ಮೇ 13, 2016

ನಿನಗೆ ಅರ್ಥ ಆಗಲ್ಲ ಬಿಡು!!



 
ನಾನು: ಏನಪ್ಪಾ ಪ್ರದೀಪ, ಶನಿವಾರ / ಭಾನುವಾರ ಬಂದ್ರೆ ಕಣ್ಣಿಗೆ ಕಾಣಲ್ಲ, ಕೈಗೂ ಸಿಗಲ್ಲ, ಫ್ರೆಂಡ್ಸು ಅಂತ ನಾವ್ ನಾಲ್ಕ್ ಜನಕ್ಕದ್ರೂ ಅಪರೂಪಕ್ಕೆ ಮಕ ತೋರ್ಸು ಶಿವಾ

ಪ್ರದೀಪ: ವೀಕೆಂಡ್ ನಾನು ಎಲ್ಲಿ ಹೋಗ್ತೀನಿ ಅಂತ ನಿಂಗೆ ಗೊತ್ತಲ್ಲ! ನಮಗೆ ಅವಳಿಷ್ಟ, ಅವಳಿಗೆ ನಾನು ಇಷ್ಟ, ನಾವು ಎಲ್ಲಿ ಹೋಗ್ತೀವಿ? ಏನು ಮಾಡ್ತೀವಿ? ನಮ್ಮಿಬ್ಬರ ಇಷ್ಟ ಕಷ್ಟಗಳು ಏನು ಅಂತ ಕೇಳ್ತಾ ಇದ್ದರೆ ಸುಮ್ನೆ ನಿನಗೆ ಎನರ್ಜಿ ನಷ್ಟ. ನಿನಗೆ ಅರ್ಥ ಆಗಲ್ಲ ಬಿಡು!!

ನಾನು: ಹೋಗ್ಲಿ ಬಾ ಕಾಪಿ ಕುಡಿಯಾಣ

ಪ್ರದೀಪ: ಲೇ ದನ ಕಾಯೋನೇ, ಈಗಿನ್ನ ಒಂದು ಮಸಾಲೆ ದೋಸೆ, ಉಪ್ಪಿಟ್ಟು, ಕ್ಯಾರೆಟ್ ಹಲ್ವಾ ಬಡಿದು ಬಾಯಿಗೆ ಹಾಕ್ಕೊಂಡಲ್ಲ, ಅದೇನು ಹೊಟ್ಟೆನೋ, ಇಲ್ಲಾ ಬಿ.ಬಿ.ಎಂ.ಪಿ. ಕಸದ ಗಾಡಿನೋ?

ನಾನು: ಹೊಟ್ಟೆಯಲ್ಲಿ ಜಾಗ ಇಲ್ಲ ಅಂದ್ರೆ ಕಾಪಿ ಗಂಟಲಲ್ಲಿ ನಿಂತುಕೊಳ್ಳಲಿ ಬಿಡೋ, ನಾವ್ ಕಾಪಿ ಕುಡಿಯಾದೆಯಾ! ನಿನಗೆ ಅರ್ಥ ಆಗಲ್ಲ ಬಿಡು. ಈಗ ಬರ್ತೀಯಾ ಇಲ್ಲವೋ ಪಾ?

***


Experience cannot be explained. ಅನುಭವನಾ ಅನುಭವಿಸಬೇಕಷ್ಟೇ. ಗೊತ್ತಲ್ಲ, ಆಪ್ತಮಿತ್ರ ಡೈಲಾಗು. ಇಷ್ಟಗಳು ಕೂಡ ಹಾಗೆಯೇ. ಯಾವುದು / ಏನು / ಯಾರು ಇಷ್ಟ ಎಂದರೆ ಹೇಳಬಹುದು, ಆದರೆ ಯಾಕಿಷ್ಟ? ಎಂದು ಕೇಳಿದರೆ ಹೇಳೋದು ತುಂಬಾನೇ ಕಷ್ಟ. 


ನಮ್ ಹಂಟರ್ ಗೆ ಲಕ್ಷ್ಮಿ ಬಾರಮ್ಮ ಚಿನ್ನು ಯಾಕಿಷ್ಟ? ಗೊತ್ತಿಲ್ಲ!  
ನಮ್ ಡಾಕ್ಟ್ರು ಬಿಲ್ಲಿಗೆ ಏಲಿಯನ್ ಗಳು ಯಾಕಿಷ್ಟ? ಗೊತ್ತಿಲ್ಲ! 
ನಮ್ ಇಂಜಿನಿಯರ್ ಗ್ಯಾಪ್ ಗೆ ಅಕೌಂಟ್ಸ್ ಅಂದ್ರೆ ಯಾಕಿಷ್ಟ? ಗೊತ್ತಿಲ್ಲ! 
ನಮ್ ಮ್ಯಾನೇಜರ್ ಗೆ ವಿಷ್ಯ ಮುಚ್ಚಿಡೋದು ಯಾಕಿಷ್ಟ? ಗೊತ್ತಿಲ್ಲ!

ಲೋಕೋಭಿನ್ನ ರುಚಿ ಎಂಬಂತೆ ಒಬ್ಬೊಬ್ಬರಿಗೆ ಒಂದೊಷ್ಟು ಇಷ್ಟ, ಆದರೆ ಎಲ್ಲರಿಗೂ ಏನಿಷ್ಟ? ಪೋಸ್ಟರ್ ನಲ್ಲೇ ಇದ್ಯಲ್ರೀ, "ಎಲ್ಲರಿಗೂ ಇಷ್ಟ: ಇಷ್ಟಕಾಮ್ಯ" ಅಂತ. ಅಯ್ಯೋ ಭಗವಂತಾ!

ವಿಷಯ ಇಷ್ಟೇ: ನಮ್ ರನ್ನ ಅದೇ ಪ್ರದೀಪನಿಗೆ ಇಷ್ಟಕಾಮ್ಯ ಹೀರೋಯಿನ್ ಕಾವ್ಯ ಶೆಟ್ಟಿ ಗೊತ್ತು, ಆದರೆ ಅವರಿಗೆ ಪ್ರದೀಪ ಗೊತ್ತೋ ಇಲ್ಲವೋ, ಅದು ನಮಿಗ್ ಗೊತ್ತಿಲ್ಲ. ಹೀಗಿದ್ದರೂ, ಇಷ್ಟಕಾಮ್ಯ ಸಿನಿಮಾವನ್ನು ಶನಿವಾರಾನೇ ನೋಡ್ತೀನಿ ಅಂತ ಹೇಳಿದ್ದ. ಅದೇ ಹ್ಯಾಂಗೋವರಲ್ಲಿ ಯೋಚಿಸುತಿದ್ದಾಗ, 'ನಿಂಗೆ ಅರ್ಥ ಆಗಲ್ಲ ಬಿಡು' ಎಂಬ ಕಿರುದೃಶ್ಯ ಮೂಡಿ, ಅದಕ್ಕೆ ಇಷ್ಟಕಾಮ್ಯ ನಂಟು ಅಂಟಿ ಹಿಂಗಾಯ್ತು ನೋಡಿ ಪ.

ಎಲ್ಲಾ ಸರಿ, ನೀವ್ ಈ ವಾರ ಯಾವ್ ಸಿನಿಮಾ ನೋಡ್ತಾ ಇದ್ದೀರಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ