ಮಾರ್ಚ್ 19, 2016

ಗುಂಡನ ಭಾಷಣ

 
ಘಮ್ಮು ಘಮ್ಮೆನುತಾ ಬಾರ್ ಅಂಡ್ ರೆಸ್ಟೋರೆಂಟ್ಮುಂದೆ ಯಾರೂ ಇಲ್ಲದಿರೋ ಬಹಿರಂಗ ಸಭೆಯಲ್ಲಿ ಗುಂಡ ಮಾತಾಡುತಿದ್ದ. “ಮಹಾ ಜನಗಳೇ, CM ಅಂದ್ರೆ ಏನು? Chief Minister ಖಂಡಿತಾ ಅಲ್ಲ. CM ಅಂದ್ರೆ Common Man. ನಿಮಗೆ ಕ್ರಿಕೆಟ್ ಮ್ಯಾಚ್ ನೋಡೋಕೆ ಕರೆಂಟ್ ಕೊಟ್ಟಿರಲಿಲ್ಲ, ನಿಮ್ ಮನೆಯವರು ಅಗ್ನಿ ಸಾಕ್ಷಿ / ಲಕ್ಷ್ಮೀ ಬಾರಮ್ಮ ಧಾರವಾಹಿ ನೋಡುವಾಗಲೂ ಕೊಡಲಿಲ್ಲ, ನಿಮ್ಮ ಮಕ್ಕಳ ಪರೀಕ್ಷೆಗೆ ಕೂಡ ಕೊಡೋಕಾಗಿಲ್ಲ. ಇನ್ನು ಸಿದ್ದು ಅವರು ಲೈಟು / ಎಸಿ ಹಾಕ್ಕೊಂಡು ಬಜೆಟ್ ಮಂಡನೆ ಮಾಡಿದರೆ ಶಿವ ಮೆಚ್ತಾನಾ? ಥೋ ಸಾರಿ, ಹೈಕಮಾಂಡ್ ಮೆಚ್ತಾರಾ? ವಿಷಯ ಗೊತ್ತಿಲ್ದೆ ಏನೇನೋ ಮಾತಾಡ್ತೀರಲ್ಲಅಂತ ಹೇಳ್ತಾ ಇದ್ದ. ಏನೋ ಟೈಮಿಗ್ ಸರಿಯಾಗ್ ನಾನಲ್ಲಿಗೆ ದಾಲ್ ತಡಕಾ ಪಾರ್ಸೆಲ್ ತರೋಕೆ ಹೋಗಿದ್ದೆ, ಸರಿ ಹೋಯ್ತು. ಇಲ್ಲಾಂದ್ರೆ ಏನ್ ಕಥೆ??!!ಯಾರದ್ರೂ ಹಿಡ್ಕೊಂಡು ಹೊಡೆಯೋ ಮುಂಚೆ ಎಸ್ಕೇಪ್ ಆಗ್ಬಿಡೋದು ವಾಸಿ. #JaiSarcasmDeva

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ