ಜುಲೈ 11, 2015

ಹೀಗೊಂದು ಅರ್ಥಶಾಸ್ತ್ರ ಪಾಠ

Just a thought!!
ಒಂದು ದೇಶದ Currency Value ದೇಶದ ಅಮದು ಮತ್ತು ರಫ್ತು ಪ್ರಮಾಣದ ಮೇಲೆ ನಿರ್ಧಾರವಾಗುತ್ತದೆ. ನಮ್ಮ ಭಾರತ ದೇಶವನ್ನೇ ಉದಾಹರಣೆಯಾಗಿ ತೆಗದುಯಕೊಂಡರೆ, ನಮ್ಮಲ್ಲಿ ಪೆಟ್ರೋಲ್ ಸಿಗೋದಿಲ್ಲ, ಹೊರಗಿನಿಂದ ತರಿಸಿಕೊಳ್ಳತ್ತೀವಿ. ಇಲ್ಲಿಂದ ಸಾಂಬಾರು ಪದಾರ್ಥ ಮತ್ತಿತರ ತರಕಾರಿಗಳನ್ನು ಬೇರೆ ದೇಶಕ್ಕೆ ಕಳುಹಿಸುತ್ತೇವೆ. ಅದರ ಮೌಲ್ಯಗಳನ್ನು ಕೂಡಿ ಕಳೆದು ನೋಡಿದಾಗ ರುಪಾಯಿ ಮೌಲ್ಯ ದೊರೆಯುತ್ತದೆ ಎಂಬುದು ಸರಳ ಅರ್ಥಶಾಸ್ತ್ರ. ಅಂದರೆ ಹೊರಗಿನಿಂದ ವಸ್ತುಗಳನ್ನು ತರಿಸಿಕೊಳ್ಳೋದು ಹೆಚ್ಚಾದಂತೆ ನಮ್ಮ ದೇಶದ ರುಪಾಯಿ ಮೌಲ್ಯ ಕುಗ್ಗುತ್ತದೆ ಎಂಬುದು ಮುಖ್ಯ ವಿಷಯ.
ಈಗ ಸಿನಿಮಾಗಳನ್ನೇ ಒಂದು ಲೋಕವೆಂದುಕೊಳ್ಳೋಣ. ಪ್ರತಿ ಭಾಷೆಯಲ್ಲಿ ಬರುವ ಚಿತ್ರಗಳು ರಾಜ್ಯದ / ದೇಶದ Currency Value determine ಮಾಡುತ್ತವೆ ಎಂದುಕೊಳ್ಳೋಣ. ಲೆಕ್ಕದಲ್ಲಿ ಕನ್ನಡದಲ್ಲಿ ವರ್ಷಕ್ಕೆ ಸುಮಾರು 140 ಚಿತ್ರಗಳು ಬಿಡುಗಡೆಯಾಗುತ್ತವೆ. ಬೇಕಾಗಿರೋ 50 ಚಿತ್ರಗಳನ್ನು ಪರಿಗಣಿಸಿದರೂ ಅದರಲ್ಲಿ ಹಿಟ್ ಆಥವಾ ಇಷ್ಟವಾಗುವ ಚಿತ್ರಗಳು 20. ಅದರಲ್ಲಿ ಏನಿಲ್ಲವೆಂದರೂ 12 ರೀಮೇಕು, 3 ಕಾಣದ ಹಾಗೆ ಕದ್ದಿರೋದು, ಇನ್ನು 5 ಅಪ್ಪಟ ಕನ್ನಡ ಸ್ವಮೇಕ್ ಚಿತ್ರಗಳು. 5 ಚಿತ್ರಗಳಲ್ಲಿ ಅಬ್ಬಬ್ಬಾ ಅಂದರೆ ಎರಡು ಚಿತ್ರಗಳು ಬೇರೆ ಭಾಷೆಗೆ ರೀಮೇಕ್ ಆಗಬಹುದು. ರೀಮೇಕ್ ಚಿತ್ರಗಳನ್ನು ಅಮದು ವಸ್ತುಗಳು ಹಾಗೂ ಬೇರೆ ಭಾಷೆಗೆ ರೀಮೇಕ್ ಆಗುವ ಚಿತ್ರಗಳನ್ನು  ರಫ್ತು ಅಂದುಕೊಂಡರೂ ಕನ್ನಡ ರಾಜ್ಯದ Currency Value ನೀವೇ ಅಂದಾಜು ಮಾಡಿಕೊಳ್ಳಿ.!!
ಸಾಂದರ್ಭಿಕ ಚಿತ್ರ: ರಂಗಿತರಂಗ

ಹಾಗಂತ ಕನ್ನಡದಲ್ಲಿ ಒಳ್ಳೆ ಫಿಲಂಗಳು ಬರುತ್ತಿಲ್ಲ ಅಂತ ಅಲ್ಲ, recession ತಪ್ಪಿಸಲು ಸ್ವಂತಿಕೆಯ ಚಿತ್ರಗಳು ಇನ್ನೂ  ಹೆಚ್ಚು ಬೇಕು ಎಂಬುದು ನನ್ನ ಅಭಿಪ್ರಾಯ
#need_more_swamakes 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ