ಜುಲೈ 6, 2016

ನಿರುತ್ತರಸಾಂದರ್ಭಿಕ ಚಿತ್ರ: ಲೂಸಿಯಾ

 ಕೆಲವು ದಿನಗಳ ಹಿಂದಿನ ಮಾತು, ಸಂಜೆ 5 ಗಂಟೆಯ ಸಮಯ. ಅದ್ಯಾಕೋ ಇನ್ನೂ ಬಿಸಿಲು ಜೋರಾಗೇ ಇತ್ತು. ಹಾಗೇ earphones ನಲ್ಲಿ ಹಾಡು ಕೇಳುತ್ತಾ, ಜೊತೆಯಲ್ಲಿ ಮೆಲುದನಿಯಲ್ಲಿ ನಾನೂ ಹಾಡುತ್ತಾ ನನ್ನ ಪಾಡಿಗೆ ನಾನು ನೆಡೆದುಕೊಂಡು ಹೋಗುತ್ತಿದ್ದೆ. ಹಾಗೇ ಹಾದು ಹೋಗುವಾಗ ತಾಜಾ ಕೊತ್ತಂಬರಿ ಸೊಪ್ಪಿನ ಘಮಲು ಮೂಗಿಗೆ ಬಡಿದಿದ್ದರಿಂದ ಆ ಕಡೆ ತಿರುಗಿ ನೋಡಿದೆ. ಅಲ್ಲಿ ರಸ್ತೆಯ ಪಕ್ಕದಲ್ಲಿ ಒಬ್ಬರು ಹಳೇ ಮೇಜು, ಕುರ್ಚಿ, ಛತ್ರಿ ಜೋಡಿಸಿಕೊಂಡು ಸೊಪ್ಪು ಮಾರುತ್ತಿದ್ದರು. ಆ ಛತ್ರಿಯ ನೆರಳು ಸೊಪ್ಪಿನ ರಾಶಿಯ ಮೇಲೆ ಮಾತ್ರ ಬೀಳುತ್ತಿತ್ತು ಮತ್ತು ಆ ವ್ಯಕ್ತಿ ಮಾತ್ರ ಪಾಪ ಬಿಸಿಲಲ್ಲೇ ಕುಳಿತಿದ್ದರು. ತಾನು ಬಿಸಿಲಲ್ಲಿ ಇದ್ದರೂ ಸೊಪ್ಪಿಗೆ ಬಿಸಿಲು ಬೀಳದಂತಿರಲಿ ಎಂದು ಛತ್ರಿ ಹಿಡಿದಿದ್ದ ಅವರನ್ನು ನೋಡಿ ಛೇ ಪಾಪ ಎಂದುಕೊಳ್ಳಬೇಕೋ, ಬಿಸಿಲಿಗೆ ಸೊಪ್ಪು ಹಾಳಾಗಿ ಹೋದರೆ ಆತನ ಆದಾಯಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. He’s protecting his business, and thus, protecting himself. ಆದ್ದರಿಂದ ಆತ ಮಾಡಿದ್ದು ಸರಿಯಾಗಿಯೇ ಇದು ಮೆಚ್ಚಬೇಕೋ ಗೊತ್ತಾಗಲಿಲ್ಲ. ಈ ಬಗ್ಗೆ ತುಂಬಾ ಯೋಚಿಸಿ ವೇದಾಂತಿಕವಾಗಿ ಒಂದು ನಿರ್ಣಯಕ್ಕೆ ಬರುವ ಹೊತ್ತಿಗೆ ಮೊಬೈಲಲ್ಲಿ ಹಾಡು ಬದಲಾಗಿ ಎಲ್ಲವೂ ಮರೆತು ಹೋಯಿತು. ಉತ್ತರ ಹೊಳೆಯಲಿಲ್ಲ; ಪ್ರಶ್ನೆಯೂ ಮರೆತು ಹೋಯಿತು.
ನಿರುತ್ತರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ