ಜುಲೈ 15, 2016

Premamಕುರವಾಗಿದೆ (ಪ್ರೇಮಂ ಚಿತ್ರದ ಮೇಲೆ ಪ್ರೇಮಾಂಕುರ - Premamಕುರ)

Watched Premam today.
ಸಾಂದರ್ಭಿಕ ಚಿತ್ರ: Premam

ಬಹಳ ದಿನದಿಂದ ನಮ್ ಹುಡುಗರು, ಸಿನಮಾಸಕ್ತರು ತುಂಬಾ ಹೇಳುತ್ತಿದ್ದರು, ಪ್ರೇಮಂ ಚೆನ್ನಾಗಿದೆ ಅಂತ. ಆದರೆ ನೋಡಲಾಗಿರಲಿಲ್ಲ. ಮೊನ್ನೆ ಒಂದು ಗಂಟೆ, ನಿನ್ನೆ ಒಂದು ಗಂಟೆ ಮತ್ತು ಉಳಿದಿದ್ದನ್ನು ಇವತ್ತು ನೋಡಿ ಸಿನಿಮಾವನ್ನು ಧಾರವಾಹಿ ಥರ ಮುಗಿಸಿದ್ದಾಯಿತು.

ತುಂಬಾನೇ ಸರಳ ಕಥೆ ಮತ್ತು ಹೊಸ ಬಗೆಯ ಕಥಾ ನಿರೂಪಣೆಯಿಂದ ಚಿತ್ರ ಗಮನ ಸೆಳೆಯಿತು. ಮೇರಿ, ಮಲರ್ ಮತ್ತು ಸೆಲೀನ್, ಯಾರು ತುಂಬಾ ಚೆನ್ನಾಗಿದ್ದಾರೆ ಮತ್ತು ಯಾರ ಪಾತ್ರ ಎಷ್ಟು ಚೆನ್ನಾಗಿ ಹೊಂದಿಕೆಯಾಗಿದೆ ಅನ್ನೋದರ ಬಗ್ಗೆ ನಾನು ಹೇಳೋಕೆ ಹೋಗಲ್ಲ, ಅದೊಂಥರ ಇಂಗ್ಲೀಷಲ್ಲಿ It's like comparing apples and oranges ಅಂತಾರಲ್ಲ ಹಾಗೆ. ಒಬ್ಬರಿಗಿಂತ ಒಬ್ಬರು. ನಿವೀನ್ ಪೌಲಿ‌ ಅವರಂತೂ ಟ್ಯೂಷನ್ ಹುಡುಗಿಯ ಹಿಂದೆ ಬೀಳುವ ಸಾಧಾರಣ ಹೈ ಸ್ಕೂಲು‌ ಹುಡುಗನಿಂದ, ಬೆಂಡೆತ್ತಿ ಬ್ಯಾನ್ ಮಾಡುವ ಕಾಲೇಜ್ ಹೀರೋ ಥರ ಮತ್ತು ಜವಾಬ್ದಾರಿಯುತ ಕೆಫೆ ಸಂಸ್ಥಾಪಕನ ಹಾಗೆ ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡು‌ ಪ್ರತಿಯೊಬ್ಬ ಯುವಕನ ಬದುಕನ್ನು ಎರಡೂ ವರೆ ಗಂಟೆಯಲ್ಲಿ ಜ಼ುಗ್ ಅಂತ ಪ್ಲೇಬ್ಯಾಕ್ ಮಾಡಿ ನೋಡಿದಾಗ ಕಾಣುವ ಹಾಗೆ ಮನಮೋಹಕವಾಗಿ‌ ಅಭಿನಯಿದ್ದಾರೆ. ಮಲಯಾಳಂ ಸಿನಿಮಾ ಸಂಪರ್ಕ ಅಷ್ಟಾಗಿ ಇಲ್ಲದಿರೋದ್ರಿಂದ ಕೆಲವು ಹಾಡು-ಡೈಲಾಗ್-ಸಿನಿಮಾಗಳ ಉಲ್ಲೇಖ ಅರ್ಥವಾಗಲಿಲ್ಲ, ವಿಷಯವಾಗಿ ಸುಮ್ ಸುಮ್ನೆ ಸುಳ್ಳು ಯಾಕೆ ಹೇಳೋದು ಅಲ್ವಾ?!

ಒಂದು‌ ತುಂಬಾ ಸರಳ ಕಥೆ, ಟ್ವಿಸ್ಟ್ ಕೊಡುವ ಕ್ಲೈಮ್ಯಾಕ್ಸ್, ಮತ್ತು ಉತ್ತಮ ಕಥಾ‌ ನಿರೂಪಣೆ ಹಾಗೂ ಹಿನ್ನಲೆ ಸಂಗೀತದ ಸಲುವಾಗಿ ಇಷ್ಟವಾಗುವ ಸರಳ ಸುಂದರ ಕಲಾಕೃತಿ: ಪ್ರೇಮಂ

P.s: ಜಾರ್ಜ್ ಗೆ badass dude ಇಮೇಜ್ ತಂದುಕೊಡುವ ಹಿನ್ನಲೆ ಸಂಗೀತದ ಟ್ಯೂನೊಂದು ಚಿತ್ರದಲ್ಲಿದೆ. ನಾಳೆಯಿಂದ ಅದೇ ನಮ್ ರಿಂಗ್ ಟೋನು; ಟೈಮ್ ಮಾಡ್ಕೊಂಡು‌ ಕರೆ ಮಾಡಿ, ನಿಮ್ಮ ಹೆಸರು ಹೇಳಿಕೊಂಡು ಫೋನ್ ರಿಂಗಣ ಕೇಳುತ್ತಾ ಇದ್ದುಬಿಡುವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ