಡಿದ್ದನ್ನು ನೋಡಿ ಕೊಟ್ಟೋನು ಕೋಡಂಗಿ ಇಸ್ಕಂಡೋನ ಈರ್ ಭದ್ರ ಅಂತ ಯಾವುದೇ ನಾಚಿಕೆ ಇಲ್ಲದೇ ಖರ್ಚು ಮಾಡಿ ಬಿಟ್ನಲ್ಲಾ ಅಂತ ಒಂದು ಬಗೆಯ guilt feeling ಆಯಿತು. “ನಾವು ಚಿಕ್ಕವರಿದ್ದಾಗ ಎಲ್ಲರೂ ಒಳ್ಳೆಯವರಾಗೇ ಇರ್ತೀವಿ, ದೊಡ್ಡವರಾದ ಮೇಲೆ ಎಲ್ಲಾ ಕೆಟ್ಟ್ ಹೋಗ್ತಿವಿಅಂತ humor context ಅಲ್ಲಿ ಹೇಳಿರುವ mostly ಗಾಳಿಪಟ ಚಿತ್ರದ ಗಣಿ ಡೈಲಾಗ್ ಸಂದರ್ಭ ನೆನಪಾಗುತ್ತಿದೆ. Let's assume time travel is possible. 20 ವರ್ಷದ ಹಿಂದೆ ನನಗೇನಾದರೂ ರೀತಿ ಯಾರದ್ದಾದರೂ 20 ಬಿದ್ದಿರೋದು ಕಣ್ಣಿಗೆ ಬಿದ್ದಿದ್ದರೆ, ನಾನೂ ಪುಟ್ಟ ಹುಡುಗಿಯ ರೀತಿ ಹಿಂದಿರುಗಿಸುತ್ತಿದ್ದೆ. I can prove that, and I'm damn sure all of you were with same ethical mindset back then. ಈಗ ಹಾಗೆ present ಇಂದ ಇಪ್ಪತ್ತು ವರ್ಷ ಮುಂದೆ ಹೋಗೋಣ. Twenty years down the line ahead, ನನಗೆ 20 ಹಿಂದಿರುಗಿಸಿದ ಹುಡುಗಿ ದೊಡ್ಡವಳಾದ ಮೇಲೆ ಏನಾಗಬಹುದು? ಯಾವುದೋ ಅಂಗಡಿಯ ಬಳಿ ಯಾರೋ 500 ಬೀಳಿಸಿಕೊಂಡಿದ್ದು ನೋಡಿದಾಗ ಅವರಿಗೆ ಹಿಂದಿರುಗಿಸಬಹುದಾ? ಇಲ್ಲಾ ತನ್ನಲ್ಲಿಯೇ ಉಳಿಸಿಕೊಳ್ಳಬಹುದಾ? Moral Dilemma playing in background.

 

ಸಾಂದರ್ಭಿಕ ಚಿತ್ರ: ಲೂಸಿಯಾ 

ಎಷ್ಟೋ ಸಲ ಆಟೋದಲ್ಲಿ ಜನ ಮೊಬೈಲ್, ಪರ್ಸ್, ಲ್ಯಾಪ್ಟಾಪ್ ಇತ್ಯಾದಿ ವಸ್ತುಗಳನ್ನು ಮರೆತು ಬಿಟ್ಟು ಹೋಗಿರುತ್ತಾರೆ. ಅದನ್ನು ಆಟೋ ಡ್ರೈವರ್ ತಂದು ಅವರ ಮನೆಗೆ ಹಿಂದಿರುಗಿಸಿದ ಶ್ಲಾಘನೀಯ ಘಟನೆಗಳು ಆಗೊಮ್ಮೆ ಈಗೊಮ್ಮೆ Instagram, facebook ನಲ್ಲಿ ನೋಡಿರುತ್ತೇವೆ ಬಿಡಿ. ಅದೇ context ನಲ್ಲಿ ಕೆಲವರು ಆಟೋ ಡ್ರೈವರ್, ಕೂಲಿ, ಬಸ್ ಕಂಡಕ್ಟರ್ ಇತ್ಯಾದಿ ವೇಷದಲ್ಲಿ ಜನನಿಬಿಡ ಪ್ರದೇಶದಲ್ಲಿ ಯಾಮಾರಿಸಿ ನಮ್ಮ ಅಮೂಲ್ಯ ವಸ್ತುಗಳನ್ನು ಕದಿಯುವ ಸುದ್ದಿಯೂ ಗೊತ್ತಿದೆ. ದುರಾದೃಷ್ಟವಶಾತ್ ಒಮ್ಮೊಮ್ಮೆ ಅಹಿತಕರ ಘಟನೆಗಳು ನಮಗೇ ಆಗಿರುತ್ತವೆ. ಆಗ ಎಷ್ಟೋ ದಿನ ಊಟ, ನಿದ್ರೆ ಬೇಡವೆನಿಸಿ ಚಿಂತೆಯಲ್ಲೇ ಗೊತ್ತಿಲ್ಲದೆ ನಿದ್ದೆಗೆ ಜಾರಿರುತ್ತೇವೆ. ಉಪೇಂದ್ರ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಕನ್ನಡಿ ಮುಂದೆ ನೆಡೆಯುವ ಉಪ್ಪಿ monologue ನೆನಪಾಗುತ್ತಿದೆ. “ಪಕ್ಕದ ಮನೇಲಿ ಕಳ್ಳತನ ಆಗಲಿ, ನಿನಿಗೇನೂ ಆಗಲ್ಲ. ಅದೇ ನಿನ್ನ ದುಡ್ಡು, 50, after all 50 ಕಳೆದುಕೊಂಡರೆ, ಅಯ್ಯೋ ದುಡ್ಡು, ಅಯ್ಯೋ ನನ್ನ ದುಡ್ಡು ಅಂತ ಅಳ್ತೀಯಾಎಂಬ philosophical ಸಂಭಾಷಣೆ ಇದೆ. In a way, ಭಗವದ್ಗೀತೆಯಲ್ಲಿ ಹೇಳಿದ ಕಳೆದುಕೊಳ್ಳಲು ನಿನ್ನದೆಂಬುದೂ ಏನೂ ಇಲ್ಲ. ನಿನ್ನ ಬಳಿಯಲ್ಲಿ ಇರುವುದೆಲ್ಲಾ ನೀನು ಇಲ್ಲಿಂದಲೇ ಪಡೆದಿರುವೆ ಮತ್ತು ಅದನ್ನು ಇಲ್ಲಿಯೇ ಕಳೆದುಕೊಳ್ಳುವೆ ಎಂದು ಹೇಳಲಾಗಿದೆ. Let's not dive that deep into philosophical ocean, we are just 30 yet. As they say, 30 is the new 20! No, they won't? OK ಬೇಡ ಬಿಡಿ. Coming back to topic, ಕಳ್ಳತನ ಮಾಡೋದು ತಪ್ಪು, ಅದನ್ನು ಮಾಡ್ಕೊಂಡು ಹೋದರೆ ಒಂದು ಎರಡು ಮೂರು ನಾಲ್ಕು ಆಮೇಲ್ ಇನ್ನೇನು ಅಂತ ಕಂಬಿ ಎಣಿಸುತ್ತಾ ಇರಬೇಕಾಗುತ್ತೆ. ಆದರೆ ಏನ್ ಮಗಾ ಬಾಯಲ್ಲಿ ಲಡ್ಡು ಬಿತ್ತಾ ಎಂಬಂತೆ ಸಿಕ್ಕಿರೋ ಸೋಂಪಾ ಪುಡಿನಾ ಯಾರ್ ತಾನೆ ನನಗೆ ಬೇಡ ಅಂತ ಇನ್ನೊಬ್ಬರಿಗೆ ಕೊಡುತ್ತಾರೆ? Mostly ಇಬ್ಬರು ಕೊಡಬಹುದು, ಒಂದು Jeff Bezos ಯಾಕಂದ್ರೆ ಅವರಿಗೆ ಸೋಂಪಾ ಪುಡಿ ಎಲ್ಲಾ ತಿಂದು ಅಭ್ಯಾಸ ಇಲ್ಲ, ಇನ್ನೊಂದು ನಮ್ ಶಿವ ಎಮ್ ರೆಡ್ಡಿ, ಅವನಿಗೆ ಸ್ವೀಟ್ ಎಲ್ಲಾ ಆಗಿ ಬರಲ್ಲ. Jokes aside, you got the point right? Only two people can reject wealth, one who has plenty of it, and one who don't want any of it. ನಾವು ಒಳ್ಳೆಯವರಾಗಿರಬಹುದು. ಆದರೆ ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತೆ ಎಂಬ ಆದರ್ಶಯುತವಾದ ಸಮಾಜದಲ್ಲಿ ನಾವು ಬದುಕಿಲ್ಲ. ಎಷ್ಟೋ ಕೋಟಿ ಕೋಟಿ ಲೂಟಿ ಮಾಡಿರೋರು ಆರಾಮಾಗಿ ಫಾರಿನ್ನಲ್ಲಿ ಮನೆ ಸಾರಿ ಅರಮನೆ ಮಾಡ್ಕೊಂಡು ಆರಾಮಾಗಿದ್ದಾರೆ. ಇನ್ನೊಂದು ಕಡೆ ಸಣ್ಣ ಪುಟ್ಟ ಸೀರೆ ಅಂಗಡಿ ಮೊಬೈಲ್ ಅಂಗಡಿ ಕಳುವಲ್ಲಿ ಸಿಕ್ಕಿ ಹಾಕ್ಕೊಂಡ್ ಅಂದರ್ ಆಗಿರೋರು ಇದ್ದಾರೆ. ಅದಕ್ಕೆ ಏನೋ mostly ಮಠ ಚಿತ್ರದಲ್ಲಿ ಕಳ್ರನ್ನೆಲ್ಲಾ ಜೈಲಿಗೆ ಹಾಕೋದಾದ್ರೆ ಭೂಮಿಗೆ ಬೇಲಿ ಹಾಕಬೇಕಲ್ವಾ? ಎಂಬ ಹಾಡನ್ನು ಕಂಪೋಸ್ ಮಾಡಿದ್ದಾರೆ. On a related note, ಕದ್ದೋನು ಕಳ್ಳ ಅಲ್ಲ, ಸಿಕ್ಕಿ ಹಾಕ್ಕೊಂಡೋನು ಕಳ್ಳ ಎಂಬ ಮಾತಿದೆ. ಹಾಗಂತ ನಾನು ಕಳ್ಳತನ ಸರಿ, ಸಿಕ್ಕಿ ಹಾಕಿಕೊಳ್ಳೋದು ತಪ್ಪು ಎಂದಿಲ್ಲ. ಆಮೇಲೆ ನೀವು ಏನೋ ಮಾಡೋಕ್ ಹೋಗಿ ಸಿಕ್ಕಿ ಹಾಕ್ಕೊಂಡು don't blame me OK? ನಾವೊಂಥರ ಪಾಪದ ಕುರಿ ನಿಕ್ಕಿ ಇದ್ದಂಗೆ. ?? ಇಕ್ಕಿ ಅಲ್ಲ, ನಿಕ್ಕಿ

 

ಇನ್ನೊಂದಿನ Instagram ನಲ್ಲಿ ಏನೋ ನೋಡ್ಕೊಂಡು ಬ್ಯುಸಿ ಇದ್ದಾಗ (?) Falcon Rising ಎಂಬ ಚಿತ್ರದ ಒಂದು ಕ್ಲಿಪ್ ಪ್ಲೇ ಆಯುತು. ಅದರಲ್ಲಿ ಮೈಕಲ್ ಜೈ ವೈಟ್ ಒಂದು ಸೂಪರ್ ಮಾರ್ಕೆಟ್ ಏನನ್ನೋ ಕೊಳ್ಳಲು ನೋಡ್ತಾ ನಿಂತಿರುತ್ತಾರೆ. ಸಮಯಕ್ಕೆ ಇಬ್ಬರು ದರೋಡೆಕೋರರು ಗನ್ ಹಿಡಿದುಕೊಂಡು ಅಂಗಡಿಯನ್ನು ದೋಚಲು ಬರುತ್ತಾರೆ. YouTube ನಲ್ಲಿ Falcon Rising Action Scene ಎಂದು ಸರ್ಚ್ ಮಾಡಿದಾಗ ವಿಡಿಯೋ ನೋಡಬಹುದು. ವಿಡಿಯೋ ಲಿಂಕ್ ಇಲ್ಲಿದೆ.


FALCON RISING ACTION SCENE 


As I said, ತುಂಬಾ Intense Tension ಇರುವ ದೃಶ್ಯದಲ್ಲಿ ಗನ್ ಹಿಡಿದುಕೊಂಡು ಬಂದ ಇಬ್ಬರು ದರೋಡೆಕೋರರು ಅಂಗಡಿ ಕ್ಯಾಶಿಯರ್ ಬಳಿ ಇರುವುದೆಲ್ಲಾ ಎತ್ತಿ ಜೇಬಿಗೆ ಇಳಿಸಿಕೊಳ್ಳುತ್ತಾರೆ. ಇನ್ನೇನು ಹೊರಡುವ ಸಂದರ್ಭದಲ್ಲಿ ನೆಡೆಯುವ ಚಿಕ್ಕ ಫೈಟ್ ಕೊನೆಯಲ್ಲಿ ದರೋಡೆ ಮಾಡಲು ಬಂದ ಇಬ್ಬರು ಒದೆ ತಿಂದು ಕೆಳಗೆ ಬಿದ್ದಿರುತ್ತಾರೆ. ಸಮಯಕ್ಕೆ ತೆಗೆದುಕೊಂಡು ಒಂದಹ ಬಾಟಲ್ ಗೆ ಹಣ ನೀಡಿ ಹೊರ ಹೋಗಬೇಕೆಂದು ಬಂದಾಗ, ಕೆಳಗೆ ಬಿದ್ದಿದ್ದ ಅವರ ಜೇಬಿಂದ ಕದ್ದ ಹಣ ತೆಗೆದುಕೊಂಡು ಕ್ಯಾಶಿಯರ್ ಗೆ ನೀಡಿ Keep the Change ಎಂದು ಹೇಳಿ technically ಹಣ ನೀಡದೇ ಹೊರ ನೆಡೆಯುತ್ತಾನೆ. ರಾಕ್ಷಸನೂ ನೀನೇನಾ? ರಕ್ಷಕನೂ ನೀನೇನಾ ಎಂಬಂತೆ, ಅವನು ದರೋಡೆ ನಿಲ್ಲಿಸದೇ ಇದ್ದಿದ್ದರೆ ಅಂಗಡಿಯ ಗಲ್ಲಾ ಪೆಟ್ಟಿಗೆಯಲ್ಲಿ ಇದ್ದ ಅಷ್ಟೂ ದುಡ್ಡು ಹೋಗಿರುತ್ತಿತ್ತು. ಅದೃಷ್ಟವಶಾತ್ ದರೋಡೆ ಪ್ಲಾನ್  ನಿಂತಿತು. ಆದರೆ ಒಂದು ಬಾಟಲ್ ಹಣ ಹೋಯಿತು. ಕಳೆದುಕೊಳ್ಳು ಬೇರೇನೂ ಇಲ್ಲ ಇಲ್ಲಿ?! ಇರುವುದನೇ ಪಡೆದು ತಿರುಗಿ ಕಳೆದುಕೊಳ್ಳಿ, ಕಳೆದು ಪಡೆದುಕೊಳ್ಳಿ, I feel you Sonu Nigam.

 

ನಾನೇನೂ ರಾಮಾಯಣವನ್ನು ಸಂಪೂರ್ಣವಾಗಿ ಓದಿಲ್ಲ, ಅಲ್ಪಸ್ವಲ್ಪ highlights ಗೊತ್ತು ಅಷ್ಟೇ. ರಾಮಾಯಣದ ಹೆಸರು ಕೇಳಿದ ತಕ್ಷಣ ರಾಮ ಒಳ್ಳೆಯ ಗುಣಗಳ ಪ್ರತೀಕ, ರಾವಣ ಕೆಟ್ಟ ಗುಣಗಳ ದ್ಯೋತಕ ಎಂಬ primary thought ನಮ್ಮನ್ನು ಆವರಿಸುವುದು ಸಾಮಾನ್ಯ. ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ರಾಮ / ರಾವಣ ಎಂದು distinguish ಮಾಡಲಾಗದ complicated ಜಮಾನ ಇದಾಗಿದೆ. ಎಂತಹಾ ಕಸ್ತೂರಿ ನಿವಾಸ ರಾಜಕುಮಾರ್ ರೀತಿಯ ವ್ಯಕ್ತಿ ಆದರೂ ಅಲ್ಲೊಂದು ಇಲ್ಲೊಂದು ತಪ್ಪು ಮಾಡಿರುತ್ತಾರೆ. ದಾರಿ ತಪ್ಪಿದ ಮಗ ಚಿತ್ರದ ರಾಜಕುಮಾರ್ ರೀತಿಯ ವ್ಯಕ್ತಿಯಲ್ಲೂ ತನ್ನ ಸಾವಿನಲ್ಲೂ ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಿ ಹೋಗುವ ಮನೋಭಾವ ಇರುತ್ತದೆ. You see, in their last moments people show you who they really are - Joker (The Dark Knight). 

 


So, you know, it's hard to draw conclusion, ying yang ಎಂಬ ಮೇಲಿನ ಜಪಾನೀ ಚಿತ್ರದ ಕಾನ್ಸೆಪ್ಟ್ ಹಾಗೆ, ಒಳಿತಿನ ಒಳಗೆ ಕೆಡುಕು ಮತ್ತು ಕೆಡುಕಿನ ಒಳಗೆ ಒಳತು ಬೆರೆತು ಹೋಗಿರುವುದನ್ನು ಕಾಣಬಹುದು. ಟಗರು ಚಿತ್ರದಲ್ಲಿ ಹೇಳಿರುವ ಹಾಗೆ, ಕೆಟ್ಟ ಕಾಲದಲ್ಲಿ ಕೆಟ್ಟೋನೇ ರಾಜ ಆಗೋದು, ಕೆಟ್ಟದನ್ನೇ Market ಮಾಡೋದು ಎಂಬ ಸಾಲು ಇದೆ. But ಯಾವುದು ಒಳ್ಳೆಯದು ಅಥವಾ ಯಾವುದು ಕೆಟ್ಟದ್ದು ಎಂದು differentiation ಮಾಡಿ ಪಾಪ ಪುಣ್ಯಗಳ integration ಮಾಡಿ judgement ಹೊರಡಿಸೋಕೆ ಇಂತಿ ನಿನ್ನ ಪ್ರೀತಿಯ ನಾನ್ಯಾರು? Sorry, off topic ಹೋದೆ, ಜಗತ್ತಿನಲ್ಲಿ ಇಂದು ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತಾ? Not Really! ಕೆಟ್ಟವರಿಗೆ ಒಳ್ಳೆಯದು ಆಗುತ್ತಾ? Possible, ಬೇಕಾದಷ್ಟು ಜನ ನೋಡಿದ್ದೇವೆ. ಇಂತಿಪ್ಪ ಸಂದರ್ಭದಲ್ಲಿ morally right and wrong ಅಂತ ಕೆಲವನ್ನು ಸರಿ ಮತ್ತು ತಪ್ಪು ಎಂದು ವಿಂಗಡಿಸಿ ಒಂದು ಒಳ್ಳೆಯ ದಾರಿಯಲ್ಲಿ ಹೋಗುವಂತೆ ಕಾಲ ಕಾಲಕ್ಕೆ ಪ್ರೇರಣೆ ನೀಡುವ ಭಗವಂತನ ಮಾರ್ಗದರ್ಶನ ನಮ್ಮೆಲ್ಲರಿಗೂ ಅಗತ್ಯವಿದೆ. ಆದರೆ ದೇವರು ಎಲ್ಲಿರುವನು ಎಂದು ಎಷ್ಟೋ ವರ್ಷ ಹುಡುಕಿ ಕೊನೆಗೆ ಸುಸ್ತಾಗಿ ಕೂತಾಗ ಬಹುಪರಾಕ್ ಚಿತ್ರದ ಹಾಡಿನ ದೇವನಿರುವನು ನಮ್ಮೊಳಗೆ ಇರುವನು ಹಾಡು ಅರ್ಥವಾಗುತ್ತದೆ ಎಂದು Conclusion ಬರೆಯಬಹುದೆ? ಗೊತ್ತಿಲ್ಲ, judge ಮಾಡಲು ನಾನ್ಯಾರು




ಮಾರ್ಚ್ 9, 2020

ಸಂತೆಯಲ್ಲಿ ನಿಂತ ನಿನಗೇನು ಬೇಕು?

ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ: ಪ್ರದೀಪ್ ಎಂ ಆಚಾರ್


ಹೀಗೆ ಒಂದು ದಿನ ಬ್ಯಾಂಕಲ್ಲಿ ಸುಮಾರು ಹತ್ತು ಜನ ಇದ್ದರು ಅಷ್ಟೇ. ಒಬ್ಬ 30ರ ಆಸುಪಾಸಿನ ಹೆಂಗಸು ಯಾವುದೋ ಮದುವೆ ಕಾರ್ಯಕ್ರಮಕ್ಕೆ ಹೋಗುವವರ ಹಾಗೆ ರೆಡಿ ಆಗಿ, 4 ವರ್ಷದ ಮಗಳನ್ನು ಹಾಗೇ ರೆಡಿ ಮಾಡಿ ಕರೆದುಕೊಂಡು ಬಂದಿದ್ದರು. ರೇಷ್ಮೆ ಸೀರೆ, 3-4 ಚಿನ್ನದ ಆಭರಣ ಇತ್ಯಾದಿ. ಆ ಹೆಂಗಸು ಆ ಮಗುವನ್ನು ಕೂರಿಸಿ ಹಣ ಜಮಾ ಮಾಡಿ ಬರಲು ಕೌಂಟರ್ ಬಳಿ ನಿಂತಳು. ನಾನು ಹಾಗೇ ಆ ಮಗುವನ್ನು ನೋಡಿದೆ, 30,000/- ಫೋನು, ರೇಷ್ಮೆ ಲಂಗ, ಬಂಗಾರದ ಸರ, ಬಳೆ, ಪುಟ್ಟ ಬ್ಯಾಗು ಇತ್ಯಾದಿ.

ಆ ಮಗುಗೆ ಇದ್ದಕ್ಕಿದ್ದ ಹಾಗೆ ಕೈಯಲ್ಲಿ ಇದ್ದದ್ದನ್ನು‌ ಇದ್ದಲ್ಲಿಯೇ ಬಿಟ್ಟು ಅಮ್ಮ ಎಂದು ಅಳುತ್ತಾ ಓಡಿ ಬಂದು ಕೌಂಟರ್ ಬಳಿ ಇದ್ದ ಅಮ್ಮನ ತಬ್ಬಿಕೊಂಡಳು.

ನಾನು ಆ ಚಿಕ್ಕ ಮಗುವನ್ನು ನೋಡಿದಾಗ ಫೋನ್, ಬ್ಯಾಗು, ಸರ, ಬಳೆ, ಹೀಗೆ ಬರೀ ಲೌಕಿಕ ವಿಷಯಗಳೇ ಕಂಡವು. ಆ ಮಗುವಿಗೆ ಕಂಡಿದ್ದು ಅವಳ ತಾಯಿ ಮಾತ್ರ. 

ಮೇ 27, 2018

2000 ನೆನಪು, ಎದೆಯಾಳದಿಂದ 🎼🎼🎼

ನಮ್ ಜೀವನ ಎಷ್ಟೊಂದು ಕುತೂಹಲಗಳಿಂದ ಕೂಡಿರುತ್ತದೆ. ಎಷ್ಟೊಂದು ನಿರ್ಧಾರಗಳು ಆಯಾ ಕ್ಷಣ, ಸಂದರ್ಭ, ಸನ್ನಿವೇಶಗಳ ಓಘದಲ್ಲಿ ಆಗಿಬಿಡುತ್ತದೆ. Man proposes, God disposes ಎನ್ನುವಂತೆ ನಾವು ಅಂದ್ಕೊಳ್ಳೋದೇ ಒಂದು, ಅದು ಆಗೋದೇ ಇನ್ನೊಂದು. ಆಗೋದೆಲ್ಲಾ ಒಳ್ಳೆಯದಕ್ಕೆ ಎನ್ನುವುದೂ ಕೂಡ ಅವರವರ ಯೋಚನಾ ವೈಖರಿಗೆ ಬಿಟ್ಟಿದ್ದು.

'ಎ' ಫಿಲಂನಲ್ಲಿ ಉಪೇಂದ್ರ (ಹುಡುಗೀರನ್ನ ಕಂಡ್ರೆ ಆಗ್ತಿರಲಿಲ್ಲ, ಲವ್ ಅಂದ್ರೆ ಆಗ್ತಿರಲಿಲ್ಲ, ಡೈರೆಕ್ಟ್ರು ಸೂರಿ, ಬೆಂಕಿ... ಬೆಂಕಿ ಥರ ಇದ್ದರು!!) ಥರ ಆಡುತ್ತಿದ್ದ ನಮ್ ಹುಡುಗ ಒಬ್ಬ ಲವ್ ಮ್ಯಾರೇಜ್ ಆದ, ಲವ್ಲಿ ಸ್ಟಾರ್ ಪ್ರೇಮ್ ಥರ ಭರವಸೆ ಮೂಡಿಸಿದ್ದ ಇನ್ನೊಬ್ಬನ ಲವ್ ಸ್ಟೋರಿ ಟೈಟಾನಿಕ್ ಹಡಗಿನ ಕಥೆ ಆಯಿತು ಎಂದು ಬೇರೆ ಹೇಳಬೇಕಿಲ್ಲ ಅಂದ್ಕೊಳ್ತೀನಿ. ಹೀಗೇ ಹಲವು ಕಾರಣಗಳಿಂದ ಈ ಟೈಮು ಪಕ್ಕಾ 420 ಅಂತ ನಿಧಾನಕ್ಕೆ ನಂಬಿಕೆ ಬರೋಕೆ ಶುರುವಾಗಿದೆ. For example, ನಾನು SSLC ಮುಗಿಸಿದ್ದು ಮಾರ್ಚ್ 2006. ಅದು ಆಗಿ ಈಗ 12 ವರ್ಷನೇ ಆಗಿ ಹೋಯ್ತು. ಕಿಚ್ಚ ಸುದೀಪ್ ಮಾಣಿಕ್ಯ ಪಿಚ್ಚರ್ ಅಲ್ಲಿ ಹೇಳುವ "20 ವರ್ಷದಿಂದ ಬೇರೆ ಲೆಕ್ಕ, ಈಗಿಂದ ಬೇರೆ ಲೆಕ್ಕ... Something Something" ಡೈಲಾಗ್ ನಂತೆ ನಾನು SSLC ಮಾರ್ಕ್ಸ್ ಕಾರ್ಡ್ ಪಡೆಯುವಾಗ ಏನಾಗಬೇಕು ಅಂತ ಒಂದು ನಾಲ್ಕು ಐದು ಆಯ್ಕೆಗಳನ್ನು ಇಟ್ಟುಕೊಂಡಿದ್ದೆ ಅಲ್ವಾ, ಅದು ಯಾವುದರ ಹತ್ತಿರವೂ ಬ್ಯಾಂಕ್ ನೌಕರಿ ಸುಳಿದಿರಲಿಲ್ಲ. It's funny how opinions change over time, ಕಾಲಕ್ಕೆ ಇರುವ ಶಕ್ತಿ ಅಂತದ್ದು. ಅದಕ್ಕೆ ಉಪ್ಪಿ "ಎಲ್ಲರ ಕಾಲು ಎಳೆಯುತ್ತೆ ಕಾಲ" ಅಂತ ಹೇಳಿದ್ದಾರೆ ಅನಿಸುತ್ತೆ. Plus or minus 5 years, ನಾವೆಲ್ಲರೂ 90s Kids ಗಳೇ!! ಈಗ ಏನೋ Kids ಇಂದ Mens ಆಗಿ Legends ಹಂತಕ್ಕೆ ಏನೋ ಬಂದಿದ್ದೀವಿ‌ ಅನ್ನಿ, ಆದರೆ ಇನ್ನೂ 20-30 ವರ್ಷಗಳ ನಂತರ ಏನಾಗುತ್ತೀವೋ, ಎಲ್ಲಿರುತ್ತೀವೋ ಅಂತ ಯೋಚಿಸಿದರೆ ಮೈಯೆಲ್ಲಾ ಕಂಪನ ಆಗುತ್ತೆ. Just think about it, 2000 ನೇ ಇಸವಿಯಲ್ಲಿ ಹುಟ್ಟಿದ ಮಗುಗೆ ಈಗ ಮತ ಚಲಾಯಿಸುವ ಕಾರ್ಡು ಸಿಕ್ಕಿದೆ! ಇಂತಿಪ್ಪ ಸಂದರ್ಭದಲ್ಲಿ ನಾವಿನ್ನೂ LKG ಹುಡುಗರ ಥರ ಎಣ್ಣೆ ನಮ್ದು, ಊಟ ನಿಮ್ದು, ಥೋ ಸಾರಿ, ಸಾರಿ, ದೊಡ್ಡವರೆಲ್ಲಾ ಜಾಣರಲ್ಲ ಅಂತ ಹಾಡಿಕೊಂಡು ಕೂತಿದ್ದೇವೆ. ಇದೆಲ್ಲದರ ಮಧ್ಯ ಚಿಕ್ಕ ಬ್ರೇಕ್ ಎಂಬಂತೆ 2000 ನೇ ಇಸವಿಯಲ್ಲಿ ಬಿಡುಗಡೆಯಾದ ಪ್ರಮುಖ ಚಿತ್ರಗಳು ಯಾವುವು? ಮತ್ತು ಅದರ ನಟ / ನಟಿ / ನಿರ್ದೇಶಕ ಇತ್ಯಾದಿ ತಂತ್ರಜ್ಞರು ಈಗ ಎಲ್ಲಿದ್ದಾರೆ? ಏನಾಗಿದ್ದಾರೆ ಎಂಬ Quick Outlook ನೊಂದಿಗೆ ನಮ್ಮ ಜೀವನದ ಹಲವು ಮುಖ್ಯ ಘಟನೆಗಳ ಕಡೆ ಹಿನ್ನೋಟ ಬೀರೋಣ. Buckle up, boys, we are going back to past!


ಚಾಮುಂಡಿ:


ಮಾಲಾಶ್ರೀ ಸೆಕೆಂಡ್ ಇನ್ನಿಂಗ್ಸ್ ಎನ್ನುವ ಹಾಗೆ ಶುರುವಾದ ಈ ಚಿತ್ರ ದುಷ್ಟರನ್ನು ಸದೆ ಬಡಿಯುವ, ಬಡವರಿಗೆ ನ್ಯಾಯ ಸಲ್ಲಿಸುವ 80s ಚಿತ್ರಗಳ ಧಾಟಿಯನ್ನೇ ಹೊಂದಿತ್ತು, ಆದರೆ ಇದು ಮಹಿಳಾ ಪ್ರಧಾನ ಚಿತ್ರ ಆಗಿತ್ತು ಎಂಬುದು ಇಲ್ಲಿನ ವಿಶೇಷ. ಗೃಹ ಪ್ರವೇಶ, ಬೆಳ್ಳಿ ಕಾಲುಂಗುರ, ರಾಮಾಚಾರಿ, ಥರದ ಸಿಂಪಲ್ ಹೋಮ್ಲಿ ಗರ್ಲ್ ಪಾತ್ರದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಾಲಾಶ್ರೀ ಸಿನಿ ಪ್ರಿಯರಿಗೆ ಖಡಕ್ ಟ್ವಿಸ್ಟ್ ಕೊಟ್ಟು ದುರ್ಗಿ, ಗಂಗಾ, etc etc ಎನ್ನುತ್ತಾ ಇನ್ನೂ ಅದೇ ಸರಣಿಯ ಚಿತ್ರಗಳನ್ನು ಮಾಡುತ್ತಿದ್ದಾರೆ.

ದೀಪಾವಳಿ ಮತ್ತು ಯಜಮಾನ:


ವಿಷ್ಣುವರ್ಧನ್ ಒಬ್ಬ ನಟನಿಂದ ಒಂದು ಶಕ್ತಿಯಾಗುತ್ತಿದ್ದ ಪರ್ವಕಾಲ ಇದು ಎಂದರೆ ತಪ್ಪಾಗಲಾರದು. ವಿಷ್ಣು ದಾದ ಇಂದು ನಮ್ಮ ನಡುವೆ ಇಲ್ಲದಿದ್ದರೂ ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡು ಅವರಿವರನ್ನು ಬೈದುಕೊಂಡು ಮಂಡೆ ಬಿಸಿ ಮಾಡಿಕೊಳ್ಳುವ ಟೈಮಲ್ಲಿ ಪಕ್ಕದಲ್ಲಿ ನಿಂತ ಆಟೋದಲ್ಲಿ ನಾಗರಹಾವು ಚಿತ್ರದ ಹಾಡು ಕೇಳಿದರೆ ಮೈ ರೋಮಾಂಚನ ಆಗಿ ಟೆನ್ಶನ್ ಮಾಯವಾಗಿದ್ದು ನಿಜ. ಅಪರೂಪಕ್ಕೆ ಒಮ್ಮೆ ಊರಿಗೆ ಹೋದಾಗ ಮುತ್ತಿನ ಹಾರ ಚಿತ್ರ ಬಂದಾಗ ಎಲ್ಲಾ ಕೆಲಸಗಳನ್ನು ಪಕ್ಕಕ್ಕೆ ಸರಿಸಿ ಭಾವುಕರಾಗಿ ನೋಡುತ್ತಾ ಕುಳಿತವರೆಷ್ಟೋ. ಅಷ್ಟ್ ಯಾಕೆ ಸಾರ್ (ಮೇಡಮ್?), ಈ ವರ್ಷ ಮರು ಬಿಡುಗಡೆಯಾದ ಸಾಹಸ ಸಿಂಹ ಚಿತ್ರಕ್ಕೆ ಸಿಕ್ಕ ಓಪನಿಂಗ್ ರೆಸ್ಪಾನ್ಸ್ ಮೇಲಿನ ಮಾತನ್ನು ಪ್ರೂವ್ ಮಾಡುತ್ತದೆ.


ದೀಪಾವಳಿ ಚಿತ್ರದ ಇನ್ನೊಬ್ಬ ನಾಯಕ ರಮೇಶ್ ಅರವಿಂದ್ ಪುಷ್ಪಕ ವಿಮಾನ ಚಿತ್ರದೊಂದಿಗೆ 100ನೇ ಚಿತ್ರ ಮುಗಿಸಿದರು. ಉತ್ತಮ ವಿಲನ್, ಸುಂದರಾಂಗ ಜಾಣ, ಕ್ವೀನ್ ಹಿಂದಿ‌ ಚಿತ್ರದ ಕನ್ನಡ ರೀಮೇಕ್ ಹೀಗೆ ನಿರ್ದೇಶನದಲ್ಲೂ ತುಂಬಾ ಬ್ಯುಸಿಯಾಗಿರುವ ರಮೇಶ್ ಅರವಿಂದ್ ರ ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್ ಬರುತ್ತೆ ಅಂದ ಕೂಡಲೇ ಅರಳುವ ಮುಖಗಳೆಷ್ಟೋ!! ಅತಿಥಿ ಯಾರೇ ಇರಲಿ, ಹಿಂದಿನಿಂದ ಬಂದು surprise ಕೊಡುವ ಗೆಳೆಯರು ಯಾರೇ ಬರಲಿ, ರಮೇಶ್ ರೇಂಜಿಗೆ ಯಾರಿಲ್ಲ ಎನ್ನಲಡ್ಡಿಯಿಲ್ಲ.

ದೇವೀರಿ:


ಸುತ್ತಲೂ ಕಮರ್ಷಿಯಲ್ ‌ಫಾರ್ಮುಲಾ‌ ಮೂವಿಗಳೇ ಇರುತ್ತಿದ್ದ ಆ ಕಾಲದಲ್ಲಿ ಬಂದ ಚಿತ್ರ ದೇವೀರಿ. ಒಬ್ಬ ಬಡ ವರ್ಗದ ಹುಡುಗಿ ಚಿತ್ರರಂಗಕ್ಕೆ ಹೀರೋಯಿನ್ ಆಗಿ‌ ಹೋದರೆ ಅವಳ ಲೋಕ ಹೇಗೆ ಬದಲಾಗುತ್ತಾ ಹೋಗುತ್ತದೆ ಎಂಬ ಸೂಕ್ಷ್ಮಗಳ ಸುತ್ತ ಹೆಣೆದ ಗೌರಿ ಲಂಕೇಶ್ ಅವರ ಚಿತ್ರ. ಗೌರಿ ಲಂಕೇಶ್ ಇತ್ತೀಚಿಗೆ ಕ್ರೇಜ಼ಿ ಲೋಕ ಚಿತ್ರ ನಿರ್ದೇಶಿಸಿದರು, ಚಿತ್ರ ನೆನಪಾಗ್ತಾ ಇಲ್ಲ ಅಂದರೆ ಅದರ ಬಾಕ್ಸ್ ಆಫೀಸ್ ಕಲೆಕ್ಷನ್ ನಿಮ್ಮ ಊಹೆಗೆ ಬಿಟ್ಟಿದ್ದು. ಅವರ ಸಹೋದರ ಇಂದ್ರಜಿತ್ ಲಂಕೇಶ್ ಮಜಾ ಟಾಕೀಸ್ ನ ನಂತರ ಅದೇ ಬಗೆಯ ಅವರದೇ ಇನ್ನೊಂದು ಕಾರ್ಯಕ್ರಮದಲ್ಲಿ ಬ್ಯುಸಿ. ಸಹೋದರಿ ಗೌರಿ ಲಂಕೇಶ್ ಹತ್ಯೆಯಾಯಿತು, may her soul RIP.

ದುರ್ಗದ ಹುಲಿ:

ಜಾಗೋ ರೇ, ಜಾಗೋ ರೇ! 🎼🎼🎼
ಈ ಹಾಡಿನ ಅರ್ಥ ಒಂದು ಸಲ ನಮ್ ಹಿಂದಿ ಮೇಡಮ್ ಹತ್ತಿರ ಕೇಳಿದ್ದ ನೆನಪು. ಪೊಲೀಸ್ ಅಂದರೆ ಸಾಯಿ ಕುಮಾರ್, ಸಾಯಿ ಕುಮಾರ್ ಅಂದರೆ ಪೊಲೀಸ್ ಭರಿತ ಫಿಲಂ ಅಂತ conclusion ಗೆ ಬೇಗ ಬರಬಹುದಾದರೂ ಅವರು ನಟಿಸಿರುವ ಇತರ ಕೌಟುಂಬಿಕ, ಭಕ್ತಿ ಪ್ರಧಾನ ಚಿತ್ರಗಳೂ ಕೂಡ ಅಷ್ಟೇ ಚೆನ್ನಾಗಿವೆ. ನಮ್ಮೂರು ಚಳ್ಳಕೆರೆ ಆಗಿದ್ದರಿಂದ ಈ ಚಿತ್ರ ಥಿಯೇಟರ್ ನಲ್ಲೇ ನೋಡಬೇಕು ಅಂತ ಭಾರಿ ಆಸೆ ಇತ್ತು, ಆದರೆ ಆಗಲಿಲ್ಲ. ಹೀಗೆ ಕೆಲವು ವರ್ಷಗಳ ಹಿಂದೆ ನೇಪಥ್ಯಕ್ಕೆ ಸರಿದಿದ್ದ ಸಾಯಿ ಕುಮಾರ್ ಅವರ potential ಮತ್ತೆ ನಮಗೆ realize ಆಗುವಂತೆ ಮಾಡಿದ ಚಿತ್ರ, ರಂಗಿತರಂಗ! ಅದರ ನಂತರ ಹ್ಯಾಪಿ ನ್ಯೂ ಈಯರ್, ಮತ್ತು ಹಲವು ಚಿತ್ರಗಳು ಬಂದವಾದರೂ ಅಂತಹ ಯಶ ಕಾಣಲಿಲ್ಲ.

ಗಲಾಟೆ ಅಳಿಯಂದ್ರು, ಹಗಲು ವೇಷ ಮತ್ತು ಇಂದ್ರಧನುಷ್:


1999ರಲ್ಲಿ ಬಂದ ಎಕೆ 47 ಶಿವಣ್ಣ ಅಭಿನಯದ 50ನೇ ಚಿತ್ರ. 2011 ರಲ್ಲಿ ಬಂದ ಜೋಗಯ್ಯ, ಶಿವಣ್ಣ ಅವರನ್ನು ಸೆಂಚುರಿ ಸ್ಟಾರ್ ಮಾಡಿತು. ನೀನು ಶಿವಣ್ಣ ಫ್ಯಾನ್ ಆ ಮಗಾ? ಅಂತ ನಮ್ ಹುಡುಗರು ಕೇಳಿದಾಗ ಹ್ಞೂಂ, ಹೌದು, ಅನ್ನುವ ಬದಲು 'ಓಓಓ, ಯೆಸ್ 100%' ಎಂದು ಹೇಳುವ ಮಟ್ಟಿಗೆ ಶಿವಣ್ಣ ನನಿಗಿಷ್ಟ. ಆದರೆ frankly speaking, ಎಕೆ 47 ಇಂದ ಜೋಗಯ್ಯ ವರೆಗೂ ಶಿವಣ್ಣ ಅವರ ಚೆನ್ನಾಗಿರುವ ಚಿತ್ರಗಳು ತುಂಬಾ ಕಮ್ಮಿ ಅನ್ನಬಹುದು. ಜೋಗಯ್ಯ ಫಿಲಮ್ ನೋಡಿ ಬಹಳ ಜನ ಥಿಯೇಟರ್ ಗೆ ಹೋಗಬೇಡಯ್ಯ ಅಂದರೂ ಅದರಲ್ಲಿ ಶಿವಣ್ಣ ಅಭಿನಯ ಬಗ್ಗೆ ಕೆಮ್ಮಂಗಿಲ್ಲ. 100 ನೇ ಚಿತ್ರದ ನಂತರ ಇಲ್ಲಿಯವರೆಗೆ ವರ್ಷಕ್ಕೆ 3-4 ಚಿತ್ರಗಳು ಬರುತ್ತಿದ್ದರೂ ಶಿವಲಿಂಗ, ಸಂತೆಯಲ್ಲಿ‌ ನಿಂತ ಕಬೀರ, ಕಡ್ಡಿಪುಡಿ, ಶ್ರೀಕಂಠ, ಬಂಗಾರ, ಮಾಸ್ ಲೀಡರ್ ಹೀಗೆ ಹೊಸ ನಿರ್ದೇಶಕರಿಗೆ ಅವಕಾಶ ಕೊಡುತ್ತಾ ಎಲ್ಲಾ genre ಕಥೆಗಳನ್ನು ಮಾಡುತ್ತಿರುವುದು 'ಮನಮೋಹಕ' ವಿಚಾರ. ಸೂರಿ ಜೊತೆ ಮಾಡಿದ ಟಗರು ಅದೆಷ್ಟು 'ಹಾವಳಿ' ಮಾಡಿತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲಾ?!? Can say, Shivanna still rocking it!!

ಓ ನನ್ನ ನಲ್ಲೆ ಮತ್ತು ಪ್ರೀತ್ಸು ತಪ್ಪೇನಿಲ್ಲ:


ರವಿಮಾಮ ಅಂದರೆ ಪ್ರೇಮಲೋಕ ಅಂತ ನಮಿಗಿಂತ ಜಾಸ್ತಿ ರವಿಮಾಮನೇ ಮಾತಾಡುವುದು ವಿಷಾದಕರ! ಹಂಸಲೇಖ ಅವರು ರವಿಚಂದ್ರನ್ ಚಿತ್ರಗಳನ್ನು ಬಿಟ್ಟ ನಂತರ ಅಲ್ಲೊಂದು‌ ಇಲ್ಲೊಂದು ಉತ್ತಮ ಚಿತ್ರಗಳು ಬಂದಿದ್ದವಾದರೂ ಅದರ ನಂತರ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ಖುಷಿಯ ವಿಷಯ.

ಪ್ರೀತ್ಸೇ:


ಡಿ ರಾಜೇಂದ್ರ ಬಾಬು ನಿರ್ದೇಶನದ ಪ್ರೀತ್ಸೇ ಹಲವರ ಫೇವರೇಟ್ ಚಿತ್ರ. ಹಿಂದಿಯ Darr ನೋಡಿದವರಿಗೆ ಆ ಚಿತ್ರ ಕನ್ನಡದಲ್ಲಿ ಮಾಡುತ್ತಿದ್ದಾರೆ ಎಂದು ಗೊತ್ತಾದಾಗ ಒಂದು ಅಳುಕು ಉಂಟಾಗಿದ್ದಿರಬಹುದು. ಅದನ್ನು ಸುಳ್ಳು ಮಾಡುವಂತೆ ನಾಯಕ ನಟ (ಮುಖ್ಯವಾಗಿ ಖಳ ನಟನಾಗಿ) ತಮ್ಮ potential ನಿರೂಪಿಸಿಕೊಂಡರು. ಬರವಣಿಗೆ, ನಟನೆ, ನಿರ್ದೇಶನ, ನಿರ್ಮಾಣದ ನಂತರ ಈಗ ರಾಜಕೀಯ, ಥೋ ಸಾರಿ ಪ್ರಜಾಕೀಯ ಶುರು ಮಾಡಿದ್ದರು‌. ತಾಂತ್ರಿಕ ಕಾರಣಗಳಿಂದ ಆ ಕೆಲಸ pause ಆಗಿದೆ. ಮುಂದೆ ಏನಾಗುತ್ತೋ ನೋಡಬೇಕು!! ಶ್!!

ಶಬ್ದವೇಧಿ:


ಡಾ ರಾಜ್‍ಕುಮಾರ್ ಬಗ್ಗೆ ಕೆಲವೇ ಸಾಲುಗಳಲ್ಲಿ ಬರೆದು ಮುಗಿಸಲು ಸಾಧ್ಯವೇ ಇಲ್ಲ, ಆದ್ದರಿಂದ ನಾನು ಆ ಬಗ್ಗೆ ಪ್ರಯತ್ನ ಕೂಡ ಮಾಡಲ್ಲ. 1993 ರಲ್ಲಿ ಆಕಸ್ಮಿಕ, 1994 ರಲ್ಲಿ ಒಡಹುಟ್ಟಿದವರು ಚಿತ್ರ ಮತ್ತು 6 ವರ್ಷಗಳ ನಂತರ ಎಸ್ ನಾರಾಯಣ್ ನಿರ್ದೇಶನದ ಶಬ್ದವೇಧಿ ಬಿಡುಗಡೆಯಾಗಿತ್ತು. ರಾಜ್‍ಕುಮಾರ್ ತಮ್ಮ ಸಿನಿ‌ ಜೀವನಕ್ಕೆ ಗುಡ್ ಬಾಯ್ ಹೇಳಿದ್ದರೆಂದೇ ಬೇಸರಗೊಂಡಿದ್ದ ಅವರ ಅಭಿಮಾನಿ ಬಳಗ, ಅವರು, ಇವರು ಎಲ್ಲರೂ ಶಬ್ದವೇಧಿ ನೋಡಿ ಸಂತಸಗೊಂಡರು. ಅದರ ನಂತರ ಅವರನ್ನು ಮತ್ತೆ ಭಕ್ತ ಅಂಬರೀಶ ಚಿತ್ರದ ಮೂಲಕ ತೆರೆಗೆ ತರುವ ಪ್ರಯತ್ನವಾಯಿತಾದರೂ, ಕೆಲವು ವರ್ಷಗಳ ನಂತರ ಅವರು ನಮ್ಮನಗಲಿ ಚಿರನಿದ್ರೆಗೆ ಜಾರಿದರು.

ಸ್ಪರ್ಶ:

ಸುನೀಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ ಮ್ಯೂಸಿಕಲ್ ಲವ್ ಸ್ಟೋರಿ ಒಂದು ಬಿಡುಗಡೆಯಾಗಿತ್ತು‌. ಶಾಯರಿ ಶೈಲಿಯ ಹಾಡುಗಳು ಮತ್ತು ಅತ್ಯುತ್ತಮ ಸಂಗೀತದ breaking bad partnership ಜೊತೆಗೆ ಕನ್ನಡಕ್ಕೆ ಒಬ್ಬ ಸ್ಟಾರ್ ಸಿಗುವ ಭರವಸೆ ಮೂಡಿಸಿದ್ದರು ನಟ ಸುದೀಪ್. ಆಮೇಲೆ ಸುದೀಪ್ ಕಿಚ್ಚ ಆಗಿ, ತೆಲುಗು, ತಮಿಳು, ಹಿಂದಿ ನಂತರ ಈಗ ಇಂಗ್ಲೀಷ್ ಚಿತ್ರ Risen ಅಲ್ಲಿ ಕೂಡ ನಟಿಸುತ್ತಿದ್ದಾರೆಂದು ಸುದ್ದಿ ಇದೆ. Hope's Rising!!


ಯಾರಿಗೆ ಸಾಲುತ್ತೆ ಸಂಬಳ?:


ಒಂದು ಕಾಲದಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ್ದ ಸುಪ್ರೀಮ್ ಹೀರೋ ಶಶಿ ಕುಮಾರ್ ಸಿನಿಮಾ ಕೆರಿಯರ್ ಮುಗಿಯುವ ಹಂತ ಇದು ಎಂದು ಹೇಳಲು ಸಂಕಟವಾಗುತ್ತದೆ. ಚಿತ್ರದುರ್ಗದಲ್ಲಿ ಒಂದು ಬಾರಿ ಎಂಪಿ ಆಗಿ ಕೂಡ ಆಯ್ಕೆ ಆಗಿದ್ದ ಇವರು ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಈ ಚಿತ್ರದ ಇನ್ನೊಬ್ಬ ನಟ ಮೋಹನ್  ಕೆಲವು ಚಿತ್ರಗಳಲ್ಲಿ ಅಭಿನಯಿಸಿ, ನರಸಿಂಹ ಚಿತ್ರದೊಂದಿಗೆ ನಿರ್ದೇಶನವೂ ಮಾಡಿ, ಇತ್ತೀಚೆಗೆ ಮಳೆ ನಿಲ್ಲುವವರೆಗೂ ಚಿತ್ರ ನಿರ್ಮಿಸಿದ್ದರು ಕೂಡ. ತಮ್ಮ ಹಾಸ್ಯ ಟೈಮಿಂಗ್ ನಿಂದ, ಅಭಿನಯ ಕೌಶಲ್ಯದಿಂದ ಮನೆ ಮಾತಾಗಿದ್ದ ಕರಿಬಸವಯ್ಯ ಇಂದು ನಮ್ಮೊಂದಿಗಿಲ್ಲ.

ಸುಲ್ತಾನ್:


ಜಗ್ಗೇಶ್ ಒಂದು ಕಾಲದಲ್ಲಿ ಆವ್, ಟಚಿಂಗ್ ಟಚಿಂಗ್ ಅಂದ್ಕೊಂಡು ಒಳ್ಳೊಳ್ಳೆಯ ಚಿತ್ರಗಳನ್ನು ನೀಡಿದ್ದಾರೆ, ಡೌಟೇ ಬೇಡ. ಆದರೆ ಒಂದು‌ ಸಮಯದ ನಂತರ ಅವರ ಚಿತ್ರಗಳು ಜನರಿಗೆ ರುಚಿಸಲಿಲ್ಲ. ಆ ಸಮಯದಲ್ಲಿ ಬಂದ ಚಿತ್ರ ಸುಲ್ತಾನ್. ಈ ಚಿತ್ರದ ಸ್ಟೋರಿ ಯಾವುದರ ಬಗ್ಗೆ ಇತ್ತು ಅನ್ನೋದು ಕೂಡ ಮರೆತು ಹೋಗಿದೆ. ಅದಾದ ಮೇಲೆ ಹಲವಾರು ಫ್ಲಾಪ್ ನಂತರ ಮತ್ತೆ ಮಠ, ಎದ್ದೇಳು ಮಂಜುನಾಥ, ನೀರ್ ದೋಸೆ ಮೂಲಕ ವಾಪಸ್ ಬಂದ ಜಗ್ಗೇಶ್ ಕಾಮಿಡಿ‌ ಕಿಲಾಡಿಗಳು ಯಶಸ್ಸಿನ ನಂತರ ಕಿಲಾಡಿ ಕುಟುಂಬದಲ್ಲಿ‌ ಬ್ಯುಸಿಯಾಗಿದ್ದಾರೆ.



That's all folks, ಇದು ಚಿತ್ರರಂಗದ ಬಗ್ಗೆ ಆಯಿತು. ವೈಯಕ್ತಿಕ ವಿಷಯಕ್ಕೆ ಬಂದರೆ 2000ನೇ ಇಸವಿಯಲ್ಲಿ ನಾವಿನ್ನೂ ಐದನೇ ಕ್ಲಾಸ್ ನಲ್ಲಿ ಇದ್ದೆವು. ಟೈಮ್ ಗೆ ಮುಂಚೆಯೇ ಮದುವೆಯಾದ ನಮ್ ಗೆಳೆಯರು ಕೆಲವರಿಗೆ ಈಗ ಐದು ವರ್ಷದ ಪಾಪು ಇದ್ದಿರಬಹುದು!!

18 Years!! So much has changed ಅಲಾ? ಆಗ ವಾವ್ ನೋಕಿಯಾ ಫೋನ್ ಇಂದ ನೋಕಿಯಾ ಫೋನ್-ಆ?? Why? ಎನ್ನುವವರೆಗೆ ಬಂಗಾಗಿದೆ. ಫ್ರೆಂಡ್ ಮನೆ‌ ಲ್ಯಾಂಡ್ ಲೈನ್ ನಂಬರ್ ನೆನಪಿಡುವಲ್ಲಿಂದ ಹಿಡಿದು OK Google, Call ಹೊಗೆ ರಾಮ್ ಎನ್ನುವವರೆಗೆ ಬಂದಾಗಿದೆ. ಇನ್ನು ಮುಂದೆ ಏನೇನಾಗುತ್ತೋ ನೋಡಬೇಕು, ಅದರ ಬಗ್ಗೆ sometime later, ಮತ್ತೆ ಕುಳಿತು ಹಿನ್ನೋಟ ಬೀರೋಣ. ಆಗ ಬೆನ್ನು ನೋವು, ಕತ್ತು‌ ನೋವು‌‌ಅಂತ ಹಿಂದಿರುಗಿ ನೋಡುವುದು ಕಷ್ಟ ಆಗಬಹುದು, ಇರಲಿ, that's tomorrow's problem. ನಾಳೆ ನಮ್ಮದಲ್ಲ, ಈ ದಿನ, ಈ ಕ್ಷಣ ಕೂಡ ನಮ್ಮದಲ್ಲ. ನಮ್ಮದು ಅನ್ನೋ ಫೀಲಿಂಗ್ ಅಲ್ಲೇ ಇರೋಣ!!

ಏನಂತೀರಾ?!?