ಏಪ್ರಿಲ್ 2, 2015

An Idea is...

Cobb: What is the most resilient parasite? Bacteria? A virus? An intestinal worm? An idea. Resilient... highly contagious. Once an idea has taken hold of the brain it's almost impossible to eradicate. An idea that is fully formed - fully understood - that sticks; right in there somewhere.
~ Inception


ಇಂಗ್ಲಿಷ್ ಸಿನಿಮಾ ಬಗ್ಗೆ ಗೊತ್ತಿಲ್ಲದವರಿಗೂ ಕೂಡ ಟೈಟಾನಿಕ್, ಅವತಾರ್, ಜುರಾಸಿಕ್ ಪಾರ್ಕ್ ಸಿನಿಮಾಗಳು ಗೊತ್ತೇ ಇರುತ್ತದೆ. ಕಾಲ, ದೇಶ, ಭಾಷೆಗಳ ಎಲ್ಲೆಯನ್ನೂ ಮೀರಿ ಜನರನ್ನು ತಲುಪಿದ ಚಿತ್ರಗಳಿವು. ಆದರೆ ಇಂಗ್ಲಿಷ್ ಭಾಷೆಯ ಸಿನಿಮಾಗಳನ್ನು ನೋಡುವವರು Inception ಸಿನಿಮಾವನ್ನು ನೋಡಿರದೇ ಅಥವಾ ಕೇಳಿರದೇ ಇರಲು ಸಾಧ್ಯವಿಲ್ಲ. ಆ ಸಿನಿಮಾದ ಕಥೆ ನನಗಿನ್ನೂ ಅಸ್ಪಷ್ಟ. ಆದರೆ ಕೆಲವು ಸಾಲುಗಳು ಎಷ್ಟೋ ಸಲ ನಿದ್ರೆಯಲ್ಲಿ ಕಾಡಿವೆ. ಅದರಲ್ಲಿ ಐಡಿಯಾದ ಬಗ್ಗೆ ಹೇಳುವ ಮೇಲಿನ ಡೈಲಾಗ್ ಕೂಡ ಒಂದು. ಟೈಮ್ ಪಾಸ್ ಬ್ಲಾಗ್ ಬರಹಗಾರನಾದ ನನಗೆ ಒಂದ್ ಒಂದ್ ಸಲ ಯಾವ ವಿಷಯದ ಬಗ್ಗೆ ಬರೆಯೋದು ಅನ್ನೋದೇ ಹೊಳೆಯೋದಿಲ್ಲ.   ಪರಿಸ್ಥಿತಿ ಹೀಗಿರುವಾಗ ಒಂದು ಐಡಿಯಾದ ಮಹತ್ವ ಅರಿಯಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಹೀಗೆ ಏನಾದರೂ ಮಾಡುವಾಗ ಕೆಲವು ಸಿನಮಾ ಡೈಲಾಗ್ ಗಳು, ಇಲ್ಲವೇ ಸ್ವಂತ quotes ಗಳು ಹೊಳೆಯುತ್ತವೆ. ಅದರಲ್ಲಿ ಕೆಲವನ್ನು ಆಗಾಗ ವಾಟ್ಸಾಪ್ ಸ್ಟೇಟಸ್ ಆಗಿ ಹಾಕಿರುತ್ತೇನೆ. ವಾಟ್ಸಾಪ್ uninstall ಮಾಡಿದಾಗ, ಇಲ್ಲವೇ ಫೋನ್ format ಆದಾಗ ಇದೆಲ್ಲಾ ಅಳಿಸಿ ಹೋಗ್ತಾ ಇತ್ತು. ಆದರೆ ಇವತ್ತು ಬೈಕಲ್ಲಿ ಎಲ್ಲೋ ಹೋಗ್ಬೇಕಾದ್ರೆ ಒಂದು ಲೈನ್ ಹೋಳೆಯಿತು. ಈ ಸಾಲು ಎಲ್ಲೂ ಕಳೆದು ಹೋಗದಿರಲಿ ಅಂತ ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಅದನ್ನು ಹೇಳೋಕೆ ಇಷ್ಟಲ್ಲಾ ಡ್ರಾಮಾ ಮಾಡಬೇಕಾಯಿತು. ಆ ಲೈನ್ ಹೀಗಿದೆ.

There is always a reason to be happy, or to be sad. The question is, which one will you pick?

ಇವತ್ತಿಗಿಷ್ಟು ಸಾಕು ಬಿಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ