ಆಗಸ್ಟ್ 9, 2015

ಅಯ್ಯಯ್ಯೋ ಫೀಲಿಂಗು...


ಸಣ್ಣ ಮಕ್ಕಳಿಗೆ ಫೀಲಿಂಗ್ಸ್ ಜಾಸ್ತಿ. ಲವ್ವು / ರೊಮ್ಯಾನ್ಸಿನ ಬಗ್ಗೆ ಮಾತಾಡ್ತಾ ಇಲ್ಲ. ಸುಖ / ದುಖಃ / ನೋವು / ನಲಿವು ಇತ್ಯಾದಿ. ಸಣ್ಣ ವಿಷಯಕ್ಕೂ ಅತ್ತು ಬಿಡ್ತಾರೆ, ಏನೂ ಇಲ್ಲದಿದ್ದರೂ ನಗ್ತಾ ಇರ್ತಾರೆ. ಹೀಗಿದ್ದಾಗ ಯಾರದಾದರೂ ಸಾವಾದರೆ ಅದರ ಪ್ರಭಾವ ಮಕ್ಕಳ ಮೇಲೆ ತುಸು ಜಾಸ್ತಿಯೇ ಎನ್ನಬಹುದು. On a lighter note, ನನಗೆ ಸಣ್ಣವನಿದ್ದಾಗ ಫಿಲಂ ಅಲ್ಲಿ ಯಾರಾದ್ರೂ ಸತ್ತರೆ ತುಂಬಾ ಬೇಜಾರಾಗ್ತಿತ್ತು. ಬೇರೆಯವರ ಬಗ್ಗೆ ಗೊತ್ತಿಲ್ಲ, ನಾನಂತೂ ಬಿಕ್ಕಿ ಬಿಕ್ಕಿ ಅತ್ತಿದ್ದೇನೆ. ಹುಚ್ಚ ಫಿಲಂ ಅಲ್ಲಿ ಸುದೀಪ್ ಆಸ್ಪತ್ರೆ ವಾಹನ ಹತ್ತಿಕೊಂಡು ಹೋಗುವಾಗ, ಪ್ರೀತ್ಸೇ ಫಿಲಂ ಅಲ್ಲಿ ಉಪೇಂದ್ರ ಸತ್ತಾಗ, Fanaa ಹಾಗೂ Rang De Basanti ಚಿತ್ರಗಳನ್ನು ನೋಡಿದಾಗ ಇನ್ನಿಲ್ಲದಂತೆ ಅತ್ತಿದ್ದೇನೆ. ಆದರೆ ಕಾಲಕ್ರಮೇಣ ಒಂದಿಷ್ಟು seriousness ರೂಢಿಯಾಯಿತು. ಪಿಯುಸಿ ಓದುವಾಗ ಮುಂಗಾರು ಮಳೆ ನೋಡಿ ದೇವದಾಸ ಸತ್ತಿದ್ದರಿಂದ ಸ್ವಲ್ಪ ಮರುಕ ಹುಟ್ಟಿತ್ತು ಅಷ್ಟೇ, ಆದರೆ ಅತ್ತಿರಲಿಲ್ಲ. ಇವತ್ತು ಮತ್ತೆ ಅದೇ ಫೀಲಿಂಗ್ ಮರುಕಳಿಸಿದೆ. ಯಾಕೆ ಗೊತ್ತಾ?
ಇಬ್ಬರ ನಡುವೆ ಅಂಗಾರ ಪುಕ್ಕಟೆಯಾಗಿ ಸತ್ತನಲ್ಲಾ ಅಂತ!!

Watched rangitaranga today, and this is just the sidereal version of saying it.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ