ನವೆಂಬರ್ 25, 2015

ಎತ್ತಿಗೆ ಜ್ವರ ಬಂದರೆ...ನನಗೆ ಗೊತ್ತಿರೋದನ್ನು ಮಾತ್ರ ಹೇಳ್ತೀನಿ, ಗೊತ್ತಿಲ್ಲದ ವಿಷಯದ ಬಗ್ಗೆ ಏನನ್ನೂ ಹೇಳೋದಿಲ್ಲ."ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಹಾಕಿದರಂತೆ" ಅನ್ನೋ ಮಾತು ಎಲ್ಲರಿಗೂ ಗೊತ್ತು. ದೇಶ ಅಸಹಿಷ್ಣುತೆಯಿಂದ ಕೂಡಿದೆ, ಅದು ಇದು ಎಂಬಿತ್ಯಾದಿ ಆರೋಪಗಳು ಸುಮಾರು ದಿನದಿಂದ ಕೇಳಿ ಬರುತ್ತಿದೆ, ಅದೆಲ್ಲ ರಾಜಕೀಯದ ವಿಷಯ ನಮಿಗ್ಯಾಕೆ ಅಂತ ನಾನೂ ಕೂಡ ದೂರ ಇದ್ದೆ. ಆದರೆ ನಿನ್ನೆ ನಟ ಅಮೀರ್ ಖಾನ್, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಭಾರತ ಬಿಡಬೇಕು ಅಂತ ಯೋಚಿಸುತ್ತಿರುವುದಾಗಿ ಹೇಳಿದರು. ಹೇಳಲಿ ಬಿಡಿ, ಅದು ಅವರ ನಿರ್ಧಾರ, ನಮ್ಮ ದೇಶ ಏನು ಅಂತ ನಮಿಗೆಲ್ಲ ಗೊತ್ತಲ್ವಾ? ಆದರೆ ಒಂದು ವಿಷಯ ಅರ್ಥ ಆಗ್ಲಿಲ್ಲ, ಅಮೀರ್ ಖಾನ್ ಅವರ ಹೇಳಿಕೆಯಿಂದ ಅವರ ವಿರುದ್ಧ ಹೋರಾಟ ಮಾಡೋದು, ಇನ್ನೊಂದು, ಮತ್ತೊಂದು, ಎಲ್ಲಾ ಸರಿ. ಆದರೆ SnapDeal app uninstall ಮಾಡಿಕೊಳ್ಳುವುದರ ಹಿಂದಿನ ಲಾಜಿಕ್ ಗೊತ್ತಾಗಲಿಲ್ಲ. SnapDeal ಸಂಸ್ಥೆಯ ನಿಯಮ ಆದರ್ಶಗಳೇ ಬೇರೆ, ಅಮೀರ್ ಖಾನ್ ವೈಯಕ್ತಿಕ ಅಭಿಪ್ರಾಯಗಳೇ ಬೇರೆ. ಸಮಯಕ್ಕೆ ಜಾಹೀರಾತು ಮಾಡೋ ಹೊತ್ತಿಗೆ, ಅಮೀರ್ ಖಾನ್ ಸೂಕ್ತ ರಾಯಭಾರಿ ಅನಿಸಿತೋ ಏನೋ, ಅದಿಕ್ಕೆ Dil ki Deal ಸರಣಿಯ ಜಾಹೀರಾತುಗಳಿಗೆ ಅಮೀರ್ ಖಾನ್ ಹಾಕಿಕೊಂಡರು ಅಷ್ಟೇ. ನನ್ನನ್ನ ಕೇಳೋದಾದರೆ, ಅಮೀರ್ ಖಾನ್ ಹೇಳಿಕೆಯಿಂದ SnapDeal ಕಂಪನಿಗೆ ವ್ಯಾಪಾರ ಕೊಡದೇ ಇರೋದು ಮೇಲೆ ಹೇಳಿದ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವ ಹಾಗೇ ಲಾಜಿಕ್ ಇಲ್ಲದ ನಿರ್ಧಾರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ