ಮೇ 27, 2018

2000 ನೆನಪು, ಎದೆಯಾಳದಿಂದ 🎼🎼🎼

ನಮ್ ಜೀವನ ಎಷ್ಟೊಂದು ಕುತೂಹಲಗಳಿಂದ ಕೂಡಿರುತ್ತದೆ. ಎಷ್ಟೊಂದು ನಿರ್ಧಾರಗಳು ಆಯಾ ಕ್ಷಣ, ಸಂದರ್ಭ, ಸನ್ನಿವೇಶಗಳ ಓಘದಲ್ಲಿ ಆಗಿಬಿಡುತ್ತದೆ. Man proposes, God disposes ಎನ್ನುವಂತೆ ನಾವು ಅಂದ್ಕೊಳ್ಳೋದೇ ಒಂದು, ಅದು ಆಗೋದೇ ಇನ್ನೊಂದು. ಆಗೋದೆಲ್ಲಾ ಒಳ್ಳೆಯದಕ್ಕೆ ಎನ್ನುವುದೂ ಕೂಡ ಅವರವರ ಯೋಚನಾ ವೈಖರಿಗೆ ಬಿಟ್ಟಿದ್ದು.

'ಎ' ಫಿಲಂನಲ್ಲಿ ಉಪೇಂದ್ರ (ಹುಡುಗೀರನ್ನ ಕಂಡ್ರೆ ಆಗ್ತಿರಲಿಲ್ಲ, ಲವ್ ಅಂದ್ರೆ ಆಗ್ತಿರಲಿಲ್ಲ, ಡೈರೆಕ್ಟ್ರು ಸೂರಿ, ಬೆಂಕಿ... ಬೆಂಕಿ ಥರ ಇದ್ದರು!!) ಥರ ಆಡುತ್ತಿದ್ದ ನಮ್ ಹುಡುಗ ಒಬ್ಬ ಲವ್ ಮ್ಯಾರೇಜ್ ಆದ, ಲವ್ಲಿ ಸ್ಟಾರ್ ಪ್ರೇಮ್ ಥರ ಭರವಸೆ ಮೂಡಿಸಿದ್ದ ಇನ್ನೊಬ್ಬನ ಲವ್ ಸ್ಟೋರಿ ಟೈಟಾನಿಕ್ ಹಡಗಿನ ಕಥೆ ಆಯಿತು ಎಂದು ಬೇರೆ ಹೇಳಬೇಕಿಲ್ಲ ಅಂದ್ಕೊಳ್ತೀನಿ. ಹೀಗೇ ಹಲವು ಕಾರಣಗಳಿಂದ ಈ ಟೈಮು ಪಕ್ಕಾ 420 ಅಂತ ನಿಧಾನಕ್ಕೆ ನಂಬಿಕೆ ಬರೋಕೆ ಶುರುವಾಗಿದೆ. For example, ನಾನು SSLC ಮುಗಿಸಿದ್ದು ಮಾರ್ಚ್ 2006. ಅದು ಆಗಿ ಈಗ 12 ವರ್ಷನೇ ಆಗಿ ಹೋಯ್ತು. ಕಿಚ್ಚ ಸುದೀಪ್ ಮಾಣಿಕ್ಯ ಪಿಚ್ಚರ್ ಅಲ್ಲಿ ಹೇಳುವ "20 ವರ್ಷದಿಂದ ಬೇರೆ ಲೆಕ್ಕ, ಈಗಿಂದ ಬೇರೆ ಲೆಕ್ಕ... Something Something" ಡೈಲಾಗ್ ನಂತೆ ನಾನು SSLC ಮಾರ್ಕ್ಸ್ ಕಾರ್ಡ್ ಪಡೆಯುವಾಗ ಏನಾಗಬೇಕು ಅಂತ ಒಂದು ನಾಲ್ಕು ಐದು ಆಯ್ಕೆಗಳನ್ನು ಇಟ್ಟುಕೊಂಡಿದ್ದೆ ಅಲ್ವಾ, ಅದು ಯಾವುದರ ಹತ್ತಿರವೂ ಬ್ಯಾಂಕ್ ನೌಕರಿ ಸುಳಿದಿರಲಿಲ್ಲ. It's funny how opinions change over time, ಕಾಲಕ್ಕೆ ಇರುವ ಶಕ್ತಿ ಅಂತದ್ದು. ಅದಕ್ಕೆ ಉಪ್ಪಿ "ಎಲ್ಲರ ಕಾಲು ಎಳೆಯುತ್ತೆ ಕಾಲ" ಅಂತ ಹೇಳಿದ್ದಾರೆ ಅನಿಸುತ್ತೆ. Plus or minus 5 years, ನಾವೆಲ್ಲರೂ 90s Kids ಗಳೇ!! ಈಗ ಏನೋ Kids ಇಂದ Mens ಆಗಿ Legends ಹಂತಕ್ಕೆ ಏನೋ ಬಂದಿದ್ದೀವಿ‌ ಅನ್ನಿ, ಆದರೆ ಇನ್ನೂ 20-30 ವರ್ಷಗಳ ನಂತರ ಏನಾಗುತ್ತೀವೋ, ಎಲ್ಲಿರುತ್ತೀವೋ ಅಂತ ಯೋಚಿಸಿದರೆ ಮೈಯೆಲ್ಲಾ ಕಂಪನ ಆಗುತ್ತೆ. Just think about it, 2000 ನೇ ಇಸವಿಯಲ್ಲಿ ಹುಟ್ಟಿದ ಮಗುಗೆ ಈಗ ಮತ ಚಲಾಯಿಸುವ ಕಾರ್ಡು ಸಿಕ್ಕಿದೆ! ಇಂತಿಪ್ಪ ಸಂದರ್ಭದಲ್ಲಿ ನಾವಿನ್ನೂ LKG ಹುಡುಗರ ಥರ ಎಣ್ಣೆ ನಮ್ದು, ಊಟ ನಿಮ್ದು, ಥೋ ಸಾರಿ, ಸಾರಿ, ದೊಡ್ಡವರೆಲ್ಲಾ ಜಾಣರಲ್ಲ ಅಂತ ಹಾಡಿಕೊಂಡು ಕೂತಿದ್ದೇವೆ. ಇದೆಲ್ಲದರ ಮಧ್ಯ ಚಿಕ್ಕ ಬ್ರೇಕ್ ಎಂಬಂತೆ 2000 ನೇ ಇಸವಿಯಲ್ಲಿ ಬಿಡುಗಡೆಯಾದ ಪ್ರಮುಖ ಚಿತ್ರಗಳು ಯಾವುವು? ಮತ್ತು ಅದರ ನಟ / ನಟಿ / ನಿರ್ದೇಶಕ ಇತ್ಯಾದಿ ತಂತ್ರಜ್ಞರು ಈಗ ಎಲ್ಲಿದ್ದಾರೆ? ಏನಾಗಿದ್ದಾರೆ ಎಂಬ Quick Outlook ನೊಂದಿಗೆ ನಮ್ಮ ಜೀವನದ ಹಲವು ಮುಖ್ಯ ಘಟನೆಗಳ ಕಡೆ ಹಿನ್ನೋಟ ಬೀರೋಣ. Buckle up, boys, we are going back to past!


ಚಾಮುಂಡಿ:


ಮಾಲಾಶ್ರೀ ಸೆಕೆಂಡ್ ಇನ್ನಿಂಗ್ಸ್ ಎನ್ನುವ ಹಾಗೆ ಶುರುವಾದ ಈ ಚಿತ್ರ ದುಷ್ಟರನ್ನು ಸದೆ ಬಡಿಯುವ, ಬಡವರಿಗೆ ನ್ಯಾಯ ಸಲ್ಲಿಸುವ 80s ಚಿತ್ರಗಳ ಧಾಟಿಯನ್ನೇ ಹೊಂದಿತ್ತು, ಆದರೆ ಇದು ಮಹಿಳಾ ಪ್ರಧಾನ ಚಿತ್ರ ಆಗಿತ್ತು ಎಂಬುದು ಇಲ್ಲಿನ ವಿಶೇಷ. ಗೃಹ ಪ್ರವೇಶ, ಬೆಳ್ಳಿ ಕಾಲುಂಗುರ, ರಾಮಾಚಾರಿ, ಥರದ ಸಿಂಪಲ್ ಹೋಮ್ಲಿ ಗರ್ಲ್ ಪಾತ್ರದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಾಲಾಶ್ರೀ ಸಿನಿ ಪ್ರಿಯರಿಗೆ ಖಡಕ್ ಟ್ವಿಸ್ಟ್ ಕೊಟ್ಟು ದುರ್ಗಿ, ಗಂಗಾ, etc etc ಎನ್ನುತ್ತಾ ಇನ್ನೂ ಅದೇ ಸರಣಿಯ ಚಿತ್ರಗಳನ್ನು ಮಾಡುತ್ತಿದ್ದಾರೆ.

ದೀಪಾವಳಿ ಮತ್ತು ಯಜಮಾನ:


ವಿಷ್ಣುವರ್ಧನ್ ಒಬ್ಬ ನಟನಿಂದ ಒಂದು ಶಕ್ತಿಯಾಗುತ್ತಿದ್ದ ಪರ್ವಕಾಲ ಇದು ಎಂದರೆ ತಪ್ಪಾಗಲಾರದು. ವಿಷ್ಣು ದಾದ ಇಂದು ನಮ್ಮ ನಡುವೆ ಇಲ್ಲದಿದ್ದರೂ ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡು ಅವರಿವರನ್ನು ಬೈದುಕೊಂಡು ಮಂಡೆ ಬಿಸಿ ಮಾಡಿಕೊಳ್ಳುವ ಟೈಮಲ್ಲಿ ಪಕ್ಕದಲ್ಲಿ ನಿಂತ ಆಟೋದಲ್ಲಿ ನಾಗರಹಾವು ಚಿತ್ರದ ಹಾಡು ಕೇಳಿದರೆ ಮೈ ರೋಮಾಂಚನ ಆಗಿ ಟೆನ್ಶನ್ ಮಾಯವಾಗಿದ್ದು ನಿಜ. ಅಪರೂಪಕ್ಕೆ ಒಮ್ಮೆ ಊರಿಗೆ ಹೋದಾಗ ಮುತ್ತಿನ ಹಾರ ಚಿತ್ರ ಬಂದಾಗ ಎಲ್ಲಾ ಕೆಲಸಗಳನ್ನು ಪಕ್ಕಕ್ಕೆ ಸರಿಸಿ ಭಾವುಕರಾಗಿ ನೋಡುತ್ತಾ ಕುಳಿತವರೆಷ್ಟೋ. ಅಷ್ಟ್ ಯಾಕೆ ಸಾರ್ (ಮೇಡಮ್?), ಈ ವರ್ಷ ಮರು ಬಿಡುಗಡೆಯಾದ ಸಾಹಸ ಸಿಂಹ ಚಿತ್ರಕ್ಕೆ ಸಿಕ್ಕ ಓಪನಿಂಗ್ ರೆಸ್ಪಾನ್ಸ್ ಮೇಲಿನ ಮಾತನ್ನು ಪ್ರೂವ್ ಮಾಡುತ್ತದೆ.


ದೀಪಾವಳಿ ಚಿತ್ರದ ಇನ್ನೊಬ್ಬ ನಾಯಕ ರಮೇಶ್ ಅರವಿಂದ್ ಪುಷ್ಪಕ ವಿಮಾನ ಚಿತ್ರದೊಂದಿಗೆ 100ನೇ ಚಿತ್ರ ಮುಗಿಸಿದರು. ಉತ್ತಮ ವಿಲನ್, ಸುಂದರಾಂಗ ಜಾಣ, ಕ್ವೀನ್ ಹಿಂದಿ‌ ಚಿತ್ರದ ಕನ್ನಡ ರೀಮೇಕ್ ಹೀಗೆ ನಿರ್ದೇಶನದಲ್ಲೂ ತುಂಬಾ ಬ್ಯುಸಿಯಾಗಿರುವ ರಮೇಶ್ ಅರವಿಂದ್ ರ ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್ ಬರುತ್ತೆ ಅಂದ ಕೂಡಲೇ ಅರಳುವ ಮುಖಗಳೆಷ್ಟೋ!! ಅತಿಥಿ ಯಾರೇ ಇರಲಿ, ಹಿಂದಿನಿಂದ ಬಂದು surprise ಕೊಡುವ ಗೆಳೆಯರು ಯಾರೇ ಬರಲಿ, ರಮೇಶ್ ರೇಂಜಿಗೆ ಯಾರಿಲ್ಲ ಎನ್ನಲಡ್ಡಿಯಿಲ್ಲ.

ದೇವೀರಿ:


ಸುತ್ತಲೂ ಕಮರ್ಷಿಯಲ್ ‌ಫಾರ್ಮುಲಾ‌ ಮೂವಿಗಳೇ ಇರುತ್ತಿದ್ದ ಆ ಕಾಲದಲ್ಲಿ ಬಂದ ಚಿತ್ರ ದೇವೀರಿ. ಒಬ್ಬ ಬಡ ವರ್ಗದ ಹುಡುಗಿ ಚಿತ್ರರಂಗಕ್ಕೆ ಹೀರೋಯಿನ್ ಆಗಿ‌ ಹೋದರೆ ಅವಳ ಲೋಕ ಹೇಗೆ ಬದಲಾಗುತ್ತಾ ಹೋಗುತ್ತದೆ ಎಂಬ ಸೂಕ್ಷ್ಮಗಳ ಸುತ್ತ ಹೆಣೆದ ಗೌರಿ ಲಂಕೇಶ್ ಅವರ ಚಿತ್ರ. ಗೌರಿ ಲಂಕೇಶ್ ಇತ್ತೀಚಿಗೆ ಕ್ರೇಜ಼ಿ ಲೋಕ ಚಿತ್ರ ನಿರ್ದೇಶಿಸಿದರು, ಚಿತ್ರ ನೆನಪಾಗ್ತಾ ಇಲ್ಲ ಅಂದರೆ ಅದರ ಬಾಕ್ಸ್ ಆಫೀಸ್ ಕಲೆಕ್ಷನ್ ನಿಮ್ಮ ಊಹೆಗೆ ಬಿಟ್ಟಿದ್ದು. ಅವರ ಸಹೋದರ ಇಂದ್ರಜಿತ್ ಲಂಕೇಶ್ ಮಜಾ ಟಾಕೀಸ್ ನ ನಂತರ ಅದೇ ಬಗೆಯ ಅವರದೇ ಇನ್ನೊಂದು ಕಾರ್ಯಕ್ರಮದಲ್ಲಿ ಬ್ಯುಸಿ. ಸಹೋದರಿ ಗೌರಿ ಲಂಕೇಶ್ ಹತ್ಯೆಯಾಯಿತು, may her soul RIP.

ದುರ್ಗದ ಹುಲಿ:

ಜಾಗೋ ರೇ, ಜಾಗೋ ರೇ! 🎼🎼🎼
ಈ ಹಾಡಿನ ಅರ್ಥ ಒಂದು ಸಲ ನಮ್ ಹಿಂದಿ ಮೇಡಮ್ ಹತ್ತಿರ ಕೇಳಿದ್ದ ನೆನಪು. ಪೊಲೀಸ್ ಅಂದರೆ ಸಾಯಿ ಕುಮಾರ್, ಸಾಯಿ ಕುಮಾರ್ ಅಂದರೆ ಪೊಲೀಸ್ ಭರಿತ ಫಿಲಂ ಅಂತ conclusion ಗೆ ಬೇಗ ಬರಬಹುದಾದರೂ ಅವರು ನಟಿಸಿರುವ ಇತರ ಕೌಟುಂಬಿಕ, ಭಕ್ತಿ ಪ್ರಧಾನ ಚಿತ್ರಗಳೂ ಕೂಡ ಅಷ್ಟೇ ಚೆನ್ನಾಗಿವೆ. ನಮ್ಮೂರು ಚಳ್ಳಕೆರೆ ಆಗಿದ್ದರಿಂದ ಈ ಚಿತ್ರ ಥಿಯೇಟರ್ ನಲ್ಲೇ ನೋಡಬೇಕು ಅಂತ ಭಾರಿ ಆಸೆ ಇತ್ತು, ಆದರೆ ಆಗಲಿಲ್ಲ. ಹೀಗೆ ಕೆಲವು ವರ್ಷಗಳ ಹಿಂದೆ ನೇಪಥ್ಯಕ್ಕೆ ಸರಿದಿದ್ದ ಸಾಯಿ ಕುಮಾರ್ ಅವರ potential ಮತ್ತೆ ನಮಗೆ realize ಆಗುವಂತೆ ಮಾಡಿದ ಚಿತ್ರ, ರಂಗಿತರಂಗ! ಅದರ ನಂತರ ಹ್ಯಾಪಿ ನ್ಯೂ ಈಯರ್, ಮತ್ತು ಹಲವು ಚಿತ್ರಗಳು ಬಂದವಾದರೂ ಅಂತಹ ಯಶ ಕಾಣಲಿಲ್ಲ.

ಗಲಾಟೆ ಅಳಿಯಂದ್ರು, ಹಗಲು ವೇಷ ಮತ್ತು ಇಂದ್ರಧನುಷ್:


1999ರಲ್ಲಿ ಬಂದ ಎಕೆ 47 ಶಿವಣ್ಣ ಅಭಿನಯದ 50ನೇ ಚಿತ್ರ. 2011 ರಲ್ಲಿ ಬಂದ ಜೋಗಯ್ಯ, ಶಿವಣ್ಣ ಅವರನ್ನು ಸೆಂಚುರಿ ಸ್ಟಾರ್ ಮಾಡಿತು. ನೀನು ಶಿವಣ್ಣ ಫ್ಯಾನ್ ಆ ಮಗಾ? ಅಂತ ನಮ್ ಹುಡುಗರು ಕೇಳಿದಾಗ ಹ್ಞೂಂ, ಹೌದು, ಅನ್ನುವ ಬದಲು 'ಓಓಓ, ಯೆಸ್ 100%' ಎಂದು ಹೇಳುವ ಮಟ್ಟಿಗೆ ಶಿವಣ್ಣ ನನಿಗಿಷ್ಟ. ಆದರೆ frankly speaking, ಎಕೆ 47 ಇಂದ ಜೋಗಯ್ಯ ವರೆಗೂ ಶಿವಣ್ಣ ಅವರ ಚೆನ್ನಾಗಿರುವ ಚಿತ್ರಗಳು ತುಂಬಾ ಕಮ್ಮಿ ಅನ್ನಬಹುದು. ಜೋಗಯ್ಯ ಫಿಲಮ್ ನೋಡಿ ಬಹಳ ಜನ ಥಿಯೇಟರ್ ಗೆ ಹೋಗಬೇಡಯ್ಯ ಅಂದರೂ ಅದರಲ್ಲಿ ಶಿವಣ್ಣ ಅಭಿನಯ ಬಗ್ಗೆ ಕೆಮ್ಮಂಗಿಲ್ಲ. 100 ನೇ ಚಿತ್ರದ ನಂತರ ಇಲ್ಲಿಯವರೆಗೆ ವರ್ಷಕ್ಕೆ 3-4 ಚಿತ್ರಗಳು ಬರುತ್ತಿದ್ದರೂ ಶಿವಲಿಂಗ, ಸಂತೆಯಲ್ಲಿ‌ ನಿಂತ ಕಬೀರ, ಕಡ್ಡಿಪುಡಿ, ಶ್ರೀಕಂಠ, ಬಂಗಾರ, ಮಾಸ್ ಲೀಡರ್ ಹೀಗೆ ಹೊಸ ನಿರ್ದೇಶಕರಿಗೆ ಅವಕಾಶ ಕೊಡುತ್ತಾ ಎಲ್ಲಾ genre ಕಥೆಗಳನ್ನು ಮಾಡುತ್ತಿರುವುದು 'ಮನಮೋಹಕ' ವಿಚಾರ. ಸೂರಿ ಜೊತೆ ಮಾಡಿದ ಟಗರು ಅದೆಷ್ಟು 'ಹಾವಳಿ' ಮಾಡಿತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲಾ?!? Can say, Shivanna still rocking it!!

ಓ ನನ್ನ ನಲ್ಲೆ ಮತ್ತು ಪ್ರೀತ್ಸು ತಪ್ಪೇನಿಲ್ಲ:


ರವಿಮಾಮ ಅಂದರೆ ಪ್ರೇಮಲೋಕ ಅಂತ ನಮಿಗಿಂತ ಜಾಸ್ತಿ ರವಿಮಾಮನೇ ಮಾತಾಡುವುದು ವಿಷಾದಕರ! ಹಂಸಲೇಖ ಅವರು ರವಿಚಂದ್ರನ್ ಚಿತ್ರಗಳನ್ನು ಬಿಟ್ಟ ನಂತರ ಅಲ್ಲೊಂದು‌ ಇಲ್ಲೊಂದು ಉತ್ತಮ ಚಿತ್ರಗಳು ಬಂದಿದ್ದವಾದರೂ ಅದರ ನಂತರ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ಖುಷಿಯ ವಿಷಯ.

ಪ್ರೀತ್ಸೇ:


ಡಿ ರಾಜೇಂದ್ರ ಬಾಬು ನಿರ್ದೇಶನದ ಪ್ರೀತ್ಸೇ ಹಲವರ ಫೇವರೇಟ್ ಚಿತ್ರ. ಹಿಂದಿಯ Darr ನೋಡಿದವರಿಗೆ ಆ ಚಿತ್ರ ಕನ್ನಡದಲ್ಲಿ ಮಾಡುತ್ತಿದ್ದಾರೆ ಎಂದು ಗೊತ್ತಾದಾಗ ಒಂದು ಅಳುಕು ಉಂಟಾಗಿದ್ದಿರಬಹುದು. ಅದನ್ನು ಸುಳ್ಳು ಮಾಡುವಂತೆ ನಾಯಕ ನಟ (ಮುಖ್ಯವಾಗಿ ಖಳ ನಟನಾಗಿ) ತಮ್ಮ potential ನಿರೂಪಿಸಿಕೊಂಡರು. ಬರವಣಿಗೆ, ನಟನೆ, ನಿರ್ದೇಶನ, ನಿರ್ಮಾಣದ ನಂತರ ಈಗ ರಾಜಕೀಯ, ಥೋ ಸಾರಿ ಪ್ರಜಾಕೀಯ ಶುರು ಮಾಡಿದ್ದರು‌. ತಾಂತ್ರಿಕ ಕಾರಣಗಳಿಂದ ಆ ಕೆಲಸ pause ಆಗಿದೆ. ಮುಂದೆ ಏನಾಗುತ್ತೋ ನೋಡಬೇಕು!! ಶ್!!

ಶಬ್ದವೇಧಿ:


ಡಾ ರಾಜ್‍ಕುಮಾರ್ ಬಗ್ಗೆ ಕೆಲವೇ ಸಾಲುಗಳಲ್ಲಿ ಬರೆದು ಮುಗಿಸಲು ಸಾಧ್ಯವೇ ಇಲ್ಲ, ಆದ್ದರಿಂದ ನಾನು ಆ ಬಗ್ಗೆ ಪ್ರಯತ್ನ ಕೂಡ ಮಾಡಲ್ಲ. 1993 ರಲ್ಲಿ ಆಕಸ್ಮಿಕ, 1994 ರಲ್ಲಿ ಒಡಹುಟ್ಟಿದವರು ಚಿತ್ರ ಮತ್ತು 6 ವರ್ಷಗಳ ನಂತರ ಎಸ್ ನಾರಾಯಣ್ ನಿರ್ದೇಶನದ ಶಬ್ದವೇಧಿ ಬಿಡುಗಡೆಯಾಗಿತ್ತು. ರಾಜ್‍ಕುಮಾರ್ ತಮ್ಮ ಸಿನಿ‌ ಜೀವನಕ್ಕೆ ಗುಡ್ ಬಾಯ್ ಹೇಳಿದ್ದರೆಂದೇ ಬೇಸರಗೊಂಡಿದ್ದ ಅವರ ಅಭಿಮಾನಿ ಬಳಗ, ಅವರು, ಇವರು ಎಲ್ಲರೂ ಶಬ್ದವೇಧಿ ನೋಡಿ ಸಂತಸಗೊಂಡರು. ಅದರ ನಂತರ ಅವರನ್ನು ಮತ್ತೆ ಭಕ್ತ ಅಂಬರೀಶ ಚಿತ್ರದ ಮೂಲಕ ತೆರೆಗೆ ತರುವ ಪ್ರಯತ್ನವಾಯಿತಾದರೂ, ಕೆಲವು ವರ್ಷಗಳ ನಂತರ ಅವರು ನಮ್ಮನಗಲಿ ಚಿರನಿದ್ರೆಗೆ ಜಾರಿದರು.

ಸ್ಪರ್ಶ:

ಸುನೀಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ ಮ್ಯೂಸಿಕಲ್ ಲವ್ ಸ್ಟೋರಿ ಒಂದು ಬಿಡುಗಡೆಯಾಗಿತ್ತು‌. ಶಾಯರಿ ಶೈಲಿಯ ಹಾಡುಗಳು ಮತ್ತು ಅತ್ಯುತ್ತಮ ಸಂಗೀತದ breaking bad partnership ಜೊತೆಗೆ ಕನ್ನಡಕ್ಕೆ ಒಬ್ಬ ಸ್ಟಾರ್ ಸಿಗುವ ಭರವಸೆ ಮೂಡಿಸಿದ್ದರು ನಟ ಸುದೀಪ್. ಆಮೇಲೆ ಸುದೀಪ್ ಕಿಚ್ಚ ಆಗಿ, ತೆಲುಗು, ತಮಿಳು, ಹಿಂದಿ ನಂತರ ಈಗ ಇಂಗ್ಲೀಷ್ ಚಿತ್ರ Risen ಅಲ್ಲಿ ಕೂಡ ನಟಿಸುತ್ತಿದ್ದಾರೆಂದು ಸುದ್ದಿ ಇದೆ. Hope's Rising!!


ಯಾರಿಗೆ ಸಾಲುತ್ತೆ ಸಂಬಳ?:


ಒಂದು ಕಾಲದಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ್ದ ಸುಪ್ರೀಮ್ ಹೀರೋ ಶಶಿ ಕುಮಾರ್ ಸಿನಿಮಾ ಕೆರಿಯರ್ ಮುಗಿಯುವ ಹಂತ ಇದು ಎಂದು ಹೇಳಲು ಸಂಕಟವಾಗುತ್ತದೆ. ಚಿತ್ರದುರ್ಗದಲ್ಲಿ ಒಂದು ಬಾರಿ ಎಂಪಿ ಆಗಿ ಕೂಡ ಆಯ್ಕೆ ಆಗಿದ್ದ ಇವರು ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಈ ಚಿತ್ರದ ಇನ್ನೊಬ್ಬ ನಟ ಮೋಹನ್  ಕೆಲವು ಚಿತ್ರಗಳಲ್ಲಿ ಅಭಿನಯಿಸಿ, ನರಸಿಂಹ ಚಿತ್ರದೊಂದಿಗೆ ನಿರ್ದೇಶನವೂ ಮಾಡಿ, ಇತ್ತೀಚೆಗೆ ಮಳೆ ನಿಲ್ಲುವವರೆಗೂ ಚಿತ್ರ ನಿರ್ಮಿಸಿದ್ದರು ಕೂಡ. ತಮ್ಮ ಹಾಸ್ಯ ಟೈಮಿಂಗ್ ನಿಂದ, ಅಭಿನಯ ಕೌಶಲ್ಯದಿಂದ ಮನೆ ಮಾತಾಗಿದ್ದ ಕರಿಬಸವಯ್ಯ ಇಂದು ನಮ್ಮೊಂದಿಗಿಲ್ಲ.

ಸುಲ್ತಾನ್:


ಜಗ್ಗೇಶ್ ಒಂದು ಕಾಲದಲ್ಲಿ ಆವ್, ಟಚಿಂಗ್ ಟಚಿಂಗ್ ಅಂದ್ಕೊಂಡು ಒಳ್ಳೊಳ್ಳೆಯ ಚಿತ್ರಗಳನ್ನು ನೀಡಿದ್ದಾರೆ, ಡೌಟೇ ಬೇಡ. ಆದರೆ ಒಂದು‌ ಸಮಯದ ನಂತರ ಅವರ ಚಿತ್ರಗಳು ಜನರಿಗೆ ರುಚಿಸಲಿಲ್ಲ. ಆ ಸಮಯದಲ್ಲಿ ಬಂದ ಚಿತ್ರ ಸುಲ್ತಾನ್. ಈ ಚಿತ್ರದ ಸ್ಟೋರಿ ಯಾವುದರ ಬಗ್ಗೆ ಇತ್ತು ಅನ್ನೋದು ಕೂಡ ಮರೆತು ಹೋಗಿದೆ. ಅದಾದ ಮೇಲೆ ಹಲವಾರು ಫ್ಲಾಪ್ ನಂತರ ಮತ್ತೆ ಮಠ, ಎದ್ದೇಳು ಮಂಜುನಾಥ, ನೀರ್ ದೋಸೆ ಮೂಲಕ ವಾಪಸ್ ಬಂದ ಜಗ್ಗೇಶ್ ಕಾಮಿಡಿ‌ ಕಿಲಾಡಿಗಳು ಯಶಸ್ಸಿನ ನಂತರ ಕಿಲಾಡಿ ಕುಟುಂಬದಲ್ಲಿ‌ ಬ್ಯುಸಿಯಾಗಿದ್ದಾರೆ.That's all folks, ಇದು ಚಿತ್ರರಂಗದ ಬಗ್ಗೆ ಆಯಿತು. ವೈಯಕ್ತಿಕ ವಿಷಯಕ್ಕೆ ಬಂದರೆ 2000ನೇ ಇಸವಿಯಲ್ಲಿ ನಾವಿನ್ನೂ ಐದನೇ ಕ್ಲಾಸ್ ನಲ್ಲಿ ಇದ್ದೆವು. ಟೈಮ್ ಗೆ ಮುಂಚೆಯೇ ಮದುವೆಯಾದ ನಮ್ ಗೆಳೆಯರು ಕೆಲವರಿಗೆ ಈಗ ಐದು ವರ್ಷದ ಪಾಪು ಇದ್ದಿರಬಹುದು!!

18 Years!! So much has changed ಅಲಾ? ಆಗ ವಾವ್ ನೋಕಿಯಾ ಫೋನ್ ಇಂದ ನೋಕಿಯಾ ಫೋನ್-ಆ?? Why? ಎನ್ನುವವರೆಗೆ ಬಂಗಾಗಿದೆ. ಫ್ರೆಂಡ್ ಮನೆ‌ ಲ್ಯಾಂಡ್ ಲೈನ್ ನಂಬರ್ ನೆನಪಿಡುವಲ್ಲಿಂದ ಹಿಡಿದು OK Google, Call ಹೊಗೆ ರಾಮ್ ಎನ್ನುವವರೆಗೆ ಬಂದಾಗಿದೆ. ಇನ್ನು ಮುಂದೆ ಏನೇನಾಗುತ್ತೋ ನೋಡಬೇಕು, ಅದರ ಬಗ್ಗೆ sometime later, ಮತ್ತೆ ಕುಳಿತು ಹಿನ್ನೋಟ ಬೀರೋಣ. ಆಗ ಬೆನ್ನು ನೋವು, ಕತ್ತು‌ ನೋವು‌‌ಅಂತ ಹಿಂದಿರುಗಿ ನೋಡುವುದು ಕಷ್ಟ ಆಗಬಹುದು, ಇರಲಿ, that's tomorrow's problem. ನಾಳೆ ನಮ್ಮದಲ್ಲ, ಈ ದಿನ, ಈ ಕ್ಷಣ ಕೂಡ ನಮ್ಮದಲ್ಲ. ನಮ್ಮದು ಅನ್ನೋ ಫೀಲಿಂಗ್ ಅಲ್ಲೇ ಇರೋಣ!!

ಏನಂತೀರಾ?!?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ