ಜುಲೈ 11, 2016

ಆಶಾಕಿರಣ


ಸಾಂದರ್ಭಿಕ ಚಿತ್ರ:  Rab ne bana di Jodi
 
ರಾಮಣ್ಣ: ಮಗಾ, ಇಲ್ನೋಡೋ

ನಾನು: ತಡಿಯೋ, ಕೈ ತುಂಬಾ ಕೆಲಸ ಇದೆ ಇಲ್ಲಿ

ರಾಮಣ್ಣ: ಏ‌ ನಿಂದು ಇದ್ದದ್ದೇ, ಬೇಗ ಇಲ್ನೋಡೋ

ನಾನು: ನಮ್ ಕಣ್ಣು ಹೋಗೋ ಅಂಥದ್ದು ಏನೇನೋ ತೋರಿಸ್ಬೇಡ ಗುರೂ, ಮೊದಲೇ ಹೇಳಿದ್ದೀನಿ.

ರಾಮಣ್ಣ: ಆ subway surfers ಬಿಟ್ಟು ನನ್ ಮೊಬೈಲ್ ನೋಡು ಗುರೂ ಒಂದ್ ಸಲ

ನಾನು: ಯಾರೋ ಇವರು, ಯಾರದೋ ಮದುವೆ ಫೋಟೋ, ನಮಿಗ್ ಗೊತ್ತಿರೋರ? ಯಾರು ಅಂತಾನೆ ಗೊತ್ತಾಗ್ತಿಲ್ವಲ್ಲೋ.

ರಾಮಣ್ಣ: ಜಾಸ್ತಿ ತಲೆ ಕೆರೆದುಕೊಳ್ಳ ಬೇಡ, ಇರೋ ಮೂರು ಮತ್ತೊಂದು ಕೂದಲೂ ಕೂಡ ಇರಲ್ಲ ಆಮೇಲೆ.
ಇವಳು ನಮ್ ಕಾಲೇಜು, ನಿಂಗೆ ಗೊತ್ತಿರಲ್ಲ.

ನೋಡೋ ಹೆಂಗಿದ್ದಾಳೆ, 10/10 ಕೂಡ ಕಮ್ಮೀನೇ. ಇವಳನ್ನು ಮುಟ್ಟಬೇಕಂದರೆ ಕೈ ತೊಳೆದು ಮುಟ್ಟಬೇಕು. ಪಕ್ಕ ನಿಂತಿದೆ ನೋಡು, ಗಂಡ ಅನ್ನೋ ಹೊಸ ಪ್ರಾಣಿ. ಮುಟ್ಟಿದರೆ ಕೈ ತೊಳಿಯಬೇಕು, ಹಂಗಿದ್ದಾನೆ.
Kaun sa Rab ne bana di yeh jodi? , ದೇವರಿಗೆ ಕರುಣೆನೇ ಇಲ್ಲ ನೋಡು.

ನಾನು: ಅಯ್ಯೋ ಸುಮ್ನಿರಪ್ಪ, ಇಂಥಾ ಜೋಡಿಗಳನ್ನ ನೋಡಿನೇ ನಾವೂ ಕೂಡ ಯಾವ್ದಾದ್ರೂ ಆಶಾನೋ, ನಿರಾಶನೋ, ಥೋ ಸಾರಿ ಆಶಾನೋ, ನಿಶಾನೋ ಸಿಗಬಹುದು ಅನ್ನೋ ಆಶಾಕಿರಣವನ್ನ ನಂಬಿ ಕಾಲ ಕಳಿತಿದ್ದೀವಿ

ರಾಮಣ್ಣ: ನೀನ್ ಉದ್ಧಾರ ಆಗಲ್ಲ ಬಿಡು

ನಾನು: ಹೊಸ ಸುದ್ದಿ ಏನಾರಾ ಇದ್ರೆ ಹೇಳು ಶಿವಾ ಹೋಗ್ಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ