ಫೆಬ್ರವರಿ 6, 2017

ಸಾಮಾಜಿಕ ಜಾಲತಾಣಗಳಿಂದ ಈ ಕೂಡಲೇ ಬ್ಯಾನ್ ಆಗಬೇಕಾದ 9 ಬಗೆಯ ಜನರುಮೂಲ ರಚನೆ: ಪ್ರದೀಪ ಆಚಾರ್
ವಿಸ್ತರಿಸಿ ಬರೆದಿದ್ದು: ನಾನು 


 ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
ಪಕ್ಕದ ಮನೆ ಟಿವಿಯಲ್ಲಿ ಬೆಳಿಗ್ಗೆ ಬೆಳಿಗ್ಗೆ ಉದಯ ಮ್ಯೂಸಿಕ್ ನಲ್ಲಿ ಹಾಡು ಜೋರಾಗಿ ಕೇಳುತ್ತಿತ್ತು. ಭಾನುವಾರ ಕೂಡ ಏನು ರೋಧನೆ ಕೊಡ್ತಾರಪ್ಪ, ತಡಿ ಮಾಡ್ತೀನಿ ಇವರಿಗೆ ಅಂತ ಸೌಂಡ್ ಸಿಸ್ಟಮ್ ನಲ್ಲಿ 'ಮಾರಿ ಕಣ್ಣು ಹೋರಿ ಮ್ಯಾಗೆ, ಧಿಂಗನಕ್ಕನಕ್ಕಧಿನ್ನ' ಅಂತ ಎರಡು ರೌಂಡು ಕೇಳುವ ಹೊತ್ತಿಗೆ ಕಡೆ ಸೌಂಡು ಆಫ್ ಆಗಿತ್ತು. ಹಂಗೆ ಬರಬೇಕು ದಾರಿಗೆ ಅಂತ ಮತ್ತೆ ಮಲಗೋಣ ಅಂತ ಎಷ್ಟು ಪಲ್ಟಿ ಹೊಡೆದರೂ ನಿದ್ದೆ ಬರಲಿಲ್ಲ, ಸಾಕು ಬಿಡಪ್ಪಾ 9am ಆಗಿದೆ, ಎದ್ದು ಬಿಡೋಣ ಅಂತ ನ್ಯೂಸ್ ಹಾಕಿದೆ. ವಿದೇಶ ಸುದ್ದಿ ಸಮಾಚಾರಗಳು ಬರುತ್ತಿತ್ತು. ಅಮೆರಿಕಾದ ನೂತನ ಪ್ರೆಸಿಡೆಂಟ್ ಡೊನಾಲ್ಡ್ ಟ್ರಂಪ್ H1B ವೀಸಾ ರದ್ದು ಪಡಿಸುವುದು ಸುದ್ದಿ. ಅದನ್ನು ನಮ್ ಮಸಾಲೆ ನ್ಯೂಸ್ ಚಾನಲ್ ಗಳು ವಿದೇಶಿಗರನ್ನು ಬೆಂಡೆತ್ತಿ ಬ್ಯಾನ್ ಮಾಡಿದ ಟ್ರಂಪ್ ಎಂದು ಭರ್ಜರಿ ಹಿನ್ನಲೆ ಸಂಗೀತದೊಂದಿಗೆ ರುಬ್ಬುತ್ತಿದ್ದರು. ಲೈನ್ ಎಲ್ಲೋ ಕೇಳಿದ್ದೀನಲ್ಲಾ, ಎಲ್ಲೋ ಏನೋ ಆಗಿತ್ತಲ್ಲಾ ಎಂದು ಯೋಚಿಸುತ್ತಿರುವಾಗ ಹುಚ್ಚ ವೆಂಕಟ್ ನೆನಪಾಯ್ತು. ಅರೇ ಹೌದಲ್ಲಾ, ವಯ್ಯ ಐಟಮ್ ಸಾಂಗ್ ಬ್ಯಾನ್ ಮಾಡ್ಬೇಕು, ಬ್ಯಾನ್ ಮಾಡ್ಬೇಕು ಅಂತ ಓಡಾಡಿ ಓಡಾಡಿ ತುಂಬಾನೇ ಸುದ್ದಿ ಮಾಡಿದ್ದ ಅಂತ. ಹಾಗೆ ನೋಡಿದರೆ ನಮ್ ದೇಶ ಬ್ಯಾನ್ ಮಾಡುವುದರಲ್ಲಿ ಎತ್ತಿದ 'ಕೈ' ಎನ್ನಬಹುದು. ಅಭಿಮಾನಿಗಳು ಯಾರೂ ರೊಚ್ಚಿಗೇಳಬಾರದಾಗಿ ವಿನಂತಿ, I love my country, ಆದರೆ don't you think the Government is imposing too many things on people? ಹೌದು, ಕಾನೂನು ಮಾಡುವುದು ನಮ್ಮ ಒಳಿತಿಗಾಗಿಯೇ, ಆದರೆ ರೀತಿಯ ಕಾನೂನುಗಳು ತಮ್ಮ purpose serve ಮಾಡುತ್ತಿಲ್ಲ ಎಂಬುದು ನನ್ನ ಅನಿಸಿಕೆ. ಹಾಸ್ಯಗಾರ ವಿಪುಲ್ ಗೋಯಲ್ ಒಂದು ಕಡೆ ಚೆನ್ನಾಗಿ ಹೇಳುತ್ತಾರೆ, ಮಹಾತ್ಮ ಗಾಂಧಿ ಅವರ ಹುಟ್ಟಿದ ದಿನದಂದು dry day ಮಾಡುವುದು ಅದರ purpose serve ಮಾಡುವುದಿಲ್ಲ. ಯಾಕೆಂದರೆ ಹಿಂದಿನ ದಿನವೇ ಎಲ್ಲರೂ ಬೇಕಾದುದನ್ನು ತಂದಿಟ್ಟುಕೊಂಡಿರುತ್ತಾರೆ ಅಂತ. ಶಾಲಾ, ಕಾಲೇಜು ಸಮೀಪ ಬೀಡಿ, ಸಿಗರೇಟ್ ನಿಷೇಧ ಒಳ್ಳೆಯದು, ಆದರೆ ಊರಾಚೆ ಹೋಗಿ ಧಮ್ ಎಳೆದು ಬರುವ ಎಷ್ಟು ಜನ ಹುಡುಗರನ್ನು ನಾವು ನೋಡಿಲ್ಲ?! ರಾಜ್ಯ ಸರ್ಕಾರ ಏನೋ ಒಂದು ನಿಷೇಧ ಮಾಡಿತು, ಕೇಂದ್ರ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ porn ನಿಷೇಧ ಮಾಡಿತ್ತು. ಹಿಂಗೆ ಕಂಡ ಕಂಡದ್ದನು ಬ್ಯಾನ್ ಮಾಡಿ ಮಾಡಿ, ಯಾಕೆ ಸಾಮಾಜಿಕ ಜಾಲತಾಣಗಳಿಂದ ಇಂಥವರನ್ನು ಬ್ಯಾನ್ ಮಾಡಬಾರದು ಅನಿಸಿತು. ಪಟ್ಟಿ ನೋಡಿ, ಇದನ್ನು ಓದಿದ ಕೂಡಲೇ ನೀವೂ CM / PM ಆಗಿ ಇವರನ್ನು ಬ್ಯಾನ್ ಮಾಡಲೇಬೇಕು ಎಂದು ಯೋಚಿಸುತ್ತೀರಾ, ಪಕ್ಕಾ!

1. Dubsmash ಧೀರರು


ಸಾಂದರ್ಭಿಕ ಚಿತ್ರ: ಉಗ್ರಂ, ಓಂ, ಲೂಸಿಯಾ ಮತ್ತು ಮಾಸ್ಟರ್ ಪೀಸ್ಒಬ್ಬ ಪೊಲೀಸ್ ಆಫೀಸರ್ ಟ್ರಾನ್ಸಫರ್ ಆಗಿ ಹೋಗೋದು ಇನ್ನೊಂದು ಪೊಲೀಸ್ ಸ್ಟೇಷನ್ ಗೆ ಕಣೋ, ಪೋಸ್ಟ್ ಆಫೀಸ್ ಗೆ ಅಲ್ಲ, ಮದಕರಿ, ವೀರ ಮದಕರಿಅಂತ ಕಿಚ್ಚ ಅವರ ಡೈಲಾಗ್ ಎಷ್ಟು ಸಲ ಪ್ರಯತ್ನ ಪಟ್ಟರೂ ಸ್ಟೈಲಲ್ಲಿ ಹೇಳಲಾಗುತ್ತಿತ್ತು ವಿನಃ ಟೋನಲ್ಲಿ ಹೇಳಲಾಗುತ್ತಿರಲಿಲ್ಲ. ಅಂತಹ ಅಪರೂಪದ ಧ್ವನಿ ಕಿಚ್ಚ ಅವರದ್ದು. Dubsmash ಬಂದಾಗ ಥರ ಮೆಚ್ಚಿನ ಚಿತ್ರದ ಮೆಚ್ಷಿನ ಡೈಲಾಗ್ ಗಳನ್ನು ನಮ್ಮ ಅಂಗಿಕ ಅಭಿನಯದೊಂದಿಗೆ ವಿಡಿಯೋ ಮಾಡಿಕೊಳ್ಳುವ ಸದಾವಕಾಶ ನಮ್ಮದಾಯಿತು. ಒಂದೋ, ಎರಡೋ, ಮೂರೋ ವಿಡಿಯೋ ಮಾಡಿದರೆ ಓಕೆ, ದಿನ ಅದೇ ಉದ್ಯೋಗ ಆದರೆ ನೋಡುವ ನಮ್ ತಲೆ ಎಷ್ಟು ಕೆಟ್ಟು ಹೋಗಬೇಡ! ಇಂಥವರೆಲ್ಲಾ ಮೊದಲು ಬ್ಯಾನ್ ಆಗ್ಬೇಕ್!!


2. ದೇವನಿರುವನು! ನಮ್ ಒಳಗೆ ಇರುವನು!!

ಸಾಂದರ್ಭಿಕ ಚಿತ್ರ: ಜೈ  ಮಾರುತಿ 800

ಆಗ ಒಂದು ಕಾಲ ಇತ್ತು, ಜನರ ಮನೋಭಾವವೂ ಒಳ್ಳೆಯದು ಇತ್ತು, ಹಾಗಾಗಿ ದೇವತಾ ಮನುಷ್ಯ, ಬಂಗಾರದ ಮನುಷ್ಯ ಚಿತ್ರಗಳು ಬರುತ್ತಿದ್ದವು. ಈಗ ಜನರ ನೀಯತ್ತು ಗೊಬ್ಬೆದ್ದು ಹೋಗಿದೆ. ಯಾರದೋ ದುಡ್ಡಲ್ಲಿ ಎಲ್ಲಮ್ಮನ ಜಾತ್ರೆ ಮಾಡುವವರು ಕಹಾ ಹೈ ಅಂದರೆ ಊರ್ ತುಂಬಾ ಹೈ ಅನ್ನಬಹುದು. ಹಾ, ಯಲ್ಲಮ್ಮ ಅಂದ ತಕ್ಷಣ ದೇವರ ನೆನಪಾಯ್ತು. ದೇವರ ಫೋಟೋಗಳ ಕುರಿತಂತೆ ಮೊದಲಿನಷ್ಟು ಗಾಂಭೀರ್ಯತೆಯೇ ಈಗ ಇಲ್ಲವಾಗಿದೆ. ಬೆಡ್ ಶೀಟ್ ಇಂದ ಹಿಡಿದು ಕೀ ಚೈನ್, ಮದುವೆ ಕಾರ್ಡ್ ವರೆಗೆ ಎಲ್ಲಾ ಕಡೆ ದೇವರ ಫೋಟೋಗಳು. ಆಮೇಲೆ ಅವನ್ನು ಎಸೆಯುವ ಹಾಗಿಲ್ಲ, ಬಿಡುವ ಹಾಗಿಲ್ಲ. ಇಷ್ಟು ಸಾಲದೆಂಬಂತೆ ಗಣೇಶನ ಫೋಟೋ ಹಾಕಿ 10 ಸೆಕೆಂಡ್ ಅಲ್ಲಿ ಷೇರ್ ಮಾಡಿ, ಲೈಕ್ ಮಾಡಿ ಲಕ್ಷ್ಮೀ ನಿಮ್ಮ ಮನೆಗೆ ಬರುತ್ತಾಳೆ ಎಂಬಿತ್ಯಾದಿ ಪೋಸ್ಟ್ ಮಾಡುವವರು ಒಬ್ಬರಾ? ಇಬ್ಬರಾ? ಇಂಥ ಜನರ ಉಳಿಸಬೇಡ ಕರ್ಕೊಂಡ್ ಹೋಗೋ ಭಗವಂತ!

3. ಅಲ್ಲಿಯೂ ಇರುವನು! ಅಲ್ಲಿಯೂ ಇರುವನು!!

ಸಾಂದರ್ಭಿಕ ಚಿತ್ರ: ಕಿರಿಕ್  party

Facebook ನಲ್ಲಿ Check in ಎಂಬ option ಇದೆ. ಏನಕ್ಕೆ ಅದು? ಎಲ್ಲಾದರೂ ಹೊಸ ಜಾಗಕ್ಕೆ ಹೋದಾಗ, ನಾನು ಹಿಂಗಿಂಗೆ ಇಂಥ ಕಡೆ ಹೋದೆ ಅಂತ friends ಜೊತೆ share ಮಾಡಿಕೊಳ್ಳಲಿ ಅಂತ. ಅಲ್ಲಿಗೆ ನಿಂತಿದ್ದರೆ ಸರಿಯಾಗುತ್ತಿತ್ತು, ಬೆಳಿಗ್ಗೆ ಬಾತ್ ರೂಮ್ check in, ಆಮೇಲೆ ಆಫೀಸ್, ಮಧ್ಯಾಹ್ನ ಟೀಮ್ ಲಂಚ್, ಸಂಜೆ ಪಾನಿ ಪೂರಿ, ಅಯ್ಯೋ ಬಿಡ್ರೋ ಹೋಗ್ಲಿ ಎಷ್ಟು ಕಡೆ check in ಮಾಡ್ತೀರಾ! ಎಲ್ಲಿ ನೋಡಿದರೂ ಇವರದೇ ಪೋಸ್ಟ್ ಕಾಣುವದರಿಂದ fb ಅಲ್ಲಿ ಬೇರೆ ವಿಷಯಗಳೇ ಕಾಣದಾಗಿದೆ. ದಯವಿಟ್ಟು ಚೆಕ್ ಇನ್ ಕಮ್ಮಿ ಮಾಡಿ, ನಮ್ news feed ಉಳಿಸಿ, ಧನ್ಯವಾದಗಳು.


4. ಚೆನ್ನಾಗಿದೆ ಅಂದರೆ ಚೆನ್ನಾಗಿದೆ, ಚೆನ್ನಾಗಿಲ್ಲ ಅಂದರೂ ಚೆನ್ನಾಗಿದೆ ಅಂತ!

 ಸಾಂದರ್ಭಿಕ ಚಿತ್ರ: ಕಿರಿಕ್  party ಮತ್ತು ಮಾಸ್ಟರ್ ಪೀಸ್

ಮಗಾ ಫಿಲಂ ಹೇಗಿದೆಯೋ? ಚೆನ್ನಾಗಿದೆಯಾ? ಅಂತ ಯಾರನ್ನು ಬೇಕಾದರೂ ಕೇಳಿ, ಅವರು ಚಿತ್ರ ನೋಡಿದ್ದರೆ honest ಆಗಿ ಚೆನ್ನಾಗಿದೆ / ಚೆನ್ನಾಗಿಲ್ಲ ಎಂದು ಹೇಳಿಬಿಡುತ್ತಾರೆ. ಆದರೆ ನಮ್ಮ ಆಫೀಸ್ ಅಲ್ಲಿ ಟೀಮ್ ಲೀಡ್ ಗೆ ಬಕೆಟ್ ಹಿಡಿಯುವ ಒಬ್ಬನು ಇದ್ದೇ ಇರುವಂತೆ, ಸೋಷಿಯಲ್ ಮೀಡಿಯಾದಲ್ಲಿ ಒಂದೊಂದು ಸಿನಿಮಾ ಎಷ್ಟು ಡಬ್ಬಾ ಆಗಿದ್ದರೂ ಸಾರ್ ನಿಮ್ ಸಿನಿಮಾ ಸೂಪರ್ ಸಾರ್, ಬಂಪರ್ ಹಿಟ್ ಅದು ಇದು ಅಂತ ಬಕೆಟ್ ಹಿಡಿಯುತ್ತಾರೆ. ವಿಷಯ ಗೊತ್ತಿಲ್ಲದೆ ಅವರ ಮಾತು ನಂಬಿ ಫಿಲಂಗೆ ಹೋದರೆ ತಗಾಲಾಕ್ಕೊಳ್ಳೋದು ಗ್ಯಾರಂಟಿ. ಇಂತಹ ಸುಳ್ಳರನ್ನು ಡಬ್ಬದೊಳಗೆ ಹಾಕಿ ಮುಚ್ಚುವುದು ವಾಸಿ


5. ಈ ಸಂಜೆ ಏಕೆ ಜಾರುತಿದೆ?

 ಸಾಂದರ್ಭಿಕ ಚಿತ್ರ: ರಂಗಿತರಂಗ

ಬದಲಾದ ಕಾಲದಲ್ಲಿ ಲವ್ ಮಾಡುವುದು ಕಾಮನ್, ಬ್ರೇಕಪ್ ಆಗುವುದು ಇನ್ನೂ ಕಾಮನ್. ಆದರೆ ಕೆಲವು ಮುಗ್ಧ ಹೃದಯಗಳಿಗೆ ಮೊದ ಮೊದಲು ಇದನ್ನು ಅರಗಿಸಿಕೊಳ್ಳುವುದು ಕಷ್ಟ ಆಗಿರುತ್ತೆ. ಹಾಗಾಗಿ 'ಬಾಡಿ ಹೋದ ಬಳ್ಳಿಯಿಂದ' ಎಂಬ ಅಣ್ಣಾವ್ರು ಕಾಲದ ಹಾಡಿಂದ ಹಿಡಿದು, 'ಹೋದರೆ ಹೋಗೇ ನೀ ದೂರ' ಎಂಬ ಕೃಷ್ಣ ಅಜಯ್ ರಾವ್ ಹಾಡಿನವರೆಗೂ ಫೀಲಿಂಗ್ ಇರೋ ಸಾಹಿತ್ಯ ಹುಡುಕಿ ಹುಡುಕಿ ಪೋಸ್ಟ್ ಮಾಡುತ್ತಾರೆ. ಮಾಡಲಿ, ತಪ್ಪಲ್ಲ, Mark ನಮ್ಮ ಚಿಕ್ಕಪ್ಪನ ಮಗ ಅಲ್ಲ, ಆದರೆ ರೋಧನೆ ಕೊಡೋ ಫೀಲಿಂಗ್ ಸ್ಟೇಟಸ್ ಗಳು ಮಕ್ಕಳ ಬಗ್ಗೆ ಸರ್ಕಾರ ಕೊಡುವ ಜಾಹೀರಾತಿನಂತೆ ಇರಬೇಕು, ಒಂದು ಬೇಕು, ಎರಡು ಸಾಕು! ಜಾಸ್ತಿ ಆದರೆ ಅವರ EX ಅನ್ನು ಅವರ ಜೊತೆ ನಾವೂ ಕೂಡ ಮಿಸ್ ಮಾಡಿಕೊಳ್ಳಲು ಶುರು ಆದರೆ ಮಾಡಿದರೆ ಇಬ್ಬರಿಗೂ ಕಷ್ಟ ಅಲ್ವಾ?!?


6. Selfie ಶೂರರು

 ಸಾಂದರ್ಭಿಕ ಚಿತ್ರ: ಮುಂಗಾರು ಮಳೆ  2


Selfie! Because you don't trust photography skills of your buddy ಅಂತ ಒಮ್ಮೆ ನೋಡಿದ್ದೆ. ಅದು ನಿಜವೂ ಹೌದು. ಫೋಟೋ ಚೆನ್ನಾಗಿ ಬರಲಿ ಅಂತ ಎಲ್ಲರಿಗೂ ಆಸೆ ಇರುತ್ತೆ, ಅದು ಸಹಜ ಕೂಡ. ಆದರೆ ದಿನಕ್ಕೊಂಡು, ವಾರಕ್ಕೆ ಮೂರು ಚೆಂದ. ಬೆಳಿಗ್ಗೆ ಉಪ್ಪಿಟ್ಟು ತಿಂದೆ, ಹಾಕು ಒಂದು ಸೆಲ್ಫೀ;  ಮಧ್ಯಾಹ್ನ ಊಟಕ್ಕೆ ಪಕ್ಕದ ಕ್ಯೂಬಿಕಲ್ ಹುಡುಗ ಸಿಕ್ಕಿದ, ಎತ್ತು ಎಂದು ಸೆಲ್ಫೀ, ಅದಕ್ಕೆ ಮುನ್ನೂರು ಫಿಲ್ಟರ್ ಹಾಕಿ ರಾಡಿ ಮಾಡುವುದು ಬೇರೆ. ಹಿಂಗೇ ಆದರೆ ನಿಮ್ಮ selfie ನೋಡುವ  ನಾವುಗಳು ಸಹಜ ಸಾವಿಗೆ ಕಾಯುವ ಬದಲು self suicide ಮಾಡಿಕೊಳ್ಳುವುದೇ ವಾಸಿ ಅನಿಸುತ್ತೆ. ಇದೆಲ್ಲಾ ಬ್ಯಾನ್ ಆಗ್ಬೇಕ್! ಗೊತ್ತಾಯ್ತಾ


7. ಮಗಾ ನಾ? Triggered! Triggered!!

 ಸಾಂದರ್ಭಿಕ ಚಿತ್ರ: ಸೃಜನ್ ಲೋಕೇಶ್


ನನ್ಮಗ ಸೃಜಅಂದಿದ್ದಕ್ಕೆ ಸೃಜನ್ ಲೋಕೇಶ್ ಉರಿದುಕೊಂಡಿದ್ದು, ಅದ್ದಕ್ಕೆ ಟ್ರೋಲ್ ಪೇಜ್ ಗಳು ಎಷ್ಟು ಕಿಂಡಲ್ ಮಾಡಿ ರುಬ್ಬಿದವು ಅಂತ ಎಲ್ಲರಿಗೂ ಗೊತ್ತು. Self humor is the best humor ಎನ್ನುತ್ತಾರೆ. ನಾವು ಇನ್ನೊಬ್ಬರ ಮೇಲೆ ಎಷ್ಟು ಚೆನ್ನಾಗಿ ಜೋಕ್ ಮಾಡುತ್ತೇವೆ ಅನ್ನೋದಕ್ಕಿಂತ ನಮ್ಮ ಮೇಲಿನ ಜೋಕ್ ಗಳಿಗೆ ಹೇಗೆ ರಿಯಾಕ್ಟ್ ಮಾಡುತ್ತೇವೆ ಎಂಬುದು ನಮ್ಮನ್ನು define ಮಾಡುತ್ತದೆ. ಯಾರೋ ಒಬ್ಬರು ಏನನ್ನೋ ಪೋಸ್ಟ್ ಮಾಡುತ್ತಾರೆ, ಇನ್ನೊಬ್ಬರು ಆರೋಗ್ಯಕರ ವಾದ ಮಂಡಿಸಿ ಕಾಮೆಂಟ್ ಮಾಡಿರುತ್ತಾರೆ, ಎಲ್ಲಿಂದಲೋ ಉರ್ಕೊಂಡು ಬಂದು ಇವರು ಕಾಮೆಂಟ್ ಮಾಡಿ ವಿಷಯವನ್ನೇ ಹಾಳು ಮಾಡುತ್ತಾರೆ. ಇಂಥವರ ಕೈ ಕಟ್ಟಿ ಮಜಾ ಟಾಕೀಸಲ್ಲಿ ಕುರಿ ಪ್ರತಾಪ್ ಇಲ್ಲದಿರೋ ಎಪಿಸೋಡ್ ತೋರಿಸುವುದೇ ಸರಿ ಅನಿಸುತ್ತೆ


8. Editing is the best policy
 
 ಸಾಂದರ್ಭಿಕ ಚಿತ್ರ: ಜೈ  ಮಾರುತಿ 800ಕಳೆದ ತಿಂಗಳು ಕಿರಿಕ್ ಪಾರ್ಟಿ ಚಿತ್ರ ಬಿಡುಗಡೆಯಾಯಿತು. ನೋಡಿದ ಕಾಲೇಜ್ ಹುಡುಗರು ತುಂಬಾ ಫೀಲ್ ಆದರು. ಕಾಲೇಜ್ ಮುಗಿಸಿ ಮದುವೆ ಹಂತದಲ್ಲಿರುವ pass out seniors ಇನ್ನೂ ಜಾಸ್ತಿ ಫೀಲ್ ಆದರು. ಅದೇ ಚಿತ್ರದ ಹೀರೋಯಿನ್ ಗಳನ್ನು ನೋಡಿ ಕೆಲವರು ದಿಲ್, ಹೃದಯ, ಹಾರ್ಟು ಅಂತಾರಲ್ಲಾ, ಅದನ್ನು ಪರ ಪರ ಪರ ಅಂತ ಕೆರ್ಕೊಂಡ್ರು. ಚಿತ್ರದ ಸಾನ್ವಿ ಮತ್ತು ಆರ್ಯ ಪಾತ್ರಧಾರಿ ರಶ್ಮಿಕಾ ಮತ್ತು ಸಂಯುಕ್ತಾ ಇಬ್ಬರೂ ಚೆನ್ನಾಗಿದ್ದಾರೆ, ಅದರಲ್ಲಿ ದೂಸರಾ ಮಾತೇ ಇಲ್ಲ. ಆದರೆ ಅವರ ಫೋಟೋ ಜೊತೆ ತಮ್ಮ ಪೋಟೋ ಎಡಿಟ್ ಮಾಡಿ ಹಾಕುವುದು 'ತಿರುಬೋಕಿ ಜೀವನ' ಅಲ್ಲದೆ ಮತ್ತೇನು?!? ಇಂಥವರನ್ನು ಮೊದಲು ಸೋಷಿಯಲ್ ಮೀಡಿಯಾ ಇಂದ restricte ಮಾಡಬೇಕು. ಪ್ರಿನ್ಸಿಪಲ್ ಮಾರ್ಕ್, ಬೇಗ ಬನ್ನಿ


9. ಸೋ ಕ್ಯೂಟ್ ಚಿನ್ನ, ವಾವ್ ನೈಸ್ ಬಂಗಾರ

ಸಾಂದರ್ಭಿಕ ಚಿತ್ರ: ತಿಥಿ 

ಕೆಲವು ಹುಡುಗರು ದಿಗಂತ್, ಭುವನ್ ಪೊನ್ನಣ್ಣ, ರಕ್ಷಿತ್ ಶೆಟ್ಟಿ ರೇಂಜ್ ಗೆ ಇರುತ್ತಾರೆ, ಸ್ವಲ್ಪ ಪ್ರಯತ್ನ ಪಟ್ಟರೆ ಯಾವುದಾದರೂ ಹುಡುಗಿ ಜೊತೆ commit ಆಗಿ, ಆರಾಮಾಗಿ duet ಹಾಡಬಹುದು. ಇನ್ನೂ ಕೆಲವು ಹುಡುಗರು ದುನಿಯಾ ವಿಜಯ್, ಲೂಸ್ ಮಾದ ಯೋಗೇಶ್ ಥರ ಇರುತ್ತಾರೆ, ಅವರ ಕೃಷ್ಣ ಸೌಂದರ್ಯದ ಅರಿವು ಅವರಿಗೆ ಇರೋದರಿಂದ arrange marriage ಅಲ್ಲಿ ಸಖತ್ ಆಗಿರೋ ಹುಡುಗಿ ಬೇಕಾಗಲು ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಷ್ಟ ಯಾರಿಗೆ? ಕಡೆ ಅಲ್ಲ, ಕಡೆ ಅಲ್ಲ ಎಂಬ ಮಿಡಲ್ ಕ್ಲಾಸ್ ಹುಡುಗರಿಗೆ. ಸ್ಕೂಲು, ಕಾಲೇಜು, ಮನೆ ಹತ್ತಿರ ಎಲ್ಲೂ ಹುಡುಗಿ ಸಿಗದಿರುವಾಗ facebook ಒಂಥರಾ light at the end of the tunnel ಹಾಗೆ ಕಾಣುತ್ತೆ. ಯಾರ್ ಯಾರಿಗೋ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಅವರ ಫೋಟೋ ಮೇಲೆ 'nice looking dear', 'awesome pic China' ಅಂತ ಕಾಮೆಂಟ್ ಮಾಡುವ ದುರ್ಗತಿ ಯಾರಿಗೂ ಬರದಿರುವುದೇ ಒಳ್ಳೆಯದು


ಮೇಲಿನ ಎಷ್ಟು ವಿಧದ ಜನರನ್ನು ನೀವು ಭೇಟಿ ಮಾಡಿದ್ದೀರಾ? ಮತ್ತೆ ಬೇರೆ ಯಾವ ಥರದ ಜನರ behavior ನಿಮಗೆ irritating ಅನಿಸುತ್ತೆ, ಕಾಮೆಂಟ್ ಮಾಡಿ. ಮುಂದಿನ ಸಲ, ಬಗ್ಗೆ ಏನಾದರೂ ಮಾಡುವ. ಅಲ್ಲಿಯವರೆಗೂ ನಮಸ್ಕಾರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ