ಮೇ 31, 2016

How can you be so...



ದುಡ್ಡು, ಸಂಪತ್ತು, ಇಂಟರ್ನೆಟ್, ಕಾರು, ಇತ್ಯಾದಿಗಳೆಲ್ಲಾ ಮಾಯೆ ಇದ್ದ ಹಾಗೆ. ಯಾವಾಗಲೂ ನಮ್ ಹತ್ರ ಇದ್ರೆ ಎಷ್ಟು ಚೆನ್ನಾಗಿರುತ್ತಲ್ಲಾ ಅನಿಸುತ್ತಿರುತ್ತೆ, ಇದ್ದಾಗ ಏನು ಮಾಡಬೇಕೆಂದು ತೋಚೋದೇ ಇಲ್ಲ. ಅಂಥದ್ದೇ ಒಂದು ಪ್ರಸಂಗ ಇಲ್ಲಿದೆ:

ಸಾಂದರ್ಭಿಕ ಚಿತ್ರ:  The Social Network


ಅದೇನೋ ಗೊತ್ತಿಲ್ಲ, ಚಿಕ್ಕವನಿಂದ ನನಗೆ ವಿಸಿಟಿಂಗ್ ಕಾರ್ಡ್ ಮೇಲೆ ಇನ್ನಿಲ್ಲದ ಮೋಹ. ನಾನು ಮುಂದೊಂದಿನ ಕೆಲಸಕ್ಕೆ ಸೇರಿ ವಿಸಿಟಿಂಗ್ ಕಾರ್ಡ್ ಮಾಡಿಸಿದರೆ ಹಿಂಗೆ ಮಾಡಿಸಬೇಕು, ಆ ಮೂಲೆಯಲ್ಲಿ ಚೆಂದದ ನೀಲಿ ಡಿಸೈನು, ಮೂಲೆಯಲ್ಲಿ ಫೋನ್ ನಂಬರ್, ಎಲ್ಲಾ ಆದ ಮೇಲೆ ಕೆಳಗೆ ಮೂಲೆಯಲ್ಲಿ ಏನಾದರೂ 'ಅತಿ ವೇಗ, ತಿಥಿ ಬೇಗ' ಎಂಬ ಸಿನಿಮಾ ಪಂಚ್ ಲೈನ್ ಗಳಿಂದ ಹಿಡಿದು, 'no Trees, no Life' ಇತ್ಯಾದಿಯಾಗಿ ಸಮಾಜಕ್ಕೆ ಬುದ್ಧಿ ಹೇಳುವ ದೊಡ್ಡ ದೊಡ್ಡ ಮಾತುಗಳನ್ನು ಒಳಗೊಂಡಂತೆ, ತೀರಾ ಮೊನ್ನೆ ಮೊನ್ನೆ ನನ್ನದೇ ಬ್ಲಾಗ್ ನ ಕೊಂಡಿಯವರೆಗೆ ಏನೇನೋ ಇರಬೇಕು ಅಂತ ಐಡಿಯಾ ಹಾಕಿದ್ದೆ. ಇದೇ ವಿಷಯವಾಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ Pt Designs ಅಂತ ಕೂಡ ಶುರು ಮಾಡಿದ್ದೆ. ಪುಣ್ಯಕ್ಕೆ 'ಅದು ಎಲ್ಲಿ ಶುರುವಾಯ್ತೋ, ಅಲ್ಲೇ ನಿಂತೋಯ್ತು'. ಇರಲಿ, ವಿಷಯ ಅದಲ್ಲ. ವಿಷಯ ಏನು ಅಂದ್ರೆ ಮೊನ್ನೆ ಹೀಗೆ ಫೇಸ್ ಬುಕ್ ನಗರಿಯಲ್ಲಿ ಓಡಾಡುವಾಗ ನಾನು ಕೆಲಸಕ್ಕೆ ಸೇರಿ ಒಂದು ವರ್ಷ ಆಯಿತು ಎಂಬ ನೋಟಿಫಿಕೇಶನ್ ಬಂತು. ಥೋ, ಅದು ಯಾವಾಗಿಂದಲೋ ಕಾರ್ಡ್ ಮಾಡಿಸಬೇಕು ಅಂತಿದ್ದೆ, ಆದರೆ ಇನ್ನೂ ಯಾಕೆ ಸುಮ್ಮನಿದ್ದೀನಿ ಅಂತ ಆಶ್ಚರ್ಯವಾಯಿತು. ಯಾಕೆ ಅಂತ ಜೇಡ ಕಟ್ಟಿರುವ ಮೂಲೆ ನೋಡಿ ಫ್ಲಾಶ್ ಬ್ಯಾಕ್ ಗೆ ಹೋದಾಗ, ನನ್ನ Employee ID Card ನನ್ನ ನೋಡಿ ಎಲಾ ಕುನ್ನಿ, ಯಕಶ್ಚಿತ್ ಒಬ್ಬ ಕ್ಲರ್ಕ್ ನೀನು, ಈ ಬಿಟ್ಟಿ ಬಿಲ್ಡಪ್ ಎಲ್ಲಾ ಬೇಕಾ?” ಎಂದು ವಜ್ರಮುನಿ ರೇಂಜ್ ಗೆ ಹ ಹ ಎಂದು ನಕ್ಕು ಅಸಹ್ಯ ಮಾಡಿತ್ತು. ಹೋಗ್ಲಿ ಬಿಡಪ್ಪ, ಹ್ಯಾಗೂ ಒಂದು ಬ್ಲಾಗ್ ಇದ್ಯಲ್ಲ, ಅದರ ಬಗ್ಗೆ ಕಾರ್ಡು ಮಾಡಿಸೋಣ ಅಂದ್ಕಂಡೆ, ನನ್ನ ವಾಲೆಟ್ ನನ್ನ ಮುಖ ನೋಡಿ, "ನನ್ನಲ್ಲಿ ಇರೋದು ನಿನ್ನ ದುಡ್ಡೇ ನಿಜ, ಆದರೆ ಇಷ್ಟು ಕಮ್ಮಿ ದುಡ್ಡಿಂದ ಮರ್ಯಾದೆ ಹೋಗ್ತಿರೋದು ನಿಂದಲ್ಲ, ನಂದು, ಇದು ಆರುಮುಗಂ ಕೋಟೆ ಕಣೋ" ಅಂತ ರವಿಶಂಕರ್ ಸ್ಟೈಲಲ್ಲಿ ನಗಬೇಕಾ? ಏನಪ್ಪಾ ಇದು ನನ್ನವರೇ ನನಗೆ ರೈಟ್ ಇಂಡಿಕೇಟರ್ ಹಾಕಿ ಯು-ಟರ್ನ್ ಹೊಡೆದರಲ್ಲ ಅಂದ್ಕೊಂಡು ಸುಮ್ಮನಾಗಿದ್ದೆ. ಇದೆಲ್ಲ ಆಗಿ ಸುಮಾರು ತಿಂಗಳಾಯಿತು ಅನ್ಸುತ್ತೆ.


ಥುತ್ ನನ್ ಮಗನೇ, ನೀನ್ ಯಾವನಾದ್ರೆ ನನಿಗೇನೋ? 
ನನ್  ಲೈಫಲ್ಲಿ, ವಿಸಿಟಿಂಗ್ ಕಾರ್ಡ್ ಕೊಟ್ಟು, ಯಾವ್ ನನ್ಮಗಂಗೂ ಪರಿಚಯ ಮಾಡ್ಕೊಂಡಿಲ್ಲ 

ಕಟ್ ಮಾಡಿದ್ರೆ ನಿನ್ನೆ, ನಮ್ ಹುಡುಗ ಲಕ್ಕಿ 'ಆಹಾ ಧನ್ಯನಾದೆ' ಅಂತ ಸ್ಟೇಟಸ್ ಹಾಕಿದ್ದ. ಅಂಥದ್ದು ಏನಾಯ್ತಪ್ಪ? ಗ್ಯಾಪಲ್ಲಿ ನಮ್ ಹುಡುಗನಿಗೆ, ನಮ್ ಹುಡುಗರಿಗೆ ಗೊತ್ತಾಗದ ಹಾಗೆ 'ಹುಡುಗರು' ಥರ ಮದುವೆ ಏನಾದರೂ ಆಯಿತಾ ಅಂದುಕೊಳ್ಳುವಷ್ಟರಲ್ಲಿ 'ದೊಡ್ಡಮನೆ ಹುಡ್ಗ' ಟೀಸರ್ ಬಗ್ಗೆ ಪೋಸ್ಟ್ ಮಾಡಿರೋದು ಅಂತ ಗೊತ್ತಾಯಿತು. ಸರಿ ಅಂತ ಟೀಸರ್ ನೋಡಿ, ಆಗಿಂದ ಫುಲ್ ರೋಮಾಂಚನ ಫೀಲಿಂಗು. 'ಈ ಸಂಜೆ ಯಾಕಾಗಿದೆ' ಥರ ಫೀಲಲ್ಲ, 'ಅಕಾಕಾಕ್ಕಾಕ್ ಅಂಬಿ ಈಸ್ ಬ್ಯಾಕ್, ಬೆಂಕಿ ಫಸ್ಟ್ ಲುಕ್ ಟೀಸರ್ ಮಗಾ' ಥರ ಫೀಲಿಂಗು. ಮೇಲಿನ ಅಂಬಿ ಡೈಲಾಗ್ ನೋಡಿ, ಹೊಡೆತಕ್ಕೆ ನನ್ ಮಗಂದ್ ವಿಸಿಟಿಂಗ್ ಕಾರ್ಡ್ ಮೇಲೆ ಇದ್ದ ವ್ಯಾಮೋಹ ಹೋಗಿಬಿಡ್ತು. ಸಿನಿಮಾ ಪ್ರಭಾವ ನಮ್ ಮೇಲೆ ಅಷ್ಟಿದೆ. How can you be so addicted to movies? ಎಂದು ಕೇಳಿದರೆ By Practice ಎಂದು ನಮ್ Patrick Jane ಥರ ಸ್ಟೈಲಾಗಿ ಹೇಳುವುದೇ ಸದ್ಯದ ಗುರಿ.

ಏನು ಈ ಅಂಕಣ? ಏನಿದರ motive ಎಂದು confuse ಆಗಿದ್ದರೆ ಈ ಕೊಂಡಿಯನ್ನು ಕ್ಲಿಕ್ಕಿಸಿ ದೊಡ್ಡಮನೆ ಹುಡ್ಗ ಟೀಸರ್ ನೋಡ್ಕೊಂಡು ಬಂದು ಮತ್ತೆ ಓದಿ, ಸ್ವಲ್ಪ clarity ಸಿಗುತ್ತೆ. 

"ಲೋ ಅಣ್ಣಪ್ಪ, ಈ ಕಣ್ಣಿಂದ ನಿನ್ನ ಅಂಕಣಗಳನ್ನು ಒಂದು ಸಲ ಓದೋದೇ ಕಷ್ಟ, ಎರಡು ಸಾಲ ಓದಿ 'ಕಣ್ಣಪ್ಪ' ಆಗಬೇಕಾ? ಅಂತು ಬೈದು 'ಲಾಂಗ್' ಹಿಡಿಯುವುದರಲ್ಲಿ, ಅಣ್ಣಪ್ಪ signing off, bye bye.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ