ಜುಲೈ 12, 2016

Happy Happy Birthday Shivanna


ವೃತಿಯಲ್ಲಿ ಯಶ್ ಮಟ್ಟಕ್ಕೆ ಯಶಸ್ಸು ಸಿಗದಿದ್ರೂ ಪರವಾಗಿಲ್ಲ
ಪ್ರವೃತ್ತಿಯಲ್ಲಿ ಶಿವಣ್ಣ ಎನರ್ಜಿ ಎಂದಿಗೂ ಜೊತೆಯಿರಲಿ ಶಿವಾ

***

ಸಾಂದರ್ಭಿಕ ಚಿತ್ರ: Killing ವೀರಪ್ಪನ್


"ಕಬ್ಬಡ್ಡಿ ಕಬ್ಬಡ್ಡಿ ಕಾರ, ಕಬ್ಬುನ್ ಗದ್ದೇಲ್ ಕೀರಾ" ಅಂತ ಜೋಗಿ ಥರ ಹಾಡಿಕೊಂಡು ಮಜವಾಗಿರೋ Manjunath Rao Misal B, ಮುಂಬೈ ತುಂಬಾ ಏನೇನೋ ಹಾವಳಿ ಮಾಡಿ ವಾಪಸ್ ರಾಜಧಾನಿಗೆ ಬಂದು ಜೋಗಯ್ಯ ಥರ "ಬೆಂಗಳೂರು ನಂದು, ಇಲ್ಲಿ ಯಕಶ್ಚಿತ್ ಒಂದು.." ಎಂದು ಡೈಲಾಗ್ ಹೊಡೆಯುತ್ತಿರುವ Rakshith Shivashankar Acharya ಜೊತೆ ಸೇರಿಕೊಂಡು ಕಿಲ್ಲಿಂಗ್ ವೀರಪ್ಪನ್ ಪೊಲೀಸ್ ಅಧಿಕಾರಿ ಥರ ಕಾಡಲ್ಲಿ ಟೀ ಕುಡ್ಕೊಂಡು ಇರೋ ನಾನು ಇವರಿಬ್ಬರಿಗೂ ಫೋನ್ ಮಾಡಿ ಶಿವಣ್ಣ ಬರ್ತ್ ಡೇ ಗೇ ಏನಾದ್ರೂ ಡಿಫರೆಂಟಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡೋಣ ಅಂತ ಕೇಳೋದರೊಳಗೆ ಹಂಗೇ ಸೈಲೆಂಟಾಗಿ ಸುಯ್ ಟಪಕ್ ಅಂತ ನಾಗರಭಾವಿ, ಥೋ ಸಾರಿ ನಾಗಾವರ ಶಿವಣ್ಣ ಮನೆಗೆ 54 ಕೆಜಿ ಕೇಕ್ ಹಿಡ್ಕೊಂಡು ಹೋಗಿಬಿಟ್ಟಿದ್ದಾರೆ!


ಎಲಾ ಇವರಾ ಅಂತ ಇನ್ನೇನು ಓಂ ಸತ್ಯ ಥರ ಲಾಂಗ್ ತಗೊಂಡ್ ಬಿಡೋಣ ಅನ್ನೋದರಳಗೆ ನಾಳೆ ಕೆಲಸಕ್ಕೆ ಹೋಗಬೇಕು ಅಂತ ನೆನಪಾಗಿ ಸುಮ್ಮನಾಗುವಂತಾಯಿತು. ಇರಲಿ, ನಮ್ಮ ಹುಡುಗರಾದರೂ ಹೋಗಿ ಕಡ್ಡಿಪುಡಿ ಮನೆಯಲ್ಲಿ ಊಟ ಮಾಡ್ಕೊಂಡು ಬಂದರಲ್ಲಾ, ಅಷ್ಟ್ ಸಾಕು.


ಥೋ, ಮುಖ್ಯ ವಿಷಯವೇ ಮರೆತು ಹೋಯಿತು


Happy Happy Birthday Shivanna. Be happyy, keep rocking :) :)


54 ವರ್ಷದ‌ ನಿಮ್ಮ ಅರ್ಧ ವಯಸ್ಸಿನಲ್ಲಿ ಕೂಡ ನಿಮ್ಮ ಕಾಲು ಭಾಗದಷ್ಟು ಉತ್ಸಾಹ ಇಲ್ಲದೆ ಬೇ'ಸತ್ತ' ನೌಕರರಾಗಿರೋ ನಮಗೆ ನಮ್ ವೃತ್ತಿಗಿಂತ ಬರವಣಿಗೆಯ ಈ ಪ್ರವೃತ್ತಿ ಮೇಲೆಯೇ ಕನಸುಗಳು ಜಾಸ್ತಿ


ಆಗಲೇ ಮೇಲೆ ಹೇಳಿದಂತೆ
ವೃತಿಯಲ್ಲಿ ಯಶ್ ಮಟ್ಟಕ್ಕೆ ಯಶಸ್ಸು ಸಿಗದಿದ್ರೂ ಪರವಾಗಿಲ್ಲ
ಪ್ರವೃತ್ತಿಯಲ್ಲಿ ಶಿವಣ್ಣ ಎನರ್ಜಿ ಎಂದಿಗೂ ಜೊತೆಯಿರಲಿ ಶಿವಾ


ಹೆಂಗೂ ಇಷ್ಟನ್ನೇ ಓದಿದ್ದೀರಂತೆ, ಇದರ ಫ್ಲಾಷ್ ಬ್ಯಾಕ್ ಅಂಕಣವೊಂದನ್ನು ಕೂಡ ಹಾಗೇ ಓದಿಬಿಡಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ