ಮೇ 18, 2016

ಟಕರ ಟಕರ ಟವ್ ಟವ್ ಟವ್...

ಕೆಲವು ದಿನಗಳ ಹಿಂದೆ ಹೀಗೆ ಫೇಸ್ ಬುಕ್ ನಗರಿಯಲ್ಲಿ ಓಡಾಡುವಾಗ ಬಿಲಿಂಡರ್ ಎಂಬ ಕುಂದಗನ್ನಡ ಭಾಷೆಯ ಚಿತ್ರವೊಂದರ ಪೋಸ್ಟರ್ ನೋಡಿದ್ದೆ. ಏನಿದು ಬಿಲಿಂಡರ್ ಅಂದ್ರೆ? ಯಾವತ್ತೂ ಆ ಪದ ಕೇಳೇ ಇಲ್ವಲ್ಲಾ ಅಂತ ವಿಚಾರಿಸಿದಾಗ 'ಕ್ರಿಮಿನಲ್' ಎಂಬ ಅರ್ಥ ಬರುತ್ತದೆ ಅಂತ ಗೊತ್ತಾಯಿತು. ಯಾವ್ದೋ ಫಿಲಂ ಬಿಡಪ್ಪ ಅಂತ ನಾನೂ ಸುಮ್ಮನಾಗಿದ್ದೆ.

ಆಮೇಲಾಮೇಲೆ ಆ ಚಿತ್ರಕ್ಕೆ ಅಪ್ಪು ಒಂದು ಹಾಡು ಹಾಡುತ್ತಿರುವುದಾಗಿ ಗೊತ್ತಾಯಿತು, ಅರೆರೆ, ಸೂಪರ್ ಅಲಾ!! ಹಾಡು ಬಂದಾಗ ಮೊಬೈಲ್ ಗೆ ಇಳಿಸಿ ಬೋರಾಗುವವರೆಗೂ ಕೇಳಿಬಿಡಬೇಕು ಅಂದ್ಕೊಂಡೆ.

ಆಮೇಲೆ ಆ ಚಿತ್ರಕ್ಕೆ ಉಗ್ರಂ ಶ್ರೀ ಮುರಳಿ ಕೂಡ ಒಂದು ಹಾಡು ಹಾಡುತ್ತಿರುವುದಾಗಿ ತಿಳಿಯಿತು. ಇದೇನಪ್ಪಾ ಆಶ್ಚರ್ಯ ಎಂದೆನಿಸಿ ಚಿತ್ರದ ಬಗ್ಗೆ ಸ್ವಲ್ಪ ಆಸಕ್ತಿ ಮೂಡಿತು. ಬರ ಬರುತ್ತಾ, ನಮ್ ಪನ್ನ ಆ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾನೆ ಎಂದು ಗೊತ್ತಾಯಿತು.

ಅಗಳಗಳಗಳೋ, ಬೆಂಗಳೂರಲ್ಲಿ ಕೆಲಸ ಮಾಡ್ಕೊಂಡೇ, ಯಾವಾಗಲೋ ಒಂದು ಚಿತ್ರಕ್ಕೆ ಸಂಭಾಷಣೆ ಕೂಡ ಬರೆದಿದ್ದಾನಲ್ಲ??!! ವಾಹ್ ವಾಹ್, ಸೂಪರ್, ಫಿಲಂ ಬಂದಾಗ ಒಂದು ಸಲ ನೋಡೋಣ, ಅರ್ಥ ಆಗೋದು ಬಿಡೋದು ಆಮೇಲಿನ ಮಾತು ಅಂತ ಅಂದುಕೊಂಡೆ.

ಸಾಂದರ್ಭಿಕ ಚಿತ್ರ:ಬಿಲಿಂಡರ್

ವಿಷಯ ಏನಪ್ಪಾ ಅಂದ್ರೆ, ಯಾವುದೇ ಹೊಸ ಹಾಡು ಇಷ್ಟ ಆದ್ರೆ ಆ ಹಾಡನ್ನು ಬೋರಾಗುವವರೆಗೂ ಕೇಳಿ ಮುಂದೆ ಹೋಗೋದು ನಮ್ ಜಾಯಮಾನ. ಇಂತಿಪ್ಪ ಸಂದರ್ಭದಲ್ಲಿ

'ಚಿಲ್ರಿ ಶೋಕಿ ಗಂಡ್ ನಾನಲ್ಲೇ' ಅಂತ ಬಿಲಿಂಡರ್ ಚಿತ್ರಕ್ಕೆ ಅಪ್ಪು ಹಾಡಿರೋ ಹಾಡು,

'ಗೆಳೆಯ ಗೆಳೆಯ' ಅಂತ ಅಪ್ಪು ಚಿತ್ರಕ್ಕೆ ಎನ್.ಟಿ.ಆರ್. ಹಾಡಿರುವ ಹಾಡುಗಳು ನಮ್ ಪ್ಲೇಲಿಸ್ಟ್ ಗೆ ಸೇರಿ ಯಾವುದೋ ಟೈಮ್ ಆಯ್ತು. ನಿಮಗೆ ಗೊತ್ತಿದೆಯೋ ಇಲ್ವೋ ಗೊತ್ತಿಲ್ಲ, ಹಾಡುಗಳಲ್ಲಿ ಕೆಲವು pleasure points ಅಂತ ಇರುತ್ತದೆ. ಹಾಡಿನ ಕೆಲವು ಭಾಗ ಕೇಳಿದಾಗ ಏನೋ ಒಂಥರಾ ಖುಷಿ ಆಗುತ್ತಲ್ಲ? ಅದಕ್ಕೆ ನಾನು pleasure points ಅಂತ ಹೇಳಿದ್ದು. ಉದಾಹರಣೆಗೆ: 

ಗಗನದ ಸೂರ್ಯ ಮನೆ ಮೇಲೆ, ನೀ ನನ್ನ ಸೂರ್ಯ ಹಣೆ ಮೇಲೆ (ಅಮೃತವರ್ಷಿಣಿ) 
ನಾ ನಿಂತಲ್ಲೇ ಹಾಡಾದೆ ನಿನ್ನಿಂದಲೇ (ಮಿಲನ) 
Guilty roads to an endless love; 
There's no control, are you with me now? (Backstreet Boys)
ಹಿಗ್ಗಿನಲ್ಲಿ ಅರಳಿ ನಿನ್ನ ಮುಖವೇ ದಾಸವಾಳವು, ಮತ್ತೆ ಮತ್ತೆ ಚಿಟ್ಟೆ ಹಾರಿ ಬಂದು ಮೋಸ ಹೋದವು (ಕೆಂಡಸಂಪಿಗೆ) 
ಬೆಲ್ಲದ ಪಾಕವೇ, ನಲ್ಲ ನಿನ್ನೊಲುಮೆಯೇ (ಸವಾರಿ) 
ಮುಂಜಾನೆ ನಿದ್ರೇಲಿ, ನಾ ಹೇಳಲಾರದ ಕನಸಾ, ನೀ ಸಿಕ್ಕಾಗ ಮಾತಾಡೋ ಮಾತೆಲ್ಲ ಬೇರೆ (ಇಂತಿ ನಿನ್ನ ಪ್ರೀತಿಯ)


ಈ ರೀತಿ, ಹಾಡಿನ ಯಾವುದೋ ಒಂದು ಭಾಗ ಕೆಲವು ಗೊತ್ತಿರುವ ಮತ್ತು ಗೊತ್ತಿಲ್ಲದ ಕಾರಣಗಳಿಂದ ಇಷ್ಟವಾಗುತ್ತದೆ. ಆ ರೀತಿ ನನಗೆ ಮತ್ತೆ ಮತ್ತೆ ಕೇಳುವಂತೆ ಮಾಡಿದ ಹಾಡಿನ ಭಾಗ ಈ ರೀತಿ ಇದೆ:

ಚಿಲ್ರಿ ಶೋಕಿ ಹಾಡು:
"ನನ್ ಅಜ್ಜಯ್ಯ ಹೇಳ್ದಂಗೆ ವಯ್ಸಿಗ್ ಬಂದ ಕೂಡ್ಲೆ ಜಾಸ್ತಿ ಕೆಮ್ಬುತಮ್ಬ್ರು ಕೈ ಬಳಿ ಸಬ್ದ"
ಆ ಅಜ್ಜಯ್ಯ ಯಾರೋ ಏನೋ, ಬಲು ಕಿಲಾಡಿ ಆತ ಎಂದು ಹೇಳಲು ಜಾಸ್ತಿ ಸಮಯ ಬೇಕಾಗಿಲ್ಲ. ನಮ್ ಬಗ್ಗೆ, ನಮ್ಮಂತವರ ಬಗ್ಗೆ ಇಷ್ಟೆಲ್ಲಾ ಪಕ್ಕಾ ಗೊತ್ತಿದೆ ಅಂದ್ರೆ ಸಣ್ಣ ಕೆಲಸ ಅಲ್ಲ ಬಿಡಿ.

ಗೆಳೆಯ ಗೆಳೆಯ:
"ನಮಗೆ ನೂರಾ-ಎಂಟು commiitmenttu ಡೈಲಿ ಇದ್ದದ್ದೇ,
ನಗ್ತಾನೇ ಡೀಲು ಮಾಡು ಫೈನಲ್ಲಾಗಿ ಸಾಯೋದೇ"ಸಾಂದರ್ಭಿಕ ಚಿತ್ರ: ಚಕ್ರವ್ಯೂಹ 


ಚಕ್ರವ್ಯೂಹ ಚಿತ್ರ ಏನೋ ನೋಡಿದೆ, ಫಿಲಂ ಒಂದು ರೇಂಜ್ ಗೆ ಇದೆ, ಲವ್ ಅದು ಇದು ಅಂತ ಜಾಸ್ತಿ ಬೋರ್ ಹೊಡೆಸದೇ ಒಂದು ಒಳ್ಳೆ ಆಕ್ಷನ್ ಕಥೆಯನ್ನು ಹೇಳಿರುವ ಆ ಚಿತ್ರವನ್ನು ಆರಾಮಾಗಿ ಫಸ್ಟ್ ಕ್ಲಾಸಲ್ಲಿ ಪಾಸು ಮಾಡಬಹುದು. ಪ್ರಾಬ್ಲಮ್ ಆಗಿದ್ದು ಅಲ್ಲಿ ಅಲ್ಲ, ಇನ್ನೊಂದು ಚಿತ್ರದಲ್ಲಿ, ಅದೇ ಆಗ್ಲೇ ಬಿಲಿಂಡರ್ ಅಂದ್ನಲ್ಲ, ಆ ಚಿತ್ರದ ಬಗ್ಗೆನೇ ಸಮಸ್ಯೆ ಉಂಟಾಗಿರೋದು. ಆ ಚಿತ್ರ ಬಿಡುಗಡೆ ಆಗಿರೋದು ಕುಂದಾಪುರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ. "ಕುಂದಾಪುರ, ಮತ್ತು ಸುತ್ತ ಮುತ್ತಲ ಪ್ರದೇಶ, ನಮಿಗೆನು ಹೊಸತಲ್ಲ, ತುಂಬಾ ಸಲ ಬಂದಿದ್ದೀವಿ" ಅಂತ ಅದೇ ಚಿಲ್ರಿ ಶೋಕಿ ಹಾಡಿನ ಮೇಕಿಂಗ್ ವೀಡಿಯೊದಲ್ಲಿ ಅಪ್ಪು ಹೇಳುವ ಮಾತು ನಮಗೂ ಅನ್ವಯಿಸುತ್ತೆ. ನಮ್ ಹುಡುಗರ ಜೊತೆ ಕೆಲವು ಮರೆಯಲಾಗದ ಟ್ರಿಪ್ ಗಳು ಅಲ್ಲೇ ಆಗಿರೋದು. ಮತ್ತಿನ್ನು ಕೆಲವು ಬೇರೆ ಕಾರಣಗಳಿಂದ ಆ ಭಾಗದ ವಿಷಯವನ್ನು ಮಾತಾಡುವಾಗ ಅವಾಯ್ಡ್ ಮಾಡೋದು ಈಗ ಬೇಡವಾದ ವಿಷಯ. ಹೋಗ್ಲಿ ಬಿಡಿ, ಮನುಷ್ಯ ಮತ್ತು ಬ್ಲಾಗ್ ಆರ್ಟಿಕಲ್ ಅಂದಮೇಲೆ ಒಂದು purpose ಇರಲೇಬೇಕು. ನಮಿಗಂತೂ purpose ಇಲ್ಲ, ಮುಂದೆ ಸಿಗುತ್ತಾ ನೋಡುವ! ಆದರೆ ಈ ಅಂಕಣಕ್ಕಾದರೂ purpose ಇರಲಿ ಅಂತ, ಒಂದು ಚಿಕ್ಕ ಸ್ವಗತದೊಂದಿಗೆ ಈ ಅಂಕಣ ಮುಗಿಸುತಿದ್ದೇನೆ.

ಬಿಲಿಂಡರ್ ಚಿತ್ರದ ಆ ಹಾಡನ್ನು ಇಷ್ಟು ಸಲ ತಿರುಗಾ ಮುರುಗಾ ಕೇಳಿದ್ದೀನಿ ಆದರೆ ಆ ಫಿಲಂ ಎಂದೂ ನೋಡಲಾಗೋದಿಲ್ಲವಲ್ಲಾ ಅಂತ "ಎಂದೂ ನೋಡಲಾಗದ ಸಿನಿಮಾ" ಎಂಬ ಶೀರ್ಷಿಕೆಯಲ್ಲಿ ಈ ಅಂಕಣ ಬರೆಯಲು ಶುರು ಮಾಡಿದೆ. ಆದರೆ ಕೆಲವು ದಿನಗಳ ಹಿಂದೆ ಈ ಚಿತ್ರ ಶಿವಮೊಗ್ಗದಲ್ಲಿ ಕೂಡ ಸದ್ಯದಲ್ಲೇ ಬಿಡುಗಡೆಯಾಗುತ್ತೆ ಅಂತ ಗೊತ್ತಾಗಿ ಹೆಸರು ಬದಲಾಯಿಸಬೇಕಾಯ್ತು. ಬೆಂಗಳೂರಲ್ಲಿ ಇಲ್ಲದೆ ಇರೋ ಕಾರಣದಿಂದ ಈವರೆಗೂ ತಿಥಿ, ಕಿರಗೂರಿನ ಗಯ್ಯಾಳಿಗಳು, Interstellar, Deadpool, Captain America: Civil War, ಅದು ಇದು ಅಂದ್ಕೊಂಡು ಸುಮಾರು ಚಿತ್ರಗಳನ್ನು ಟೇಟ್ರಲ್ಲಿ ನೋಡುವ ಅವಕಾಶ ಇಲ್ಲದಂತಾಯಿತು. ಈ ಚಿತ್ರವೂ ಆ ಪಟ್ಟಿಗೆ ಸೇರುತ್ತಾ? ಎಲ್ಲರ ಕಾಳೆಯುವ ಕಾಲವೇ ಉತ್ತರಿಸಬೇಕು. 

ನಾನು ಇಷ್ಟು ಹೊತ್ತು ಯಾವ ಹಾಡಿನ ಬಗ್ಗೆ ಮಾತಾಡಿದ್ದು ಅಂತ ಗೊತ್ತಾಗದೆ ಇದ್ದವರು, ಆ ಹಾಡನ್ನು ಇಲ್ಲಿ ನೋಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ