ಮೇ 19, 2016

ನಾವು ಆಗಲೇ ಹಂಗೆ,


ಸಾಂದರ್ಭಿಕ ಚಿತ್ರ:  The Big Bang Theoryಇಸ್ಕೂಲಲ್ಲಿದ್ದಾಗ ಹೊಸ ವರ್ಷ ಬಂತೆಂದರೆ ಅದೇನೋ ಒಂಥರಾ ಖುಷಿ.
ವರ್ಷಪೂರ್ತಿ ಕಷ್ಟಪಟ್ಟು (!) ಡಬ್ಬಿಯಲ್ಲಿ ಕೂಡಿಟ್ಟಿರುತ್ತಿದ್ದ ಸುಮಾರು 30ರೂ. ಜೊತೆ ಮನೆಯವರಿಂದಲೂ ಒಂದು ಸ್ವಲ್ಪ ದುಡ್ಡು ಇಸ್ಕೊಂಡು,
ಸಿದ್ದು ಬುಕ್ ಸ್ಟಾಲ್ ಗೆ ಹೋಗಿ,
ಅವರಿಗೆ ಒಂದು ಅರ್ಧ ಗಂಟೆ ತಲೆ ತಿಂದು,
ತುಂಬಾ ಚೆನ್ನಾಗಿರೋ ಗ್ರೀಟಿಂಗ್ ಕಾರ್ಡ್ ತಗೊಂಡು ಬಂದು,
ಒಳಗಡೆ ಇನ್ನೇನಾದರೂ ಬರೆದು,
ಅದಕ್ಕೆ ಗಮ್ ಹಾಕಿ ಮುಚ್ಚಿ,
ಸ್ಟ್ಯಾಂಪ್ ಅಂಟಿಸಿ,
ಪೋಸ್ಟ್ ಡಬ್ಬಕ್ಕೆ ಹಾಕಿ ಬಂದರೆ ನಮ್ ಪಾಡಿಗೆ ನಾವು 'ಸಂತೋಷಕ್ಕೆ, ಹಾಡು ಸಂತೋಷಕ್ಕೆ' ಎಂದು ಕುಣಿಯಲು ವೇದಿಕೆ ಸಜ್ಜಾದಂತೆ. ವಿಷಯ ಅದಲ್ಲ, ಗ್ರೀಟಿಂಗ್ ಕವರ್ ನ ಹಿಂದೆ 'from address' ಬರೆಯುವಲ್ಲಿ,

ArunKumar P T
Challakere – 577 522,
Chitradurga (District),
Karnataka (State),
India (Country),
Asia (Continent),
Planet Earth,
Solar System,
Milky Way Galaxy,
Universe.

ಎಂದು ಬರೆಯುತ್ತಿದ್ದೆ. ಕ್ಲಾಸಲ್ಲಿ ನಾನೂ ಒಳ್ಳೆ ಓದುವ ಹುಡುಗರ ಗ್ಯಾಂಗಲ್ಲಿ ಇದ್ದೀನಿ ಅಂತ ತೋರಿಸಿಕೊಳ್ಳಬೇಕಲ್ಲಾ!! ಬೇಸಿಗೆ ರಜೆಗೆ ಊರಿಗೆ ಹೋದಾಗ ಕ್ಲಾಸಲ್ಲಿ ಹೆಂಗೆ ಒದುತ್ತೀಯಪ್ಪ?” ಅಂತ ಯಾರೂ ಕೇಳೋದೇ ಬೇಡ, ಹಾಗೆ ಇರ್ತಿತ್ತು ನಮ್ ಡೋಸ್-ಗಳು. ಅದಕ್ಕೆ ಈ ಪರಿ showoff ಮಾಡ್ತಿದ್ದೆ.
ವಿಷಯ ಇಲ್ಲದೆ ಇಷ್ಟು ಬರೆದೆ ಅಂದರೆ, ವಿಷಯ ಸಿಕ್ಕರೆ ಇನ್ನೇನಾಗ್ಬೇಡ ಲೆಕ್ಕ ಹಾಕಿ.

ನಾವು ಆಗಲೇ ಹಂಗೆ, ಈಗ ಕೇಳ್ಬೇಕಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ