ಜನವರಿ 18, 2016

ಇರಲಾರದೆ...

 ಸಾಂದರ್ಭಿಕ ಚಿತ್ರ: ಆಟಗಾರ 


ಇರಲಾರದೆ ರುಬಿಕ್ಸ್ ಕ್ಯೂಬ್ ತಿರುಗಿಸಿಟ್ಟನಂತೆ.


ಸರಿಯಾಗಿ ಜೋಡಿಸಿರೋ ರುಬಿಕ್ಸ್ ನೋಡಿ ಸುಮ್ಮನೆ ಇರೋಕಾಗಲ್ಲ. ಒಂದು ವೇಳೆ ತಿರುಗಿಸಿ ಹಾಳು ಮಾಡಿಬಿಟ್ಟರೆ ಮತ್ತೆ ಸರಿಯಾಗಿ ಜೋಡಿಸುವವರೆಗೂ ಸಮಾಧಾನ ಆಗಲ್ಲ. ಅದೇ ರೀತಿಯಾಗಿ ಖುಷಿಯಾಗಿರಬೇಕು ಅಂತ ದುಡ್ಡು ಸಂಪಾದನೆ ಮಾಡ್ತೀವಿ, ದುಡ್ಡೆಲ್ಲಾ ಕೈ ತುಂಬಿದಾಗ ಮತ್ತೆ ಖುಷಿಯಾಗಿರಬೇಕೆಂದು ಖರ್ಚು ಮಾಡಲು ಶುರು ಮಾಡ್ತೀವಿ. Memento ಚಿತ್ರದ ಹಾಗೆ, ಎಲ್ಲಿಂದ ಶುರುವಾಗುತ್ತೋ, ಮತ್ತೆ ಅಲ್ಲಿಗೆ ಬಂದು ನಿಂತ ಹಾಗೆ, ಈ ಜೀವನ ನಡೆಯೋದು ಹೀಗೇನೇ ಅನಿಸುತ್ತೆ.

ಸುಮ್ಮನೆ ಬಂದ ಯೋಚನೆ, ತಡಮಾಡದೆ ಪೋಸ್ಟ್ ಮಾಡಿ ಬಿಡಬೇಕೆಂಬ ಆತುರ, ಇನ್ನು ಹಲವು ವಿಷಯಗಳು ಸೇರಿ ಅಂಕಣ ಆಗಿದೆ, ಅಷ್ಟೇ ಮ್ಯಾಟ್ರು.

1 ಕಾಮೆಂಟ್‌: